ವಿಚಾರಣೆ ನೆಪದಲ್ಲಿ ಕರೆದು ಕಿರುಕುಳ ನೀಡಲಾಗುತ್ತಿದೆ : ಸಿಡಿ ಲೇಡಿ ಪತ್ರ
Team Udayavani, Apr 4, 2021, 4:44 PM IST
ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರನದ ಸಂತ್ರಸ್ಥ ಯುವತಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ ಪಂಥ್ ಅವರಿಗೆ ಪತ್ರ ಬರೆದಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯನ್ನು ಎಸ್ ಐ ಟಿ ಅಧಿಕಾರಿಗಳು ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದರು. ಅಲ್ಲದೆ ಭಾನುವಾರ ವಿಚಾರಣೆಗೆ ಹಾಜರಾಗುವಂತೆ ಯುವತಿ ಮತ್ತು ರಮೇಶ್ ಜಾರಕಿಹೊಳಿಯವರಿಗೆ ನೋಟಿಸ್ ನೀಡಲಾಗಿತ್ತು. ಇದೀಗ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಯುವತಿಯು ತನಿಖಾಧಿಕಾರಿಗಳ ಮೇಲೆ ರಮೇಶ್ ಜಾರಕಿಹೊಳಿಯವರು ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪ ಮಾಡಿದ್ದಾಳೆ.
ನಾನು ಆರೋಪಿಯಿಲ್ಲ ಅದರೂ ಪ್ರತಿದಿನ ವಿಚಾರಣೆ ನೆಪದಲ್ಲಿ ಕರೆದು ಕಿರುಕುಳ ನೀಡಲಾಗುತ್ತಿದೆ. ಆರೋಪಿಯನ್ನ ಕೇವಲ ಎರಡು ಮೂರು ಗಂಟೆಗಳ ಕಾಲ ವಿಚಾರಣೆ ಮಾಡಿ ಬಿಟ್ಟು ಕಳಿಸ್ತಾರೆ. ಆದರೆ ನನ್ನನ್ನು ಇಡೀ ದಿನ ವಿಚಾರಣೆ ಮಾಡ್ತಾರೆ ಎಂದು ಆರೋಪಿಸಿ ಸಂತ್ರಸ್ತೆ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾಳೆ.
ನನ್ನನ್ನ ಇಡೀ ದಿನ ವಿಚಾರಣೆ ಮಾಡುತ್ತಾರೆ. ಪ್ರತಿದಿನ ವಿಚಾರಣೆ ನೆಪದಲ್ಲಿ ಕರೆದು ಕಿರುಕುಳ ನೀಡಲಾಗುತ್ತಿದೆ. ಗೃಹ ಇಲಾಖೆ ನನ್ನ ಬಳಿ ವಿಚಾರಿಸದೇ ಎಸ್ ಪಿಪಿಗಳನ್ನ ನೇಮಕ ಮಾಡಿದೆ. ಆರೋಪಿಯನ್ನ ಕೇವಲ ಎರಡು ಮೂರು ಗಂಟೆಗಳ ಕಾಲ ವಿಚಾರಣೆ ಮಾಡಿ ಬಿಟ್ಟು ಕಳಿಸ್ತಾರೆ. ಇದಕ್ಕೆ ನನ್ನ ಆಕ್ಷೇಪವಿದೆ. ಆರೋಪಿ ವಿರುದ್ಧ ಗಂಭೀರವಾದ ವಿಚಾರಣೆ ಮಾಡ್ತಿದ್ದಾರೆ ಅನ್ನೊ ನಂಬಿಕೆ ನನಗೆ ಇಲ್ಲ. ನಾನು ಆರೋಪಿ ಅಲ್ಲದಿದ್ರೂ ಪ್ರತಿದಿನ ವಿಚಾರಣೆ ಮಾಡುತ್ತಿದ್ದಾರೆ.
ಮುಖ್ಯಮಂತ್ರಿಗಳು ರಮೇಶ್ ಜಾರಕಿಹೊಳಿ ಆರೋಪ ಮುಕ್ತರಾಗಿ ಬರಲಿ ಅಂದಿದ್ದಾರೆ. ಇದು ನನಗೆ ಆಘಾತವನ್ನ ಉಂಟು ಮಾಡಿದೆ. ಆರೋಪಿ ವಿರುದ್ಧ ಗಂಭೀರವಾದ ವಿಚಾರಣೆ ಮಾಡ್ತಿದ್ದಾರೆ ಅನ್ನೊ ನಂಬಿಕೆಯಿಲ್ಲ. ನಾನು ಆರೋಪಿ ಅಲ್ಲದಿದ್ದರೂ ಆರ್ ಟಿ ನಗರದ ನನ್ನ ಪಿಜಿ ಮೇಲೆ ದಾಳಿ ಮಾಡಿ ಸಾಕ್ಷಿ ನಾಶ ಮಾಡುವ ಕೆಲಸ ಮಾಡಿದ್ದಾರೆ. ಎಸ್ ಐಟಿ ರಮೇಶ್ ಜಾರಕಿಹೊಳಿಯನ್ನು ಓಡಾಡಿಕೊಂಡಿರಲು ಬಿಟ್ಟು ಪ್ರತಿ ದಿನ ನನ್ನ ವಿಚಾರಣೆ ಮಾಡುತ್ತಿದ್ದಾರೆ. ನ್ಯಾಯ ಸಮ್ಮತವಾಗಿ, ನಿಸ್ಪಕ್ಷಪಾತವಾಗಿ ತನಿಖೆ ನಡೆಯುತ್ತಿಲ್ಲ ಅಂತಾ ನನಗೆ ಅನ್ನಿಸ್ತಿದೆ ಎಂದು ಸಂತ್ರಸ್ತೆ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.