ಹೂಳು, ಗಿಡಗಂಟಿ ತುಂಬಿ ರಾಜಕಾಲುವೆಯಲ್ಲಿ ದುರ್ನಾತ
Team Udayavani, Apr 7, 2021, 12:43 PM IST
ಕುದೂರು: ಗ್ರಾಮದ 5ನೇ ವಾರ್ಡ್‌ನ ಮಹಾತ್ಮ ನಗರದಲ್ಲಿರುವ ರಾಜಕಾಲುವೆ ಒತ್ತುವರಿ ಆಗಿದ್ದು, ಹೂಳು ತುಂಬಿಕೊಂಡು, ಗಿಡಗಂಟಿ ಬೆಳೆದು ಕೊಳಚೆ ನೀರು ಹರಿಯದೇ ಸಾಂಕ್ರಾಮಿಕ ರೋಗ ಹರಡುವ ತಾಣವಾಗಿ ಮಾರ್ಪಟ್ಟಿದೆ.
ಒಂದೆಡೆ ಬಿಸಿಲಿನ ತಾಪ, ಮತ್ತೂಂದೆಡೆ ದುರ್ವಾಸನೆ, ಗಾಳಿ ಬೀಸಿದ್ರೆ ಸಾಕು ಚರಂಡಿ ಅಕ್ಕಪಕ್ಕದಲ್ಲಿ ನಿಲ್ಲಲು ಆಗುವುದಿಲ್ಲ. ಹೊಟ್ಟೆಯ ನೋವು ಬರುವಮಟ್ಟಿಗೆ ದುರ್ವಾಸನೆ ಬರುತ್ತದೆ. ಸಂಜೆಯಾದ್ರೆ ಸಾಕು ಸೊಳ್ಳೆ ಗಳ ಕಾಟ ವಿಪರೀತ. ಕಾಲುವೆ ಅಕ್ಕಪಕ್ಕದ ನಿವಾಸಿ ಗಳು, ಅಂಗಡಿಯವರು, ಗ್ರಾಹಕರು ದುರ್ವಾ ಸನೆ, ಸೊಳ್ಳೆ ಕಚ್ಚಿಸಿಕೊಂಡು ರೋಗ ಭೀತಿ ಎದುರಿಸುತ್ತಿದ್ದಾರೆ.
ಕಾಲುವೆ ಪಕ್ಕದಲ್ಲಿ ಶಾಲೆ: ಈ ರಾಜ ಕಾಲುವೆಪಕ್ಕದಲ್ಲೇ ಸರ್ಕಾರಿ ಶಾಲೆ ಇದೆ. ಮಕ್ಕಳು, ದುರ್ವಾಸನೆ ಸೇವಿಸುತ್ತ ಪಾಠ ಕೇಳಬೇಕಿದೆ.ಮೊದಲೇ ಕೊರೊನಾ ದಿಂದ ಆತಂಕಗೊಂಡಿರುವಜನರು, ರಾಜಕಾಲುವೆ ಸ್ವತ್ಛಗೊಳಿಸಲು ಗ್ರಾಪಂ ಅಧಿಕಾರಿಗಳಿಗೆ ಮತ್ತು ಸದಸ್ಯರಿಗೆ ಹಲವು ಬಾರಿ ಮನವಿ ಮಾಡಿದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಚರಂಡಿಗೆ ಮಾಂಸ, ಮದ್ಯದ ತ್ಯಾಜ್ಯ: ಚುನಾವಣೆ ವೇಳೆ ಭರವಸೆ ನೀಡಿದ್ದ ಜನಪ್ರತಿನಿ ಗಳು ಗೆದ್ದ ನಂತರನಿರ್ಲಕ್ಷ್ಯ ಮಾಡಿದ್ದಾರೆ. ಸ್ಥಳೀಯರು ಹಿಡಿಶಾಪ ಹಾಕಿಕೊಂಡು ಜೀವನ ನಡೆಸಬೇಕಾದ ಅನಿವಾರ್ಯತೆ ಇದೆ. ರಾಜಕಾಲುವೆ ಪಕ್ಕದಲ್ಲಿ ವೈನ್ ಶಾಪ್, ಮಾಂಸ ದ ಅಂಗಡಿಗಳಿದ್ದು, ತ್ಯಾಜ್ಯವನ್ನು ಈ ಕಾಲುವೆಗೆ ಎಸೆಯಲಾಗುತ್ತಿದೆ. ಇದರಿಂದ ಚರಂಡಿ ನೀರು ಹರಿಯದೇ ಮಡುಗಟ್ಟಿ ನಿಂತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಳಪೆ ಕಾಮಗಾರಿ: ಗ್ರಾಮಗಳಲ್ಲಿ ನಿರ್ಮಾಣವಾಗುತ್ತಿರುವ ಚರಂಡಿ ಕಾಮಗಾರಿ ಅವೈಜಾನಿಕ, ಕಳಪೆ ಆಗಿರುವುದರಿಂದ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಕಮಿಷನ್ ಆಸೆಗೆ ಎಂಜಿನಿಯರ್‌ಗಳು,ಗ್ರಾಪಂ ಸದಸ್ಯರು ಮಾಡಿರುವ ಕಾಂಕ್ರೀಟ್ ರಸ್ತೆ,ಚರಂಡಿಗಳ ಗುಣಮಟ್ಟ ಪರೀಕ್ಷಿಸದೇ ಬಿಲ್‌ಪಾಸ್‌ಮಾಡುವುದರಿಂದ ನಾಗರಿಕರು ನಿತ್ಯ ಸಮಸ್ಯೆಎದುರಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳುಇನ್ನು ಮುಂದಾದರೂ ಗುಣಮಟ್ಟದ ಕಾಮಗಾರಿ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ರಾಜಕಾಲುವೆ ಸ್ವತ್ಛಗೊಳಿಸಲು ನರೇಗಾ ದಲ್ಲಿ ಕಾರ್ಯಾದೇಶ ಮಾಡಲಾಗಿದೆ. 15 ದಿನಗಳ ಒಳಗೆ ಗುರುಕುಲ ಶಾಲೆಯವರೆಗೂಸ್ವಚ್ಛ ಮಾಡಲಾಗುತ್ತದೆ. ಮೊದಲು ಕೊಳಚೆನೀರು ಸರಾಗವಾಗಿ ಹರಿಯುವಂತೆ ಮಾಡಿ ನಂತರ ಒತ್ತುವರಿ ತೆರವುಗೊಳಿಸಲಾಗುವುದು. ● ಲೋಕೇಶ್, ಪಿಡಿಒ, ಕುದೂರು.
ಸುಮಾರು ದಿನಗಳಿಂದ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ಕೊಳಚೆನೀರು ಸರಾಗವಾಗಿ ಹರಿಯುವಂತೆ ಮಾಡಿಎಂದು ಗ್ರಾಪಂಗೆ ಹಲವು ಬಾರಿ ಮನವಿಮಾಡಲಾಗಿದೆ. ಇದಕ್ಕೆ ಪಂಚಾಯ್ತಿ ಆಗಲಿ, ಸದಸ್ಯರಾಗಲಿ ಯಾರೂ ಸ್ಪಂದಿಸುತ್ತಿಲ್ಲ.ಸಂಬಂಧಪಟ್ಟವರು ಕೂಡಲೇ ನಮ್ಮ ಸಮಸ್ಯೆ ಬಗೆಹರಿಸಬೇಕು. ● ನಟರಾಜು, ಮಹಾತ್ಮ ನಗರ ನಿವಾಸಿ
– ಮಂಜುನಾಥ್ ಕುದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.