ಶಾಲೆಗಾಗಿ ನಿತ್ಯವೂ ನಿಂತಿಲ್ಲ ಪಾದಯಾತ್ರೆ
ಉಪನಾಳ ಎಸ್.ಸಿ ಗ್ರಾಮದ ಮಕ್ಕಳ ಗೋಳು ಕೇಳ್ಳೋರಿಲ್ಲ
Team Udayavani, Apr 5, 2021, 5:17 PM IST
ಬಾಗಲಕೋಟೆ: ಈ ಹಳ್ಳಿಯ ಮಕ್ಕಳು ಶಿಕ್ಷಣಕ್ಕಾಗಿ ನಿತ್ಯವೂ ಪಾದಯಾತ್ರೆ ಮಾಡಲೇಬೇಕು. ಅದೂ ನಿತ್ಯ 4ರಿಂದ5ಕಿ.ಮೀ ನಡೆದುಕೊಂಡು ಹೋದಾಗ ಅವರಿಗೆ ಪಾಠ ಕೇಳಲು ಸಾಧ್ಯ. ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಿ ಎಂಬ ಕೂಗಿಗೆ ಸ್ಪಂದನೆ ಸಿಕ್ಕಿಲ್ಲ. ಹೌದು, ಲಾಕ್‌ಡೌನ್‌ವೇಳೆ ಸ್ಥಗಿತಗೊಂಡ ಬಸ್ ಸೇವೆ ಪುನಃಆರಂಭಗೊಂಡಿಲ್ಲ. ಲಾಕ್‌ಡೌನ್ ಬಳಿಕ ಶಾಲೆ-ಕಾಲೇಜು ಆರಂಭಗೊಂಡರೂವಿದ್ಯಾರ್ಥಿಗಳನ್ನು ಶಾಲೆಗೆ ಕರೆದುಕೊಂಡುಹೋಗುವ ಬಸ್‌ಮಾತ್ರ ಇನ್ನೂ ಉಪನಾಳಕ್ಕೆಬರುತ್ತಿಲ್ಲ. ಹೀಗಾಗಿ ಇಲ್ಲಿನ ಸುಮಾರು25ರಿಂದ 30 ಮಕ್ಕಳು ನಡೆದುಕೊಂಡೆ ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಇದೆ.
ಉಪನಾಳ ಎಸ್‌ಸಿ ಗ್ರಾಮದಿಂದ 25 ರಿಂದ 30 ವಿದ್ಯಾರ್ಥಿಗಳು ನಿತ್ಯಪಾದಯಾತ್ರೆ ಮಾಡಿದಾಗಲೇ ಶಾಲೆಗೆತಲುಪಲು ಸಾಧ್ಯ. 5ರಿಂದ 10ನೇತರಗತಿಯಲ್ಲಿ ಓದುವ ಚಿಕ್ಕಮಕ್ಕಳು ಬಿಸಿಲು,ಮಳೆ, ಚಳಿಗಾಳಿಯನ್ನದೆ ಅಕ್ಷರ ಕಲಿಕೆಗಾಗಿ ಹರಸಾಹಸಪಡುತ್ತಿದ್ದಾರೆ.
ವಿದ್ಯಾರ್ಥಿಗಳ ನಿತ್ಯ ಪರದಾಟ: ಇಳಕಲ್ ತಾಲೂಕಿನ ಉಪನಾಳ ಎಸ್ ಸಿ ಗ್ರಾಮದಲ್ಲಿ1 ರಿಂದ 5ನೇ ತರಗತಿಯವರೆಗೆ ಮಾತ್ರಶಾಲೆ ಇದೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆ 6ನೇತರಗತಿಯಿಂದ ಹೆಚ್ಚಿನ ಶಿಕ್ಷಣಕ್ಕೆ ಬೇರೆಕಡೆ ಹೋಗಲೇಬೇಕು. ಉಪನಾಳಗ್ರಾಮದಿಂದ ಭೀಮನಗಡವರೆಗೆ 4ರಿಂದ5 ಕಿಮೀ ಕಾಲ್ನಡಿಗೆಯಲ್ಲಿ ತೆರಳಿ ಅಲ್ಲಿಂದ ಗುಡೂರ, ಬಾದಾಮಿ, ಗುಳೇದಗುಡ್ಡಕ್ಕೆಶಿಕ್ಷಣಕ್ಕೆ ಹೋಗಬೇಕು. ಆದರೆ ಗ್ರಾಮದಿಂದ ಪಾದಯಾತ್ರೆಯ ಮೂಲಕ ಬಂದವಿದ್ಯಾರ್ಥಿಗಳಿಗೆ ಮುಂದೆ ಹೋಗಲು ಬಸ್‌ಸಿಗುವುದಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳುಶಾಲೆಗೆ ಹೋಗುವುದನ್ನೇ ನಿಲ್ಲಿಸಿ ದನ, ಕುರಿಕಾಯಲು ಹೋಗುತ್ತಾರೆ. ಇನ್ನು ಬಸ್ಸಿಲ್ಲದಕಾರಣ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಲು ಮನೆಯಲ್ಲಿ ಹಿಂಜರಿಯುತ್ತಾರೆ. ಹಾಗಾಗಿವಿದ್ಯಾರ್ಥಿನಿಯರು ಶಾಲೆಗೆ ಹೋಗದೆಮನೆಯಲ್ಲೇ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆಯ ಬದಿಯಲ್ಲಿ ಜಾಲಿ ಮುಳ್ಳಿನ ಹಾಸು: ಉಪನಾಳ ಗ್ರಾಮದ ರಸ್ತೆಯುದ್ದಕ್ಕೂ ಜಾಲಿ ಮುಳ್ಳಿನ ಹಾಸು ನಿರ್ಮಾಣವಾಗಿದೆ.ಪಕ್ಕದ ಭೀಮನಗಡ ಗ್ರಾಮದ ಚರಂಡಿನೀರು ರಸ್ತೆಯ ತುಂಬೆಲ್ಲ ಹರಿದು ಸುಮಾರು ಒಂದು ಕಿಮೀ ತಗ್ಗು ಗುಂಡಿಗಳು ನಿರ್ಮಾಣವಾಗಿವೆ. ಇದೆ ಕಾರಣಕ್ಕೆ ಈಮಾರ್ಗವಾಗಿ ತ್ರಿ ಚಕ್ರ ವಾಹನಗಳುಸಹ ಸಂಚರಿಸುವುದಿಲ್ಲ. ಇದರಿಂದಾಗಿ ಗ್ರಾಮಸ್ಥರು ಕೂಡ ಕಾಲ್ನಡಿಗೆಯಲ್ಲಿ ಸಂಚರಿಸು ವಂತಾಗಿದೆ. ಗುಳೇದಗುಡ್ಡ ಬಸ್ ಪಕ್ಕದ ಚಿಮ್ಮಲಗಿ ಗ್ರಾಮದ ಮಾರ್ಗವಾಗಿ ಸಂಚರಿಸಿ ಗುಡೂರಿಗೆ ಹೋಗುತ್ತದೆ. ಆದೆ ರಸ್ತೆಯ ದುರಸ್ತಿ ಮತ್ತು ರಸ್ತೆಯ ಬದಿಯಜಾಲಿ ಮುಳ್ಳಿನಿಂದ ಬಸ್ ಚಾಲಕರು ತಲೆ ಕೆಡಿಸಿಕೊಳ್ಳುತ್ತಿಲ್ಲ.
ಅಧಿಕಾರಿಗಳ ನಿರಾಸಕ್ತಿ: ಉಪನಾಳ ಗ್ರಾಮ ಇಳಕಲ್ ತಾಲೂಕಿನ ಕೊನೆಯ ಹಳ್ಳಿಯಾಗಿರುವುದರಿಂದ ವಿದ್ಯಾರ್ಥಿಗಳ ಮತ್ತುಗ್ರಾಮಸ್ಥರ ಗೋಳು ಯಾರಿಗೂ ಕೇಳುತ್ತಿಲ್ಲ.ಮಕ್ಕಳ ಶಿಕ್ಷಣಕ್ಕಾಗಿ ಬಸ್ ಸೌಲಭ್ಯಕ್ಕೆ ಅಧಿಕಾರಿಗಳ ಮುಂದೆ ಪ್ರಸ್ತಾಪಿಸಿದರೆ ನಿರ್ಲಕ್ಷ ವರ್ತನೆ ತೋರುತ್ತಿದ್ದಾರೆ. ಅಧಿಕಾರಿಗಳ ವರ್ತನೆಗೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಬೇಸತ್ತಿದ್ದಾರೆ.
25ರಿಂದ 30 ವಿದ್ಯಾರ್ಥಿಗಳು: ಉಪನಾಳ ಗ್ರಾಮದಿಂದ 20ರಿಂದ 30 ವಿದ್ಯಾರ್ಥಿಗಳು ಭೀಮನಗಡ, ಗುಡೂರು, ವಡಗೇರಿ,ಹುನಗುಂದ, ಬಾದಾಮಿ, ಗುಳೇದಗುಡ್ಡಕ್ಕೆಶಿಕ್ಷಣಕ್ಕಾಗಿ ತೆರಳುತ್ತಾರೆ. 6 ರಿಂದ 10ನೇ ತರಗತಿವರೆಗಿನ ಚಿಕ್ಕ ಮಕ್ಕಳು ಶಾಲೆಗೆ ಪ್ರತಿನಿತ್ಯ ನಡೆದುಕೊಂಡು ಹೋಗಬೇಕು.
ನಾವು ನಿತ್ಯ ಗ್ರಾಮದಿಂದ 4 ಕಿ.ಮೀ ದೂರದ ಭೀಮನಗಡ ಗ್ರಾಮಕ್ಕೆ ನಡೆದುಕೊಂಡು ಶಾಲೆಗೆ ಹೋಗಬೇಕು. ಅಲ್ಲಿಂದ ಮುಂದೆ ಬೇರೆಡೆಗೆ ಪ್ರಯಾಣಿಸುತ್ತೇವೆ. ಗ್ರಾಮದಲ್ಲಿ ಅಂಗವಿಕಲರು, ವೃದ್ದರಿದ್ದು ಅವರಿಗೆ ನಡೆಯಲು ಆಗದೆ ಇನ್ನೊಬ್ಬರ ಆಸರೆ ಬೇಡುವಂತಾಗಿದೆ. ಗ್ರಾಮದಲ್ಲಿ 5ನೇ ತರಗತಿ ಮಾತ್ರ ಶಾಲೆ ಇದ್ದು, ಹೆಚ್ಚಿನ ವಿದ್ಯಾ ಭ್ಯಾಸಕ್ಕೆ ಪಕ್ಕದ ಗ್ರಾಮಕ್ಕೆ ಹೋಗುತ್ತಾರೆ. ಆದರೆ ವಿದ್ಯಾರ್ಥಿಗಳು ಚಿಕ್ಕ ಮಕ್ಕಳಿರುವುದರಿಂದ ನಡೆಯಲು ಸಾಧ್ಯವಿಲ್ಲ. ಸಂಬಂಧಪಟ್ಟ ಅಧಿಕಾರಿಗಳು, ನಮ್ಮೂರಿಗೆ ಬಸ್ ಸೌಲಭ್ಯ ಕಲ್ಪಿಸಬೇಕು. -ಮಂಜುನಾಥ, ಉಪನಾಳ ಎಸ್.ಸಿ ಗ್ರಾಮದ ವಿದ್ಯಾರ್ಥಿ
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.