ಚಿಕ್ಕಬಳ್ಳಾಪುರದಲ್ಲಿ ನೀರಿನ ಸಮಸ್ಯೆ ನಿವಾರಣೆ ಸವಾಲು
ಖಾಸಗಿ ಕೊಳವೆಬಾವಿಗಳ ನೀರು ಪೂರೈಕೆ
Team Udayavani, Apr 5, 2021, 3:12 PM IST
ಚಿಕ್ಕಬಳ್ಳಾಪುರ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರೇಷ್ಮೆ, ಹೈನುಗಾರಿಕೆ, ದ್ರಾಕ್ಷಿ ಹಾಗೂ ತರಕಾರಿ ಉತ್ಪಾದನೆಯಲ್ಲಿ ಅಗ್ರ ಸ್ಥಾನ ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆ ಯಾವುದೇ ನದಿನಾಲೆಗಳಿಲ್ಲದೆ ನೀರಾವರಿ ಸೌಲಭ್ಯಗಳಿಂದ ವಂಚಿತಗೊಂಡು ಬರಪೀಡಿತ ಪ್ರದೇಶವೆಂದು ಅಪಖ್ಯಾತಿಗೆ ಗುರಿಯಾಗಿದ್ದು, ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವುದು ಜಿಲ್ಲಾಡಳಿತಕ್ಕೆ ಒಂದು ಸವಾಲೆ ಸರಿ.
ಜಿಲ್ಲೆಯಲ್ಲಿ ಬೇಸಿಗೆ ಆರಂಭವಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ನಾಗರಿಕರು ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡಲು ಸ್ಥಳಿಯ ಸಂಸ್ಥೆಗಳಮುಂದೆ ಹೋರಾಟಗಳನ್ನು ಆರಂಭಿಸಿದ್ದಾರೆ. ಬೇಸಿಗೆಯಲ್ಲಿ ಕುಡಿಯುವ ನೀರಿನಸಮಸ್ಯೆ ನಿವಾರಣೆ ಮಾಡಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ನಗರಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ.
ನೀರು ಪೂರೈಕೆಗೆ ಸೂಕ್ತ ಕ್ರಮ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಸ್ತುತ 42 ಗ್ರಾಮಗಳಲ್ಲಿ ಕುಡಿಯುವ ನೀರಿನಸಮಸ್ಯೆ ಎದುರಾಗಿದ್ದು, ಇದರಲ್ಲಿ ಈಗಾಗಲೇ 4 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಹಾಗೂ 38 ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರುಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಶಿಡ್ಲಘಟ್ಟ ತಾಲೂಕಿನಲ್ಲಿ ಅಧಿಕ ಅಂದರೆ 17ಗ್ರಾಮ,ಚಿಂತಾಮಣಿ ತಾಲೂಕಿನಲ್ಲಿ 13 ಗ್ರಾಮಗಳು, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 10ಗ್ರಾಮಗಳು, ಬಾಗೇ ಪಲ್ಲಿತಾಲೂಕಿನಲ್ಲಿ 2 ಗ್ರಾಮಗಳುಕುಡಿಯುವ ನೀರಿನ ಸಮಸ್ಯೆಕಂಡು ಬಂದಿದ್ದು, ಅಲ್ಲಿ ಸಮಸ್ಯೆ ಇತ್ಯರ್ಥ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಘೋಷಣೆಗೆ ಸೀಮಿತವಾದ ನೀರಾವರಿ ಯೋಜನೆ: ಹೇಳಿಕೇಳಿ ಚಿಕ್ಕಬಳ್ಳಾಪುರ ಜಿಲ್ಲೆ ಬರಪೀಡಿತ ಪ್ರದೇಶ ಎಂದು ಅಪಖ್ಯಾತಿಗೆ ಗುರಿಯಾಗಿದೆ. ಈ ಭಾಗದಲ್ಲಿವಿವಿಧ ರಾಜಕೀಯ ಪಕ್ಷಗಳು ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವ ವಿಷಯವನ್ನು ಚುನಾವಣಾ ಅಸ್ತ್ರವಾಗಿ ಬಳಸಿಕೊಂಡಿದ್ದಾರೆ ವಿನಃ, ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆ ಇನ್ನೂ ಕನಸಾಗಿಯೇ ಉಳಿದಿದೆ.
ಪಕ್ಷಿಮ ಘಟ್ಟಗಳಲ್ಲಿ ವ್ಯರ್ಥವಾಗಿ ಸಮುದ್ರ ಪಾಲಾ ಗುವ ನೀರನ್ನು ಬಯಲು ಸೀಮೆ ಪ್ರದೇಶಗಳಿಗೆ ಹರಿಸಲು ಎತ್ತಿನಹೊಳೆ ಯೋಜನೆಯನ್ನು ಘೋಷಣೆ ಮಾಡಲಾಗಿದೆ. ಆದರೆ, ಈ ಯೋಜನೆಯ ಮೂಲಕ ಬರ ಪೀ ಡಿತ ಪ್ರದೇಶಕ್ಕೆ ಒಂದು ಹನಿಯೂ ನೀರು ಬಂದಿಲ್ಲ.
ಎಚ್‌ಎನ್ ವ್ಯಾಲಿ ಯೋಜನೆಯಿಂದ ಅನುಕೂಲ: ನೀರಾವರಿ ಸೌಲಭ್ಯದಿಂದ ವಂಚಿತಗೊಂಡಿರುವ ಚಿಕ್ಕ ಬಳ್ಳಾಪುರ ಜಿಲ್ಲೆಗೆ ಬೆಂಗಳೂರಿನ ಹೆಬ್ಟಾಳ ಮತ್ತುನಾಗವಾರ ಕೆರೆಗಳಲ್ಲಿ ಶೇಖರಣೆಯಾಗುವ ತ್ಯಾಜ್ಯ ನೀರನ್ನು ಶುದ್ಧೀಕರಿಸಿ, ಅದನ್ನು ಹರಿಸಲು ಎಚ್‌ಎನ್‌ವ್ಯಾಲಿ ಯೋಜನೆ ರೂಪಿಸಿ, ಕೆಲವೊಂದು ಕೆರೆಗಳಿಗೆ ನೀರು ಹರಿಸಿದ ಪರಿಣಾಮ ಅಂತರ್ಜಲಮಟ್ಟ ಅಲ್ಪ ಪ್ರಮಾಣದಲ್ಲಿ ಚೇತರಿಕೆ ಕಂಡು ಬಂದಿದೆ. ಬೆಂಗಳೂರಿ ನಿಂದ ಹರಿಯುವ ತ್ಯಾಜ್ಯ ನೀರನ್ನು 3 ಹಂತದಲ್ಲಿಶುದ್ಧೀಕರಿಸಿ ಹರಿಸಬೇಕೆಂದು ಬೇಡಿಕೆ ಸಹ ಬಲವಾಗಿ ಕೇಳಿ ಬಂದಿದೆ. ಅದು ಸಾಕಾರಗೊಂಡಿಲ್ಲ ಎಂಬಆರೋಪ ನೀರಾವರಿ ಹೋರಾಟಗಾರರಿಂದ ಕೇಳಿಬಂದಿದೆ. ಒಟ್ಟಾರೆ ಎಚ್‌ಎನ್ ವ್ಯಾಲಿ ಯೋಜನೆಯಿಂದ ಜಿಲ್ಲೆಯಲ್ಲಿ ಕೆಲಭಾಗಗಳಲ್ಲಿ ಅಂತರ್ಜಲಮಟ್ಟ ವೃದ್ಧಿಯಾಗಿರುವುದೇ ವಿಶೇಷ.
ಬತ್ತಿಹೋಗುತ್ತಿರುವ ಕೊಳವೆ ಬಾವಿಗಳು: ಜಿಲ್ಲೆಯಲ್ಲಿ ಬಹುತೇಕ ರೈತರು ಮತ್ತು ಜನಸಾಮಾನ್ಯರು ಮಳೆನೀರನ್ನು ಆಶ್ರಯಿಸಿಕೊಂಡಿದ್ದಾರೆ. ಕೊಳವೆ ಬಾವಿಗಳಮೂಲಕ ಲಭಿಸುತ್ತಿರುವ ನೀರಿನಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಆದರೆ, ಸಾವಿರಾರು ಅಡಿಗಳು ಕೊರೆದರೂ ಕೊಳವೆ ಬಾವಿಗಳಲ್ಲಿ ನೀರು ಲಭಿಸುತ್ತಿಲ್ಲ. ಒಂದು ವೇಳೆ ನೀರು ಲಭಿಸಿದರೆ ಆ ನೀರಿನಲ್ಲಿ ಫ್ಲೋರೆಡ್ ಅಂಶಗಳು ಕಂಡು ಬರುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಮತ್ತೂಂದೆಡೆ ಇರುವ ಕೊಳವೆ ಬಾವಿ ಗಳಲ್ಲಿ ನೀರು ಬತ್ತಿ ಹೋಗುತ್ತಿದ್ದು, ಮುಂದಿನ ದಿನಗ ಳಲ್ಲಿ ಕುಡಿಯುವ ನೀರಿಗಾಗಿ ಸಂಕಷ್ಟವನ್ನು ಎದುರಿಸುವ ಲಕ್ಷಣಗಳು ಕಂಡು ಬರುತ್ತಿದೆ.
ನಗರ ಪ್ರದೇಶ ದಲ್ಲಿ ನಗರಸಭೆ ಅಥವಾ ಪುರಸಭೆ ಗಳಿಗೆ ಕುಡಿಯುವ ನೀರಿನ ಸಮಸ್ಯೆನಿವಾರಣೆಗೆ ಹೊಣೆ ಗಾರಿಕೆ ನೀಡಲಾ ಗಿದೆ.ಮತ್ತೂಂದೆಡೆ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಪಂ ಗಳಿಗೆಸಮಸ್ಯೆ ಇತ್ಯರ್ಥ ಮಾಡಲು ಸೂಚನೆ ನೀಡಲಾ ಗಿದೆ.ಈಗಾಗಲೇ ಗ್ರಾಪಂ ಮಟ್ಟದಲ್ಲಿ 15 ಹಣಕಾಸುಯೋಜನೆ ಮೂಲಕ ಕುಡಿ ಯುವ ನೀರು ಸಮಸ್ಯೆನಿವಾರಣೆಗೆ ಅನುದಾನವನ್ನು ಬಳಕೆ ಮಾಡಲಾಗುತ್ತಿದೆ.ಜೊತೆಗೆ ಕೆಲ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.
ಚಿಂತಾಮಣಿಯಲ್ಲಿ 13 ಗ್ರಾಮಗಳಲ್ಲಿ ನೀರು ಸಮಸ್ಯೆ ಎದುರಾಗಿದೆ. ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಕೆ ಮಾಡುತ್ತಿದ್ದೇವೆ. ಒಂದು ಗ್ರಾಮದಲ್ಲಿ ಮಾತ್ರ ಟ್ಯಾಂಕರ್ ಮೂಲಕನೀರು ಪೂರೈಕೆ ಮಾಡುತ್ತಿದ್ದೇವೆ. ಕಳೆದಸಾಲಿನಲ್ಲಿ 120 ಗ್ರಾಮದಲ್ಲಿ ಸಮಸ್ಯೆಉಲ್ಬಣಗೊಂಡಿದ್ದು, ಪ್ರಸ್ತುತ ಆನೂರುಗ್ರಾಪಂ ವ್ಯಾಪ್ತಿಯಲ್ಲಿ ಕೆಸಿ ವ್ಯಾಲಿ ಯೋಜನೆನೀರಿನಿಂದ ಕೆರೆಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಿದೆ. – ಸುರೇಶ್, ಬೇಡರ್, ಎಇಇ ಕುಡಿಯುವ ನೀರು ಗ್ರಾಮ ನೈರ್ಮಲ್ಯ ಇಲಾಖೆ, ಚಿಂತಾಮಣಿ
ಚಿಕ್ಕಬಳ್ಳಾಪುರದಲ್ಲಿ ಈಗಾಗಲೇ 10 ಗ್ರಾಮಗಳಲ್ಲಿ ಸಮಸ್ಯೆ ಕಂಡು ಬಂದಿದೆ. 7 ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿ ಹಾಗೂ 3 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದೇವೆ. ಮುಂದಿನದಿನಗಳಲ್ಲಿ ಸುಮಾರು 25 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಎದುರಾಗಬಹುದೆಂದು ಪಟ್ಟಿಮಾಡಿಕೊಂಡಿದ್ದೇವೆ. ಎಚ್‌ಎನ್ ವ್ಯಾಲಿಯೋಜನೆಯಿಂದ ಅನುಕೂಲವಿದೆ. ನಂದಿಹೋಬಳಿಯಲ್ಲಿ ಮಾತ್ರ ಸಮಸ್ಯೆ ತೀವ್ರವಾಗಿ ಕಂಡು ಬಂದಿದೆ. – ಹೇಮಂತ್, ಎಇಇ ಪ್ರಭಾರ ಕುಡಿಯುವ ನೀರು ಗ್ರಾಮ ನೈರ್ಮಲ್ಯ ಇಲಾಖೆ, ಚಿಕ್ಕಬಳ್ಳಾಪುರ
ಬಾಗೇಪಲ್ಲಿ ತಾಲೂಕಿನಲ್ಲಿ 3 ಗ್ರಾಮಗಳಲ್ಲಿ ನೀರು ಸಮಸ್ಯೆಎದುರಾಗಿದ್ದು, ಅದರಲ್ಲಿ ಈಗಾಗಲೇ 2ಗ್ರಾಮಗಳಲ್ಲಿ ಕೊಳವೆ ಬಾವಿಗಳನ್ನುಕೊರೆದು ಸಮಸ್ಯೆಗಳನ್ನು ಇತ್ಯರ್ಥಮಾಡಲಾಗಿದೆ. ಬೇಸಿಗೆ ಕಾಲದಲ್ಲಿಕುಡಿಯುವ ನೀರು ಸಮಸ್ಯೆ ಎದುರಾಗುವಗ್ರಾಮಗಳನ್ನು ಈಗಾಗಲೇ ಪಟ್ಟಿಮಾಡಿಕೊಂಡಿದ್ದೇವೆ. ಸಮಸ್ಯೆಯನ್ನುಇತ್ಯರ್ಥ ಮಾಡಲು ಸಕಲ ಸಿದ್ಧತೆಮಾಡಿಕೊಂಡಿದ್ದೇವೆ. ● ರಾಮಲಿಂಗಾರೆಡ್ಡಿ, ಎಇಇ, ಪ್ರಭಾರಕುಡಿಯುವ ನೀರು ಗ್ರಾಮ ನೈರ್ಮಲ್ಯ ಇಲಾಖೆ, ಬಾಗೇಪಲ್ಲಿ
ಶಿಡ್ಲಘಟ್ಟ ತಾಲೂಕಿನಲ್ಲಿ 17ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ.ಸುಮಾರು 50 ಹಳ್ಳಿಗಳಲ್ಲಿ ತೀವ್ರಸಮಸ್ಯೆಯಾಗಿದ್ದು, ಅಲ್ಲಿ ಖಾಸಗಿ ಕೊಳವೆಬಾವಿಗಳೂ ಇಲ್ಲದಿದ್ದರಿಂದ ತೊಂದರೆ ಯಾಗಿದೆ. ಕೆಲವೊಂದು ಗ್ರಾಮಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗುತ್ತಿದೆ. ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಸಿ, ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗಿದೆ. ಡೀಸಿ ಈಗಾಗಲೇ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾಗುವ ಹಳ್ಳಿಗಳ ಪಟ್ಟಿ ತರಿಸಿಕೊಂಡಿದ್ದಾರೆ. ● ಲೋಕೇಶ್, ಎಇಇ, ಕುಡಿಯುವ ನೀರು ಗ್ರಾಮ ನೈರ್ಮಲ್ಯ ಇಲಾಖೆ, ಶಿಡ್ಲಘಟ್ಟ
ಬೇಸಿಗೆ ಕಾಲದಲ್ಲಿ ಕುಡಿಯುವ ನೀರು ಸಮಸ್ಯೆ ಉಲ್ಬಣಗೊಳ್ಳದಂತೆ ಅಗತ್ಯಕ್ರಮ ಕೈಗೊಳ್ಳಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿಪ್ರಾಥಮಿಕ ಹಂತದಲ್ಲಿಸಮಸ್ಯೆಗಳಿರುವ ಗ್ರಾಮಗಳನ್ನು ಗುರುತಿಸಿ, ಪಟ್ಟಿ ಮಾಡಿಕೊಂಡುನೀರು ಸರಬರಾಜು ಮಾಡಲು ಯೋಜನೆ ರೂಪಿಸಲಾಗಿದೆ. ಸರ್ಕಾರದ ಆದೇಶ ಬಂದ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ● ಅಮರೇಶ್, ಅಪರ ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ
ಗೌರಿಬಿದನೂರಲ್ಲಿ ಪ್ರಸ್ತುತ 5 ಗ್ರಾಮಗಳಲ್ಲಿ ನೀರಿನ ಅಭಾವ ಕಂಡುಬಂದಿದೆ. ಖಾಸಗಿ ಕೊಳವೆ ಬಾವಿಗಳಮೂಲಕ ನೀರು ಪೂರೈಕೆ ಮಾಡುತ್ತಿದ್ದೇವೆ.ಮುಂದಿನ ದಿನಗಳಲ್ಲಿ 8-10 ಗ್ರಾಮಗಳಲ್ಲಿಸಮಸ್ಯೆ ಎದುರಾಗಬಹುದು. ಎಚ್‌ಎನ್‌ವ್ಯಾಲಿ ಯೋಜನೆ ವ್ಯಾಪ್ತಿಗೆ 8 ಕೆರೆ ಆಯ್ಕೆಮಾಡಲಾಗಿದೆ. ಆದರೆ, ಇದುವರೆಗೆ ನೀರು ಬಂದಿಲ್ಲ. ● ಆದಿನಾರಾಯಣಪ್ಪ, ಎಇಇ,ಕುಡಿಯುವ ನೀರು ಗ್ರಾಮ ನೈರ್ಮಲ್ಯ ಇಲಾಖೆ, ಗೌರಿಬಿದನೂರು
ಗುಡಿಬಂಡೆಯಲ್ಲಿ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಮುಂದಿನ ದಿನಗಳಲ್ಲಿ 10-12 ಗ್ರಾಮಗಳಲ್ಲಿ ಸಮಸ್ಯೆ ಉಲ್ಬಣಗೊಳ್ಳಬಹು ದೆಂದು ಜಾಗೃತಿ ವಹಿಸಲಾಗಿದೆ.ಈಗಾಗಲೇ ಕುಡಿಯುವ ನೀರು ಪೂರೈಕೆಗೆ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದೇವೆ. ● ಹಿರೇಮಠ್, ಎಇಇ, ಕುಡಿಯುವ ನೀರು ಗ್ರಾಮ ನೈರ್ಮಲ್ಯ ಇಲಾಖೆ, ಗುಡಿಬಂಡೆ
-ಎಂ.ಎ.ತಮೀಮ್ ಪಾಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.