ವೇಣೂರು ಭಾರೀ ಗಾಳಿ-ಮಳೆ; ಅಪಾರ ಹಾನಿ ; 35ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರಾಶಾಯಿ
Team Udayavani, Apr 8, 2021, 1:28 AM IST
ವೇಣೂರು: ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಕೋಡಿ ಹಾಗೂ ಕಾಶಿಪಟ್ಣ ಗ್ರಾಮದಲ್ಲಿ ಬುಧವಾರ ಸಂಜೆ ಬೀಸಿದ ಭಾರೀ ಗಾಳಿ-ಮಳೆಯ ಪರಿಣಾಮ 35ಕ್ಕೂ ಅಧಿ ಕ ವಿದ್ಯುತ್ ಕಂಬಗಳು ಉರುಳಿಬಿದ್ದು ಮೆಸ್ಕಾಂಗೆ ಅಪಾರ ನಷ್ಟ ಸಂಭವಿಸಿದೆ. ಹಲವು ಮನೆ, ತೋಟಗಳಿಗೆ ಹಾನಿಯಾಗಿದೆ.
ಬಡಕೋಡಿ ಗ್ರಾಮದ ಕೀರ್ತಿ ಜೈನ್ ಅವರ ಮನೆಯ ಎದುರಿನ ಸಿಮೆಂಟ್ ಶೀಟ್, ಹೆಂಚುಗಳು ಹಾರಿಹೋಗಿವೆ. ಅವರು ಮನೆಯಲ್ಲೇ ಕ್ಯಾಟರಿಂಗ್ ಅಡುಗೆ ಮಾಡುತ್ತಿದ್ದು ಅಡುಗೆ ಸಾಮಗ್ರಿಗಳಿಗೆ ಹಾನಿಯಾಗಿದೆ.
ವಿದ್ಯುತ್ ಕಂಬ ಬಿದ್ದು ಮನೆಗೆ ಹಾನಿ
ರಾಘವೇಂದ್ರ ನಾಯ್ಕ, ಗೋಪಾಲ ಪೂಜಾರಿ ಬಡಕೋಡಿ, ರಾಘವೇಂದ್ರ ನಡ್ತಿಕಲ್ಲು ಅವರ ಮನೆಗಳಿಗೂ ಅಪಾರ ಪ್ರಮಾಣದ ಹಾನಿಯಾಗಿದೆ. ಪ್ರಶಾಂತ್ ನಡ್ತಿಕಲ್ಲು ಅವರ ಮನೆ ಮೇಲೆ ವಿದ್ಯುತ್ ಕಂಬ ಉರುಳಿಬಿದ್ದು ಹಾನಿಯಾಗಿದೆ.
ಬಡಕೋಡಿ ಪರಿಸರದ ಹಲವು ಮನೆಗಳ ಅಡಿಕೆ ತೋಟ, ರಬ್ಬರ್ ಮರಗಳು, ಪಂಪ್‌ಶೆಡ್, ತೆಂಗಿನ ಮರಗಳೂ ಉರುಳಿ ಬಿದ್ದು ರೈತರಿಗೆ ನಷ್ಟ ಸಂಭವಿಸಿದೆ. ಬಾಳೆಗಿಡಗಳು, ತರಕಾರಿ ಕೃಷಿಗಳು ನಾಶವಾಗಿವೆ. ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಆಲಿಕಲ್ಲು ಮಳೆ
ಕಾಶಿಪಟ್ಣ ಪರಿಸರದಲ್ಲಿ ಸಂಜೆ ವೇಳೆ ಆಲಿಕಲ್ಲು ಮಳೆಯಾಗಿದೆ.
ಮೂಡುಬಿದಿರೆಯಲ್ಲಿ ಮಳೆ
ಮೂಡುಬಿದಿರೆ ಬುಧವಾರ ಅಪರಾಹ್ನ 3 ಗಂಟೆಯ ಸುಮಾರಿಗೆ ಭಾರೀ ಮೋಡ ದಟ್ಟೆ$çಸಿ ಗುಡುಗು ಸಹಿತ ಸುಮಾರು ಅರ್ಧ ತಾಸು ಸಾಧಾರಣ ಮಳೆ ಬಿತ್ತು.
ಶಿರ್ತಾಡಿ, ನಾರಾವಿ ಸಹಿತ ಹಲವೆಡೆ ಭಾರೀ ಮಳೆ ಸುರಿಯಿತು. ಬಜಪೆ, ಎಡಪದವು ಪರಿಸರದಲ್ಲಿ ಹನಿಮಳೆಯಾಗಿದೆ.
ಕಾರ್ಕಳ ವಿವಿಧೆಡೆ ಮಳೆ
ಕಾರ್ಕಳ ತಾಲೂಕಿನ ವಿವಿಧೆಡೆ ಸಂಜೆ ವೇಳೆ ಸಾಧಾರಣ ಮಳೆಯಾಗಿದೆ. ಮುಡಾರು, ಬಜಗೋಳಿ, ಮಾಳ, ಹೊಸ್ಮಾರು, ಬೆಳ್ಮಣ್, ಅಜೆಕಾರು ಪರಿಸರದಲ್ಲಿ ಸಂಜೆ ವೇಳೆಗೆ ಉತ್ತಮ ಮಳೆಯಾಗಿದೆ.
ಉಳಿದಂತೆ ಮಂಗಳೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ಉರಿ ಸೆಕೆ ಮತ್ತು ಬಿಸಿಲು ಹೆಚ್ಚಾಗಿತ್ತು.
2-3 ದಿನ ಗಾಳಿ, ಸಿಡಿಲು ಮಳೆ
ಮಂಗಳೂರು: ಕರಾವಳಿ ಮತ್ತು ದಕ್ಷಿಣ ಒಳನಾಡಿನ ವಿವಿಧೆಡೆ 2-3 ದಿನ ಗಾಳಿ, ಸಿಡಿಲು ಸಹಿತ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬುಧವಾರದಂದು ಪಣಂಬೂರಿ ನಲ್ಲಿ 36.4 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿ ವಾಡಿಕೆಗಿಂತ 3 ಡಿ.ಸೆ. ಉಷ್ಣಾಂಶ ಹೆಚ್ಚು ಇತ್ತು. 27.2 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿ ವಾಡಿಕೆಗಿಂತ 2 ಡಿ.ಸೆ. ಹೆಚ್ಚು ಇತ್ತು.
ತಪ್ಪಿದ ಭಾರೀ ಅನಾಹುತ
ಕಾಶಿಪಟ್ಣದ ಮಸೀದಿ ಬಳಿ ಚಲಿಸುತ್ತಿದ್ದ ಖಾಸಗಿ ಬಸ್ ಮೇಲೆ ವಿದ್ಯುತ್ ಕಂಬ ಉರುಳಿ ಬೀಳುತ್ತಿದ್ದಂತೆ ಚಾಲಕ ಸಮಯ ಪ್ರಜ್ಞೆ ಮೆರೆದು ಬಸ್ಸನ್ನು ಚರಂಡಿ ಕಡೆ ತಿರುಗಿಸಿದ್ದು, ಭಾರೀ ಅನಾಹುತವೊಂದು ಕೂದಳೆಲೆಯ ಅಂತರದಲ್ಲಿ ತಪ್ಪಿದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.