ಕೋವಿಡ್ ಕಾಲದಲ್ಲಿ ಕಡಿಮೆ ಖರ್ಚಲ್ಲಿ ಬದುಕೋಣ…


Team Udayavani, Apr 5, 2021, 6:36 PM IST

ಕೋವಿಡ್ ಕಾಲದಲ್ಲಿ ಕಡಿಮೆ ಖರ್ಚಲ್ಲಿ ಬದುಕೋಣ…

ಕೋವಿಡ್ ಕುರಿತ ಚರ್ಚೆಗಳು ಮತ್ತೆ ಮುನ್ನಲೆಗೆ ಬಂದಿವೆ. ಭಾರತದಲ್ಲಿ ಕೊರೋನಾದ ಎರಡನೇ ಅಲೆಶುರು ವಾಗುವ ಎಲ್ಲಾ ಸೂಚನೆಗಳೂ ಸಿಗುತ್ತಿವೆ.ಕರ್ನಾಟಕದಲ್ಲಿ ದಿನಕ್ಕೆ 200-300 ಪ್ರಕರಣಗಳಿಗೆಸೀಮಿತವಾಗಿದ್ದ ಸಂಖ್ಯೆ, ಈಗ ಮತ್ತೆ ಏಪ್ರಿಲ್‌ನಲ್ಲಿ ಏರುಗತಿ ಕಂಡಿದೆ.

ಕೋವಿಡ್ 2ನೇ ಅಲೆ ಮೊದಲನೆಯದಕ್ಕಿಂತ ತೀವ್ರವಾಗುವ ಸಾಧ್ಯತೆಗಳಿವೆ ಎಂಬ ಮಾತನ್ನು ತಜ್ಞ

ವೈದ್ಯರೂ ಹೇಳುತ್ತಿದ್ದಾರೆ. ಈ ನಡುವೆ, ಕೊರೊನಾದ ಹೊಡೆತದಿಂದ ನೆಲ ಕಚ್ಚಿದ್ದ ಆರ್ಥಿಕತೆಯಿಂದ ಬೊಕ್ಕಸಕ್ಕೆ ಉಂಟಾದ ನಷ್ಟವನ್ನು ತುಂಬಿಕೊಳ್ಳಲು ಸರ್ಕಾರ ಗ್ಯಾಸ್‌, ಪೆಟ್ರೋಲ್‌ ಮತ್ತಿತರ ಅಗತ್ಯ ವಸ್ತುಗಳ ಬೆಲೆಯನ್ನೂ ಏರಿಸಿದೆ.

ಕೋವಿಡ್ ಜೊತೆಗೆ ಇತರ ಖಾಯಿಲೆಗಳೂ ಬಾಧಿಸುವುದರಿಂದ ಆರೋಗ್ಯ ಮತ್ತು ಆಸ್ಪತ್ರೆ ಖರ್ಚುಗಳೂ ದುಬಾರಿಯಾಗುತ್ತಿವೆ. ಮೊದಲು ಆಗುತ್ತಿದ್ದ ಖರ್ಚಿಗಿಂತ ಎರಡು ಪಟ್ಟುಹೆಚ್ಚು ಖರ್ಚಾಗುತ್ತಿರುವುದರಿಂದ ಸಾಮಾನ್ಯ ಜನರಜೇಬಿಗೂ ದುಬಾರಿಯಾಗಿದೆ. ಈಗ ಸಮಸ್ಯೆಗಳುಯಾವ ರೂಪದಲ್ಲಿ ಬರುತ್ತವೆ ಎಂದು ಹೇಳಲು ಆಗುತ್ತಿಲ್ಲ. ಪರಿಚಯದವರೊಬ್ಬರಿಗೆ ಮೊದಲಿಂದಲೂ ಹೃದಯ ಸಂಬಂಧಿ ಖಾಯಿಲೆಯಿತ್ತು. ಕೋವಿಡ್ ಸಮಯದಲ್ಲಿ ಸಮಸ್ಯೆ ಮತ್ತೆ ಬಂದಿದ್ದರಿಂದ ಅವರು ಆಸ್ಪತ್ರೆಗೆ ಅಡ್ಮಿಟ್‌ ಆಗಬೇಕಾಗಿ ಬಂತು. ಕೋವಿಡ್ ನೆಗೆಟಿವ್‌ ರಿಪೋರ್ಟ್‌ ಇಲ್ಲದೆ ಅಡ್ಮಿಟ್‌ ಮಾಡಿಕೊಳ್ಳ  ಬಾರದು ಅಂತ ಸರ್ಕಾರದ ಆದೇಶವಿತ್ತು. ಹಾಗಾಗಿ ಟೆಸ್ಟ್ ಆಗಿ ರಿಪೋರ್ಟ್‌ ಬರುವವರೆಗೂ, ಸಸ್ಪೆಕr…ವಾರ್ಡ್‌ ನಲ್ಲಿ ಇರಬೇಕಾಯ್ತು. ಅದಕ್ಕೂ ಹೆಚ್ಚು ಖರ್ಚು, ಕೋವಿಡ್ ನೆಗಟಿವ್‌ ಬಂದ ನಂತರ ಮಾಮೂಲಿ ಆಸ್ಪತ್ರೆ ಖರ್ಚುಗಳು. ಹೀಗಾಗಿ ಖರ್ಚಿನ ವಿಷಯ ದಲ್ಲಿ ಪೆಟ್ಟಿನ ಮೇಲೆ ಪೆಟ್ಟು ಬೀಳತೊಡಗಿದೆ.

ಖರ್ಚುಗಳಿಂದ ದೂರ ಇರೋಣ:

ಸಾಲ ಮಾಡಿ ತುಪ್ಪ ತಿನ್ನು ಅನ್ನುವುದು ಹಳೆಯ ಮಾತು. ಆ ಮಾತಿನಂತೆ ಬದುಕುವುದರಲ್ಲಿ ಅರ್ಥವಿಲ್ಲ. ಇವತ್ತಿನ ಸಂದರ್ಭದಲ್ಲಿ ಖರ್ಚುಗಳನ್ನು ಕಡಿಮೆ ಮಾಡಿ ಕೊಂಡು ಬದುಕುವುದೇ ಜಾಣತನ. ಈಗಒಂದು ಮದುವೆ, ನಾಮಕರಣ, ಶುಭ ಸಮಾ ರಂಭ ಅಂತ ಮಾಡಿದರೂ ಲಕ್ಷಾಂತರ ರುಪಾಯಿಗಳ ಖರ್ಚು ಬೀಳುತ್ತದೆ. ಒಂದು ಸಮಾರಂಭಕ್ಕೆ ಹೋಗಿ ಬರುತ್ತೇವೆ ಅಂದರೂ 800-1000 ರುಪಾಯಿ ಕೈ ಬಿಡುತ್ತದೆ. ಇಂಥ ಖರ್ಚುಗಳಿಂದ ದೂರ ಉಳಿಯುವುದೇ ಎಲ್ಲರ ಕೆಲಸ ಮತ್ತು ಕರ್ತವ್ಯ ಆಗಬೇಕು. ಮುಂಬರುವ ದಿನಗಳಲ್ಲಿ ಹೆಚ್ಚಿನ ನೌಕರಿಗಳು ಸೃಷ್ಟಿಯಾಗುತ್ತವಾ? ಎಲ್ಲರ ನೌಕರಿಗಳು ಉಳಿಯುತ್ತವಾ? ಸಂಬಳದಲ್ಲಿ ಹೆಚ್ಚಳ ಆಗುತ್ತದಾ?- ಈ ಪ್ರಶ್ನೆಗಳಿಗೆ ಖಚಿತವಾಗಿ ಉತ್ತರಿಸುವವರಿಲ್ಲ. ಆದರೆ, ಬದುಕು ದುಬಾರಿಯಾಗುತ್ತದೆ ಎಂಬುದು ಸುಳ್ಳಲ್ಲ.

ಪ್ರವಾಸ ಹೋಗುವುದೇ ಬೇಡ:

ತಿಂಗಳುಗಳನ್ನು ಖರ್ಚಿಲ್ಲದಂತೆ ನಿಭಾಯಿಸುವುದಂತೂ ಸಾಧ್ಯವಿಲ್ಲ. ಆದರೆ, ವಾರಾಂತ್ಯಗಳನ್ನು ಖರ್ಚಿಲ್ಲದಂತೆ ನಿಭಾಯಿಸಲು ಸಾಧ್ಯವಿದೆ. ಹೇಗೆದರೆ, ಶನಿವಾರ, ಭಾನುವಾರಗಳಲ್ಲಾಗುವ ಖರ್ಚುಗಳನ್ನು ಕಡಿಮೆ ಮಾಡುವುದು. ಕುಟುಂಬ ದೊಡನೆ ಕಾಲ ಕಳೆಯುವುದು. ಕೋವಿಡ್ ಎರಡನೆ ಅಲೆ ಬರುವ ಸಾಧ್ಯತೆ ಇರುವುದರಿಂದ, ಸದ್ಯಕ್ಕೆ ಪ್ರವಾಸ ಕೈಗೊಳ್ಳುವ ಯೋಚನೆಯನ್ನು ಕೈಬಿಡಿ. ಹಣ,ಆರೋಗ್ಯ ಮತ್ತು ನೆಮ್ಮದಿಯನ್ನು ಉಳಿಸಿಕೊಳ್ಳಲು ಇದೂ ಒಂದು ಒಳ್ಳೆಯ ಉಪಾಯ.

ಹೇಗೆಂದರೆ, ಕುಟುಂಬದೊಂದಿಗೆ ಮೂರು- 4ದಿನಗಳ ಒಂದು ಟ್ರಿಪ್‌ ಅಂದರೆ, ಅದಕ್ಕೆ ಸಾವಿ ರಾರುರೂಪಾಯಿಗಳನ್ನು ಎತ್ತಿಡಬೇಕು. ಆ ಪ್ರವಾಸದಲ್ಲಿ ಅಕಸ್ಮಾತ್‌ ಯಾರಿಗಾದರೂ ಆರೋಗ್ಯ ಕೈ ಕೊಟ್ಟರೆಅದಕ್ಕಾಗಿ ಮತ್ತಷ್ಟು ಹಣ ಖರ್ಚು ಮಾಡಬೇಕು. ನಾವು ಅಂದುಕೊಂಡಂತೆ ಪ್ರವಾಸ ನಡೆಯದಿದ್ದರೆ, ನೆಮ್ಮದಿಯನ್ನೂ ಕಳೆದುಕೊಳ್ಳಬೇಕು! ಟ್ರಿಪ್‌ ಹೋಗುವುದೇ ಬೇಡ ಅಂದುಬಿಟ್ಟರೆ, ಮೇಲೆ ಹೇಳಿದ ಎಲ್ಲಾ ಸಮಸ್ಯೆಗಳಿಂದಲೂ ಮುಕ್ತರಾಗಬಹುದು.

ಖರ್ಚಿಲ್ಲದ ಬೇಸಿಗೆಯಾಗಲಿ:

ಹೌದಲ್ಲವಾ? ಮದುವೆ ಮಾಡುವವರು ಆ ಮೂಲಕ ತಮ್ಮ ಅಂತಸ್ತು ಪ್ರದರ್ಶನ ಮಾಡು ತ್ತಿದ್ದಂತೆಯೇ,ಮದುವೆಗೆ ಹೋಗುತ್ತಿದ್ದವರೂ ಕಾಣಿಕೆ ನೀಡುವಸಂದರ್ಭ ದಲ್ಲಿ ಪ್ರಸ್ಟೀಜ್‌ ತೋರಿಸಲು ಪ್ರಯತ್ನಿ  ಸುತ್ತಿದ್ದರು. ಆ ನೆಪದಲ್ಲಿ ಸುಕಷ್ಟು ಹಣ ಕಳೆದು ಕೊಳ್ಳುತ್ತಿದ್ದರು. ಅದರಿಂದ ಪಾರಾಗಲೂ ಈಗ ಒಂದು ಅವಕಾಶ ಸಿಕ್ಕಿದೆ. ಮದುವೆ ಕಾರ್ಯಕ್ರಮಗಳು ಸರಳವಾಗಿರಬೇಕು ಎನ್ನುವ ನಿಯಮ, ಕೋವಿಡ್ ನೆಪದಲ್ಲಿ ಬಂದಿದೆ. ಅಂತಹ ಸಮಾರಂಭಗಳಿಂದ ದೂರ ಉಳಿದರೆ, ಈ ಕಡೆ ಹಣವೂ ಉಳಿಯುತ್ತದೆ. ಆರೋಗ್ಯ ಕೂಡ ಚೆನ್ನಾಗಿರುತ್ತದೆ.

ಹೀಗೆ ನೋಡುವಾಗ ಕೊರೊನಾ ಕೇವಲ ತೊಂದರೆಗಳನ್ನಷ್ಟೇ ಸೃಷ್ಟಿಸದೆ, ಸರಳವಾಗಿ ಬದುಕುವ ಅವಕಾಶಗಳನ್ನೂ ಕಲ್ಪಿಸಿಕೊಟ್ಟಿದೆ. ಲಾಕ್‌ಡೌನ್‌, ಕೋವಿಡ್ ಸಂಖ್ಯೆ ಹೆಚ್ಚಾಗದಂತೆ ನೋಡಿಕೊಳ್ಳಲು ಮತ್ತು ತಮ್ಮ ಉತ್ಪಾದನೆಗೂ ತೊಡಕಾಗದಂತೆ ಕಂಪನಿಗಳು ವರ್ಕ್‌ ಫ್ರಂ ಹೋಮ್, ವರ್ಕ್‌ ಆನ್‌ ರೊಟೇಶನ್‌ ಪಾಲಿಸಿ, ಮತ್ತಿತರ ಮಾರ್ಗಗಳನ್ನು ಕಂಡುಕೊಳ್ಳುತ್ತಿವೆ.

ಸಾಮಾನ್ಯ ಜನರು ತಮ್ಮ ಜೀವನವನ್ನು ಆರೋಗ್ಯ ಪೂರ್ಣ, ಸತ್ವಪೂರ್ಣವಾಗಿಸಿಕೊಳ್ಳಲು ಮತ್ತು ಮನೆಯ ಆರ್ಥಿಕ ಮಟ್ಟವನ್ನು ಕಾಪಾಡಿಕೊಳ್ಳಲು ಈ ಸಂದರ್ಭವೊಂದು ಉತ್ತಮ ಅವಕಾಶವಾಗಲಿ, ವೇದಿಕೆಯಾಗಲಿ…

ಸಮ್ಮರ್‌ ಕ್ಯಾಂಪ್‌ನ ರಗಳೆ ಇಲ್ಲ…  :

ಮಕ್ಕಳನ್ನು ಸಮ್ಮರ್‌ ಕ್ಯಾಂಪ್‌ಗೆ ಕಳಿಸುವ ತಲೆನೋವಂತೂ ಈಗ ಇಲ್ಲ. ಅಂದರೆ,ಸಾವಿರಾರು ರೂಪಾಯಿ ಪೋಷಕರಿಗೆಉಳಿಯಿತು ಎಂದೇ ಅರ್ಥ. ಮಕ್ಕಳನ್ನು ಸಮ್ಮರ್‌ ಕ್ಯಾಂಪ್‌ಗೆ ಕಳಿಸುವಬದಲು ಮನೆಯಲ್ಲೇ ಅವರ ವ್ಯಕ್ತಿತ್ವ ವಿಕಸನಕ್ಕೆಸಹಕಾರಿಯಾಗುವ ಕಲೆ, ಸಾಹಿತ್ಯ, ಆಟಗಳು,ಪಾಠಗಳು ಹೀಗೆ ಏನಾದರೊಂದು ಹೊಸತನ್ನುಕಲಿಸಬಹುದು. ಮಕ್ಕಳೊಂದಿಗೆ ನಮಗೂ ಹೊಸತು ಕಲಿಯಲು ಅಥವಾ ಕಲಿತದ್ದನ್ನು ನೆನಪಿಸಿಕೊಂಡು ಬದುಕನ್ನು ಸೆಲೆಬ್ರೇಟ್‌ ಮಾಡಲು ಅವಕಾಶವಾಗುತ್ತದೆ.

 

– ಪ್ರಸಾದ್‌ ಡಿ. ವಿ

ಟಾಪ್ ನ್ಯೂಸ್

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

1-horoscope

Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ

Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ

Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ

Kerala: ಅಂಗಿ ತೆಗೆದು ದೇಗುಲ ಪ್ರವೇಶ ಪದ್ಧತಿಗೆ ಕೊಕ್‌?

Kerala: ಅಂಗಿ ತೆಗೆದು ದೇಗುಲ ಪ್ರವೇಶ ಪದ್ಧತಿಗೆ ಕೊಕ್‌?

ರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚುರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚು

ರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚು

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Court-1

Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

1-horoscope

Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ

courts

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.