ಡಿ. ಸುಧಾಕರ್‌ಗೆ ಸಿ.ಡಿ. ಕಂಟಕ : ಯುವತಿ ಜತೆ ಮಾತು ತನಿಖೆಯಲ್ಲಿ ದೃಢ
ರಮೇಶ್ ಪ್ರಕರಣಕ್ಕೆ ಸ್ಫೋಟಕ ತಿರುವು
Team Udayavani, Apr 4, 2021, 7:20 AM IST
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ. ಪ್ರಕರಣ ಮತ್ತೂಂದು ಸ್ಫೋಟಕ ತಿರುವು ಪಡೆದುಕೊಂಡಿದೆ. ಪ್ರಕರಣದಲ್ಲಿ ಮಾಜಿ ಸಚಿವ, ಚಿತ್ರದುರ್ಗ ಜಿಲ್ಲೆಯ ಡಿ. ಸುಧಾಕರ್ ಜತೆ ಯುವತಿ 35ಕ್ಕೂ ಅಧಿಕ ಬಾರಿ ದೂರವಾಣಿಯಲ್ಲಿ ಮಾತಾಡಿರುವುದು ಎಸ್‌ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಯುವತಿಯನ್ನು ಶನಿವಾರವೂ ಎಸ್ಐಟಿ 5 ತಾಸು ವಿಚಾರಣೆ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿ ರಮೇಶ್ ಜಾರಕಿಹೊಳಿ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಸಿ.ಡಿ. ಬಿಡುಗಡೆಗೆ ಮುನ್ನ ಯುವತಿಯ ಜತೆಗೆ ಸುಧಾಕರ್ ಹಣಕಾಸಿನ ವ್ಯವಹಾರ ನಡೆಸಿದ್ದಾರೆ ಎನ್ನಲಾಗಿದೆ.
2008ರಲ್ಲಿ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದ ಡಿ. ಸುಧಾಕರ್ ಆಗಿನ ಬಿಎಸ್‌ವೈ ಸರಕಾರದಲ್ಲಿ ಸಚಿವರಾಗಿದ್ದರು. ಬಳಿಕ ಕಾಂಗ್ರೆಸ್ ಸೇರಿ 2013ರಲ್ಲಿ ಚಳ್ಳೆಕೆರೆ ಕ್ಷೇತ್ರದಿಂದ ಮತ್ತು 2018ರಲ್ಲಿ ಹಿರಿಯೂರಿನಿಂದ ಸ್ಪರ್ಧಿಸಿದ್ದರು.
ಸಂಬಂಧವಿಲ್ಲ
ಪ್ರಕರಣ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸುಧಾಕರ್, ಎಸ್‌ಐಟಿಯವರು ಶುಕ್ರವಾರ ಕರೆ ಮಾಡಿದ್ದರು. ಸೋಮವಾರ ಅಥವಾ ಮಂಗಳವಾರ ಫೋನ್ ಮಾಡಿ ಬರುತ್ತೇನೆ. ಆ ಯುವತಿ ಜತೆ ನನಗೆ ಸಂಬಂಧವಿಲ್ಲ. ಹಣಕಾಸು ನಂಟು ಕೂಡ ಇಲ್ಲ. ನಾನು ಒಬ್ಬ ಮಾಜಿ ಸಚಿವ. ಒಬ್ಬ ವ್ಯಾಪಾರಸ್ಥ ಕೂಡ. ನನಗೆ ಹತ್ತಾರು ಕರೆಗಳು ಬರುತ್ತವೆ. ಆಕೆಯೂ ಕರೆ ಮಾಡಿರಬಹುದು. ಆಕೆಗೆ ಹತ್ತು ರೂಪಾಯಿ ಕೂಡ ಕೊಟ್ಟಿಲ್ಲ. ರಮೇಶ್ ಜಾರಕಿಹೊಳಿ ಆಪ್ತ ಸ್ನೇಹಿತರು. ಎಸ್‌ಐಟಿ ಯಾವ ವಿಚಾರಕ್ಕೆ ಕರೆ ಮಾಡಿದ್ದಾರೆ ಎಂಬ ಬಗ್ಗೆ ಗೊತ್ತಾಗಿಲ್ಲ ಎಂದಿದ್ದಾರೆ.
ಯುವತಿಯ ಬಳಿ 2 ಮೊಬೈಲ್‌ಗಳಿದ್ದು, ಒಂದರಲ್ಲಿ ಈ ಮಾಜಿ ಸಚಿವರು ಸೇರಿ ಪ್ರತಿಷ್ಠಿತ ವ್ಯಕ್ತಿಗಳು, ರಾಜಕಾರಣಿಗಳ ನಂಬರ್‌ಗಳು ಪತ್ತೆಯಾಗಿವೆ.ಮತ್ತೂಂದರಲ್ಲಿ ಆಕೆಯ ಸ್ನೇಹಿತರು, ಪರಿಚಿತರು. ಸಂಬಂಧಿಕರ ಮೊಬೈಲ್ ನಂಬರ್‌ಗಳು ಸಿಕ್ಕಿವೆ ಎಂದು ಹೇಳಲಾಗಿದೆ.
ಮತ್ತೂಬ್ಬ ಮಾಜಿ ಶಾಸಕ ಖೆಡ್ಡಾಕ್ಕೆ?
ಮೈಸೂರು ಭಾಗದ ರಾಷ್ಟ್ರೀಯ ಪಕ್ಷವೊಂದರ ಮಾಜಿ ಶಾಸಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಸಹ ಯುವತಿ ಜತೆ ಹಣಕಾಸು ವ್ಯವಹಾರ ನಡೆಸಿದ್ದಾರೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಚಟುವಟಿಕೆಗಳು ಗಮನಿಸಿದರೆ ದೊಡ್ಡ ಮಟ್ಟದ ಜಾಲವೊಂದು ಯುವತಿಯನ್ನು ಮುಂದಿಟ್ಟುಕೊಂಡು ರಾಜಕಾರಣಿಗಳು, ಉದ್ಯಮಿಗಳು, ಪ್ರತಿಷ್ಠಿತ ವ್ಯಕ್ತಿಗಳನ್ನು ಹನಿಟ್ರ್ಯಾಪ್ ಮಾಡುತ್ತಿತ್ತಾ? ಎಂದು ಎಸ್‌ಐಟಿ ಅನುಮಾನ ವ್ಯಕ್ತಪಡಿಸಿದೆ.
ಮೂವರಿಗೆ ನೋಟಿಸ್?
ಸಿ.ಡಿ. ಯುವತಿ ಜತೆ ಸಂಪರ್ಕದಲ್ಲಿದ್ದರೂ ಎಂದು ಹೇಳಲಾದ ಮಾಜಿ ಸಚಿವ ಡಿ. ಸುಧಾಕರ್, ಮಾಜಿ ಶಾಸಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗೆ ಎಸ್‌ಐಟಿ ತನಿಖಾಧಿಕಾರಿಗಳು ಸದ್ಯದಲ್ಲೇ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.