ಯುಗಾದಿ ಮರಳಿ ಬರುತಿದೆ…


Team Udayavani, Apr 7, 2021, 5:21 PM IST

ಯುಗಾದಿ ಮರಳಿ ಬರುತಿದೆ…

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ…

ವರಕವಿ ಬೇಂದ್ರೆಯವರ ಈ ಪದ್ಯವನ್ನು ಗುನುಗುತ್ತಾ ಯುಗಾದಿ ಹಬ್ಬದ ಜೊತೆಗೆ ಬರುವಸಂಭ್ರಮವನ್ನು ನೆನಪಿಸಿಕೊಳ್ಳುತ್ತಾ ಗೆಳತಿಶಮ್ಮಿಯ ಮನೆಗೆ ಹೋದಾಗ, ಅವಳೂಮಗಳನ್ನು ಕೂರಿಸಿಕೊಂಡು- ಯುಗಯುಗಾದಿಕಳೆದರೂ…ಗೀತೆಯನ್ನೇ ಹಾಡುತ್ತಿದ್ದುದನ್ನು ಕಂಡು ಅಚ್ಚರಿಯಾಯ್ತು.

ಶಮ್ಮಿ ಮಗಳಿಗೆ ಹೇಳುತ್ತಾ ಇದ್ದಳು: ಯುಗಾದಿ ಕೇವಲ ಮನೆ ಹಬ್ಬ ಅಲ್ಲ. ಅದು ನಾಡ ಹಬ್ಬ. ಚಿಕ್ಕವರಿದ್ದಾಗ ನಾವು ಈ ಹಬ್ಬಕ್ಕಾಗಿ ಎಷ್ಟೋ ದಿವಸಗಳಿಂದ ಕಾಯುತ್ತಿದ್ದೆವು.ಹಬ್ಬದ ದಿನ ಮನೆಯನ್ನೆಲ್ಲಾ ಗುಡಿಸಿ, ಸಾರಿಸುತ್ತಿದ್ದೆವು. ಮನೆ ಮುಂದೆ ಮಾವಿನ ಸೊಪ್ಪಿನ ತೋರಣ ಕಟ್ಟಿ, ಅಂಗಳದಲ್ಲಿರಂಗೋಲಿ ಹಾಕಿ, ಎಣ್ಣೆ ಸ್ನಾನ ಮಾಡಿ ಹೊಸಬಟ್ಟೆ ಧರಿಸುತ್ತಿದ್ದೆವು. ನಂತರ ಒಬ್ಬಟ್ಟಿನ ಊಟ! ಅದಕ್ಕೂ ಮೊದಲು ಬೇವು- ಬೆಲ್ಲ ತಿನ್ನುವ ಸಡಗರ…

ಕರ್ನಾಟಕದಲ್ಲಿ ಯುಗಾದಿ ಎಂದೂ, ಮಹಾರಾಷ್ಟ್ರದಲ್ಲಿ ಗುಡಿಪಾಡವೊ ಎಂದೂ ಈ ಹಬ್ಬಕ್ಕೆ ಹೆಸರಿದೆ. ಈ ಹಬ್ಬದಂದು ಬೇವು-ಬೆಲ್ಲ ತಿನ್ನುತ್ತಿದ್ದೆವು ಅಂದೇ ಅಲ್ಲವಾ? ಅಲ್ಲಿ ಒಂದು ಸ್ವಾರಸ್ಯವಿದೆ. ಬೇವು ಯಾವಾಗಲೂ ಕಹಿ. ಬೆಲ್ಲದಲ್ಲಿ ಸಿಹಿ ಇರುವುದು. ಬದುಕಿನಲ್ಲಿ ಕೂಡ ಸಿಹಿ- ಕಹಿ ಇದ್ದೇ ಇರುತ್ತದೆ. ಜೀವನದಲ್ಲಿ ನಾವೆಲ್ಲರೂ ಸಿಹಿ- ಕಹಿಯ ಸಂದರ್ಭಗಳನ್ನು ಎದುರಿಸಿ ಬಾಳಬೇಕೆಂಬ ನೀತಿ ಇಲ್ಲಿದೆ…

ಶಮ್ಮಿಯ ಮಾತು ಮುಗಿಯುವ ಮೊದಲೇ ಅವಳ ಮಗಳು ಹೇಳಿದಳು: ಅಮ್ಮಾ, ನೀನು ಇದನ್ನೆಲ್ಲಾ ನನಗೆ ಯಾಕೆ ಹೇಳುತ್ತಿಯಾ? ಗೆಳತಿಯರೆಲ್ಲರೂ ಯುಗಾದಿಯ ದಿನ ಹೊಸ ಸಿನಿಮಾಕ್ಕೆ ಹೋಗೋಣ ಎಂದಿದ್ದಾರೆ. ಅವತ್ತು ನಾವೆಲ್ಲಾ ನನ್ನ ಫ್ರೆಂಡ್‌ ಮನೆಯಲ್ಲಿ ಊಟ ಮಾಡೋದುಅಂತ ತೀರ್ಮಾನ ಮಾಡಿದ್ದೇವೆ’- ಅಂದಳು. ಮಗಳ ಮಾತು ಕೇಳಿ ಶಮ್ಮಿ ಗಾಬರಿಯಾದಳು. ಎರಡೇನಿಮಿಷದಲ್ಲಿ ಚೇತರಿಸಿಕೊಂಡು, ಹಬ್ಬದ ದಿನ ಮನೆಯಲ್ಲಿ ಪೂಜೆ ಮಾಡಿ ಊಟ ಮಾಡಬೇಕು. ಅವತ್ತು ನೀನುಹೊರಗೆ ಹೋಗುವಂತಿಲ್ಲ ಎಂದು ಖಡಕ್ಕಾಗಿಯೇ ಹೇಳಿದಳು.

ಈ ಸಂದರ್ಭದಲ್ಲಿ ಮೂಕ ಪ್ರೇಕ್ಷಕಿಯಾಗಿ ಕೂರುವುದು ಸರಿಯಲ್ಲವೆನಿಸಿ ನಾನೂ ಹೇಳಿದೆ-“ನೋಡಮ್ಮ, ಹಬ್ಬದ ದಿನ ಮನೆಯಲ್ಲಿ ಎಲ್ಲರಜೊತೆಗೆ ಇರಬೇಕು. ಯುಗಾದಿಯೆಂದರೆಕೇವಲ ಒಬ್ಬಟ್ಟಿನ ಊಟದಹಬ್ಬ ಮಾತ್ರವಲ್ಲ. ಅದು ವಸಂತಾಗಮನವನ್ನು ಸಾರಿ ಹೇಳುವ ಹಬ್ಬ. ಆ ದಿನದ ಪ್ರತಿ ಕ್ಷಣವೂ ಸ್ಮರಣೀಯ ವಾಗಿರುತ್ತದೆ. ಅದನ್ನು ಕುಟುಂಬದ ಜನರೊಂದಿಗೆ ಅನುಭವಿಸಿ ಎಂಜಾಯ್‌ ಮಾಡಬೇಕು.ನಾವು ಚಿಕ್ಕವರಿದ್ದಾಗ, ದೊಡ್ಡ ಹಂಡೆಯಲ್ಲಿ ಎಲ್ಲರಿಗೂನೀರು ಕಾಯಿಸುವ ಕೆಲಸವನ್ನು, ಹೂವು ಕಟ್ಟುವುದನ್ನು, ಮನೆಸಾರಿಸುವ ಕೆಲಸವನ್ನು ಹಂಚಿಕೊಂಡು ಮಾಡುತ್ತಿದ್ದೆವು.ಅಮ್ಮನಿಂದ ಎಣ್ಣೆ ಹಚ್ಚಿಸಿಕೊಳ್ಳಲು ಕ್ಯೂನಿಲ್ಲುತ್ತಿದ್ದೆವು. ಅಮ್ಮ ಒಬ್ಬಟ್ಟು ಮಾಡುವುದನ್ನು ಬೆರಗಿನಿಂದನೋಡುತ್ತಿದ್ದೆವು. ಪೂಜೆಮುಗಿದ ನಂತರ ಊಟಕ್ಕೂಮೊದಲು ಎಲ್ಲರೂ ಕಡ್ಡಾಯವಾಗಿಬೇವು- ಬೆಲ್ಲದ ಮಿಶ್ರಣವನ್ನು ತಿನ್ನಲೇಬೇಕಿತ್ತು. ನಾವು ತಪ್ಪಿಸಿಕೊಳ್ಳಲು ನೋಡಿದರೂ ಹಿರಿಯರು ಬಿಡುತ್ತಿರಲಿಲ್ಲ. ಮುಖ ಕಿವಿಚಿಕೊಂಡೇ ಅದನ್ನು ತಿಂದುಮುಗಿಸುತ್ತಿದ್ದೆವು.

ಆದರೆ, ಈಗ ನಿಮ್ಮ ಪೀಳಿಗೆಯ ಮಕ್ಕಳಿಗೆಹಬ್ಬದ ಹಿನ್ನೆಲೆಯೂ ಗೊತ್ತಿಲ್ಲ, ಅದನ್ನು ತಿಳಿಯುವ ಆಸಕ್ತಿಯೂ ಇಲ್ಲ. ಮೊಬೈಲ್‌ ಹಿಡಿದುಕೊಂಡು, ಗೇಮ್ಸ್ ಆಡಿಕೊಂಡು, ವಾಟ್ಸ್‌ಆ್ಯಪ್‌ ನಲ್ಲಿ ಚಾಟ್‌ ಮಾಡಿಕೊಂಡು,ಸಿನಿಮಾ ನೋಡಿಕೊಂಡು ಇರುವುದೇ ಬದುಕು ಅಂತ ತಿಳಿದಿದ್ದೀರಿ. ಹೀಗೆ ಆಗಬಾರದು. ಹಬ್ಬಗಳಿಗೆ ಇರುವ ಹಿನ್ನೆಲೆ, ಅದರೊಂದಿಗೆ ಸೇರಿಕೊಂಡಿರುವ ಸತ್‌ ಸಂಪ್ರದಾಯದ

ಆಚರಣೆಗಳನ್ನು ಅರಿಯಬೇಕು. ಹಬ್ಬವನ್ನು ಮನೆಯವರ ಜೊತೆ ಆಚರಿಸಿದಾಗಲೇ ಅದರ ಮಹತ್ವ ಹೆಚ್ಚುತ್ತದೆ. ನೀನೀಗ ಹೋಗಿ ಫ್ರೆಶ್‌ ಆಗಿ ಬಾ. ಅಮ್ಮನ ಜೊತೆ ಹೋಗಿ ಹಬ್ಬಕ್ಕೆ ಹೊಸ ಬಟ್ಟೆ ತರೋಣ…” ಎಂದೆ.

ಕೆಲವೇ ನಿಮಿಷಗಳ ಹಿಂದೆ, ಯುಗಾದಿ ಹಬ್ಬದ ದಿನ ನಾವು ಫ್ರೆಂಡ್ಸ್ ಎಲ್ಲಾ ಸಿನಿಮಾಕ್ಕೆ ಹೋಗುವುದೇ ಸೈ ಅಂದಿದ್ದಶಮ್ಮಿಯ ಮಗಳು ಈಗ ಧ್ವನಿ ಬದಲಿಸಿ- “ಅಮ್ಮಾ…ಶಾಪಿಂಗ್‌ ಹೋಗೋಣ, ನಾನು ಬೇಗ ರೆಡಿ ಆಗ್ತೀನೆ’ಅನ್ನುತ್ತಾ ರೂಮ್‌ ಸೇರಿಕೊಂಡಳು. ಶಮ್ಮಿಯ ಕಣ್ಣಲ್ಲಿ ಆನಂದಬಾಷ್ಪವಿತು

 

ಹೀರಾ ರಮಾನಂದ್‌

ಟಾಪ್ ನ್ಯೂಸ್

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾಚಾರ!

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾ*ಚಾರ!

22-bantwala-5

Bantwala ತಾಲೂಕು ಮಟ್ಟದ ಚಿಣ್ಣರ ಬಣ್ಣ ಮಕ್ಕಳ ಚಿತ್ರಕಲಾ ಸ್ಪರ್ಧೆ

7

BBK11: ತಾಯಿಯನ್ನು ನೆನೆದು ಬಿಗ್‌ ಬಾಸ್‌ ವೇದಿಕೆಯಲ್ಲೇ ಕಣ್ಣೀರಿಟ್ಟ ಕಿಚ್ಚ ಸುದೀಪ್

21-ptr

Puttur: ಮುಂಜಾನೆ 3 ಗಂಟೆಗೆ ನಡೆಯಿತು ಅಗಲಿದವರಿಗೆ ಅವಲಕ್ಕಿ ಸಮರ್ಪಣೆ!

20-kadaba

ಮರ ಬಿದ್ದು ಸವಾರ ಸಾವು; ಅಪಾಯಕಾರಿ ಮರ ತೆರವಿಗೆ ಅಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ

Jammu Kashmir: Two terrorists hit in an encounter

Jammu Kashmir: ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ

Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

23-balindra

Deepawali: ಸುಳ್ಯದಲ್ಲಿ ಗಮನ ಸೆಳೆದ ಬಲೀಂದ್ರ ಅಲಂಕಾರ ಸರ್ಧೆ

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾಚಾರ!

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾ*ಚಾರ!

22-bantwala-5

Bantwala ತಾಲೂಕು ಮಟ್ಟದ ಚಿಣ್ಣರ ಬಣ್ಣ ಮಕ್ಕಳ ಚಿತ್ರಕಲಾ ಸ್ಪರ್ಧೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.