ಈ ಮದುವೆ ಗರ್ಭಧಾರಣೆಯ ಫಲಿತಾಂಶವಲ್ಲ : ನಟಿ ದಿಯಾ ಮಿರ್ಜಾ
Team Udayavani, Apr 6, 2021, 10:48 AM IST
ನವ ದೆಹಲಿ : ಮದುವೆಗೆ ಮೊದಲೇ ಗರ್ಭಿಣಿ ಆಗಿರುವ ವಿಚಾರವನ್ನು ಈಗ ಬಹಿರಂಗ ಪಡಿಸಿದ್ದಾರೆ ಎಂಬ ಇನ್ಸ್ಟಾ ಗ್ರಾಮ್ ನ ಬಳಕೆದಾರರೊಬ್ಬರಿಗೆ ದಿಯಾ ಖಡಕ್ ಉತ್ತರ ನೀಡಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಎರಡನೇ ಮದುವೆಯಾಗಿದ್ದ 39 ವರ್ಷದ ನಟಿ ದಿಯಾ ಮಿರ್ಜಾ ಕಳೆದ ವಾರ ಗರ್ಭಿಣಿಯಾಗಿರುವ ಫೋಟೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ವಿಷಯವನ್ನು ಬಹಿರಂಗ ಪಡಿಸಿದ್ದರು.
ಓದಿ : ಸ್ಯಾಂಡಲ್ ವುಡ್ ನಟಿ ಧನ್ಯಾ ರಾಮ್ ಕುಮಾರ್ ಬ್ಯೂಟಿಫುಲ್ ಫೋಟೋ ಗ್ಯಾಲರಿ
ಬಳಕೆದಾರರೊಬ್ಬರ ಪ್ರಶ್ನೆಗೆ ಉತ್ತರಿಸಿದ ದಿಯಾ, ಇದೊಂದು ಕುತೂಹಲಕರವಾದ ಪ್ರಶ್ನೆ, ನಾವು ಮೊದಲು ಮದುವೆ ಮಾಡಿಕೊಂಡಿರಲಿಲ್ಲ. ಮದುವೆಯ ಯೋಜನೆ ಮಾಡುತ್ತಿರುವಾಗಲೇ ನಾವು ಪಾಲಕರಾಗುತ್ತಿದ್ದೇವು ಎಂದು ನಮಗೆ ತಿಳಿಯಿತು. ನಾವು ಒಟ್ಟಿಗೆ ನಮ್ಮ ಜೀವನವನ್ನು ಕಳೆಯಲು ಬಯಸಿದ್ದರಿಂದ ನಾವು ಮದುವೆಯಾಗಿದ್ದೇವೆ. ನಾವು ಮಗು ಮಾಡಿಕೊಳ್ಳಲಿದ್ದೆವೆ. ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಸಂತಸದ ದಿನಕ್ಕಾಗಿ ನಾನು ಹಲವು ದಿನಗಳಿಂದ ಕಾಯುತ್ತಿದ್ದೆ. ಇದು ನನ್ನ ಜೀವನದ ಅತ್ಯಂತ ಖುಷಿಯ ಕ್ಷಣ. ಈ ವಿಷಯವನ್ನು ಮೆಡಿಕಲ್ ಕಾರಣದಿಂದಾಗಿ ಮಾತ್ರ ಮರೆ ಮಾಡಿದ್ದೆ. ಮೆಡಿಕಲ್ ಕಾರಣದಿಂದ ನಾನು ಗರ್ಭಿಣಿಯಾಗಿರುವುದರಿಂದ ಈ ಹಿಂದೆ ಹೇಳಿರಲಿಲ್ಲ. ಈ ಮದುವೆ ಗರ್ಭಧಾರಣೆಯ ಪಲಿತಾಂಶವಲ್ಲ ಎಂದಿದ್ದಾರೆ ದಿಯಾ.
ಕಳೆದ ಫೆಬ್ರವರಿ 15 ರಂದು ಉದ್ಯಮಿ ವೈಭವ್ ರೇಖಿ ಅವರ ಜೊತೆ ದಿಯಾ ಮಿರ್ಜಾ ಮದುವೆ ಮುಂಬೈನ ಬಾಂದ್ರಾದಲ್ಲಿ ನಡೆದಿತ್ತು. ಉದ್ಯಮಿ ವೈಭವ್ ರೇಖಿಗೂ ಕೂಡ ಇದು ಎರಡನೇ ಮದುವೆ. ಅವರು ತಮ್ಮ ಮೊದಲ ದಾಂಪತ್ಯ ಜೀವನದಲ್ಲಿ ಹೆಣ್ಣು ಮಗುವೊಂದಕ್ಕೆ ತಂದೆಯಾಗಿದ್ದರು.
ದೆಹಲಿ ಮೂಲದ ಉದ್ಯಮಿಯೊಬ್ಬರೊಂದಿಗೆ ಲಿವಿಂಗ್ ಟುಗೆದರ್ ರಿಲೇಷನ್ ಶಿಪ್ ನಲ್ಲಿದ್ದಿದ್ದರು ದಿಯಾ. ಆ ಮೇಲೆ ಆ ಜೋಡಿ ಮದುವೆಯಾಗಿತ್ತು. 2014ರ ಅಕ್ಟೋಬರ್ ನಲ್ಲಿ ದೆಹಲಿಯಲ್ಲಿನ ಚತ್ತಾರ್ ಪೂರ್ ನಲ್ಲಿ ಮದುವೆಯಾದ ಈ ಜೋಡಿ 2019ರಲ್ಲಿ ಅಧಿಕೃತವಾಗಿ ಬೇರ್ಪಟ್ಟಿತ್ತು.
ಓದಿ : ತಮಿಳುನಾಡು ಚುನಾವಣೆ: ಮತದಾರರ ಪಟ್ಟಿಯಲ್ಲಿಲ್ಲ ‘ಚಿನ್ನಮ್ಮ’ನ ಹೆಸರು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Mika Singh: ಮಿಕಾ ಹಾಡಿಗೆ ಫಿದಾ..ಪಾಕ್ ಅಭಿಮಾನಿಯಿಂದ 3 ಕೋಟಿ ರೂ. ವಾಚ್, ಚಿನ್ನ ಗಿಫ್ಟ್
Actress: ಸಲ್ಮಾನ್,ಶಾರುಖ್ ಬಳಿಕ ಖ್ಯಾತ ನಟಿಗೆ ಜೀವ ಬೆದರಿಕೆ.. 50 ಲಕ್ಷ ರೂ. ಡಿಮ್ಯಾಂಡ್
Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್ʼ ಚಿತ್ರದ ಟೈಟಲ್ ಬದಲಾವಣೆ
Mumbai: ಬಾಲಿವುಡ್ ನಟ ಶಾರುಖ್ ಖಾನ್ ಗೆ ಜೀವ ಬೆದರಿಕೆ ಹಾಕಿದ ವಕೀಲ ಛತ್ತೀಸ್ ಗಢದಲ್ಲಿ ಬಂಧನ
MUST WATCH
ಹೊಸ ಸೇರ್ಪಡೆ
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.