ಮುಚಖಂಡಿ ಗ್ರಾಮಕ್ಕೆ ಪ್ರವಾಸಿ ತಾಣದ ಮೆರಗು
Team Udayavani, Apr 5, 2021, 5:09 PM IST
ಬಾಗಲಕೋಟೆ: ಬ್ರಿಟಿಷರ ಕಾಲದ ಅದ್ಭುತ ಕೆರೆ..ಲಕ್ಷಾಂತರ ಭಕ್ತರ ಆರಾಧ್ಯ ದೈವ ವೀರಭದ್ರೇಶ್ವರ ದೇವಸ್ಥಾನ..ಸುತ್ತಲೂ ಹಸಿರಿನ ವಾತಾವರಣ..ನಿಸರ್ಗ ರಮಣೀಯ ಬೆಟ್ಟ ಗುಡ್ಡಗಳ ತಾಣ.
ಇದೆಲ್ಲವನ್ನು ಕಣ್ತುಂಬಿಕೊಳ್ಳಬೇಕೆಂದರೆ ನೀವು ನವನಗರಕ್ಕೆ ಹೊಂದಿಕೊಂಡಿರುವ ಐತಿಹಾಸಿಕ ಮುಚಖಂಡಿ ಗ್ರಾಮಕ್ಕೆ ಬರಬೇಕು.
ಹೌದು. 1882ರಲ್ಲಿ ಬ್ರಿಟಿಷರು ನಿರ್ಮಿಸಿದಅದ್ಭುತ ಕೆರೆ ಇಲ್ಲಿದ್ದು, ಈ ಕೆರೆಗೆ ನೀರುತುಂಬಿಸಲು ಈಗಾಗಲೇ 12 ಕೋಟಿ ಖರ್ಚುಮಾಡಲಾಗಿದೆ. ಆದರೆ ಅತಿ ದೊಡ್ಡ ಕೆರೆಗನೀರು ತುಂಬಿಸುವ ಯೋಜನೆ ಅಷ್ಟೊಂದು ಸಫಲವಾಗಿಲ್ಲ. ಸದ್ಯ ಕೆರೆಯಂಗಳಕ್ಕೆಬರುವ ನೀರಿನಿಂದಲೇ ಸುತ್ತಲಿನ ಪ್ರದೇಶಹಾಗೂ ನವನಗರದ ಹಲವಾರು ಕೊಳವೆ ಬಾವಿಗಳು ಕೊಂಚ ರಿಪ್ರೇಶ್ ಆಗಿವೆ.
ಸ್ಥಗಿತಗೊಂಡಿದ್ದ ಕೊಳವೆ ಬಾವಿಗಳಲ್ಲೂ ನೀರು ಬರುತ್ತಿದೆ. ಆದರೆ ಈ ಕೆರೆಯನ್ನು ಪೂರ್ಣ ಪ್ರಮಾಣದಲ್ಲಿ ತುಂಬಿಸಿದರೆ ಹತ್ತಾರು ಹಳ್ಳಿಗೂಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಶಾಸಕಡಾ|ವೀರಣ್ಣ ಚರಂತಿಮಠರು ಈಗಿರುವ ಕೆರೆತುಂಬುವ ಪೈಪ್‌ಗ್ಳ ಜತೆಗೆ ದೊಡ್ಡ ಪೈಪ್‌ಲೈನ್ ಅಳವಡಿಸಿ ಹಿನ್ನೀರು ತುಂಬಿಸುವ ಯೋಚನೆಯಲ್ಲಿದ್ದಾರೆ.
ಅದ್ಭುತ ಪಿಕ್‌ನಿಕ್ ಸ್ಪಾಟ್: ಮುಚಖಂಡಿಸದ್ಯ ಪಿಕ್‌ನಿಕ್ ಸ್ಪಾಟ್ ಆಗಿ ಪರಿವರ್ತನೆಹೊಂದುತ್ತಿದೆ. ಇಲ್ಲಿರುವ ನಿಸರ್ಗ ರಮಣೀಯಬೆಟ್ಟ ಗುಡ್ಡಗಳು ನಿಮ್ಮನ್ನು ಸೆಳೆಯದೇಇರಲಾರವು. ಇದೆಲ್ಲದರ ಮಧ್ಯೆಯೇ ಸುಂದರಕೆರೆಯಿದ್ದು, ನೋಡಲು ಅದ್ಭುತವಾಗಿದೆ.ವಾರ ಪೂರ್ತಿ ನಿತ್ಯದ ಬದುಕಿನ ಜಂಜಾಟದಲ್ಲಿಮಾನಸಿಕ ಒತ್ತಡದಲ್ಲಿರುವ ಜನರು ತಮ್ಮಕುಟುಂಬದೊಂದಿಗೆ ಇಲ್ಲಿಗೆ ಬಂದು ಅರ್ಧ ದಿನ ಪ್ರವಾಸದ ಅನುಭವ ಅನುಭವಿಸಲುಇದೊಂದು ಅದ್ಭುತ ತಾಣವಾಗಿದೆ. ಈ ಹಿಂದೆ ದೇವಸ್ಥಾನ ಎದುರಿನ ಉದ್ಯಾನದಲ್ಲಿ ಮಕ್ಕಳ ಆಟಿಗೆ ಸಾಮಗ್ರಿ ಅಳವಡಿಸಲಾಗಿತ್ತು. ಆದರೆ,ಕಿಡಿಗೇಡಿಗಳ ಕೈಚಳಕದಿಂದ ಅವು ಹಾಳಾಗಿವೆ.ಕೆಲವೇ ಕೆಲವು ಸಾಮಗ್ರಿ ಉಳಿದಿದ್ದು, ಅವು ಬಳಕೆಗೆ ಬಾರದಂತಿವೆ.
ಯುವ ಜೋಡಿಗಳ ತಾಣ:ಭಕ್ತರು-ಪ್ರವಾಸಿಗರಿಂದ ಗಮನ ಸೆಳೆದಿದ್ದಈ ತಾಣ ಇತ್ತೀಚಿನ ದಿನಗಳಲ್ಲಿ ಯುವಜೋಡಿಗಳ ತಾಣವಾಗಿ ಬದಲಾಗುತ್ತಿದೆ.ಈ ತಾಣವನ್ನು ಸಮಗ್ರ ಅಭಿವೃದ್ಧಿಪಡಿಸಿ,ಅದಕ್ಕೊಂದಿಷ್ಟು ಶುಲ್ಕ ನಿಗದಿ ಪಡಿಸಿ ಆಶುಲ್ಕದ ಹಣದಲ್ಲಿ ಒಂದಿಬ್ಬರು ಗಾರ್ಡ್‌ಗಳನಿಯೋಜನೆ ಮಾಡಬೇಕೆಂಬ ಒತ್ತಾಯವೂ ಕೇಳಿ ಬಂದಿದೆ.
ಭಗ್ನಗೊಂಡಿದೆ ಮೂರ್ತಿ: ಮುಚಖಂಡಿವೀರಭದ್ರೇಶ್ವರ ದೇವಸ್ಥಾನದಿಂದ ಕೆರೆಯಮೇಲ್ಭಾಗಕ್ಕೆ ತೆರಳುವಾಗ ಭಗ್ನಗೊಂಡಶಿವನಮೂರ್ತಿ ಗೋಚರಿಸುತ್ತದೆ. ಆದರೆಅದನ್ನು ಬದಲಾಯಿಸುವ ಕೆಲಸ ನಡೆಯುತ್ತಿಲ್ಲಎಂಬ ಬೇಸರ ಹಲವರು ವ್ಯಕ್ತಪಡಿಸಿದ್ದಾರೆ.ಅದರ ಪಕ್ಕದಲ್ಲಿ ವಿವಿಧ ದೇವರುಗಳ ಭಗ್ನಗೊಂಡ ಫೋಟೋ ಇಡಲಾಗಿದೆ.
ಕೆರೆ ಅಭಿವೃದ್ಧಿ ಕಾಯಕಲ್ಪಕ್ಕೆ ಚಿಂತನೆ :
ಮುಚಖಂಡಿ ಕೆರೆಯನ್ನು 1882ರಲ್ಲಿ ಬ್ರಿಟಿಷರು ನಿರ್ಮಿಸಿದ್ದು, ಆಗಕೆರೆ 1550 ಎಕರೆ ವಿಸ್ತಾರವಾಗಿತ್ತು. ಈಗ ಅತಿಕ್ರಮಣ, ಸರ್ಕಾರದಿಂದಎಸ್.ಸಿ, ಎಸ್‌ಟಿ ಭೂರಹಿತ ಜನರಿಗೆ ಹಂಚಿಕೆ ಮಾಡಲಾಗಿದೆ. ಈಗ718 ಎಕರೆ ಮಾತ್ರ ಕೆರೆ ಉಳಿದಿದೆ. ಕಳೆದ 40 ವರ್ಷಗಳಿಂದ ಈ ಕೆರೆಯಸಮಗ್ರ ಅಭಿವೃದ್ಧಿಗೆ ಯಾರೂ ಚಿಂತನೆ ಮಾಡಿರಲಿಲ್ಲ. ಆದರೆ ಇದೀಗ ನಮ್ಮ ಕ್ಷೇತ್ರದ ಶಾಸಕ ಡಾ|ಚರಂತಿಮಠ ಅವರು ವಿಶೇಷ ಕಾಳಜಿ ವಹಿಸಿ ಮುಚಖಂಡಿ ಕೆರೆ ಸಮಗ್ರ ಅಭಿವೃದ್ಧಿಗೆ ಏನಾದರೂ ಮಾಡುವಂತೆ ನಿರ್ದೇಶನ ನೀಡಿದ್ದರು. ಹೀಗಾಗಿ ನಾನು, ನಮ್ಮ ಸದಸ್ಯರು, ಬುಡಾ ಅಧಿಕಾರಿಗಳು ಕೆರೆ ವೀಕ್ಷಿಸಿ ಯೋಜನೆ ರೂಪಿಸಿದ್ದೇವೆ. ನಗರ ಯೋಜನಾ ಪ್ರಾಧಿಕಾರ ಇದ್ದಾಗಿನಿಂದಲೂ ಲೇಔಟ್ ಮಾಲಿಕರಿಂದ ಸಂಗ್ರಹಿಸಿದ ತೆರಿಗೆ ಹಣ ಸುಮಾರು 13
ಕೋಟಿ ಇದೆ. ಅದರಲ್ಲಿ ಶೇ.80 ಕೆರೆ ಅಭಿವೃದ್ಧಿಗೆ ಬಳಸಲು ಮೀಸಲಿಡಲಾಗಿದೆ. ಅದಕ್ಕಾಗಿ ಮುಚಖಂಡಿ ಕೆರೆಯ ಮಧ್ಯ ಭಾಗದಲ್ಲಿ ಜ್ಞಾನಸಕ್ತ ಶಿವನಮೂರ್ತಿ ಸ್ಥಾಪನೆ, ಕೆರೆಯ ಏರಿಯಕೆಳಗೆ 20 ಎಕರೆ ಸರ್ಕಾರಿ ಜಾಗೆ ಇದ್ದು, ಅಲ್ಲಿ ಮಕ್ಕಳ ಉದ್ಯಾನವನ, ಪಿಕನಿಕ್ ಸ್ಪಾಟ್‌ಮಾಡುವ ಯೋಜನೆ ಇದೆ. ಕೆರೆಯ ಎರಡೂ ಪಕ್ಕದ ಗುಡ್ಡಗಳನ್ನು ಅರಣ್ಯ ಪ್ರದೇಶವೆಂದುಘೋಷಿಸಿ, ಹೆಚ್ಚಿನ ಆಮ್ಲಜನಕ ನೀಡುವ ಸಸಿ ನೆಡಲು ಯೋಜನೆ ಹಾಕಿಕೊಳ್ಳಲಾಗಿದೆ.ಮುಚಖಂಡಿ ಕೆರೆಗೆ ನೀರು ತುಂಬಿಸಲು 80 ಕೋಟಿ ರೂ. ಮೊತ್ತದ ಯೋಜನೆ ರೂಪಿಸಿದ್ದು,ಸದ್ಯ ಹಿನ್ನೀರು ಪ್ರದೇಶದಲ್ಲಿರುವ ಜಾಕ್‌ವೆಲ್‌ಗಿಂತ 300 ಮೀಟರ್ (1 ಸಾವಿರ ಅಡಿ)ದೂರ ಜಾಕ್‌ವೆಲ್ ನಿರ್ಮಿಸಿ, 4 ಅಡಿ ಅಗಲದ ಪೈಪ್‌ಲೈನ್ ಅಳವಡಿಸಿ, ಅದಕ್ಕೆ 1500ಎಚ್‌ಪಿಯ ಎರಡು ವಿದ್ಯುತ್ ಮೋಟಾರ್ ಅಳವಡಿಸಿ ಅಲ್ಲಿಂದ ಮುಚಖಂಡಿ ಕೆರೆತುಂಬಿಸಬೇಕು. ಆಗ ಕೆರೆ ಪೂರ್ಣ ತುಂಬಲು ಸಾಧ್ಯವಿದೆ. ಅಲ್ಲದೇ ಹಳೆಯ ಮಲ್ಲಾಪುರ ಬಳಿಸೇತುವೆ ಸಹಿತ ಬ್ಯಾರೇಜ್ ನಿರ್ಮಾಣಕ್ಕಾಗಿ ಸಣ್ಣ ನೀರಾವರಿ ಇಲಾಖೆಯಿಂದ 30 ಕೋಟಿರೂ.ಮೊತ್ತದ ಕ್ರಿಯಾಯೋಜನೆ ರೂಪಿಸಲಾಗಿದೆ. ಈಎರಡೂ ಯೋಜನೆಗಳ ಕುರಿತುಶಾಸಕರು, ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿದೆ ಎಂದು ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ ತಿಳಿಸಿದ್ದಾರೆ.
-ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ
ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.