ಯೋಜನೆಗಳ ತ್ವರಿತ ವಿಲೇವಾರಿಗೆ ಸೂಚನೆ

Team Udayavani, Apr 7, 2021, 8:40 PM IST

gsaddgfg

ಶಿವಮೊಗ್ಗ : ಆತ್ಮನಿರ್ಭರ ಯೋಜನೆ ಸೇರಿದಂತೆ ಕೇಂದ್ರ ಸರ್ಕಾರದ ಯೋಜನೆಗಳ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿಗೊಳಿಸಿ ಯೋಜನೆಗಳ ಲಾಭ ಜನಸಾಮಾನ್ಯರಿಗೆ ದೊರಕುವಂತೆ ಮಾಡಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

ಮಂಗಳವಾರ ಜಿಪಂ ಸಭಾಂಗಣದಲ್ಲಿ ಡಿಸಿಸಿ, ಡಿಎಲ್‌ಆರ್‌ಸಿ ಸಭೆಯಲ್ಲಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಬ್ಯಾಂಕುಗಳು ರೈತರು ಸ್ವಾವಲಂಬಿಗಳಾಗುವ ನಿಟ್ಟಿನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಸಾಲಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕು. ಕೇಂದ್ರ ಸರ್ಕಾರದ ವಿಮಾ ಯೋಜನೆಗಳು, ಆವಾಸ್‌ ಯೋಜನೆ, ನಿರುದ್ಯೋಗಿಗಳಿಗೆ ಸಾಲ ಸೌಲಭ್ಯ ಒದಗಿಸುವ ಮುದ್ರಾ ಯೋಜನೆ ಮೊದಲಾದ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ರೂ. ಸಹಾಯಧನ ಒದಗಿಸುವ ಪ್ರಧಾನಮಂತ್ರಿ ಆತ್ಮನಿರ್ಭರ ಯೋಜನೆಯಡಿ ಜಿಲ್ಲೆಯಲ್ಲಿ 5692 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಇದುವರೆಗೆ 3293 ಮಂದಿಗೆ ನೆರವು ಒದಗಿಸಲಾಗಿದೆ. ವಿಲೇವಾರಿಗೆ ಬಾಕಿಯಿರುವ ಎಲ್ಲಾ ಅರ್ಜಿಗಳನ್ನು ಮುಂದಿನ ಮೂರು ತಿಂಗಳ ಒಳಗಾಗಿ ವಿಲೇವಾರಿಗೊಳಿಸಿ ಯೋಜನೆಯ ಲಾಭ ಪ್ರತಿಯೊಬ್ಬರಿಗೂ ಸಿಗುವುದನ್ನು ಖಾತ್ರಿಪಡಿಸಬೇಕು ಎಂದು ಹೇಳಿದರು. ಪ್ರಧಾನಮಂತ್ರಿ ಆವಾಸ್‌ ಯೋಜನೆ: ಶಿವಮೊಗ್ಗ ನಗರದ ಗೋವಿಂದಪುರದಲ್ಲಿ 3ಸಾವಿರ ಆಶ್ರಯ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಈಗಾಗಲೇ ಮಾದರಿ ಮನೆಗಳನ್ನು ನಿರ್ಮಿಸಲಾಗಿದೆ.

ಈಗಾಗಲೇ 2882 ಮಂದಿ ಅರ್ಜಿ ಸಲ್ಲಿಸಿದ್ದು ತಮ್ಮ ಪಾಲಿನ ಮೊತ್ತವನ್ನು ಪಾವತಿಸಿದ್ದಾರೆ. ಇವರಿಗೆ ಮನೆಗಳನ್ನು ನಿರ್ಮಿಸಲು ಬ್ಯಾಂಕುಗಳು ಸಾಲ ನೀಡುವ ಪ್ರಕ್ರಿಯೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು. ಅಗತ್ಯವಿರುವ ದಾಖಲೆಗಳನ್ನು ಪಡೆದು ಸಾಲ ಸೌಲಭ್ಯ ಒದಗಿಸಿ, 2024ರ ಒಳಗಾಗಿ ಎಲ್ಲರಿಗೂ ಮನೆ ನಿರ್ಮಾಣ ಎಂಬ ಪ್ರಧಾನಮಂತ್ರಿ ಅವರ ಕನಸನ್ನು ನನಸುಗೊಳಿಸಬೇಕು ಎಂದು ಹೇಳಿದರು.

ಜೀವ ವಿಮೆ ಪ್ರಯೋಜನ ಹೆಚ್ಚಿನವರಿಗೆ ಸಿಗಬೇಕು: ಪ್ರಧಾನಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆ ಮತ್ತು ಸುರûಾ ಭಿಮಾ ಯೋಜನೆಯಡಿ ಪ್ರಯೋಜನ ಹೆಚ್ಚಿನ ಜನರಿಗೆ ಸಿಗುವಂತೆ ಕ್ರಮ ಕೈಗೊಳ್ಳಬೇಕು. ಇದುವರೆಗೆ ಜಿಲ್ಲೆಯಲ್ಲಿ ಕೇವಲ 162 ಮಂದಿ ಮಾತ್ರ ಡೆತ್‌ ಕ್ಲೈಮ್‌ ಮಾಡಿ ತಲಾ ಎರಡು ಲಕ್ಷ ರೂ. ಪಡೆದುಕೊಂಡಿದ್ದಾರೆ. ಮರಣ ಹೊಂದುವವರ ಸಂಖ್ಯೆ ಇದಕ್ಕಿಂತ ಹೆಚ್ಚಾಗಿದ್ದು, ಯೋಜನೆಯ ವ್ಯಾಪ್ತಿಗೆ ಇನ್ನಷ್ಟು ಫಲಾನುಭವಿಗಳನ್ನು ಸೇರಿಸಬೇಕು. ಈ ಕುರಿತು ಗ್ರಾಮೀಣ ಭಾಗಗಳಲ್ಲಿ ಅರಿವು ಮೂಡಿಸಬೇಕು ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಎಂ.ಎಲ್‌. ವೈಶಾಲಿ, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್‌, ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಯತೀಶ್‌, ವಿವಿಧ ಬ್ಯಾಂಕ್‌ಗಳ ಪ್ರತಿನಿಧಿ ಗಳು, ಅಧಿಕಾರಿಗಳು ಸಭೆಯಲ್ಲಿ ಇದ್ದರು.

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

Hosanagara: ರಸ್ತೆ ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ಕೇಳಿ ಆತ್ಮಹತ್ಯೆಗೆ ಶರಣಾದ ಪತ್ನಿ

Hosanagara: ರಸ್ತೆ ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ಕೇಳಿ ಆತ್ಮಹತ್ಯೆಗೆ ಶರಣಾದ ಪತ್ನಿ

7-thirthahalli

Thirthahalli: ಅದ್ಧೂರಿಯಾಗಿ ನಡೆದ ಎಳ್ಳಮಾವಾಸ್ಯೆ ರಥೋತ್ಸವ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.