ಕೋವಿಡ್‌ ಗುಣಲಕ್ಷಣ ಬದಲು : ಆತಂಕ, ಅಸಡ್ಡೆ ಬೇಡ


Team Udayavani, Apr 9, 2021, 6:50 AM IST

ಕೋವಿಡ್‌ ಗುಣಲಕ್ಷಣ ಬದಲು : ಆತಂಕ, ಅಸಡ್ಡೆ ಬೇಡ

ದೇಶದಲ್ಲಿ ಕೋವಿಡ್‌ನ‌ 2ನೇ ಅಲೆ ತೀವ್ರಗೊಂಡಿದೆ. ದಿನಗಳುರುಳಿದಂತೆಯೇ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಗುರುವಾರ 1.26 ಲಕ್ಷ ಹೊಸ ಪ್ರಕರಣಗಳು ವರದಿಯಾಗಿವೆ. ಇದು ಮೊದಲ ಅಲೆಯಲ್ಲಿ ದಿನವೊಂದರಲ್ಲಿ ದಾಖಲಾದ ಗರಿಷ್ಠ  ಪ್ರಕರಣಗಳಿಗಿಂತ ಹೆಚ್ಚಿನದಾಗಿದೆ. ಕೋವಿಡ್‌ ಸೋಂಕು ಹೊಸ ರೂಪದಲ್ಲಿ  ಸಕ್ರಿಯಗೊಳ್ಳುತ್ತಿರುವುದು ಮಾತ್ರವಲ್ಲದೆ ವಿಭಿನ್ನ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಸೋಂಕಿನ ಆರಂಭಿಕ ಅಲೆಯ ಸಂದರ್ಭದಲ್ಲಿನ ರೋಗ ಲಕ್ಷಣಗಳ ಜತೆಯಲ್ಲಿ ಇದೀಗ ಹೊಟ್ಟೆನೋವು, ವಾಂತಿ, ಕೀಲು ನೋವು, ನಿಶ್ಶಕ್ತಿ, ಹಸಿವಿನ ಕೊರತೆ ಕೋವಿಡ್ ಸೋಂಕಿತರನ್ನು ಕಾಡುತ್ತಿದೆ.

ಕೋವಿಡ್‌ ಸೋಂಕಿತರು ವಿಭಿನ್ನ ರೋಗಲಕ್ಷಣಗಳನ್ನು ಅನುಭವಿಸುತ್ತಿರುವುದನ್ನು  ವಿಶ್ವ ಆರೋಗ್ಯ ಸಂಸ್ಥೆ ಕೂಡ ದೃಢಪಡಿಸಿದೆ. ಸದ್ಯ ಕೋವಿಡ್‌ ಎರಡನೇ ಅಲೆಯಲ್ಲಿ  ಸೋಂಕುಪೀಡಿತರಾದವರಲ್ಲಿ  ಬಹುತೇಕರು ಮಧ್ಯಮ ಪ್ರಮಾಣದ ಕಾಯಿಲೆಯಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗದೇ ಚೇತರಿಸಿಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಈ ರೋಗಲಕ್ಷಣಗಳು ವ್ಯಕ್ತಿಯು ವೈರಸ್‌ ಸೋಂಕಿಗೆ ಒಳಗಾದ 5-6 ದಿನಗಳ ಅಅನಂತರ ಕಂಡುಬರುತ್ತವೆ. ಆದರೆ ಕೆಲವು ಸಂದರ್ಭಗಳಲ್ಲಿ ಈ ರೋಗಲಕ್ಷಣಗಳು 14 ದಿನಗಳ ಬಳಿಕವೂ ಬಾಧಿಸುತ್ತಿವೆ ಎಂದು ವರದಿ ತಿಳಿಸಿದೆ.

ಹೊಸ ಲಕ್ಷಣಗಳಾವುವು?: ಹೊಸ ಪ್ರಕರಣಗಳಿಗೆ ಸಂಬಂಧಿಸಿದಂತೆ ದೇಶದಲ್ಲಿ ನಡೆಸಿದ ಅಧ್ಯಯನದ ಪ್ರಕಾರ ವೈರಸ್‌ ರೂಪಾಂತರಗೊಳ್ಳುತ್ತಿರುವುದರಿಂದ ರೋಗ ಲಕ್ಷಣಗಳೂ ಬದಲಾಗುತ್ತಿವೆ. ಜ್ವರ, ಆಯಾಸ, ಒಣ ಕೆಮ್ಮು, ರುಚಿ ಮತ್ತು ವಾಸನೆ ತಿಳಿಯದಿ ರುವುದು ಈ ಹಿಂದೆ ಕೋವಿಡ್‌ ಸೋಂಕಿನ ಲಕ್ಷಣಗಳಾಗಿದ್ದವು. ಈಗ ಬ್ರೆಜಿಲ್‌ ಮತ್ತು ಕೆಂಟ್‌ನಲ್ಲಿ ಕಾಣಿಸಿಕೊಂಡಿರುವ ಕೋವಿಡ್‌ ಸೋಂಕಿನ ರೂಪಾಂತರಗಳು ಹೆಚ್ಚು ಶಕ್ತಿಯುತವಾಗಿದ್ದು ಹೊಸ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ.

ಹೊಟ್ಟೆ ನೋವು, ವಾಕರಿಕೆ, ವಾಂತಿ, ಶೀತ ಹಾಗೂ ಸ್ನಾಯುಗಳಲ್ಲಿ ನೋವು, ಜಠರ ಕರುಳಿನ ತೊಂದರೆಗಳು, ನಿಶ್ಶಕ್ತಿ ಮತ್ತು ಹಸಿವು ಕಡಿಮೆಯಾ ಗುವುದು ಹೊಸ ಲಕ್ಷಣಗಳಾಗಿವೆ. ಜ್ವರ ಮತ್ತು ಕೆಮ್ಮಿನಂತಹ ಸಾಮಾನ್ಯ ಲಕ್ಷಣಗಳಿಲ್ಲದಿದ್ದರೂ ಪರೀಕ್ಷೆಯ ಸಂದರ್ಭ ಪಾಸಿಟಿವ್‌ ರಿಪೋರ್ಟ್‌ಗಳು ಬರುತ್ತಿವೆ. ಮೊದಲು ಯುಕೆ ಮತ್ತು ಇತರ ಯುರೋಪಿಯನ್‌ ದೇಶಗಳಲ್ಲಿ ಎರಡನೆಯ ಮತ್ತು ಮೂರನೆಯ ಅಲೆಯ ಸೋಂಕುಗಳು ಇವೇ ರೋಗಲಕ್ಷಣಗಳನ್ನು ಹೊಂದಿದ್ದವು.

ಯಾಕೆ ವೇಗ ಪಡೆದುಕೊಳ್ಳುತ್ತಿದೆ? :

ಪ್ರತೀ ವೈರಸ್‌ ಕೂಡ ರೂಪಾಂತರಗೊಳ್ಳುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಕೇಂದ್ರ ಸರಕಾರದ ಪ್ರಕಾರ, ದೇಶದ 18 ರಾಜ್ಯಗಳಲ್ಲಿ ಕೋವಿಡ್ ವೈರಸ್‌ ಅಪಾಯಕಾರಿಯಾಗಿ ರೂಪಾಂತರಗೊಳ್ಳುತ್ತಿವೆ. ಮಹಾರಾಷ್ಟ್ರದಲ್ಲಿ ಎರಡು ರೂಪಾಂತರಿತ ಸೋಂಕುಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ ಕೋವಿಡ್‌ ವೈರಸ್‌ ಎರಡು ರೂಪಾಂತರಗಳನ್ನು ಹೊಂದಿದ್ದು ಇವು ಅದರ ಪ್ರಸರಣ ಸಾಮರ್ಥ್ಯವನ್ನು ಹೆಚ್ಚಿಸಿರುವುದು ತುಸು ಆತಂಕಕಾರಿ ಬೆಳವಣಿಗೆಯಾಗಿದೆ.

ಮಾರಕವಾಗುತ್ತಿದೆಯೇ? :

ಹೆಚ್ಚಿನ ಹೊಸ ಪ್ರಕರಣಗಳಲ್ಲಿ ರೋಗಲಕ್ಷಣಗಳಿಲ್ಲ. ಕೆಲವು ಸೌಮ್ಯದಿಂದ ಮಧ್ಯಮ ರೋಗಲಕ್ಷಣಗಳನ್ನು ಹೊಂದಿವೆ. ಆದರೆ ವೈರಸ್‌ ಬದಲಾಗುತ್ತಿರುವ ರೀತಿ, ಸೋಂಕಿನ ತೀವ್ರತೆಯೂ ಮುಂಚೂಣಿಗೆ ಬರುತ್ತಿದೆ. ಕೆಲವು ರೀತಿಯ ಗಂಭೀರ ಕಾಯಿಲೆ ಇರುವ ಜನರಿಗೆ, ಈ ಸೋಂಕುಗಳು ಮಾರಕವೆಂದೇ ಪರಿಗಣಿಸಲಾಗುತ್ತದೆ.

ಕಣ್ಣು , ಕಿವಿಗೆ ಸಮಸ್ಯೆ! :

ಚೀನದಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಕೆಂಗಣ್ಣು  ಸಹ ಕೋವಿಡ್‌ -19 ಸೋಂಕಿನ ಲಕ್ಷಣವಾಗಿದೆ. ಹೊಸ ಸೋಂಕು ಕಣ್ಣನ್ನು ಕೆಂಪಗಾಗಿಸುವ ಜತೆಯಲ್ಲಿ  ಕಣ್ಣುಗಳಲ್ಲಿ ಉರಿಯೂತಕ್ಕೂ ಕಾರಣವಾಗಬಹುದು. ಕಳೆದ ವಾರ ಇಂಟರ್‌ನ್ಯಾಶನಲ್‌ ಜರ್ನಲ್‌ ಆಫ್ ಆಡಿಯಾಲಜಿಯಲ್ಲಿ ಪ್ರಕಟವಾದ ವರದಿಯ ಪ್ರಕಾರ ರೂಪಾಂತರಿತ ಸೋಂಕು ಶ್ರವಣ ಶಕ್ತಿಯನ್ನು ದುರ್ಬಲಗೊಳಿಸುತ್ತದೆ ಮಾತ್ರವಲ್ಲದೆ ಕೋವಿಡ್‌ ಪೀಡಿತ ಜನರಲ್ಲಿ ಶೇ. 7.6ರಷ್ಟು ಜನರು ಶ್ರವಣದೋಷವನ್ನು ಹೊಂದಿದ್ದಾರೆ.

ಜಠರಗರುಳಿಗೂ ತೊಂದರೆ :

ಕೋವಿಡ್‌ ಸೋಂಕಿನಿಂದಾಗಿ ಜಠರಗರುಳಿನ ಸಮಸ್ಯೆ ಗಳೂ ಕಂಡುಬರುತ್ತಿವೆ.  ಕೋವಿಡ್‌ನ‌ ಪ್ರಾರಂಭಿಕ ಹಂತಕ್ಕೆ ಹೋಲಿಸಿದರೆ ಈಗ ಇಂಥ ಸಮಸ್ಯೆಗಳನ್ನು ಎದುರಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಮೊದಲು ಈ ರೋಗಲಕ್ಷಣಗಳು ಕಂಡುಬಂದಿರಲಿಲ್ಲ, ಆದರೆ ಈಗ ಹೆಚ್ಚಿನ ಸಂದರ್ಭಗಳಲ್ಲಿ ಈ ಲಕ್ಷಣಗಳು ಕಂಡುಬರುತ್ತಿವೆ. ರೂಪಾಂತರಿತ ವೈರಸ್‌ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಅತಿಸಾರ, ಉದರಶೂಲೆ, ವಾಕರಿಕೆ ಮತ್ತು ವಾಂತಿಯಂಥ ಲಕ್ಷಣಗಳು ಕೋವಿಡ್ ಪೀಡಿತರನ್ನು ಬಾಧಿಸಲಾರಂಭಿಸಿದೆ.

ಇತರ ಅಂಗಾಂಗಳಿಗೂ ಹಾನಿ :

ದೇಹದಲ್ಲಿ ವೈರಸ್‌ ಹೊರೆ ಹೆಚ್ಚಾದಂತೆ ಇದು ಇತರ ಅಂಗಗಳಿಗೂ ಹಾನಿಯನ್ನುಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿರ್ಲಕ್ಷ್ಯ ವಹಿಸದಂತೆ ಎಚ್ಚರದಿಂದಿರಬೇಕು. ನಿಮ್ಮನ್ನು ಯಾವುದೇ ತೆರನಾದ ರೋಗಲಕ್ಷಣಗಳು ಬಾಧಿಸಿದಲ್ಲಿ ತತ್‌ಕ್ಷಣ ಪರೀಕ್ಷೆಯನ್ನು ಮಾಡಿಸಿಕೊಂಡು ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ವೈರಸ್‌ನ ತೀವ್ರತೆಯುನ್ನು ಕಡಿಮೆ ಮಾಡಬಹುದು.

ವ್ಯಾಕ್ಸಿನೇಶನ್‌ನಿಂದ ಪ್ರಯೋಜನವಿದೆಯೇ? :

ಹೌದು. ಕೋವಿಡ್‌ವಿರುದ್ಧ ಹೋರಾ ಡಲು ಲಸಿಕೆಯನ್ನು ಪಡೆಯುವುದು ಕಡ್ಡಾಯವಾಗಿದೆ. ಭಾರತದಲ್ಲಿ ಲಭ್ಯವಿರುವ ಎರಡೂ ಲಸಿಕೆಗಳಿಂದ (ಕೊವ್ಯಾಕ್ಸಿನ್‌ ಮತ್ತು ಕೊವಿಶೀಲ್ಡ್) ತಯಾರಿಸಿದ ಪ್ರತಿಕಾಯಗಳನ್ನು ಪಡೆಯಬೇಕು. ಇದು ಪಡೆದ ಮೇಲೂ ನೀವು ಸೋಂಕಿಗೆ ಒಳಗಾಗದೇ ಇರಬಹುದು ಎಂದು ಖಚಿತವಾಗಿ ಹೇಳುವಂತಿಲ್ಲ. ಇದಕ್ಕಾಗಿ ಲಸಿಕೆ ಪಡೆದ ಬಳಿಕವೂ ಕೋವಿಡ್‌ ನಿಯಮಾ ವಳಿಗಳನ್ನು ಪಾಲಿಸಿ. ಈ ಕಾರಣಕ್ಕಾ ಗಿಯೇ ಸರಕಾರವು 45 ವರ್ಷ ಮೇಲ್ಪಟ್ಟ ವರೆಲ್ಲರಿಗೂ ಲಸಿಕೆ ನೀಡುವ ನಿರ್ಧಾರ ಕೈಗೊಂಡಿದೆ. ಯಾಕೆಂದರೆ ಕೋವಿಡ್‌ ನಿಂದಾಗಿ ಸಾವನ್ನಪ್ಪಿದವರಲ್ಲಿ ಶೇ. 90ರಷ್ಟು ಮಂದಿ  ಈ ವಯಸ್ಸಿನವರಾಗಿದ್ದಾರೆ.

ಟಾಪ್ ನ್ಯೂಸ್

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

‌Actress: 31 ವರ್ಷದ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

‌Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

1-mannn

Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

ಕರಾವಳಿಗರ ಮನಗೆದ್ದಿದ್ದ ಉಸ್ತಾದ್‌ ಜಾಕೀರ್‌ ಹುಸೇನ್‌

Zakir Hussain; ಕರಾವಳಿಗರ ಮನಗೆದ್ದಿದ್ದ ಉಸ್ತಾದ್‌ ಜಾಕೀರ್‌ ಹುಸೇನ್‌

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ

19-thirthahalli

Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು

18-aranthodu

Aranthodu: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಪ್ರಯಾಣಿಕರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.