ರಶ್ಮಿಕಾ ಜನ್ಮದಿನಕ್ಕೆ ರಕ್ಷಿತ್ ವಿಶ್:ಮತ್ತಷ್ಟು ಯಶಸ್ಸು ನಿನ್ನದಾಗಲಿ ಎಂದು ಹಾರೈಸಿದ ರಿಚ್ಚಿ
ಈ ಮೂಲಕ ನಮ್ಮಿಬ್ಬರಲ್ಲಿ ಇನ್ನೂ ಸ್ನೇಹ ಇದೆ ಎಂದು ತೋರಿಸಿಕೊಟ್ಟಿದ್ದಾರೆ.
Team Udayavani, Apr 5, 2021, 1:47 PM IST
ಬೆಂಗಳೂರು : ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ನಟಿ ರಶ್ಮಿಕಾ ಮಂದಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಇಂದು ತಮ್ಮ ಟ್ವಿಟರ್ ನಲ್ಲಿ ಶುಭಾಶಯ ತಿಳಿಸಿರುವ ರಕ್ಷಿತ್, ಕಿರಿಕ್ ಪಾರ್ಟಿ ಸಿನಿಮಾ ವೇಳೆಯ ರಿಹರ್ಸಲ್‍ನ ಒಂದು ವಿಡಿಯೋ ತುಣುಕು ಹಂಚಿಕೊಂಡಿದ್ದಾರೆ. ಚಿತ್ರರಂಗದಲ್ಲಿ ರಶ್ಮಿಕಾ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿರುವ ರಿಕ್ಕಿ, ರಿಯಲ್ ಯೋಧರಂತೆ ನಿನ್ನ ಕನಸುಗಳನ್ನು ಬೆನ್ನು ಹತ್ತಿದ್ದಿಯಾ, ನಿನ್ನ ಈ ಸಾಧನೆಗೆ ಖುಷಿಯಾಗುತ್ತಿದೆ. ಇನ್ನು ಹೆಚ್ಚಿನ ಯಶಸ್ಸು ನಿನ್ನದಾಗಲಿ ಎಂದು ಹಾರೈಸಿದ್ದಾರೆ.
ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಚಿತ್ರದ ಮೂಲಕ ಪರಿಚಯವಾದ ಈ ಜೋಡಿ ಪರಸ್ಪರ ಪ್ರೀತಿಸುತ್ತಿದ್ದರು. ಮನೆಯವರ ಸಮ್ಮತಿಯ ಮೇರೆಗೆ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಆದರೆ, ಕಾರಣಾಂತರಗಳಿಂದ ಮದುವೆ ನಡೆಯಲಿಲ್ಲ.
ನಂತರದ ದಿನಗಳಲ್ಲಿ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ತಮ್ಮ ಸಿನಿಮಾ ಲೈಫ್‍ನಲ್ಲಿ ಬ್ಯುಝಿಯಾಗಿದ್ದರು. ಇವರ ಸ್ನೇಹ ಕೂಡ ಮುರಿದು ಬಿದ್ದಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಇದೀಗ ಕೊಡಗಿನ ಬೆಡಗಿ ರಶ್ಮಿಕಾ ಅವರ ಜನ್ಮದಿನಕ್ಕೆ ರಕ್ಷಿತ್ ವಿಶ್ ಮಾಡಿದ್ದಾರೆ. ಈ ಮೂಲಕ ನಮ್ಮಿಬ್ಬರಲ್ಲಿ ಇನ್ನೂ ಸ್ನೇಹ ಇದೆ ಎಂದು ತೋರಿಸಿಕೊಟ್ಟಿದ್ದಾರೆ.
Sharing this beautiful memory of yours from the @KirikParty audition. You have travelled so far since then, chasing you’r dreams like a real worrier. Proud of you girl and Happy Birthday to you. May you see more success ?? @iamRashmika pic.twitter.com/6M1rBCQnee
— Rakshit Shetty (@rakshitshetty) April 5, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Nehru letters ಹಿಂತಿರುಗಿಸುವಂತೆ ಸೋನಿಯಾ ಗಾಂಧಿಗೆ ಬಿಜೆಪಿ ಒತ್ತಾಯ
Madikeri: ಸಹೋದರರ ಕಲಹ ಕೊಲೆಯಲ್ಲಿ ಅಂತ್ಯ – ಆರೋಪಿ ಪರಾರಿ
Parliament: ʼಪ್ಯಾಲೆಸ್ತೀನ್ʼ ಬ್ಯಾಗ್‌ನೊಂದಿಗೆ ಸಂಸತ್ತಿಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.