ಬಾಯಿ ಚಪ್ಪರಿಸಿ ತಿನ್ನುವ ಟೊಮೆಟೊ ಗೊಜ್ಜು
Team Udayavani, Apr 10, 2021, 4:09 PM IST
ಬಾಯಲ್ಲಿ ನೀರೂರಿಸುವಂತ ರುಚಿ, ಮೂಗಿಗೆ ರಾಚುವ ಘಮ. ತಿನ್ನುವ ತವಕದಲ್ಲಿಯೇ ತಯಾರಾಗಿ ಬಾಯಿ ಚಪ್ಪರಿಸುವಂತೆ ಮೋಡಿ ಮಾಡುವ ಟೊಮೆಟೊ ಗೊಜ್ಜು ರೆಸಿಪಿ ಇಲ್ಲಿದೆ ನೋಡಿ…
ಬೇಕಾಗುವ ಸಾಮಗ್ರಿಗಳು:
ಮೂರು ಅಥವಾ ನಾಲ್ಕು (ಮನೆಯ ಸದಸ್ಯರು ಎಷ್ಟಿದ್ದಾರೆಂದು ಅಂದಾಜಿಸಿ ನಿಮಗೆ ಬೇಕಾದಷ್ಟು ಮಾಡಿಕೊಳ್ಳಬಹುದು), ಈರುಳ್ಳಿ, ಅಡುಗೆ ಎಣ್ಣೆ, ಕರಿಬೇವು, ಕೊತ್ತಂಬರಿ, ಸಕ್ಕರೆ ಅಥವಾ ಬೆಲ್ಲ, ಉಪ್ಪು, ಅರಿಶಿನ, ಅಚ್ಚಖಾರದ ಪುಡಿ, ಜೀರಿಗೆ, ಸಾಸಿವೆ, ಸ್ವಲ್ಪ ನೀರು.
ಮಾಡುವ ವಿಧಾನ:
ಒಲೆಯ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ನಿಮಗೆಷ್ಟು ಪ್ರಮಾಣದಲ್ಲಿ ಎಣ್ಣೆ ಬೇಕು ಅಷ್ಟು ಹಾಕಿ ಕಾಯಿಸಬೇಕು.
ಕಾಯ್ದ ಎಣ್ಣೆಯಲ್ಲಿ ಜೀರಿಗೆ, ಸಾಸಿವೆ ಹಾಕಿ ಸರಿಯಾರಿ ಫ್ರೈ ಮಾಡಿ.
ನಂತರ ಸಣ್ಣದಾಗಿ ಹೆಚ್ಚಿಕೊಂಡ ಈರುಳ್ಳಿ ಮತ್ತು ಟೊಮೆಟೊ ಹಾಕಬೇಕು.
ಟೊಮೆಟೊ ಬಳಿಕ ಅರಿಶಿನ ಹಾಕಬೇಕು (ಅರಿಶಿನ ಹಾಕುವುದರಿಂದ ಬಹು ಬೇಗನೆ ಟೊಮೆಟೊ ಮೆತ್ತಗಾಗುವುದು)
ನಂತರ ಕರಿಬೇವು, ಕೊತ್ತಂಬರಿ, ಅಚ್ಚಖಾರದ ಪುಡಿ ಹಾಕಿ ಬೇಯಿಸಬೇಕು.
ಬಳಿಕ ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಅಥವಾ ಸಕ್ಕರೆ ಹಾಕಿ ಚೆನ್ನಾಗಿ ಬೇಯಿಸಬೇಕು. ನಂತರ ಸ್ವಲ್ಪ ಪ್ರಮಾಣದಲ್ಲಿ ನೀರು ಹಾಕಿ ಚೆನ್ನಾಗಿ ಕುದಿಸಬೇಕು.
ಹೀಗೆ ರುಚಿ-ರುಚಿಯಾಗಿ ಸಿದ್ಧವಾದ ಟೊಮೆಟೊ ಗೊಜ್ಜ( ಪಲ್ಯ)ನ್ನು ಚಪಾತಿ, ದೋಸೆ, ರೊಟ್ಟಿ, ಅನ್ನ, ಪಡ್ಡುಗಳ ಜತೆ ಪದಾರ್ಥಗಳ ಜೊತೆ ಸೇವಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.