ಐಪಿಎಲ್ 2021: RCB ತಂಡದ ಜೆರ್ಸಿ ಚೇಂಜ್ ?

ಟ್ವಿಟರ್ ಎಡವಟ್ಟು : RCB ತಂಡಕ್ಕೆ CSK ಜೆರ್ಸಿ ಇಮೋಜಿ

Team Udayavani, Apr 3, 2021, 7:49 PM IST

Untitled-1

ಬೆಂಗಳೂರು: ಐಪಿಎಲ್‍ ತಂಡಗಳ ಜೆರ್ಸಿ ವಿಚಾರವಾಗಿ ಟ್ವಿಟರ್ ಎಡವಟ್ಟು ಮಾಡಿಕೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೆರ್ಸಿಯ ಇಮೋಜಿ ಪೋಸ್ಟ್ ಮಾಡಿ ಅಪಹಾಸ್ಯಕ್ಕೀಡಾಗಿದೆ.

ಈ ಬಾರಿಯ ಐಪಿಎಲ್ ಪಂದ್ಯಗಳ ಸೆಣಸಾಟಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಕ್ರಿಕೆಟ್ ಪ್ರೇಮಿಗಳಲ್ಲಿ ಐಪಿಎಲ್ ಜ್ವರ ಜೋರಾಗಿಯೇ ಕಾಣಿಸಿಕೊಂಡಿದೆ. ತಮ್ಮ ನೆಚ್ಚಿನ ತಂಡಗಳಿಗೆ ಬೆಂಬಲಿಸುವ ‍ಹ್ಯಾಷ್‍ ಟ್ಯಾಗ್‍, ಮೀಮ್ಸ್ ಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಇದರ ನಡುವೆ ಟ್ವಿಟರ್‍ ವೊಂದು ಪ್ರಮಾದ ಮಾಡಿದ್ದು,ಸಿಕ್ಕಾಪಟ್ಟೆ ಟ್ರೋಲಿಗೆ ಗುರಿಯಾಗಿದೆ.

ಪ್ರತಿವರ್ಷ ಟ್ವಿಟರ್ ಐಪಿಎಲ್‍ನಲ್ಲಿ ಭಾಗವಹಿಸುವ ತಂಡಗಳ ಹ್ಯಾಷ್ ಟ್ಯಾಗ್ ಹಾಗೂ ಜೆರ್ಸಿಯ ಇಮೋಜಿಗಳನ್ನು ರಿಲೀಸ್ ಮಾಡುತ್ತದೆ. ಪ್ರತಿವರ್ಷದಂತೆ ಈ ಬಾರಿಯೂ ಕೂಡ ಎಲ್ಲ ತಂಡಗಳಿಗಾಗಿ ಹ್ಯಾಷ್ ಟ್ಯಾಗ್ ಹಾಗೂ ಜೆರ್ಸಿ ಇಮೋಜಿಗಳನ್ನು ರಿವೀಲ್ ಮಾಡಿದೆ. ಆದರೆ, ಈ ವೇಳೆ ಒಂದು ತಪ್ಪು ಮಾಡಿದೆ. ಆರ್ ಸಿ ಬಿ ತಂಡದ ಹ್ಯಾಷ್ ಟ್ಯಾಗ್ ಜೊತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಳದಿ ಬಣ್ಣದ ಜೆರ್ಸಿಯ ಇಮೋಜಿ ಟ್ವೀಟ್ ಮಾಡಿದೆ.

PL 2021: RCB playing in CSK's yellow?

ಟ್ವಿಟರ್‍ ನಿಂದ ಜರುಗಿರುವ ಈ ಅಚಾತುರ್ಯ ಗಮನಿಸಿರುವ ಕ್ರಿಕೆಟ್ ಪ್ರೇಮಿಗಳು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. ಟ್ವಿಟರ್‍ ವಿರುದ್ಧವೂ ಟೀಕಿಸಿರುವ ನೆಟ್ಟಿಗರು, ನಿಮಗೆ ಒಳ್ಳೆಯ ತಂತ್ರಜ್ಞರ ಅಗತ್ಯ ಎಂದು ಸಲಹೆ ನೀಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತ ಟ್ವಿಟರ್ ಖಾತೆಯೂ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದು, ಟ್ವಿಟರ್ ಈಗ ಸರಿಯಾದ ದಾರಿಯಲ್ಲಿದೆ ಎಂದು ಟ್ವೀಟ್ ಮಾಡಿದೆ. ಕೆಲವರು ಚೆನ್ನೈ ಸೂಪರ್ ಕಿಂಗ್ಸ್ ಜೆರ್ಸಿಯಲ್ಲಿ ವಿರಾಟ್ ಫೋಟೊ ಅಂಟಿಸಿ, ಈ ಬಾರಿ ವಿರಾಟ್ ಕೊಹ್ಲಿ ಚೆನ್ನೈ ತಂಡದ ಪರವಾಗಿ ಮೈದಾನಕ್ಕೆ ಇಳಿಯಲಿದ್ದಾರೆಯೇ ಎಂದು ಛೇಡಿಸಿದ್ದಾರೆ.

ಇನ್ನು ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮಹೇಂದ್ರ ಸಿಂಗ್ ಧೋನಿಯವರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನೆಡಸಲಿದ್ದಾರೆ.

ಟಾಪ್ ನ್ಯೂಸ್

MNG-Zakir

Tabla maestro: ಮಂಗಳೂರಿಗೆ ಮೂರು ಬಾರಿ ಭೇಟಿ ಕೊಟ್ಟಿದ್ದ ತಬಲಾ ಮಾಂತ್ರಿಕ ಜಾಕೀರ್ ಹುಸೇನ್

1-zakir

Ustad; ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ವಿಧಿವಶ

8

CM Siddaramaiah: ಗ್ಯಾರಂಟಿಗಳನ್ನು‌ ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮ‌‌ದು

7

Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ

Aditya

Kaup: ಯುವ ಕ್ರಿಕೆಟಿಗ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

1-maha

Maharashtra: ಫಡ್ನವೀಸ್ ಸಂಪುಟಕ್ಕೆ 39 ಮಂದಿ ಸಚಿವರ ಸೇರ್ಪಡೆ

DVG-Duggamma

Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್‌ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-geo

Football ಮಾಜಿ ತಾರೆ ಮಿಖಾಯಿಲ್‌ ಈಗ ಜಾರ್ಜಿಯಾ ಅಧ್ಯಕ್ಷ

1-travis

Australia vs India 3rd Test; ಭಾರತಕ್ಕೆ ಮತ್ತೆ ತಲೆ ನೋವಾದ ಹೆಡ್,ಸ್ಮಿತ್ ಅಮೋಘ  ಶತಕಗಳು

1-qewqewq

India vs West Indies ವನಿತಾ ಟಿ20:ಸತತ ವೈಫ‌ಲ್ಯ ಕಾಣುತ್ತಿರುವ ಕೌರ್‌ ನಾಯಕತ್ವಕ್ಕೆ ಸವಾಲು

1-pak

T20; 3 ನೇ ಪಂದ್ಯ ರದ್ದು : ಪಾಕಿಸ್ಥಾನ ವಿರುದ್ಧ ಸರಣಿ ಗೆದ್ದ ದಕ್ಷಿಣ ಆಫ್ರಿಕಾ

1-WPL

Women’s Premier League 2025;ಇಂದು ಬೆಂಗಳೂರಿನಲ್ಲಿ ಹರಾಜು: RCBಯಲ್ಲಿ 4ಸ್ಥಾನ ಖಾಲಿ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

MNG-Zakir

Tabla maestro: ಮಂಗಳೂರಿಗೆ ಮೂರು ಬಾರಿ ಭೇಟಿ ಕೊಟ್ಟಿದ್ದ ತಬಲಾ ಮಾಂತ್ರಿಕ ಜಾಕೀರ್ ಹುಸೇನ್

missing

Udupi: ಗಾಜಿನ ಉದ್ಯಮಿ ನಾಪತ್ತೆ; ದೂರು ದಾಖಲು

de

Puttur: ಮರದ ವ್ಯಾಪಾರಿ ಆತ್ಮಹ*ತ್ಯೆ; ಪ್ರಕರಣ ದಾಖಲು

1-zakir

Ustad; ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ವಿಧಿವಶ

accident

Mulki: ಬಪ್ಪನಾಡು; ಕಾರು-ರಿಕ್ಷಾ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.