ಇನ್ಮೇಲೆ ವಾಟ್ಸ್ಯಾಪ್ ಮೂಲಕ ಎಲ್ ಪಿ ಜಿ ಬುಕ್ ಮಾಡಿ .! ಹೇಗೆ.?ಇಲ್ಲಿದೆ ಸಂಪೂರ್ಣ ಮಾಹಿತಿ
Team Udayavani, Apr 6, 2021, 6:45 PM IST
ನವ ದೆಹಲಿ : ಕೆಲವು ತಿಂಗಳುಗಳ ಹಿಂದೆ ಖಾಸಗಿ ಹಾಗೂ ಗೌಪ್ಯತೆಯ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ‘ವಾಟ್ಸ್ಯಾಪ್ ನ ಮೂಲಕ’ ಈಗ ಮತ್ತೊಂದು ಪ್ರಯೋಜನಕಾರಿ ಬೆಳವಣಿಗೆ ಆಗಿದೆ.
ಗ್ರಾಹಕರ ಅನುಕೂಲಕ್ಕಾಗಿ, ಗ್ಯಾಸ್ ಏಜೆನ್ಸಿಗಳು ಇತ್ತೀಚೆಗೆ ಹಲವಾರು ಆನ್ ಲೈನ್ ಪ್ರಕ್ರಿಯೆಗಳನ್ನು ತಮ್ಮ ಗ್ರಾಹಕರಿಗೆ ಪರಿಚಯಿಸಿವೆ. ಒಳ್ಳೆಯ ಸುದ್ದಿ ಏನೆಂದರೆ ಈಗ ಗ್ರಾಹಕರು ತಮ್ಮ ಸಿಲಿಂಡರ್ ಗಳನ್ನು ಬುಕ್ ಮಾಡಬಹುದಾಗಿದೆ.
ಗ್ರಾಹಕರು ತಮ್ಮ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ನನ್ನು ಗ್ಯಾಸ್ ಏಜೆನ್ಸಿ ಅಥವಾ ವಿತರಕರೊಂದಿಗೆ ಮಾತನಾಡುವ ಮೂಲಕ, ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ, ಆನ್ ಲೈನ್ ಬುಕಿಂಗ್ ಮೂಲಕ ಮತ್ತು ಕಂಪನಿಯ ವಾಟ್ಸ್ಯಾಪ್ ಸಂಖ್ಯೆಯಲ್ಲಿ ಟೆಕ್ಸ್ಟ್ ಕಳುಹಿಸುವ ಮೂಲಕ ಬುಕ್ ಮಾಡಬಹುದಾಗಿದೆ.
ಓದಿ : ಸಾರಿಗೆ ನೌಕರರ ಮುಷ್ಕರ : ನಾಳೆ 5 ನಿಮಿಷಕ್ಕೊಂದು ಮೆಟ್ರೋ ರೈಲು!
ಈ ಕೆಳಗಿನ ಪ್ರಕ್ರಿಯೆಯನ್ನು ಅನುಸರಿಸಿ ಇಂಡೇನ್ ಗ್ರಾಹಕರು ವಾಟ್ಸ್ಯಾಪ್ ಮೂಲಕ ಎಲ್ ಪಿ ಜಿ ಸಿಲಿಂಡರ್ ಗಳನ್ನು ಬುಕ್ ಮಾಡಬಹುದಾಗಿದೆ :
ನೀವು ಇಂಡೇನ್ ಗ್ರಾಹಕರಾಗಿದ್ದರೆ, ನೀವು ಈ ಹೊಸ ಸಂಖ್ಯೆ 7718955555 ಗೆ ಕರೆ ಮಾಡುವ ಮೂಲಕ ಎಲ್ ಪಿ ಜಿ ಸಿಲಿಂಡರ್ ನನ್ನು ಕಾಯ್ದಿರಿಸಬಹುದು. ವಾಟ್ಸ್ಯಾಪ್ ನಲ್ಲಿ ಸಹ ಬುಕಿಂಗ್ ಮಾಡಬಹುದು. ವಾಟ್ಸ್ಯಾಪ್ ಮೆಸೆಂಜರ್ ನಲ್ಲಿ REFILL ಎಂದು ಟೈಪ್ ಮಾಡಿ ಮತ್ತು ಅದನ್ನು 7588888824 ಗೆ ಕಳುಹಿಸಿ. ಆದರೇ, ಗ್ರಾಹಕರು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಾತ್ರ ಸಂದೇಶವನ್ನು ಕಳುಹಿಸಬೇಕಾಗುತ್ತದೆ.
ಈ ಪ್ರಕ್ರಿಯೆಯನ್ನು ಅನುಸರಿಸಿ ಎಚ್ ಪಿ ಗ್ರಾಹಕರು ವಾಟ್ಸ್ಯಾಪ್ ಮೂಲಕ ಎಲ್ ಪಿ ಜಿ ಸಿಲಿಂಡರ್ ಗಳನ್ನು ಕಾಯ್ದಿರಿಸಬಹುದು :
ನೀವು ಎಚ್ ಪಿ ಗ್ಯಾಸ್ ಸಿಲಿಂಡರ್ ನನ್ನು ಬುಕ್ ಮಾಡಲು ಬಯಸಿದರೆ, ನೀವು ಈ 9222201122 ಸಂಖ್ಯೆಗೆ ವಾಟ್ಸ್ಯಾಪ್ ಮಾಡಬಹುದು. ನೀವು ಬುಕ್ ಎಂದು ಟೈಪ್ ಮಾಡಿ ಅದನ್ನು ಈ ಸಂಖ್ಯೆಗೆ ಕಳುಹಿಸಬೇಕು. ಬುಕಿಂಗ್ ಗೆ ಸಂಬಂಧಿಸಿದ ಕೆಲವು ಮಾಹಿತಿಯನ್ನು ನಿಮಗೆ ಕೇಳಲಾಗುತ್ತದೆ. ಆ ಮಾಹಿತಿಯನ್ನು ಒದಗಿಸಿ ಮತ್ತು ನಿಮ್ಮ ಸಿಲಿಂಡರ್ ನನ್ನು ಬುಕ್ ಮಾಡಲಾಗುತ್ತದೆ. ಈ ಸಂಖ್ಯೆಯಲ್ಲಿ ನೀವು ಇತರ ಹಲವು ಸೇವೆಗಳ ಬಗ್ಗೆ ಮಾಹಿತಿಯನ್ನು ಸಹ ಪಡೆಯಬಹುದು. ನಿಮ್ಮ ಎಲ್ ಪಿ ಜಿ ಕೋಟಾ, ಎಲ್ ಪಿ ಜಿ ಐಡಿ, ಎಲ್ ಪಿ ಜಿ ಸಬ್ಸಿಡಿ ಇತ್ಯಾದಿಗಳ ಬಗ್ಗೆಯೂ ನೀವು ತಿಳಿದುಕೊಳ್ಳಬಹುದು.
ಓದಿ : ಹಠ ಮಾಡದೆ ಮುಷ್ಕರ ವಾಪಸ್ ಪಡೆಯಿರಿ : ಸಾರಿಗೆ ನೌಕರರಿಗೆ ಸಿಎಂ ಮನವಿ
ಭಾರತ್ ಗ್ಯಾಸ್ ಗ್ರಾಹಕರು ಕೂಡ ವಾಟ್ಸ್ಯಾಪ್ ಮೂಲಕ ಎಲ್ ಪಿ ಜಿ ಸಿಲಿಂಡರ್ ಗಳನ್ನು ಬುಕ್ಕಿಂಗ್ ಮಾಡಬಹುದು:
ಭಾರತ್ ಗ್ಯಾಸ್ ಗ್ರಾಹಕರು ಈ 1800224344 ಸಂಖ್ಯೆಗೆ ಸಂದೇಶ ಕಳುಹಿಸಬೇಕಾಗುತ್ತದೆ. ಬುಕ್ ಅಥವಾ 1 ಎಂದು ಬರೆದು ವಾಟ್ಸ್ಯಾಪ್ ಮಾಡಬೇಕಾಗುತ್ತದೆ. ಇದರ ನಂತರ, ನಿಮ್ಮ ಸಿಲಿಂಡರ್ ನನ್ನು ಬುಕ್ ಮಾಡಲಾಗುತ್ತದೆ ಮತ್ತು ನಿಮ್ಮ ವಾಟ್ಸ್ಯಾಪ್ ನಂಬರ್ ಗೆ ದೃಢಿಕರಣ ಮೆಸೆಜ್ ಬರುತ್ತದೆ.
ಓದಿ : ಆನ್ ಲೈನ್ ಗ್ಯಾಂಬ್ಲಿಂಗ್ ನಿಷೇಧ ಕಾನೂನು ಜಾರಿಗೆ ಕಾಯ್ದೆ: ಬೊಮ್ಮಾಯಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.