ಜಗಜೀವನರಾಂ ಆದರ್ಶ ಯುವಕರಿಗೆ ಪ್ರೇರಣೆ
Team Udayavani, Apr 6, 2021, 4:17 PM IST
ಬೀಳಗಿ: ಹಸಿರುಕ್ರಾಂತಿಯ ಹರಿಕಾರ ಮಾಜಿ ಉಪಪ್ರಧಾನಿ ಡಾ| ಬಾಬುಜಗಜೀವನರಾಂ ಅವರ ಆದರ್ಶಎಲ್ಲ ಯುವಸಮುದಾಯಕ್ಕೆ ಪ್ರೇರಣೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರಗೇಶ ನಿರಾಣಿ ಹೇಳಿದರು.
ಪಟ್ಟಣದಲ್ಲಿ ತಾಲೂಕು ಆಡಳಿತಆಶ್ರಯದಲ್ಲಿ ಡಾ| ಬಾಬು ಜಗಜೀವನರಾಂ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ಮಕ್ಕಳು ವಿದ್ಯಾವಂತರಾಗಬೇಕು ಎಂಬ ಮಹಾದಾಸೆ ಹೊಂದಿದ್ದ ಜಗಜೀವನರಾಂ ಅಪರೂಪದ ವ್ಯಕ್ತಿತ್ವ ಅವರದಾಗಿತ್ತು.ಜಾತಿ ತಾರತಮ್ಯ ಹೋಗಲಾಡಿಸಲುಶ್ರಮಿಸಿದ್ದರು. ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬೀಳಗಿ ತಾಲೂಕು ಮುಂಚೂಣಿಯಲ್ಲಿದೆ ಎಂದರು.
ತಾಯಂದಿರು ತಮ್ಮ ಮಕ್ಕಳನ್ನು ಕೆಲಸಕ್ಕೆ ಕಳುಹಿಸದೇ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣ ಮುಖ್ಯ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ. ಪ್ರತಿಭೆಗೆ ತಕ್ಕಂತೆ ಬದುಕು ರೂಪಿಸಿಕೊಳ್ಳುವಸಾಮರ್ಥ್ಯ ನಮ್ಮ ಮಕ್ಕಳಿಗಿದೆ. ಆದರೆ,ಅವರ ಪ್ರತಿಭೆ ಗುರುತಿಸಿಕೊಳ್ಳಲುಶಿಕ್ಷಕರು ಮತ್ತು ಪಾಲಕರ ಪಾತ್ರ ಮುಖ್ಯ ಎಂದರು.
ಈಗಾಗಲೇ ವಿಶೇಷ ಅನುದಾನದಲ್ಲಿ ಪಟ್ಟಣ ಪಂಚಾಯಿತಿಗೆ 5 ಕೋಟಿ ಮಂಜೂರಾಗಿದೆ. 250 ಕೋಟಿ ವೆಚ್ಚದಲ್ಲಿ ಪ್ರತಿ ಒಂದು ಜಿಪಂಕ್ಷೇತ್ರದಲ್ಲಿ ವಿದ್ಯುತ್ ಘಟಕ ನಿರ್ಮಾಣಮಾಡಲಾಗುವುದು. ತಾಲೂಕಿನಲ್ಲಿಸಂಪೂರ್ಣ ಕುಡಿಯುವ ನೀರಿನಸಮಸ್ಯೆ ಹೋಗಲಾಡಿಸಲು 65 ಕೋಟಿಮಂಜೂರು ಮಾಡಲಾಗಿದೆ ಎಂದು ಹೇಳಿದರು.
ರೈತರಿಗೆ ವ್ಯವಸಾಯ ಮಾಡಲು ಅನುಕೂಲವಾಗಲೆಂದು ಕಲಾದಗಿಮತ್ತು ಹೇರಕಲ್ ಬ್ರಿàಜ್ ಕಂ ಬ್ಯಾರೇಜ್‌ನಿರ್ಮಾಣ ಮಾಡಲಾಗಿದೆ ಎಂದುಸಚಿವ ಮುರಗೇಶ ನಿರಾಣಿ ಹೇಳಿದರು.
ಇದೇ ವೇಳೆ ಉಪನ್ಯಾಸ ನೀಡಿದಸೋಮಲಿಂಗ ಮುತ್ತಲದಿನ್ನಿ, ಪಪಂ ಅಧ್ಯಕ್ಷ ಸಿದ್ದಲಿಂಗೇಶ ನಾಗರಾಳ,ಉಪಾಧ್ಯಕ್ಷ ಕಾಮೇಶ ದಂಧರಗಿ, ತಾಪಂ ಅಧ್ಯಕ್ಷ ರಾಮಣ್ಣ ಬಿರಾದಾರ,ಉಪಾಧ್ಯಕ್ಷ ಶರೀಫಾಬೇಗಂ ಬಾವಾಖಾನವರ, ಜಿಪಂ ಸದಸ್ಯ ಹನಮಂತ ಕಾಖಂಡಕಿ, ಕಸ್ತೂರಿ ಲಿಂಗಣ್ಣವರ, ಮಗಿಯಪ್ಪ ದೇವನಾಳ, ಪಪಂ ಮುಖ್ಯಾಧಿಕಾರಿ ಐ.ಕೆ.ಗುಡದಾರಿ, ಸಮಾಜ ಕಲ್ಯಾಣಸಹಾಯಕ ನಿರ್ದೇಶಕ ಎಚ್.ಎಂ. ಪಾಟೀಲ, ಆರೋಗ್ಯಾಧಿಕಾರಿ ಡಾ| ದಯಾನಂದ ಕರೆನ್ನವರ, ಸಿಪಿಐ ಸಂಜಯ ಬಳೆಗಾರ, ಸಚಿವರವಿಶೇಷಾಧಿಕಾರಿ ಬಿ.ಪಿ. ಅಜೂರ, ಕ್ಷೇತ್ರಶಿಕ್ಷಣಾಧಿಕಾರಿ ಎ.ಜಿ.ಮಿರ್ಜಿ ಇದ್ದರು. ತಹಶೀಲ್ದಾರ್ ಶಂಕರ ಗೌಡಿ ಸ್ವಾಗತಿಸಿದರು. ವಿ.ಆರ್. ಹಿರೇನಿಂಗಪ್ಪನವರ ನಿರೂಪಿಸಿದರು. ತಾಪಂ ಸಿಇಒ ಎಂ.ಕೆ. ತೊದಲಬಾಗಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kulageri Cross: ಹೂಳು ತುಂಬಿದ ಕಾಲುವೆ…ಪೋಲಾಗುತ್ತಿದೆ ಮಲಪ್ರಭಾ ಎಡದಂಡೆ ಕಾಲುವೆ ನೀರು…
New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.