ಜೀರಿಗೆ ನೀರು ತೂಕ ಇಳಿಕೆಗೆ ಸಹಕಾರಿ
ಇದು ದೇಹದಲ್ಲಿ ಗ್ಲುಕೋಸ್ ಮಟ್ಟವನ್ನು ನಿಯಂತ್ರಣದಲ್ಲಿರಿಸಿ ಹಸಿವಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ
Team Udayavani, Apr 9, 2021, 4:25 PM IST
ಜೀರಿಗೆ ಅಡುಗೆ ಮನೆಯ ಬಹುಪಯೋಗಿ ಮಸಾಲೆ ಪದಾರ್ಥ. ಹಲವಾರು ಔಷಧೀಯ ಗುಣವಿರುವ ಇದನ್ನು ಕಷಾಯ, ಒಗ್ಗರಣೆ, ಸಾಂಬಾರಿನಲ್ಲೂ ಬಳಸುತ್ತೇವೆ. ಇದರ ಮತ್ತೂಂದು ಪ್ರಯೋಜನವೆಂದರೆ ಇದು ದೇಹದ ತೂಕ ಇಳಿಕೆ ಮಾಡಲು ಸಹಕಾರಿಯಾಗಿದೆ. ಜೀರ್ಣಕ್ರಿಯೆಯನ್ನು ಸುಸ್ಥಿರಗೊಳಿಸುವ ಜೀರಿಗೆಯು ಗ್ಯಾಸ್ಟ್ರಿಕ್ ಸಮಸ್ಯೆಯನ್ನೂ ಪರಿಹರಿಸುತ್ತದೆ.
ಅಲ್ಲದೇ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಿ ಚರ್ಮದ ಆರೋಗ್ಯವನ್ನೂ ಕಾಪಾಡುತ್ತದೆ.ಜೀರಿಗೆಯು ದೇಹದ ಕೊಬ್ಬನ್ನು ಶೀಘ್ರದಲ್ಲಿ ಕಡಿಮೆ ಮಾಡುತ್ತದೆ. ಹೀಗಾಗಿ ನಿಯಮಿತವಾಗಿ ಜೀರಿಗೆ ನೀರನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಊಟಕ್ಕೆ ಮುಂಚಿತವಾಗಿ ಜೀರಿಗೆ ನೀರನ್ನು ಒಳ್ಳೆಯದು. ಇದರಿಂದ ಹಸಿವು ಕಡಿಮೆಯಾಗುತ್ತದೆ ಮಾತ್ರವಲ್ಲ ಅನಾರೋಗ್ಯಕರ ತಿನಿಸುಗಳನ್ನು ತಿನ್ನದಂತೆ ಇದು
ತಡೆಯುತ್ತದೆ. ಜೀರಿಗೆ ನೀರನ್ನು ದಿನಕ್ಕೆ 3 ಅಥವಾ 4 ಬಾರಿ ಕುಡಿಯಬಹುದು.
ಪ್ರತಿ ದಿನ ಜೀರಿಗೆ ನೀರನ್ನು ಕುಡಿಯುವುದು ಬೇಸರವಾದರೆ ಅದನ್ನು ಕಷಾಯದ ಹುಡಿಯ ರೂಪದಲ್ಲಿ ತಯಾರಿಸಿಟ್ಟು ಕೊಳ್ಳಬಹುದು. ಕೆಲವೊಮ್ಮೆ ಬೇರೆ ಪದಾರ್ಥಗಳನ್ನು ಅದರಲ್ಲೂ ದಾಲ್ಚಿನ್ನಿಯ ಹುಡಿಯನ್ನು ಸೇರಿಸಿ ರುಚಿಯನ್ನು ಬದಲಾಯಿಸಬಹುದು. ದಾಲ್ಚಿನ್ನಿ ಹುಡಿ ಕೂಡ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಗ್ಲುಕೋಸ್ ಮಟ್ಟವನ್ನು ನಿಯಂತ್ರಣದಲ್ಲಿರಿಸಿ ಹಸಿವಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಒಂದು ಚಮಚ ಜೀರಿಗೆಯನ್ನು ಒಂದು ಲೋಟ ನೀರಿಗೆ ಹಾಕಿ ರಾತ್ರಿಯಿಡಿ ನೆನೆಸಿಟ್ಟು ಅದನ್ನು ಕುಡಿಯುವ ಮೊದಲು ದಾಲ್ಚಿನ್ನಿ ಅಥವಾ ಶುಂಠಿ ಹುಡಿಯನ್ನು ಸೇರಿಸಬಹುದು. ಇದರೊಂದಿಗೆ ನಿಂಬೆ ರಸ, ಮೆಂತೆ ಬೀಜಗಳನ್ನು ಹಾಕಬಹುದು. ಜೀರಿಗೆ ನೀರು ಕೇವಲ ತೂಕ ನಷ್ಟ ಮಾಡುವುದಿಲ್ಲ. ಅದರಿಂದ ಇನ್ನೂ ಹಲವು ಪರಿಣಾಮಗಳಿವೆ. ಹೀಗಾಗಿ ಇದನ್ನು ತೂಕ ನಷ್ಟಕ್ಕೆ ಬಳಸುವ ಮೊದಲು ತಜ್ಞರ ಮಾರ್ಗದರ್ಶನ ಪಡೆಯುವುದು ಬಹುಮುಖ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.