ಅಭಿವ್ಯಕ್ತಿ ಸ್ವಾತಂತ್ರ್ಯ ಹಳಿ ತಪ್ಪುತ್ತಿದೆಯೇ?


Team Udayavani, Apr 7, 2021, 6:30 AM IST

ಅಭಿವ್ಯಕ್ತಿ ಸ್ವಾತಂತ್ರ್ಯ ಹಳಿ ತಪ್ಪುತ್ತಿದೆಯೇ?

ಅಭಿವ್ಯಕ್ತಿ ಮನುಷ್ಯನ ಮೂಲಭೂತ ಗುಣ. ಈ ಸ್ವಾತಂತ್ರ್ಯವನ್ನು “ಭಾರತೀಯ ಸಂವಿಧಾನ’ ವಿಧಿ ಸಂಖ್ಯೆ 19 (1)(ಅ)ಯಲ್ಲಿ ಪ್ರತಿಯೋರ್ವ ಭಾರತೀಯ ಪ್ರಜೆಗೆ ನೀಡಿದೆ. “ವಾಕ್‌ ಮತ್ತು ಅಭಿವ್ಯಕ್ತಿ, ಸ್ವಾತಂತ್ರ್ಯ’ (Freedom of speech and expression) ಎಂದು ಕರೆಯಲ್ಪಡುವ ಈ ವಿಧಿಗೆ 19 (2)ರಲ್ಲಿ ಅದರ ಮಿತಿಗಳನ್ನೂ (Limitations) ತಿಳಿಸಿದೆ.

ಎಳೆ ಅರ್ಭಕನ ರೋದನದಿಂದ ಹಿಡಿದು ಮರಣಶಯ್ಯೆಯಲ್ಲಿರುವ ಜರಠನ ವರೆಗೂ ಅಭಿವ್ಯಕ್ತಿ ವಿವಿಧ ರೀತಿ ಯಲ್ಲಿ ಪ್ರಕಟವಾದೀತು. ಮನುಷ್ಯನ ಯೋಚನೆಗಳು ಸಂವಹನ ಮಾಧ್ಯಮ (Communi catione media)ಗಳ ಮೂಲಕ ಮೂರ್ತ ರೂಪಗೊಳ್ಳುವುದೇ ಅಭಿವ್ಯಕ್ತಿ. ಮಾತು ಮತ್ತದರ ವಿವಿಧ ಪ್ರಕಾರಗಳು, ಬರೆಹ, ಅಭಿನಯ, ಸನ್ನೆ – ಸಂಕೇತ, ಚಿತ್ರ- ಚಲನಚಿತ್ರ, ಸಂಗೀತ, ಸಾಮಾಜಿಕ ಜಾಲ ತಾಣಗಳು…. ಎಲ್ಲವೂ ಅಭಿವ್ಯಕ್ತಿ ವೈವಿಧ್ಯ ಗಳು. ಇವೆಲ್ಲಕ್ಕೂ ಸಂವಿಧಾನ “ಅಸ್ತು’ ಎಂದಿದ್ದರೂ ಪ್ರತಿಯೊಂದಕ್ಕೂ ಹೊಣೆ ಗಾರಿಕೆಯ ಭದ್ರಕೊಂಡಿಯನ್ನು ಬೆಸೆದು ನಿಯಂತ್ರಿಸಿದೆ. ಸ್ವಾತಂತ್ರ್ಯ ಮತ್ತು ಉತ್ತರ ದಾಯಿತ್ವ ಇಲ್ಲಿ ಒಂದೇ ನಾಣ್ಯದ ಎರಡು ಮುಖಗಳು.

ಹೊಣೆ ಮರೆತ ಅಭಿವ್ಯಕ್ತಿ ಅಪಾಯಕಾರಿ
ಸಮಾಜ ವೈವಿಧ್ಯಮಯ, ಒಬ್ಬನಂತೆ ಇನ್ನೊಬ್ಬ ನಿಲ್ಲ. ಅಭಿಪ್ರಾಯ ವೈವಿಧ್ಯ, ವೈರುಧ್ಯಗಳು, ಪ್ರತ್ಯೇಕ ಯೋಚನೆ- ಯೋಜನೆಗಳು, ಕಲ್ಪನೆ- ಪರಿಕಲ್ಪನೆಗಳು. ಈ ಮಧ್ಯದಲ್ಲಿ ಎಲ್ಲ ಗೊಂದಲ ಗಳನ್ನು ಸರಿ ದೂಗಿಸಿಕೊಂಡು ಬಾಳಬಲ್ಲವನೇ ಜಾಣ; ತಪ್ಪಿದರೆ ಅಪಾಯ ಶತಃಸಿದ್ಧ. ಅಭಿವ್ಯಕ್ತ ಗೊಳಿಸುವ ಮೊದಲು ಅದರ ಪರಿಣಾಮವನ್ನು ಊಹಿಸುವ ಪ್ರೌಢಿಮೆಯನ್ನು ಕತೃì ಬೆಳೆಸಿ ಕೊಳ್ಳಲೇ ಬೇಕಾಗುತ್ತದೆ. ಮತ್ತೆ ಹೊಣೆಯಿಂದ ನುಣುಚಿಕೊಳ್ಳುವುದು ಸುಲಭವಲ್ಲ. ತಪ್ಪಿದರೆ ನಿಂದನೆ, ಟೀಕೆ, ಮುಜುಗರಕ್ಕೆ ಒಳಗಾಗುವುದ ರೊಂದಿಗೆ ಸಾರ್ವಜನಿಕ ಸೊತ್ತುಗಳಿಗೆ ಹಾನಿ ಯುಂಟಾಗುವ ಗಂಭೀರ ಸನ್ನಿವೇಶಗಳೂ ಸೃಷ್ಟಿಯಾಗಬಹುದು. ಒಂದು ಹೇಳಿಕೆ, ಕಿರು ಬರೆಹ, “ಟ್ವೀಟ್‌’ ಸಾಕು “ಡಿಜೆ ಹಳ್ಳಿ, ಕೆಜೆ ಹಳ್ಳಿ’ ಸೃಷ್ಟಿ ಮಾಡಲು. ಒಂದು ಪೈಂಟಿಂಗ್‌, ಒಂದು ಚಲನಚಿತ್ರ, ಕಾದಂಬರಿ, ಕಾವ್ಯ-ವಿಮರ್ಶೆ ಚೌಕಟ್ಟು ಮೀರಿದರೆ ಅಶಾಂತಿಗೆ ಆಹ್ವಾನ ನೀಡೀತು. ಎಲ್ಲವೂ ಧರ್ಮ, ಜಾತಿ, ಸಮುದಾಯ, ವರ್ಗ, ಲಿಂಗ “ತಾರತಮ್ಯವಾಗಿದೆಯೋ’? ಎಂದು “ಸ್ಕ್ಯಾನ್‌’ (Scan) ಆಗುತ್ತಲೇ ಇರುತ್ತವೆ. ಕೆಲವೊಮ್ಮೆ ಇದಕ್ಕೆಂದೇ ಬಹಳಷ್ಟು ಸಮಯಸಾಧಕರು ಕಾಯು ತ್ತಲೂ ಇರುತ್ತಾರೆ.

ತಣ್ಣೀರನ್ನಾದರೂ ತಣಿಸಿ ಕುಡಿಯಬೇಕು
“ಸತ್ಯವನ್ನೇ ಹೇಳು; ಪ್ರಿಯವಾದುದನ್ನೇ ಹೇಳು; ಅಪ್ರಿಯ ಸತ್ಯವನ್ನು ಹೇಳದಿರು. ಪ್ರಿಯವೆಂದು ಸುಳ್ಳು ಹೇಳದಿರು; ಇದುವೇ ಸನಾತನ ಧರ್ಮ’.

ಎಲ್ಲೆಡೆಯೂ ಸುಭಾಷಿತಕಾರ ಅವಧಾರ ಣಾತ್ಮಕವಾದ ಕ್ರಿಯಾಪದಗಳನ್ನೇ ಬಳಸಿ ರುತ್ತಾನೆ. ಅಭಿವ್ಯಕ್ತಗೊಳಿಸುವ ಗುಂಗಿನಲ್ಲಿ ಇತರೆಲ್ಲೆಡೆ ಅವಾಜ್ಞೆಯಿಂದ ಅಥವಾ ತನ್ನದೇ ಸರಿಯೆಂಬ ಪೂರ್ವಗ್ರಹದಿಂದ ಹೇಳ ಹೊರಟರೂ ಸಮಾಜ “ನಿಕಷ’ (ಒರೆಗಲ್ಲು)ದಲ್ಲಿ “ಸರಿ’ಯೆನ್ನಿಸಿಕೊಂಡೇ ಬರಬೇಕು. ಇಲ್ಲವಾದರೆ ಅನರ್ಥ ಕಾದಿದೆ ಎಂದರ್ಥ. ಒಂದೊಮ್ಮೆ ಅದು ಕಠೊರ ಸತ್ಯವಾಗಿದ್ದರೆ ಸಾಕ್ರೆಟಿಸ್‌, ಮಹಾತ್ಮಾ, ಯೇಸುವಿನಂತೇ ಎದುರಿಸುವ ಎದೆಗಾರಿಕೆ ಬೇಕು.

ವ್ಯಕ್ತಿ ಮತ್ತಿತರ ಘಟಕಗಳಿಗೆ (ಕುಟುಂಬ, ಸಮಾಜ, ದೇಶ) ನೋವಾಗದಂತೇ ಸಂವ ಹನಗೊಳಿಸಲು ಸಮಾಧಾನ ಬೇಕು. ಸಾಕಷ್ಟು ಚಿಂತನೆ, ವಿಚಾರವನ್ನು ವಿವಿಧ ಕೋನಗಳಿಂದ ಅವಲೋಕಿಸುವ ಜಾಣ್ಮೆ ಬೇಕು. “ಮೌನ ಮೊಗ್ಗೆಯನೊಡೆದು ಮಾತರಳಿ’ (ಕವಿ ಜಿ.ಎನ್‌.ಎಸ್‌.) ಬರಬೇಕು. ಅರಳಿದಾಗ ಸೇರುವ ಸೌಂದರ್ಯ, ಪರಿಮಳ ಮಾತಿಗಿರಬೇಕು. ಸತ್ಯ ನುಡಿಯು ವಾಗ ಸೌಜನ್ಯ ಮುಖ್ಯವಾಗಬೇಕು; ತಣ್ಣೀರನ್ನೂ ತಣಿಸಿದಂತೇ!

ಸೃಷ್ಟಿಶೀಲರ ವೈಚಾರಿಕ ನೆಲೆಗಟ್ಟಿನ ಅಭಿವ್ಯಕ್ತಿ ಗಳೂ ಕೂಡಾ ಪ್ರಶ್ನಾತೀತವಾಗಿ ಉಳಿಯಲಿಲ್ಲ . ಕುವೆಂಪುರವರ “ಶೂದ್ರ ತಪಸ್ವೀ’ (ನಾಟಕ) ಅನಂತಮೂರ್ತಿಯವರ “ಘಟಶ್ರಾದ್ಧ’, ಭೈರಪ್ಪನ ವರ “ಪರ್ವ’ ಕೃತಿಗಳೂ ದೀಪಾ ಮೆಹ್ತಾರ “ಫೈರ್‌’, “ವಾಟರ್‌’ (ಸಿನೆಮಾ) ಇತ್ತೀಚೆಗಿನ “ಪೊಗರು’ ಸಹಿತ ಇನ್ನೂ ಹೆಸರಿಸದ ಹಲವಾರು ಅಭಿವ್ಯಕ್ತಿಗಳು ಕೆಲವು ವರ್ಗಗಳ ಅವಗಣನೆಗೆ ಗುರಿಯಾಗದುಳಿಯಲಿಲ್ಲ. ಈ ಹಿಂದೆ ಸಲ್ಮಾನ್‌ ರಶಿªಯವರ “ಸೈತಾನನ ಹಾಡುಗಳು’ ತಸ್ಲಿಮಾ ನಸ್ರಿàನ್‌ ಅವರ “ಲಜ್ಜಾ’ ಕೂಡಾ ಇದೇ ಧಾಟಿಯವು.

ಈಗೀಗ ನಮ್ಮ ನಾಯಕರೂ ಕೊಡುವ ಹೇಳಿಕೆಗಳು, ಎದುರಾಳಿಗೆ ಪ್ರಯೋಗಿಸುವ ಏಕವಚನ, ಪ್ರಜಾಪ್ರಭುತ್ವದ ಸನ್ನಿಧಿಯಲ್ಲಿ ಮಂಡಿಸುವ-ಖಂಡಿಸುವ ಪರಿ ಮೌಲ್ಯ ಗಳನ್ನೂ ಪ್ರಶ್ನಾರ್ಹವಾಗಿಸುತ್ತಿವೆ. ದೃಶ್ಯ ಮಾಧ್ಯಮಗಳು ವಿಷಯಗಳನ್ನು ಇನ್ನಷ್ಟು “ಹೈಪ್‌’ ಮಾಡಿ “ಕ್ಲೀಷೆ’ಯುಂಟು ಮಾಡುತ್ತಿವೆ. ಇವೆಲ್ಲವೂ ಸಾಮಾಜಿಕರಲ್ಲಿ ಪ್ರತಿಫ‌ಲನಗೊಂಡಾಗ ಅಭಿವ್ಯಕ್ತಿ ಸ್ವಾತಂತ್ರ್ಯದ ಹಳಿ ತಪ್ಪುತ್ತಿರುವಿಕೆ ಅನುಭವ ವಾಗದಿರದು.

“ಯೇನ ಕೇನ ಪ್ರಕಾರೇಣ ಯಸ್ಯಕನ್ಯಾಪಿ ಜೀವಿನಃ ಸಂತೋಷಂ ಜಿನಿಯೇತ್‌ ಪ್ರಾಜ್ಞಃ ತದೇವೇಶ್ವರ ಪೂಜನಂ’- ಯಾವುದೇ ಪ್ರಕಾರದಿಂದಾಗಿ ಯಾರಿಗಾದರೂ ಸರಿ ಸಂತೋಷವನ್ನುಂಟುಮಾಡುವುದು ಪ್ರಾಜ್ಞನ ಲಕ್ಷಣ. ಅದೇ ದೇವಪೂಜೆ.

– ಪದ್ಯಾಣ ಪರಮೇಶ್ವರ ಭಟ್‌, ಬೆರ್ಬಲಜೆ

ಟಾಪ್ ನ್ಯೂಸ್

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.