ಕೈ-ಕಮಲ ತೆರೆಮರೆ ರಾಜಕೀಯ
ಅನುಕೂಲಕ್ಕೆ ಕ್ಷೇತ್ರ ರಚನೆ, ಕಮಲದ ಮೇಲೆ ಕೈ-ದಳ ಆರೋಪ
Team Udayavani, Apr 6, 2021, 3:57 PM IST
ಧಾರವಾಡ: ಒಂದು ಗ್ರಾಮ ಪಂಚಾಯಿತಿಯೇ ಇದೀಗ ತಾಲೂಕು ಪಂಚಾಯಿತಿಯೂ ಹೌದು. ಒಂದು ತಾಪಂ ಇದೀಗ ಹೊಸ ಜಿಲ್ಲಾಪಂಚಾಯಿತಿ ಕ್ಷೇತ್ರವೂ ಹೌದು. ಕೇವಲ900 ಮತಗಳಿದ್ದರೂ ತಾಪಂ, ಹಾಗೆಯೇ 17 ಸಾವಿರ ಮತಗಳಿದ್ದರೂ ತಾಪಂ. ಒಟ್ಟಿನಲ್ಲಿ ಯಾವ ಮಾನದಂಡವೋ ಗೊತ್ತಿಲ್ಲ.ಜಿಲ್ಲೆಯಲ್ಲಿ ನೂತನ ತಾಪಂ ಮತ್ತು ಜಿಪಂ ಕ್ಷೇತ್ರಗಳರಚನೆಯಾಗಿದ್ದು, ಗ್ರಾಮೀಣಅಖಾಡಾದ ಮ್ಯೂಜಿಕಲ್‌ಚೇರ್ ಆಟ ಕೊನೆ ಹಂತಕ್ಕೆ ಬಂದಂತಾಗಿದೆ.
ಹೌದು. ಕೈ-ಕಮಲಪಾಳೆಯದ ಮಧ್ಯೆಭೀಕರ ರಣ ಕಾಳಗಕ್ಕೆಕಾರಣವಾಗಿ, ಜಿಲ್ಲೆಯಮಾಜಿ ಸಚಿವರು ಮತ್ತು ಹಾಲಿಸಂಸದರ ಮಧ್ಯೆ ತೀವ್ರ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿರುವ ಧಾರವಾಡ ಜಿಪಂ ಕ್ಷೇತ್ರಗಳ ಪುನರ್‌ವಿಂಗಡಣೆಯಾಗಿದ್ದು, ಇದೀಗ 22ರ ಬದಲು 27ಕ್ಷೇತ್ರಗಳು ರಚನೆಯಾಗಿವೆ.
ಕೈ ಭದ್ರಕೋಟೆಯಾಗಿದ್ದ ಜಿಲ್ಲಾ ಪರಿಷತ್ತು ಜಿಪಂ ಆದಾಗಿನಿಂದಲೂ ಬಿಜೆಪಿ ಪ್ರಾಬಲ್ಯ ಬೆಳೆದು ಕಮಲ ಪಡೆಯ ಭದ್ರಕೋಟೆಯೇ ಆಗಿದ್ದ ಧಾರವಾಡ ಜಿಪಂಆಪರೇಷನ್ ಹಸ್ತದಿಂದ ಸದ್ಯಕ್ಕೆ ಕೈ ವಶದಲ್ಲಿದೆ. ಈ ಬಾರಿಶತಾಯ ಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿರುವಕಮಲ ಪಾಳೆಯ 27 ಕ್ಷೇತ್ರಗಳಲ್ಲಿ ಈಗಾಗಲೇ ತನ್ನ ಹುರಿಯಾಳುಗಳನ್ನು ತೆರೆಯಲ್ಲೇ ಸಜ್ಜುಗೊಳಿಸಿದೆ. ಆದರೆ ಈ ಕ್ಷೇತ್ರ ಪುನರ್ ವಿಂಗಡನೆಯಲ್ಲಿಯೇ ಬಿಜೆಪಿ ತಂತ್ರಗಾರಿಕೆ ಮಾಡಿದೆ ಎಂದು ಕಾಂಗ್ರೆಸ್‌ಆರೋಪಿಸುತ್ತಿದ್ದು, ಇದಕ್ಕೆ ಬಿಜೆಪಿ ಕೂಡ ತಿರುಗೇಟು ನೀಡಲು ಸಜ್ಜಾಗಿದೆ.
ತೆರೆಮರೆಯಲ್ಲೇ ಬಾಲ ಕಟ್?: ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಳೆದ ಬಾರಿ ಬಿಜೆಪಿ ಮತ್ತುಕಾಂಗ್ರೆಸ್ ಮಧ್ಯೆ ತೀವ್ರ ಹಣಾಹಣಿ ಏರ್ಪಟ್ಟಿತ್ತು.ಬಿಜೆಪಿಯ ಭದ್ರಕೋಟೆಗೆ ಲಗ್ಗೆ ಹಾಕಿದ್ದ ಕೈ ಕೆಲವುಕ್ಷೇತ್ರಗಳನ್ನು ಪುನರ್ ವಿಂಗಡನೆ ಮಾಡಿ ಹಳ್ಳಿಗಳಸೇರ್ಪಡೆ ಮತ್ತು ತೆಗೆದು ಹಾಕುವಿಕೆಯನ್ನು ಸದ್ದಿಲ್ಲದೇಮಾಡಿತ್ತು. ತಮ್ಮ ಪ್ರಾಬಲ್ಯ ಉಳಿಸಿಕೊಳ್ಳುವ ನಿಟ್ಟಿನಲ್ಲಿಕೈ ಕೊಂಚ ಆಟ ಆಡಿದ್ದು ಸತ್ಯವೇ. ಅತೀ ಹೆಚ್ಚುಸ್ಥಾನಗಳನ್ನು ಗೆಲ್ಲುವ ಬರದಲ್ಲಿ ಕೆಲವಷ್ಟು ಗ್ರಾಪಂಗಳನ್ನುಅವೈಜ್ಞಾನಿಕವಾಗಿ ಒಗ್ಗೂಡಿಸಿ ತಾಪಂ ಕ್ಷೇತ್ರಗಳನ್ನು ರಚಿಸಿತ್ತು.
ಒಂದು ಕ್ಷೇತ್ರ ರಚನೆಗೆ ಅಕ್ಕಪಕ್ಕದ ಗ್ರಾಪಂಗಳನ್ನುಸೇರ್ಪಡೆ ಮಾಡಿಕೊಳ್ಳುವುದು ನಿಯಮ. ಆದರೆ ಈನಿಯಮಗಳನ್ನು ಗಾಳಿಗೆ ತೂರಿ ತಮಗೆ ಮನಬಂದಂತೆಕ್ಷೇತ್ರ ರಚಿಸಿತ್ತು. ಇದೀಗ ಬಿಜೆಪಿಗರು ಇದೇ ದಾರಿಯಲ್ಲಿ ನಡೆಯುತ್ತಿದ್ದು, ತಮ್ಮ ಪ್ರಾಬಲ್ಯವಿರುವ ಗ್ರಾಪಂಗಳನ್ನುಒಟ್ಟಿಗೆ ಸೇರಿಸಿಕೊಂಡಿದ್ದಾರೆ. ಅಷ್ಟೇಯಲ್ಲ, ಕಾಂಗ್ರೆಸ್‌ಮತಕೋಟೆಗಳನ್ನು ವಿಭಜಿಸಿ ಬಿಜೆಪಿ ಪ್ರಾಬಲ್ಯದಕ್ಷೇತ್ರಗಳಿಗೆ ಸೇರ್ಪಡೆಗೊಳಿಸುವ ಮೂಲಕ ಕೈಗೆಮಾರ್ಮಾಘಾತ ನೀಡಿದ್ದು, ಆಯಾ ವಿಧಾನಸಭಾವಾರುಜಿಪಂ ಮತ್ತು ತಾಪಂ ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನಗಳನ್ನುಗೆಲ್ಲುವುದಕ್ಕೆ ಸ್ಕೆಚ್ ಸಿದ್ಧಗೊಳಿಸಿಕೊಂಡಿದ್ದಾರೆ.ಗ್ರಾಪಂಗಳೇ ತಾಪಂ ಕ್ಷೇತ್ರಗಳೂ: ಜನಸಂಖ್ಯೆ ದೃಷ್ಟಿಯಿಂದಲೂ ಸಮಾನವಾಗಿ ಕ್ಷೇತ್ರಗಳ ಪುನರ್ ವಿಂಗಡಣೆಯಾಗಿಲ್ಲ. ಕೆಲವಷ್ಟು ಕ್ಷೇತ್ರಗಳಲ್ಲಿ ಅತೀಕಡಿಮೆ ಜನಸಂಖ್ಯೆ ಇದ್ದರೆ, ಇನ್ನೂ ಕೆಲವಷ್ಟು ಕ್ಷೇತ್ರಗಳಲ್ಲಿ ಹೆಚ್ಚು ಜನಸಂಖ್ಯೆ ಇದೆ. ಇದು ಅಭಿವೃದ್ಧಿಕಾರ್ಯಗಳ ದೃಷ್ಟಿಯಿಂದ ಮತ್ತು ಹಣಕಾಸುಲಭ್ಯತೆ ವಿಚಾರದಲ್ಲಿ ತೀವ್ರ ತಾರತಮ್ಯವಾಗುತ್ತದೆ ಎನ್ನುವ ಅಭಿಪ್ರಾಯ ಕೇಳಿ ಬರುತ್ತಿದೆ.
ತಾಪಂ ಕ್ಷೇತ್ರಗಳ ಪೈಕಿ ಅಣ್ಣಿಗೇರಿ ನೂತನತಾಲೂಕಿನಲ್ಲಿ ರಚನೆಯಾಗಿರುವ 11 ತಾಪಂಕ್ಷೇತ್ರಗಳ ಮತದಾರರ ಸಂಖ್ಯೆ ಸರಾಸರಿ ಕೇವಲ3000 ಸಾವಿರಷ್ಟಿದೆ. ಶಿಶ್ವಿನಹಳ್ಳಿ ತಾಪಂ ಅತೀ ಕಡಿಮೆಜನಸಂಖ್ಯೆ ಹೊಂದಿದ್ದು ಕೇವಲ 2733 ಮತದಾರರನ್ನು ಹೊಂದಿದೆ.
ಇನ್ನು ಅಳ್ನಾವರ ತಾಲೂಕಿನ 11 ತಾಪಂ ಕ್ಷೇತ್ರಗಳಮತದಾರರ ಸಂಖ್ಯೆ ಗ್ರಾಪಂಗಿಂತಲೂ ಕಡಿಮೆಇದೆ. ಅಲ್ಲಿನ ಪ್ರತಿಯೊಂದು ಗ್ರಾಪಂಗಳು ಕೂಡತಾಪಂ ಕ್ಷೇತ್ರಗಳು ಕೂಡ ಆಗಿವೆ. ಜಿಲ್ಲೆಯಲ್ಲಿಯೇಅತೀ ಕಡಿಮೆ 956 ಮತದಾರರನ್ನು ಹೊಂದಿರುವ ಅಂಬೋಳಿ ತಾಪಂ ಕ್ಷೇತ್ರವಾಗಿ ರಚನೆಯಾಗಿದೆ. ಇನ್ನು 17228 ಮತಗಳನ್ನು ಹೊಂದಿರುವ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ತಾಪಂ ಕ್ಷೇತ್ರ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಮತದಾರರಿರುವ ಕ್ಷೇತ್ರ.
ಅದರಂತೆ 16763 ಜನಸಂಖ್ಯೆಹೊಂದಿರುವ ಕುಸುಗಲ್ ಹಾಗೂ ಕುಂದಗೋಳತಾಪಂನಲ್ಲಿ 15525 ಮತದಾರರಿರುವ ಗುಡಗೇರಿಹಾಗೂ 15971 ಮತದಾರರಿರುವ ಇಂಗಳಗಿ ಅತೀಹೆಚ್ಚು ಮತದಾರರ ಸಂಖ್ಯೆ ಹೊಂದಿರುವ ತಾಪಂಕ್ಷೇತ್ರಗಳಾಗಿವೆ. 17 ಸಾವಿರ ಜನಸಂಖ್ಯೆ ಹೊಂದಿರುವಅದರಗುಂಚಿ ಒಂದೇ ತಾಪಂ ಕ್ಷೇತ್ರವು ಅಳ್ನಾವರ ಇಡೀತಾಪಂನ ಒಟ್ಟು ಜನಸಂಖ್ಯೆಗೆ ಸಮವಾಗಿದೆ. ಹೀಗಾಗಿಇಲ್ಲಿ ವೈಜ್ಞಾನಿಕವಾಗಿ ಮತ್ತು ಅಗತ್ಯ ಮಾನದಂಡಗಳಿಗೆಅನುಗುಣವಾಗಿ ಕ್ಷೇತ್ರ ಪುನರ್ ವಿಂಗಡಣೆ ಮತ್ತುಹೊಸ ಕ್ಷೇತ್ರಗಳ ಉದಯವಾಗಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ.
ಬಿಜೆಪಿ ರಾಷ್ಟ್ರೀಯ ಪಕ್ಷವಾಗುವುದರಜತೆಗೆ ಪ್ರತಿ ಗ್ರಾಮದ ನಂ.1ಪಕ್ಷ ಕೂಡ ಆಗಿದೆ. ಮೊನ್ನೆ ನಡೆದ 136ಗ್ರಾಪಂ ಚುನಾವಣೆಯಲ್ಲಿ ಆಯ್ಕೆಯಾಗಿ ಅಧ್ಯಕ್ಷ-ಉಪಾಧ್ಯಕ್ಷರಾದವರ ಪೈಕಿ ಶೇ.65 ಜನಬಿಜೆಪಿಯವರೇ ಆಗಿದ್ದಾರೆ. ಹೀಗಿರುವಾಗನಾವೇಕೆ ಅಂಜುತ್ತೇವೆ. ಜಿಪಂ, ತಾಪಂಗಳಲ್ಲಿಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಸ್ಥಾನಗೆಲ್ಲುತ್ತೇವೆ. -ಬಸವರಾಜ ಕುಂದಗೋಳಮಠ, ಬಿಜೆಪಿ ಗ್ರಾ.ಜಿಲ್ಲಾಧ್ಯಕ್ಷರು.
ಬಿಜೆಪಿ ಗೆಲ್ಲುವುದಕ್ಕೆ ಅನುಕೂಲವಾಗುವಂತೆಜಿಲ್ಲೆಯಲ್ಲಿನ ಜಿಪಂ ಮತ್ತು ತಾಪಂ ಕ್ಷೇತ್ರಗಳನ್ನು ಪುನರ್ ವಿಂಗಡಣೆ ಮತ್ತು ಹೊಸ ಕ್ಷೇತ್ರಗಳ ರಚಿಸಲಾಗಿದೆ. ಕಾಂಗ್ರೆಸ್‌ಮತಗಳು ವಿಭಜನೆಯಾಗುವಂತೆ ಬಿಜೆಪಿಶಾಸಕರು-ಮುಖಂಡರು ತೆರೆಯ ಹಿಂದೆಯೇ ಇಲ್ಲಿ ಕೆಲಸ ಮಾಡಿದ್ದಾರೆ. ಏನೇ ಮಾಡಿದರೂ ಜಿಲ್ಲೆಯಕಾಂಗ್ರೆಸ್ ಅತೀ ಹೆಚ್ಚು ಜಿಪಂ ಮತ್ತು ತಾಪಂಕ್ಷೇತ್ರಗಳನ್ನು ಗೆಲ್ಲುವುದು ನಿಶ್ಚಿತ. -ಅನೀಲಕುಮಾರ್ ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷರು
ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆಯೇಕ್ಷೇತ್ರಗಳನ್ನು ರಚಿಸಿಕೊಂಡಿದ್ದಾರೆ.ಚುನಾವಣಾ ಆಯೋಗ ಇದನ್ನು ಸರಿಯಾಗಿಮಾಡಬೇಕಿತ್ತು. ಆದರೆ ಅಧಿಕಾರದುರುಪಯೋಗ ಮಾಡಿಕೊಂಡ ಅಧಿಕಾರಿಗಳು ಬಿಜೆಪಿ ಹಿತಾಸಕ್ತಿಗೆ ತಕ್ಕಂತೆ ವರ್ತಿಸುತ್ತಿದ್ದಾರೆ.ಮತದಾರರ ಸಂಖ್ಯೆ ಗಮನಿಸಬೇಕೇ ಹೊರತು,ಜಾತಿ,ಪಕ್ಷಗಳ ಮತ ಕ್ರೂಢೀಕರಣದಆಧಾರದಲ್ಲಿ ಆಗಬಾರದು. -ಗುರುರಾಜ ಹುಣಸೀಮರದ, ಜೆಡಿಎಸ್ ಮುಖಂಡ.
-ಡಾ|ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.