ನವಿರೇಳಿಸುವ ವೀಡಿಯೋ ವೈರಲ್
Team Udayavani, Apr 9, 2021, 7:20 AM IST
ನಾರ್ವೆ : ನಾರ್ವೆಯ ಸಮುದ್ರ ವ್ಯಾಪ್ತಿಯಲ್ಲಿ ತಾಂತ್ರಿಕ ತೊಂದರೆಗೀಡಾದ “ಎಮ್ಸ್‌ಲಿಫ್ಟ್ ಹೆಂಡ್ರಿಕಾ’ (Eemslift Hendrika) ಸರಕು ಸಾಗಣೆಯ ಹಡಗಿನಲ್ಲಿದ್ದ 12 ಮಂದಿ ಸಿಬಂದಿಯನ್ನು ರಕ್ಷಿಸಲಾಗಿದೆ.
ಎರಡು ಹಂತಗಳಲ್ಲಿ ನಾರ್ವೆಯ ರಕ್ಷಣ ಸಿಬಂದಿ ಕಾರ್ಯಾಚರಣೆ ನಡೆಸಿದ್ದಾರೆ.ಮೊದಲ ಹಂತದಲ್ಲಿ ಹಡಗಿನ ಡೆಕ್ ಮೇಲೆ ಇದ್ದ ಎಂಟು ಮಂದಿಯನ್ನು ಒಬ್ಬೊಬ್ಬರನ್ನಾಗಿ ಸುರಕ್ಷಿತವಾಗಿ ಹೆಲಿಕಾಪ್ಟರ್‌ನ ಒಳಕ್ಕೆ ತಂದಿದ್ದಾರೆ. ಭಾರೀ ಗಾತ್ರದ ಅಲೆಗಳಿಗೆ ಸಿಕ್ಕಿದ್ದ ಹಡಗು ಏಳುತ್ತಾ, ಬೀಳುತ್ತಾ ಸಾಗುತ್ತಿತ್ತು. ಇದರಿಂದ ಭಯಗೊಂಡ ನಾಲ್ವರು ಸಮುದ್ರಕ್ಕೆ ಜಿಗಿದಿದ್ದರು. ನಾರ್ವೆಯ ರಕ್ಷಣ ಪಡೆಗಳು ಚಿತ್ರೀಕರಿಸಿದ ವೀಡಿಯೋ ದೃಶ್ಯಗಳ ಪ್ರಕಾರ ಒಬ್ಟಾತ ಸಮುದ್ರಕ್ಕೆ ಧುಮುಕುವುದು ಕಂಡುಬಂದಿದೆ. ಅವರನ್ನೂ ಪಡೆಗಳು ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸಿ ಪಾರು ಮಾಡಿವೆ. ಈ ರೋಮಾಂಚನಕಾರಿ ವೀಡಿಯೋ ಈಗ ವೈರಲ್ ಆಗಿದೆ. ನಾರ್ವೆಯ ಬಂದರು ನಗರ ಆ್ಯಲ್ಯುಸಂದ್ ನಗರದಿಂದ 130 ಕಿ.ಮೀ. ವಾಯವ್ಯ ದಿಕ್ಕಿನಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.