ರಾಜ್ಯದಲ್ಲಿ ಐದನೇ ದಿನವೂ ನಾಲ್ಕು ಸಾವಿರಕ್ಕೂ ಅಧಿಕ ಸೋಂಕು ಪ್ರಕರಣ ಪತ್ತೆ
Team Udayavani, Apr 4, 2021, 9:40 PM IST
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೊಸ ಪ್ರಕರಣಗಳು ಐದನೇ ದಿನವೂ ನಾಲ್ಕು ಸಾವಿರ ಗಡಿದಾಟಿದೆ. ಭಾನುವಾರ 4,553 ಮಂದಿಗೆ ಸೋಂಕು ತಗುಲಿದ್ದು, ಚಿಕಿತ್ಸೆ ಫಲಕಾರಿಯಾಗದೇ 15 ಸೋಂಕಿತರು ಮೃತಪಟ್ಟಿದ್ದಾರೆ.
ಮಾರ್ಚ್ 31 ರಿಂದ ಸತತವಾಗಿ ಐದು ದಿನಗಳು ಹೊಸ ಪ್ರಕರಣಗಳು ನಾಲ್ಕು ಸಾವಿರಕ್ಕೂ ಅಧಿಕ ವರದಿಯಾಗಿವೆ. ಭಾನುವಾರವು 1.2 ಲಕ್ಷ ಸೋಂಕು ಪರೀಕ್ಷೆಗಳಾಗಿದ್ದು, ಶೇ 3.8 ರಷ್ಟು ಪಾಸಿಟಿವಿಟಿ ದರ ಕಂಡು ಬಂದಿದೆ. ಅಂದರೆ, ಸೋಂಕು ಪರೀಕ್ಷೆಗೊಳಗಾದ 100 ಮಂದಿಯಲ್ಲಿ ನಾಲ್ಕು ಮಂದಿಗೆ ಸೋಂಕು ತಗುಲಿದೆ. ಇನ್ನು ಮರಣ ದರ ಶೇ 0.3 ರಷ್ಟು ದಾಖಲಾಗಿದೆ. ಶನಿವಾರಕ್ಕೆ ಹೋಲಿಸಿದರೆ ಹೊಸ ಪ್ರಕರಣಗಳು 200, ಸಾವು ನಾಲ್ಕು ಕಡಿಮೆಯಾಗಿವೆ.
ಭಾನುವಾರ ಅತಿ ಹೆಚ್ಚು ಬೆಂಗಳೂರು 2787, ಮೈಸೂರು 260, ಕಲಬುರಗಿ 170, ಬೆಂಗಳೂರು ಗ್ರಾಮಾಂತರ 155, ಬೀದರ್ 147, ತುಮಕೂರು 107, ಹಾಸನ 104, ಧಾರವಾಡ 100, ದಕ್ಷಿಣ ಕನ್ನಡ 83, ಮಂಡ್ಯ 79, ಉಡುಪಿ 73 ಪ್ರಕರಣಗಳು ವರದಿಯಾಗಿವೆ. ಹಾವೇರಿ, ಕೊಪ್ಪಳ, ಕೊಡಗು, ವಿಜಯಪುರ, ಯಾದಗಿರಿ, ರಾಮನಗರ, ಗದಗದಲ್ಲಿ ಪ್ರಕರಣಗಳು 20ಕ್ಕೂ ಕಡಿಮೆ ದಾಖಲಾಗಿವೆ. ಬೆಂಗಳೂರು 8, ಕಲಬುರಗಿ 3, ಧಾರವಾಡ 2, ಹಾಸನ ಮತ್ತು ತುಮಕೂರು ತಲಾ ಒಬ್ಬರು ಸೇರಿ 15 ಸೋಂಕಿತರು ಮೃತಪಟ್ಟಿದ್ದಾರೆ.
ಇದನ್ನೂ ಓದಿ :ಪ್ರಸಿದ್ಧ ಗೀತಾ ಪ್ರಸ್ ಅಧ್ಯಕ್ಷ ರಾಧೇಶ್ಯಾಮ್ ಖೇಮ್ಕಾ ನಿಧನ : ಪ್ರಧಾನಿ ಸಂತಾಪ
ರಾಜ್ಯದ ಒಟ್ಟಾರೆ ಸೋಂಕು ಪ್ರಕರಣಗಳು 10.15 ಲಕ್ಷಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಾವಿನ ಸಂಖ್ಯೆ 12,625ಕ್ಕೆ ಹೆಚ್ಚಳವಾಗಿದೆ. ಇಂದಿಗೂ 39,092 ಮಂದಿ ಸೋಂಕಿತರು ಆಸ್ಪತ್ರೆ ಮತ್ತು ಮನೆಯಲ್ಲಿ ಚಿಕಿತ್ಸೆ/ ಆರೈಕೆಯಲ್ಲಿದ್ದಾರೆ. ಈವರೆಗೂ ಒಟ್ಟು 2.18 ಕೋಟಿ ಸೋಂಕು ಪರೀಕ್ಷೆಗಳು ರಾಜ್ಯದಲ್ಲಿ ನಡೆದಿದ್ದು, ಸದ್ಯ ಒಂದು ಲಕ್ಷ ಅಧಿಕ ಪರೀಕ್ಷೆಗಳು ನಿತ್ಯ ನಡೆಯುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್
Illegal Property Case: ಸಚಿವ ಜಮೀರ್ ಅಹ್ಮದ್ಖಾನ್ಗೆ ಲೋಕಾಯುಕ್ತದಿಂದ ನೋಟಿಸ್
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.