ಇಂದಿನ ಗ್ರಹಬಲ: ಈ ರಾಶಿಯವರಿಗೆ ಹಿತಶತ್ರುಗಳ ಸಮಯಸಾಧಕತನ ಆಗಾಗ ಘಾಸಿಗೊಳಿಸಲಿದೆ!


Team Udayavani, Apr 8, 2021, 7:42 AM IST

ಇಂದಿನ ಗ್ರಹಬಲ: ಈ ರಾಶಿಯವರಿಗೆ ಹಿತಶತ್ರುಗಳ ಸಮಯಸಾಧಕತನ ಆಗಾಗ ಘಾಸಿಗೊಳಿಸಲಿದೆ!

08-04-2021

ಮೇಷ: ಮಾನಸಿಕವಾಗಿ ಹಾಗೂ ದೈಹಿಕವಾಗಿ ಆಗಾಗ ವ್ಯಾಕುಲತೆ ಹಾಗೂ ಉದ್ವೇಗದಿಂದ ಕ್ಷುಲ್ಲಕ ವಿಚಾರಗಳು ತೋರಿಬಂದು ಅಸಮಾಧಾನ ಹೊಂದುವಿರಿ. ನೂತನ ಕಾರ್ಯಾರಂಭ ಯಾ ವ್ಯಾಪಾರ, ವ್ಯವಹಾರದ ಚಿಂತೆ ಬೇಡ.

ವೃಷಭ: ನೂತನ ಕಾರ್ಯಾರಂಭ, ವ್ಯಾಪಾರ, ವ್ಯವಹಾರಗಳ ಚಿಂತನೆ ಕಾರ್ಯಗತವಾಗುತ್ತದೆ. ಸಾಂಸಾರಿಕವಾಗಿ ಗೃಹಿಣಿಯ ಸಹಕಾರ ಸುಪ್ರಸನ್ನತೆ ಹಾಗೂ ಸುಖಶಾಂತಿ ಅನುಭವಕ್ಕೆ ಬರುತ್ತದೆ. ನಿಮ್ಮ ಚಿಂತೆ ಧನಾತ್ಮಕವಾಗಿರಲಿ.

ಮಿಥುನ: ವಿದ್ಯಾರ್ಥಿಗಳ ಮನೋಕಾಮನೆಗಳು ಪೂರ್ಣಗೊಂಡಾವು. ಆರ್ಥಿಕವಾಗಿ ಎಷ್ಟೇ ಖರ್ಚು-ವೆಚ್ಚ ಗಳಿದ್ದರೂ ನಿರಂತರ ಧನಾಗಮನದಿಂದ ತೊಂದರೆ ಇರದು. ಧನಾಗಮನಕ್ಕೆ ವಿಪುಲ ಅವಕಾಶಗಳಿಗೂ ಕಠಿಣ ಪ್ರಯತ್ನ ಅಗತ್ಯ.

ಕರ್ಕ: ನಿಮ್ಮ ಆತ್ಮವಿಶ್ವಾಸ, ಪ್ರಯತ್ನಬಲದಿಂದ ನೀವು ಮುಂದೆ ಬರಲಿದ್ದೀರಿ. ಗೃಹದಲ್ಲಿ ಮಂಗಲಕಾರ್ಯಗಳ ಮಾತುಕತೆಗಳು ಫ‌ಲ ನೀಡಲಿದೆ. ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ನಿರ್ಲಕ್ಷ್ಯ ತೋರದಿದ್ದರೆ ಒಳ್ಳೆಯದು.

ಸಿಂಹ: ಮಾತು ಕಡಿಮೆ ಮಾಡಿ ಕಾರ್ಯದತ್ತ ಗಮನಹರಿಸಿರಿ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಯೋಗದಿಂದ ಮುಂದುವರಿಯಿರಿ. ಹಿತಶತ್ರುಗಳ ಸಮಯಸಾಧಕತನ ಆಗಾಗ ಘಾಸಿಗೊಳಿಸಲಿದೆ. ಶುಭವಿದೆ.

ಕನ್ಯಾ: ತಾಳ್ಮೆ ಸಹನೆಯಿಂದ ಮುಂದುವರಿದಲ್ಲಿ ಮುನ್ನಡೆಗೆ ಸಾಧಕವಾಗುತ್ತದೆ. ಆಗಾಗ ಆರ್ಥಿಕವಾಗಿ ಹಿನ್ನಡೆಯನ್ನು ಅನುಭವಿಸಬೇಕಾಗುತ್ತದೆ. ಋಣಭಾದೆಯು ಕಾಡಲಿದೆ. ಕೆಲವೊಂದು ಬಹಿರಂಗಗೊಂಡು ರಾದ್ಧಾಂತವಾದೀತು.

ತುಲಾ: ಪಿತ್ತ ವಾಯುಪ್ರಕೋಪದಿಂದ ಅನಾರೋಗ್ಯ ಕಾಡಬಹುದು. ರಾಜಕೀಯದವರಿಗೆ ಉನ್ನತ ಸ್ಥಾನಮಾನವು ದೊರಕೀತು. ಪ್ರಯತ್ನಿಸಿರಿ. ವ್ಯಾಪಾರಿ ವರ್ಗದವರಿಗೆ ಚೇತರಿಕೆಯ ದಿನಗಳಿವು. ಸ್ವಂತ ದುಡಿಮೆಯವರಿಗೆ ಜಾಗ್ರತೆ.

ವೃಶ್ಚಿಕ: ಅನಿರೀಕ್ಷಿತ ಕಾರ್ಯಸಾಧನೆ ನಿಮಗೆ ಅಚ್ಚರಿ ತರಲಿದೆ. ಅವಿವಾಹಿತರ ವೈವಾಹಿಕ ಸಂಘಟನೆಗೆ ಪೂರಕವಾದ ಪ್ರಚೋದನೆ ಲಭಿಸೀತು. ಆಕಸ್ಮಿಕ ಧನಾನುಕೂಲ ಕಂಡುಬಂದೀತು. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ.

ಧನು: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಅವಕಾಶಗಳು ಮುನ್ನಡೆಗೆ ಸಾಧಕವಾಗುತ್ತದೆ. ಆಗಾಗ ಅಡೆತಡೆಗಳು ಕಂಡುಬಂದರೂ ಬೇಸರಿಸದಿರಿ. ಪ್ರಯತ್ನಬಲ, ಕಠಿಣ ಶ್ರಮ ನಿಮ್ಮನ್ನು ಗುರಿಯತ್ತ ಸಾಗಿಸಲಿದೆ. ಆರೋಗ್ಯ ಉತ್ತಮ.

ಮಕರ: ಸದಾಕಾಲವೂ ಕಾರ್ಯಪ್ರವೃತ್ತರಾಗಿ ದುಡಿಯುತ್ತಿರುವ ನಿಮಗೆ ಉತ್ತಮ ಫ‌ಲಗಳು ಗೋಚರಕ್ಕೆ ಬರುತ್ತವೆ. ದೈಹಿಕ ಆರೋಗ್ಯವು ತೃಪ್ತಿಕರವಾಗಿದ್ದರೂ ಜಾಗ್ರತೆ ಬೇಕೇಬೇಕು. ಉದ್ಯೋಗದಲ್ಲಿ ಎಡರುತೊಡರು ಕಂಡುಬಂದೀತು.

ಕುಂಭ: ಎಷ್ಟೇ ಕಿರಿಕಿರಿ ಉಂಟಾದರೂ ಸನ್ಮಿತ್ರರ ಸಹಕಾರಗಳಿಂದ ಪ್ರಗತಿ, ಸಮಾಧಾನಗಳು ದೊರಕಲಿದೆ. ಸಾಂಸಾರಿಕವಾಗಿ ಅಂತರಿಕ ಸ್ಥಿತಿಗತಿಗಳು ನಿರೀಕ್ಷಿತ ರೀತಿಯಲ್ಲಿ ಸಮಾಧಾನ ತಂದುಕೊಡಲಿದೆ. ಅತಿಥಿಗಳ ಆಗಮನವಿದೆ.

ಮೀನ: ಕೆಲವೊಂದು ವಿಚಾರಗಳು ನಿಮ್ಮ ಮಾನಸಿಕ ಸ್ಥಿತಿಯನ್ನು ಕೆಡಿಸಲಿದೆ. ಆದರೂ ಆರ್ಥಿಕವಾಗಿ ಅಭಿವೃದ್ಧಿ ಕಂಡುಬರುವುದು. ಅತೀ ಖರ್ಚು ಕಂಡುಬರುವುದು. ಅವಿವಾಹಿತರ ಮನೋಕಾಮನೆಗಳು ಪೂರ್ಣವಾದೀತು.

 

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

1-horoscope

Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ

Dina Bhavishya

Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…

2-horoscope

Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Love Reddy movie released today

Love Reddy: ತೆರೆಗೆ ಬಂತು ʼಲವ್‌ ರೆಡ್ಡಿʼ

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

18-bng

Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್‌

17-bng

Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.