ಕೃತಿ ನಾಟಕ ರೂಪಕ್ಕೆ ತರುವುದು ಸವಾಲು

Team Udayavani, Apr 7, 2021, 8:06 PM IST

ghghghghghvhg

ಕೊಟ್ಟಿಗೆಹಾರ : ಮೂಲಕೃತಿಗೆ ಚ್ಯುತಿ ಬಾರದಂತೆ ಕೃತಿಯೊಂದನ್ನು ನಾಟಕ ರೂಪಕ್ಕೆ ತಂದು ಅಭಿನಯಿಸುವುದು ಸವಾಲಿನ ಕೆಲಸವಾಗಿದೆ ಎಂದು ಲೇಖಕಿ ರಾಜೇಶ್ವರಿ ತೇಜಸ್ವಿ ಹೇಳಿದರು.

ಸೋಮವಾರ ರಾತ್ರಿ ಕೊಟ್ಟಿಗೆಹಾರದ ತೇಜಸ್ವಿ ಪ್ರತಿಷ್ಠಾನದಲ್ಲಿ ನಡೆದ ನುಡಿನಮನ ಹಾಗೂ ಎಂಕ್ಟನ ಪುಂಗಿ ನಾಟಕ ಪ್ರದರ್ಶನದಲ್ಲಿ ಅವರು ಮಾತನಾಡಿದರು. ತೇಜಸ್ವಿಯವರ ಕಥೆಯನ್ನು ಕಲಾವಿದರು ನಾಟಕದಲ್ಲಿ ನಟಿಸಿ ಎಲ್ಲಿಯೂ ಕಥೆಗೆ ಚ್ಯುತಿ ಬಾರದಂತೆ ನಟಿಸಿರುವುದು ಶ್ಲಾಘನೀಯ. ನಿರ್ದೇಶಕರು ಎಲ್ಲಿಯೂ ಕಥೆಯನ್ನು ತಿರುವುಗೊಳಿಸದೆ ನಾಟಕವನ್ನು ದೃಶ್ಯರೂಪಕದಲ್ಲಿ ಕಟ್ಟಿಕೊಟ್ಟಿರುವುದು ಅರ್ಥಪೂರ್ಣ ಎಂದರು.

ಸಾಹಿತಿ ಡಾ| ಪ್ರದೀಪ್‌ ಕೆಂಜಿಗೆ ಮಾತನಾಡಿ, ಎಂಕ್ಟನ ಪುಂಗಿ ಕತೆಯ ಮೂಲಕ ತೇಜಸ್ವಿಯವರು ನಿರ್ಲಕ್ಷ್ಯಕೊಳ್ಳಗಾದ ಭಾರತದ ಸಮುದಾಯದ, ಮುಖ್ಯವಾಹಿನಿಯಲ್ಲಿರದ ಜನಾಂಗದ ಅಭಿವ್ಯಕ್ತಿಯಾಗಿ ಈ ಕತೆಯನ್ನು ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಹಾವು ಹಿಡಿಯುವ ಕಲೆಯ ಹಿಂದಿನ ಜ್ಞಾನವನ್ನು ಕಲಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ| ಸಿ.ರಮೇಶ್‌ ಮಾತನಾಡಿ, ತೇಜಸ್ವಿಯವರ ಆಶಯದಂತೆ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು ತೇಜಸ್ವಿ ಓದು, ಫೋಟೋಗ್ರಫಿ ಶಿಬಿರ ಮುಂತಾದ ಕಾರ್ಯಕ್ರಮಗಳ ಮೂಲಕ ಪ್ರತಿಷ್ಠಾನದಲ್ಲಿ ನಿರಂತರ ಚಟುವಟಿಕೆಗಳ ತಾಣವಾಗಿದೆ ಎಂದರು.

ಎಂಕ್ಟನ ಪುಂಗಿ ನಾಟಕ ನಿರ್ದೇಶಕ ಎಸ್‌. ಪ್ರವೀಣ್‌ ಮಾತನಾಡಿ, ಮೂಲಕಥೆಗೆ ಚ್ಯುತಿ ಬಾರದಂತೆ ಸಿಕ್ಕಿದ ನಾಟಕವನ್ನು ರೂಪಿಸಲಾಗಿದ್ದು ದೃಶ್ಯ ಶಬ್ದ ಹಾಗೂ ಅಭಿನಯದ ವಿವಿಧ ಸಾಧ್ಯತೆಗಳನ್ನು ಬಳಸಿಕೊಂಡು ನಾಟಕವನ್ನು ಪರಿಣಾಮಕಾರಿ ಪ್ರದರ್ಶಿಸುವ ಪ್ರಯತ್ನ ಇದಾಗಿದೆ ಎಂದರು.

ಕೊಪ್ಪದ ರಂಗಬಿಂಬ ತಂಡದ ವತಿಯಿಂದ ತೇಜಸ್ವಿ ಕಥೆಯಾಧಾರಿತ ನಾಟಕ “ಎಂಕ್ಟನ ಪುಂಗಿ’ ಪ್ರದರ್ಶಿಸಲಾಯಿತು. ಚಿತ್ರ ಕಲಾವಿದರಾದ ಸುರೇಶ್‌ಚಂದ್ರ ದತ್ತ, ಬಾಪು ದಿನೇಶ್‌, ಪುಸ್ತಕ ಪ್ರಕಾಶನದ ರಾ‚ಘವೇಂದ್ರ, ಕ್ಷೇತ್ರ ಶಿಕ್ಷಣಾಧಿ ಕಾರಿ ಹೇಮಂತ್‌ ರಾಜ್‌, ಕಲಾವಿದರಾದ ಜಿನೇಶ್‌ ಇರ್ವತ್ತೂರು, ನಿರಂಜನ್‌, ಎಚ್‌.ಎಸ್‌. ಜಗದೀಶ್‌, ಎಚ್‌.ಎಂ. ಸುಬ್ಬಣ್ಣ, ಶಾಂತಾರಾಮ್‌, ರಾಘವೇಂದ್ರ ಹರಿಹರಪುರ, ರಮೇಶ್‌, ಬಿ. ಅಶೋಕ್‌, ಶ್ರೀಪಾದ್‌ ತೀರ್ಥಹಳ್ಳಿ, ನಾಗರಾಜ್‌ ಕೂವೆ, ಆಕರ್ಷ್‌, ಸತೀಶ್‌, ವಿಠಲ, ಪೂರ್ಣೇಶ್‌ ಮತ್ತಾವರ, ಮಗ್ಗಲಮಕ್ಕಿ ಗಣೇಶ್‌, ಎಸ್‌. ಪ್ರವೀಣ್‌, ನಾಗರಾಜ್‌, ಸಂಜಯ್‌ ಗೌಡ, ಎ.ಆರ್‌.ಅಭಿಲಾಷ್‌, ರೇಖಾ ಪೂರ್ಣೇಶ್‌, ಅನಿಲ್‌ ಮೊಂತೆರೊ, ನವೀನ್‌ ಆನೆದಿಬ್ಬ, ನಾಜೀಂ, ವಿಜಯಲಕ್ಷ್ಮಿ ಇದ್ದರು.

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-ckm

Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

CT Ravi

ನೇತ್ರಾವತಿ ನದಿಯಲ್ಲಿ ಗೋಮಾಂಸ ಪತ್ತೆ ಮತಾಂಧತೆ ತೋರಿಸುತ್ತದೆ: ಸಿ.ಟಿ. ರವಿ ಕಿಡಿ

12-

Chikkamagaluru: ನಕ್ಸಲರ ಶರಣಾಗತಿಗೆ ಪೊಲೀಸ್ ವರಿಷ್ಠಾಧಿಕಾರಿ ಡಾ. ಅಮಟೆ ಮನವಿ

Chikkamagaluru: ನಕ್ಸಲ್‌ ಆರೋಪಿತರ ಪ್ರಕರಣ ಖುಲಾಸೆ

Chikkamagaluru: ನಕ್ಸಲ್‌ ಆರೋಪಿತರ ಪ್ರಕರಣ ಖುಲಾಸೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.