ನಾ ಕೊಡೆ, ನೀ ಬಿಡೆ : ಇಂದಿನಿಂದ ಸಾರಿಗೆ ನೌಕರರ ಮುಷ್ಕರ; ಎಸ್ಮಾ ಜಾರಿ ಎಚ್ಚರಿಕೆ
Team Udayavani, Apr 7, 2021, 7:35 AM IST
ಬೆಂಗಳೂರು: ಆರನೇ ವೇತನ ಆಯೋಗ ಶಿಫಾ ರಸು ವಿಚಾರದಲ್ಲಿ ಸರಕಾರ ಮತ್ತು ಸಾರಿಗೆ ನೌಕರರ ಸಂಘ ಟನೆ “ನಾ ಕೊಡೆ, ನೀ ಬಿಡೆ…’ ನಿಲುವಿಗೆ ಜೋತುಬಿದ್ದಿದ್ದು, ಪ್ರಯಾಣಿಕರು ಹೈರಾಣಾಗುತ್ತಿದ್ದಾರೆ. ದೂರದ ಊರು ಗಳಿಗೆ ತೆರಳುವವರಿಂದ ಹಿಡಿದು ನಗರ ವ್ಯಾಪ್ತಿಯಲ್ಲಿ ಸಂಚರಿಸುವವರಿಗೂ ಮುಷ್ಕರದ ಮುನ್ನಾದಿನವೇ ಬಿಸಿ ತಟ್ಟಲು ಆರಂಭವಾಗಿದ್ದು, ಬುಧವಾರದಿಂದ ತೀವ್ರಗೊಳ್ಳುವ ಸಾಧ್ಯತೆ ಇದೆ.
ಸಾರಿಗೆ ನೌಕರರ ಕೂಟದ ಮುಖಂಡರೊಂದಿಗೆ ಮತ್ತೆ ಮಾತುಕತೆ ಪ್ರಶ್ನೆಯೇ ಇಲ್ಲ. 6ನೇ ವೇತನ ಆಯೋಗದ ಶಿಫಾರಸು ಜಾರಿ ಮಾಡುವುದಿಲ್ಲ. ಮುಷ್ಕರ ನಡೆಸು ವವರನ್ನು ಗೈರುಹಾಜರು ಎಂದು ಪರಿಗಣಿಸಲಾಗುತ್ತದೆ, ಮುಷ್ಕರ ನಡೆಸಿದರೆ ಎಸ್ಮಾ ಮತ್ತು ವಿಪತ್ತು ನಿರ್ವಹಣ ಕಾಯ್ದೆ ಅಡಿ ಕ್ರಮ ಕೈಗೊಳ್ಳಲು ಸರಕಾರ ನಿರ್ಧರಿಸಿದೆ.
ಮತ್ತೂಂದೆಡೆ ಸಡ್ಡು ಹೊಡೆದ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ, “ಸರಕಾರ ಭರ ವಸೆ ಈಡೇ ರಿ ಸುವ ಬಗ್ಗೆ ಲಿಖೀತವಾಗಿ ಹೇಳಿತ್ತು, ಈಗ ಮಾತಿಗೆ ತಪ್ಪಿದೆ. 6ನೇ ವೇತನ ಆಯೋಗ ಶಿಫಾರಸು ಜಾರಿ ಆಗುವವರೆಗೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದಿದೆ.
ನಿನ್ನೆಯಿಂದಲೇ ಗೈರು
ಕೆಎಸ್ಸಾರ್ಟಿಸಿ, ಬಿಎಂಟಿಸಿ ನೌಕರರಲ್ಲಿ ಕೆಲವರು ಮಂಗಳವಾರದಿಂದಲೇ ಗೈರುಹಾಜರಾಗಿದ್ದಾರೆ. ಇದರಿಂದ ಬಸ್ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು.
ಶೇ. 8 ವೇತನ ಹೆಚ್ಚಳಕ್ಕೆ ಸಿದ್ಧ
ಸಿಎಂ ಸಭೆಯ ಬಳಿಕ ಮಾತನಾಡಿದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಸಾರಿಗೆ ನೌಕರರಿಗೆ ಶೇ. 8ರಷ್ಟು ವೇತನ ಹೆಚ್ಚಿಸಲು ಸರಕಾರ ಸಿದ್ಧವಿದೆ. ಆದರೆ ಈಗ ಚುನಾವಣೆ ನೀತಿ ಸಂಹಿತೆ ಇದ್ದು, ಆಯೋಗ ಅನುಮತಿ ಕೊಟ್ಟರೆ ಮಾಡುತ್ತೇವೆ. ಇಲ್ಲವಾದರೆ, ಚುನಾವಣೆ ಬಳಿಕ ಜಾರಿ ಮಾಡುತ್ತೇವೆ. ಕೊರೊನಾ ಹಿನ್ನೆಲೆಯಲ್ಲಿ ಮುಷ್ಕರ ನಿಷೇಧಿಸಲಾಗಿದೆ. ಗುಂಪು ಸೇರುವಂತಿಲ್ಲ. ಕೋವಿಡ್ ನಿಯಮ ಉಲ್ಲಂಘಿಸುವಂತಿಲ್ಲ ಎಂದು ಎಚ್ಚರಿಸಿದರು.
ಪರ್ಯಾಯ ವ್ಯವಸ್ಥೆ
– ರಜೆ, ಹಬ್ಬದ ಕಾರಣ ವಿಶೇಷ ರೈಲು ವ್ಯವಸ್ಥೆ ಮಾಡಲು ರೈಲ್ವೇ ಇಲಾಖೆ ಜತೆ ಮಾತುಕತೆ
– ಖಾಸಗಿ ಬಸ್, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ಗಳಿಗೆ ತಾತ್ಕಾಲಿಕ ಪರವಾನಿಗೆ ನೀಡಿ ಸಂಚರಿಸಲು ಅನುಮತಿ
– ನಿಗಮಗಳ ಬಸ್ ನಿಲ್ದಾಣಗಳಿಂದಲೇ ಖಾಸಗಿ ವಾಹನಗಳ ಕಾರ್ಯಾಚರಣೆಗೆ ಅವಕಾಶ
– ಖಾಸಗಿ ಬಸ್‌ಗಳಿಗೆ ಪೊಲೀಸ್, ಆರ್‌ಟಿಒ ಭದ್ರತೆ
– “ನಮ್ಮ ಮೆಟ್ರೋ’ ಹೆಚ್ಚುವರಿ ಕಾರ್ಯಾಚರಣೆಗೆ ಸೂಚನೆ
– ನೇರಳೆ ಮಾರ್ಗದಲ್ಲಿ ಸಂಜೆ 7ರಿಂದ 9ರ ವರೆಗೆ 4.5 ನಿಮಿಷಕ್ಕೊಂದು, ಹಸಿರು ಮಾರ್ಗದಲ್ಲಿ 5 ನಿಮಿಷಗಳ ಅಂತರದಲ್ಲಿ ಮೆಟ್ರೋ ಸೇವೆ
ಆರ್‌ಟಿಒ, ಪೊಲೀಸ್ ನೆರವು
ಖಾಸಗಿ ಬಸ್, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ಗಳಿಗೆ ತಾತ್ಕಾ ಲಿಕ ಪರವಾನಿಗೆ ಕೊಟ್ಟು, ರಸ್ತೆಗಿಳಿಸಲು ಸರಕಾರ ನಿರ್ಧರಿಸಿದ್ದು, ಈಗಾಗಲೇ ಎಲ್ಲ ಆರ್‌ಟಿಒ ಅಧಿಕಾರಿಗಳೊಂದಿಗೆ ಆಯಾ ಜಿಲ್ಲಾಧಿಕಾರಿಗಳು ಮಾತುಕತೆ ನಡೆಸಿ, ಒತ್ತಡಕ್ಕೆ ಅನುಗುಣವಾಗಿ ಪರವಾನಿಗೆ ವಿತರಿಸಲು ಸೂಚಿಸಲಾಗಿದೆ. ನಿಗಮಗಳ ನಿಲ್ದಾಣಗಳಿಂದಲೇ ಈ ವಾಹನಗಳ ಕಾರ್ಯಾಚರಣೆಗೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಪೊಲೀಸ್ ನೆರವು ಪಡೆಯಲು ನಿರ್ಧರಿಸಲಾಗಿದೆ.
ಎಸ್ಮಾ ಜಾರಿ?
ಸಾರಿಗೆ ನೌಕರರು ಮುಷ್ಕರ ನಡೆಸಿದರೆ ಎಸ್ಮಾದಂಥ ಕಠಿನ ಕ್ರಮ ಕೈಗೊಳ್ಳಲು ಸರಕಾರ ನಿರ್ಧರಿಸಿದೆ. ಸಿಎಂ ನೇತೃತ್ವದಲ್ಲಿ ನಡೆದ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸಾರಿಗೆ ನೌಕರರ ಜತೆ ಸಂಧಾನ ಮಾಡಬೇಡಿ ಎಂದು ಸಿಎಂ ಸ್ಪಷ್ಟ ಸೂಚನೆ ನೀಡಿದ್ದಾರೆ.
ಕರಾವಳಿಯಲ್ಲಿ ಅಲ್ಪ ಪರಿಣಾಮ?
ಮುಷ್ಕರ ಕರಾವಳಿಯಲ್ಲಿ ಅಲ್ಪ ತೊಂದರೆ ಉಂಟು ಮಾಡುವ ಸಾಧ್ಯತೆಯಿದೆ. ಮಂಗಳೂರು, ಉಡುಪಿ ಸೇರಿದಂತೆ ನಗರ ಭಾಗಗಳಲ್ಲಿ ಖಾಸಗಿ ಬಸ್ ಸಂಚಾರ ಸಾಕಷ್ಟು ಪ್ರಮಾಣದಲ್ಲಿರುವ ಕಾರಣ ಸಮಸ್ಯೆ ಉಂಟಾಗುವ ಸಾಧ್ಯತೆ ಕಡಿಮೆ. ಗ್ರಾಮಾಂತರ ಭಾಗದ ಸಂಚಾರ ಹೆಚ್ಚಿರುವ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಭಾಗಗಳಲ್ಲಿ ತೊಂದರೆ ಉಂಟಾಗಬಹುದು. ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಮಾತ್ರ ಪರದಾಡುವ ಸಾಧ್ಯತೆ ಇದೆ.
ರಾಜ್ಯದ ಆರ್ಥಿಕ ಸ್ಥಿತಿ ಸಮಾಧಾನಕರ ವಾಗಿಲ್ಲ. ಆದರೂ ಸಾರಿಗೆ ನೌಕರರ ವೇತನದ 1,200 ಕೋ.ರೂ. ಹಣವನ್ನು ಸರಕಾರವೇ ನೀಡಿದೆ. 9 ಬೇಡಿಕೆಗಳ ಪೈಕಿ 8ನ್ನು ಈಡೇರಿಸಲಾಗಿದೆ. ಇದನ್ನು ಗಮನದಲ್ಲಿ ಇರಿಸಿಕೊಂಡು ಮುಷ್ಕರ ಕೈಬಿಡಬೇಕು.
– ಬಿ.ಎಸ್. ಯಡಿಯೂರಪ್ಪ , ಮುಖ್ಯಮಂತ್ರಿ
ಆರನೇ ವೇತನ ಆಯೋಗದ ಶಿಫಾರಸು ಜಾರಿ ಸಾಧ್ಯವಿಲ್ಲ, ಸಾರಿಗೆ ನೌಕರರೊಂದಿಗೆ ಮತ್ತೆ ಮಾತು ಕತೆಯ ಪ್ರಶ್ನೆಯೂ ಇಲ್ಲ, ಮುಷ್ಕರಕ್ಕೆ ಮುಂದಾ ದಲ್ಲಿ ವಿಪತ್ತು ನಿರ್ವಹಣ ಕಾಯ್ದೆ, ಎಸ್ಮಾ ಜಾರಿ ಸಹಿತ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ.
-ಪಿ. ರವಿಕುಮಾರ್, ಸರಕಾರದ ಮುಖ್ಯ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ
ಹೃದಯಾಘಾತದಿಂದ ಜಾಗೃತ ಮತದಾರರ ವೇದಿಕೆಯ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಫಲ್ಗುಣಿ ನಿಧನ
Karnataka BJP; ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೀಘ್ರ ಚುನಾವಣೆ: ಕೇಂದ್ರ ಸಚಿವ ಚೌಹಾಣ್
MUST WATCH
ಹೊಸ ಸೇರ್ಪಡೆ
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.