ಪುನಾರಂಭಗೊಂಡ ಕೋವಿಡ್ ಸಂಕಟ

ಜನರ ನಿಷ್ಕಾಳಜಿಯಿಂದ ಬೆಲೆ ತೆರಬೇಕಿ¨

Team Udayavani, Apr 6, 2021, 6:19 PM IST

ಪುನಾರಂಭಗೊಂಡ ಕೋವಿಡ್ ಸಂಕಟ

ಹೊನ್ನಾವರ: ಕಾರವಾರದ ಕ್ರಿಮ್ಸ್‌ನಿಂದ ಆರಂಭಿಸಿ ಎಲ್ಲ ತಾಲೂಕಾಸ್ಪತ್ರೆಗಳಲ್ಲಿ ಕೋವಿಡ್‌ ವಾರ್ಡ್‌ಗಳ ಬಾಗಿಲನ್ನು ಪುನಃ ತೆರೆಯಲಾಗಿದೆ. ಜಿಲ್ಲೆಯಲ್ಲಿ ಒಟ್ಟೂ610 ಹಾಸಿಗೆಗಳನ್ನು ಕೋವಿಡ್‌ಗಾಗಿಮೀಸಲಿಡಲಾಗಿದೆ. 534 ಹಾಸಿಗೆಗಳಿಗೆ ಆಕ್ಸಿಜನ್‌ ಒದಗಿಸಲಾಗಿದ್ದು, 87 ಐಸಿಯು ಬೆಡ್‌ಗಳಿವೆ. ಆರೋಗ್ಯ ಇಲಾಖೆ ಪುನಃ ಕೋವಿಡ್‌ ಎದುರಿಸಲು ಸಜ್ಜಾಗಿದೆ.

ವರ್ಷದ ಕೊನೆಯಲ್ಲಿ ಹೋಯಿತು ಅಂದುಕೊಂಡ ಕೋವಿಡ್ ಪುನಃ ಮರಳಲು ಜನರ ನಿಷ್ಕಾಳಜಿ ಕಾರಣವಾಗಿದೆ. ಹೀಗೆ ಮುಂದುವರಿದರೆಏನು ಎಂಬ ಚಿಂತೆ ಎಲ್ಲರಲ್ಲಿ ಕಾಡತೊಡಗಿದೆ. ಬಹುಪಾಲುಜನಕ್ಕೆ ಇದಾವುದರ ಪರಿವೆಯೇ ಇಲ್ಲದವರಂತೆ ಮಾಸ್ಕ್ಹಾಕುವುದನ್ನು ಬಿಟ್ಟಿದ್ದಾರೆ. ಅಂತರ ಕಾಯ್ದುಕೊಳ್ಳುತ್ತಿಲ್ಲ. ಜಾತ್ರೆ, ಹಬ್ಬ, ಮದುವೆ, ನೆಂಟರ ಮನೆಯೆಂದೆಲ್ಲಾ ಓಡಾಡುತ್ತಿದ್ದಾರೆ. ಇಲ್ಲಿಯವರೇ ಓಡಾಡಿ ಕೊಂಡಿದ್ದರೆ ಕೋವಿಡ್‌ ಕಾಡುತ್ತಿರಲಿಲ್ಲ. ಮುಂಬೈ, ಮಹಾರಾಷ್ಟ್ರ, ದಕ್ಷಿಣ ಕನ್ನಡ ದಲ್ಲಿಉದ್ಯೋಗಕ್ಕಾಗಿ ಹೋದವರು ಶಾಲೆಗೂ ರಜೆಯೆಂದುಮರಳಿ ಬರುವಾಗ ಕೋವಿಡ್‌ ತರುತ್ತಿದ್ದಾರೆ. ಜಿಲ್ಲೆಯಲ್ಲಿ ರವಿವಾರದವರೆಗೆ ವರದಿಯಾದ 47 ಹೊಸ ಸೋಂಕಿನಪ್ರಕರಣದಲ್ಲಿ ಹೆಚ್ಚಿನವರು ಹೊರಗಿನಿಂದ ಬರುವಾಗತಂದವರು.

ಜಿಲ್ಲೆಯ ಸೋಂಕಿತರ ಸಂಖ್ಯೆ ಒಟ್ಟೂ 15,130ಕ್ಕೇರಿದೆ. 13ಜನ ಆಸ್ಪತ್ರೆಯಿಂದ ಗುಣಮುಖರಾಗಿದ್ದಾರೆ. ಇನ್ನೂ 231ಸಕ್ರೀಯ ಪ್ರಕರಣಗಳಿವೆ. 33 ಜನ ಈಗ ಆಸ್ಪತ್ರೆಯಲ್ಲಿದ್ದಾರೆ.198ಜನ ಹೋಂ ಐಸೋಲೇಶನ್‌ನಲ್ಲಿದ್ದಾರೆ. ಜಿಲ್ಲೆಯ 59 ಶಾಲಾ ಮಕ್ಕಳಿಗೂ ಕೋವಿಡ್ ಸೋಂಕು ತಗಲಿದೆ.

ಲಸಿಕೆ ಪಡೆದುಕೊಳ್ಳಿ ಎಂದು ಗೋಗರೆಯುತ್ತ ಮನೆಮನೆಗೆ ಆಶಾ ಕಾರ್ಯಕರ್ತೆಯರುಹೋದರೂ ಜನ ಬರುವುದಿಲ್ಲ. ಪ್ರಧಾನಿಮೋದಿ ಲಸಿಕೆ ಪಡೆಯಿರಿ, ಪಡೆದ ಮೇಲೂಅಂತರ ಕಾಯ್ದುಕೊಳ್ಳಿ, ಮಾಸ್ಕ್ ಕಡ್ಡಾಯಧರಿಸಿ ಎಂದು ಕೈಮುಗಿದು ಹಲವುಬಾರಿ ಕೇಳಿದರೂ ಬಿಜೆಪಿ ಕಾರ್ಯಕರ್ತರೇ ಎಲ್ಲನಿಯಮಾವಳಿ ಧಿಕ್ಕರಿಸಿ ಮಂತ್ರಿಗಳ, ಶಾಸಕರ ಹಿಂದೆತುರ್ತು ಕೆಲಸವಿದ್ದವರಂತೆ ಓಡಾಡುತ್ತಾರೆ. ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಮನೆಯವರ ಮಾತು ಕೇಳುವುದಿಲ್ಲ, ಶಾಲಾ ಶಿಕ್ಷಕರ ಮಾತನ್ನೂ ಕೇಳುವುದಿಲ್ಲ.ಮಾಸ್ಕ್ ಹಾಕಿದವರನ್ನು ಗೇಲಿ ಮಾಡುತ್ತಾರೆ. ಆದ್ದರಿಂದಲೇಈ ಬಾರಿ ವಿದ್ಯಾರ್ಥಿಗಳಿಗೆ ಹೆಚ್ಚು ಕೋವಿಡ್ ಕಾಡಿತು. 60ವರ್ಷ ದಾಟಿದವರಿಗೆ, ಇತರ ಆರೋಗ್ಯ ಸಮಸ್ಯೆ ಇದ್ದವರಿಗೆ ಆದ್ಯತೆಯ ಮೇಲೆ ಲಸಿಕೆ ನೀಡಲು ಆರಂಭಿಸಿದರೂ ಶೇ.50ರಷ್ಟು ಪ್ರಗತಿಯಾಗಿಲ್ಲ. 45 ವರ್ಷ ಮೇಲ್ಪಟ್ಟವರು ನಿಧಾನವಾಗಿ ಲಸಿಕೆ ಪಡೆಯಲು ಬರುತ್ತಿದ್ದಾರೆ.

ಲಸಿಕೆ ಕುರಿತು ಅನುಮಾನ ಪಡುವವರೂ, ವದಂತಿ ಹಬ್ಬಿಸುವವರು ಕಡಿಮೆಯೇನಿಲ್ಲ. ಸರ್ಕಾರ ಕೋಟ್ಯಾಂತರ ರೂ. ವೆಚ್ಚ ಮಾಡಿದೆ. ಪ್ರತಿ ಡೋಸ್‌ ಲಸಿಕೆಗೆ 150 ರೂ.ಗೂ ಹೆಚ್ಚು ತಗಲಿದರೂ ಉಚಿತವಾಗಿ ನೀಡಲಾಗುತ್ತಿದೆ. ಲಸಿಕೆಪಡೆದವರಿಗೆ ಅಕಸ್ಮಾತ್‌ ಕೋವಿಡ್‌ ಬಂದರೂ ಅಪಾಯ ಕಡಿಮೆ ಎಂದಿದ್ದಾರೆ ವೈದ್ಯರು.

ಕ್ರಿಮ್ಸ್‌ ಮತ್ತು ಎಲ್ಲ ತಾಲೂಕಾಸ್ಪತ್ರೆಗಳಲ್ಲೂ ಉತ್ತಮ ವ್ಯವಸ್ಥೆ ಇದ್ದರೂ ಕೋವಿಡ್‌ ಬಂದ ಕೂಡಲೇ ಬೇರೆ ಜಿಲ್ಲೆಗೆ, ಖಾಸಗಿ ಆಸ್ಪತ್ರೆಗೆ ಓಡಿ ಲಕ್ಷಾಂತರ ರೂ. ತೆತ್ತು ಬರುತ್ತಾರೆ.ಕೋವಿಡ್‌ ಮತ್ತೆ ಕಾಡುವ ಲಕ್ಷಣ ಕಾಣುತ್ತಿದ್ದಂತೆ ಪುನಃಎಲ್ಲ ವ್ಯವಹಾರಗಳೂ ಚೈತನ್ಯ ಕಳೆದುಕೊಂಡು ನಿಸ್ತೇಜವಾಗಿವೆ.ಮೇ ತಿಂಗಳಲ್ಲಿ ಅಸಂಖ್ಯ ಮದುವೆ, ಗೃಹಪ್ರವೇಶಮೊದಲಾದ ಶುಭಕಾರ್ಯಗಳು ನಿಗದಿಯಾಗಿವೆ. ಇದಕ್ಕೆಮುಂದಾದವರು ದಿನಕ್ಕೊಂದು ಸರ್ಕಾರದ ನಿಯಮಾವಳಿ ಓದಿ ಗಾಬರಿಯಾಗಿದ್ದಾರೆ.

ಔಷಧ ಸಹಿತ ಜೀವನಾವಶ್ಯಕ ವಸ್ತುಗಳ ಬೆಲೆ ನಿಯಂತ್ರಣ ತಪ್ಪಿ ಏರುತ್ತಿದೆ. ಇನ್ನೊಂದು ತಿಂಗಳು ಕಳೆದರೆ ಮಳೆಗಾಲ. ಎಲ್ಲ ವ್ಯವಹಾರ ಶೇ. 50ರಷ್ಟು ಸ್ಥಗಿತವಾಗುತ್ತದೆ. ಕೋವಿಡ್‌ ನಿಯಮವನ್ನು ಪಾಲಿಸಿ, ಲಸಿಕೆ ಪಡೆಯಿರಿ ಎಂದು ಕರ್ಣಪಟಲ ಹರಿಯುವಂತೆ ಕೂಗುವ ಮೊಬೈಲ್‌, ಕೇಳದಂತಿರುವ ಜಿಲ್ಲೆಯ ಬಹುಪಾಲು ಜನ ಜಿಗುಪ್ಸೆ ಹುಟ್ಟಿಸುತ್ತಾರೆ. ಒಂದು

ವರ್ಷಗಳಿಂದ ಕೋವಿಡ್‌ ನಿಯಂತ್ರಣಕ್ಕಾಗಿ ದುಡಿಯುತ್ತ ಆಸ್ಪತ್ರೆಯ ನಿರ್ಲಕ್ಷ್ಯ ಅಥವಾ ಚಿಕಿತ್ಸೆಯ ತೊಂದರೆಯಿಂದ ಒಂದೂ ಸಾವಾಗದಂತೆ ನೋಡಿಕೊಂಡ ಆರೋಗ್ಯ ಇಲಾಖೆ ಈಗ ಕೋವಿಡ್‌ ಹೋರಾಟ ದೊಂದಿಗೆ ಲಸಿಕೆ ನೀಡಿಕೆಯಲ್ಲಿ ಪ್ರಗತಿ ಸಾಧಿಸಲು ಪರದಾಡುತ್ತಿದೆ. ಜನ ನಿರ್ಲಕ್ಷ್ಯದಿಂದ ಕೋವಿಡ್‌ ತಂದು ಕೊಳ್ಳುತ್ತಾರೆ, ಹರಡುತ್ತಾರೆ. ಕೋವಿಡ್‌ ಬಂದ ಮೇಲೂ ನಿರ್ಲಕ್ಷ್ಯ ಮಾಡಿದವರು ಸಾವು ಕಂಡಿದ್ದಾರೆ. ಇಂತಹ ಸಾವು, ನೋವು ಬರದಿರಲು ಜನ ಕಾಳಜಿ ವಹಿಸಲಿ. ಮಾರಿ ಮನೆ ಬಾಗಿಲಿಗೆ ಬಂದಿದೆ.

 

-ಜೀಯು, ಹೊನ್ನಾವರ

ಟಾಪ್ ನ್ಯೂಸ್

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

‌Actress: 31 ವರ್ಷದ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

‌Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

1-mannn

Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ

ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ

1-wwewqe

Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ

5

Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು

Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ

Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ

1-ankol

Ankola; ಮನೆ ಮಂದಿ ಮಲಗಿರುವಾಗಲೇ ಕನ್ನ: ದೇವರ ಮೂರ್ತಿಗಳನ್ನೇ ಕದ್ದೊಯ್ದರು

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ

19-thirthahalli

Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.