ಹಲವು ಪ್ರತಿಭೆಗಳ ಸಂಗಮ ಕಿರಣ ಕುಮಾರ : ಮಲೇಷ್ಯಾದಲ್ಲಿ ಬೆಳಗಿದ ಯುವ ಪ್ರತಿಭೆ


Team Udayavani, Apr 10, 2021, 6:03 PM IST

ಹಲವು ಪ್ರತಿಭೆಗಳ ಸಂಗಮ ಕಿರಣ ಕುಮಾರ : ಮಲೇಷ್ಯಾದಲ್ಲಿ  ಬೆಳಗಿದ ಯುವ ಪ್ರತಿಭೆ

ಒಂದು ವರ್ಷ ಎರಡು ತಿಂಗಳಲ್ಲೇ ಶಾಲೆಯ ಮೆಟ್ಟಿಲೇರಿದ ಬಾಲಕ ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು 2020ರ ಮಲೇಷ್ಯಾದ 100 ಯುವ ಪ್ರತಿಭೆಗಳಲ್ಲಿ ಒಬ್ಬನಾಗಿ ಸ್ಥಾನ ಪಡೆದ ಕಿರಣ ಕುಮಾರ ರೋಣದ ಮಲೇಷ್ಯಾ ಹೆಲ್ಪ್ ವಿಶ್ವವಿದ್ಯಾನಿಲಯದ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಎಂಬಿಎ ರಾಯಭಾರಿ.

ಕಿರಣ್‌ ಹುಟ್ಟಿದ್ದು ಗದಗ ಜಿಲ್ಲೆಯ ರೋಣದಲ್ಲಿ. ತಂದೆ ತಾಯಿ ಉದ್ಯೋಗಿಗಳು. ತಾಯಿ ಶಿಕ್ಷಕಿಯಾಗಿದ್ದ ಕಾರಣ ಅವರ ವರ್ಗಾವಣೆಯಾದಾಗಲೆಲ್ಲ ಬೇರೆಬೇರೆ ಜಾಗದಲ್ಲಿ ನೆಲೆ ಕಂಡುಕೊಳ್ಳಬೇಕಾಯ್ತು. ಹೀಗಾಗಿ ಅಂಗನವಾಡಿಗೆ  4 ತಿಂಗಳಲ್ಲೇ ಪ್ರವೇಶ ಪಡೆದ. ಶೃಂಗೇರಿಯ ಶಾರದಾಂಬೆಯ ಮಡಿಲಲ್ಲಿ ಅಕ್ಷರಾಭ್ಯಾಸ ಪ್ರಾರಂಭಿಸಿ ಧಾರವಾಡದ ಕೋಳಿವಾಡದಲ್ಲಿ ಶಿಕ್ಷಣ ಆರಂಭಿಸಿದ. ಎಲ್ಲ ಮಕ್ಕಳು ಮಣ್ಣಲ್ಲಿ ಆಟ ವಾಡುತ್ತಿದ್ದರೆ ಇವನು ಅಕ್ಷರಗಳನ್ನು ಬರೆಯುತ್ತಿದ್ದ. ಗಣಿತವೆಂದರೆ ಬಲು ಸುಲಭ. 2 ವರ್ಷಕ್ಕೆR 30ರ ವರೆಗೆ ಮಗ್ಗಿ ಹೇಳುತ್ತಿದ್ದ ಇವನು ಹಲವು ಬಾರಿ ರಾಜ್ಯಮಟ್ಟದಲ್ಲಿ ಮಗ್ಗಿ ಹೇಳುವ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಬಹುಮಾನ ಗಿಟ್ಟಿಸಿಕೊಂಡಿದ್ದ. ಎರಡೂವರೆ ವರ್ಷ. ನರ್ಸರಿಯಲ್ಲಿರುವಾಗಲೇ 5ನೇ ಕ್ಲಾಸ್‌ವರೆಗಿನ ಪುಸ್ತಕದ ಪಾಠಗಳನ್ನು ಕಲಿತಿದ್ದ. ಅಲ್ಲದೇ ತನ್ನನ್ನು 5ನೇ ಕ್ಲಾಸ್‌ಗೆ ಸೇರಿಸಿ ಎಂದು ಅಳುತ್ತಿದ್ದ. ಇವನ ಮಾತು, ಜಾಣ್ಮೆ ಕಂಡು ಶಿಕ್ಷಕರೂ ಅಚ್ಚರಿಗೊಂಡಿದ್ದರು.

ಕುಮಾರ  ವ್ಯಾಸನ ಜನ್ಮಸ್ಥಳ ಕೋಳಿವಾಡ, ಅಲ್ಲಿನ  ರುದ್ರಪ್ಪ ರಾಯಪ್ಪ ಗುಂಜಾಳ ಶಾಲೆಯಲ್ಲಿ ಮೂರನೇ ತರಗತಿ ವರೆಗೆ ಕಲಿತು ಅನಂತರ ಗದಗ ಜಿಲ್ಲೆಯ ಮುಳಗುಂದ ಕವಿ ನಯಸೇನನ ಊರಿನಲ್ಲಿ ಬಿ.ಸಿ. ಬಂಗಾರಿ ಸ್ಕೂಲ್‌ನಲ್ಲಿ 6ನೇ ತರಗತಿವರೆಗೆ ಅಭ್ಯಾಸ ಮಾಡಿದ್ದ. ಇಲ್ಲಿಗೆ ಬಂದ ಮೂರ್ನಾಲ್ಕು ತಿಂಗಳಲ್ಲೇ ಕಂಪ್ಯೂಟರ್‌ನಲ್ಲಿ ಟ್ಯಾಲಿವರೆಗೆ ಕಲಿತು ಎಲ್ಲರೂ ಅಚ್ಚರಿಪಡುವಂತೆ ಮಾಡಿದ್ದ.  ಕುಮಾರವ್ಯಾಸರ ಭಾರತದ ಆರಂಭದ ಶ್ಲೋಕಗಳನ್ನು ಸುಲಭವಾಗಿ, ಉಚ್ಛಾರಣೆಯ ದೋಷವಿಲ್ಲದೆ ಹೇಳುತ್ತಿದ್ದ ಕಿರಣ್‌ನಲ್ಲಿ  ವಯಸ್ಸಿಗೆ ಮೀರಿದ ಜ್ಞಾನ, ತಿಳಿವಳಿಕೆ, ಸಂಸ್ಕಾರವನ್ನು ಕಲಿತಿದ್ದ. ತನಗೆ ಕೊಟ್ಟ ಪಾಕೆಟ್‌ ಹಣದಲ್ಲಿ ಗೆಳೆಯರ ಶಾಲೆ ಫೀಸ್‌ ಕಟ್ಟುತ್ತಿದ್ದ. 10 ರೂ. ಚಾಕ್ಲೇಟ್‌ ಮನೆಯಲ್ಲಿ ತಂದಿರಿಸಿ ಮಕ್ಕಳಿಗೆ ಹಂಚುತ್ತಿದ್ದ.

ಪ್ರತೀ ರವಿವಾರ ಮನೆಯಲ್ಲಿ ಮಕ್ಕಳ ದಂಡೇ ಇರುತ್ತಿತ್ತು.  ಮನೆಯ ಮೇಲೆ ವೇದಿಕೆ ಸಿದ್ಧಪಡಿಸಿ ನಾಟಕ, ಮಿಮಿಕ್ರಿ, ನೃತ್ಯ, ಹಾಡಿನ ಮೂಲಕ ಎಲ್ಲರನ್ನು ರಂಜಿಸುತ್ತಿದ್ದ. ಮುಂದೆ ಗದಗ ಜಿಲ್ಲೆಯ ಹುಲಕೋವಿಯ ಶ್ರೀ ರಾಮಕರುಘಾನಂದ (ಎಸ್‌.ಆರ್‌.ಜೆ. ಶಾಲೆ) ಶಾಲೆಯಲ್ಲಿ  ವಿದ್ಯಾಭ್ಯಾಸ ಮಾಡುತ್ತಿದ್ದಾಗ ಶಾಲೆಯ ಕಾರ್ಯದರ್ಶಿಯಾಗಿ ಮೆಚ್ಚುಗೆ ಗಳಿಸಿದ್ದ. ಎಸೆಸೆಲ್ಸಿಯಲ್ಲಿ  ಉತ್ತಮ ಅಂಕಗಳನ್ನು ಪಡೆದು ಶಾಲೆಯಲ್ಲಿ  ಪ್ರಥಮ ಸಾನ ಗಳಿಸಿದ್ದ. ಪಠ್ಯ  ಮಾತ್ರವಲ್ಲ ಪಠ್ಯೇತರ ಚಟುವಟಿಕೆಗಳಲ್ಲಿ ಇವನು ಮುಂದು. ಆಶುಭಾಷಣ, ಸಂಗೀತ, ಕ್ವಿ಼ಝ್, ಡ್ರಾಯಿಂಗ್‌, ನಿಬಂಧ, ಡ್ಯಾನ್ಸ್ , ಮಿಮಿಕ್ರಿ, ಆಟೋಟ, ಯೋಗ, ಕುಸ್ತಿಯಲ್ಲಿ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದ.

ಹೈಸ್ಕೂಲ್‌ನಲ್ಲಿರುವಾಗ  ರಾಜ್ಯ ಹಾಗೂ ರಾಷ್ಟಮಟ್ಟದ ಕಬಡ್ಡಿ, ಕುಸ್ತಿ ಹಾಗೂ ಕ್ವಿಜ್‌ ಸ್ಪರ್ಧೆಯಲ್ಲಿ ಭಾಗವಹಿಸಿರುವ ಕೀರ್ತಿಯೂ ಇವನದ್ದಾಗಿದೆ. ಕನ್ನಡ ಶಾಲೆಯಲ್ಲೇ ಕಲಿತ ಇವನು ಪಿಯುಸಿಯಲ್ಲಿ ವಾಣಿಜ್ಯ ವಿಷಯವನ್ನು ಇಂಗ್ಲಿಷ್‌ನಲ್ಲಿ  ಆಯ್ದುಕೊಂಡು ಮೂರು ವಿಷಯಗಳಲ್ಲಿ ಒಳ್ಳೆಯ  ಅಂಕಗಳಿಸಿದ್ದು ಇವತ್ತಿಗೂ ಆ ಕಾಲೇಜಿನಲ್ಲಿ ಅವನು ಬರೆದ ಪೇಪರ್‌ ಫೋಟೋ ಕಾಪಿಯನ್ನು ಸಂಗ್ರಹಿಸಿಡಲಾಗಿದೆ. ಪಿಯುಸಿಯಲ್ಲಿರುವಾಗ ಕೂಡ ರಾಜ್ಯ ಹಾಗೂ ರಾಷ್ಟಮಟ್ಟದ ಕಬಡ್ಡಿ, ಕುಸ್ತಿ, ಈಜು, ಬ್ಯಾಡ್ಮಿಂಟನ್‌, ಯೋಗ  ಹಾಗೂ ಕ್ವಿಜ್‌ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕಗಳನ್ನು  ಗಿಟ್ಟಿಸಿಕೊಂಡಿದ್ದ.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥ ಕಾಲೇಜಿನಲ್ಲಿ ಬಿಕಾಂ ಪದವಿಗೆ ಸೇರಿದ ಕಿರಣ್‌, ಕಾಲೇಜಿನಲ್ಲಿ ಹಲವಾರು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಬಹುಮಾನಗಳಿಸಿದ್ದ. ಹಾಸ್ಟೆಲ್‌ನಲ್ಲಿದ್ದುಕೊಂಡೇ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ, ವಿವಿಧ ಕೋರ್ಸ್‌ಗಳನ್ನು ಸರ್ಟಿಫಿಕೇಟ್‌ ಗಳಿಸಿಕೊಂಡಿದ್ದಾನೆ. ರಾಜ್ಯಮಟ್ಟದ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಕೀರ್ತಿ ಇವನದ್ದು.  ಒಟ್ಟಿನಲ್ಲಿ  ಸಕಲ ಕಲಾ ವಲ್ಲಭನಾಗಿರುವ ಕಿರಣ್‌ಗೆ ಗೊತ್ತಿಲ್ಲದ ವಿದ್ಯೆಯೇ ಇಲ್ಲ. ಪದವಿ ಮಾಡುತ್ತಿರುವಾಗ ತಾನಿದ್ದ ಕಾಲೇಜ್‌ನಲ್ಲಿ  ಕುಸ್ತಿ ಪಟುಗಳನ್ನು ತಯಾರು ಮಾಡಿ ಕೋಚ್‌ ಸ್ಥಾನ ಪಡೆದು ರಾಜ್ಯದಲ್ಲೇ ಹೆಸರುಗಳಿದ್ದ. ಕಾಲೇಜಿನ ಪ್ರತಿಯೊಂದು ಚಟುವಟಿಕೆಗಳಲ್ಲಿ ಮೂಂಚೂಣಿಯಲ್ಲಿದ್ದ ಇವನು ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ತನ್ನದಾಗಿಸಿಕೊಂಡಿರುವುದು ಮಾತ್ರವಲ್ಲ ವಿವಿಧ ಸಂಘಸಂಸೆೆ§ಗಳ ಪ್ರಶಸ್ತಿಗಳಿಗೂ ಪಾತ್ರನಾಗಿದ್ದಾನೆ. ಅಲ್ಲದೇ ಅನೇಕ ಕಾಲೇಜುಗಳಿಗೆ ಭೇಟಿ ನೀಡಿ ಉದ್ಯೋಗ ಮಾರ್ಗದರ್ಶನ ತರಬೇತಿ ನೀಡಿ ಸಂಪನ್ಮೂಲ ವ್ಯಕ್ತಿಯಾಗಿಯೂ ಹೆಸರು ಗಳಿಸಿದ್ದ. ಮೂರೂ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡಿದ್ದಾನೆ. ಕ್ರೀಡೆಯಲ್ಲಿ ಮಾತ್ರವಲ್ಲ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ನಿರಂತರ ಪಾಲ್ಗೊಂಡು

ಎಸ್‌ಡಿಎಂ ಕಲಾ ವೈಭವದ ಸದಸ್ಯನಾಗಿ ಹಲವಾರು ಕಾರ್ಯಕ್ರಮಗಳನ್ನು ಕರ್ನಾಟಕದ ವಿವಿಧೆಡೆ ನೀಡಿದ್ದಾನೆ. ಅನೇಕ ಸಾಹಿತಿಗಳ ಒಡನಾಟ ಹೊಂದಿರುವ ಕಿರಣ್‌ಗೆ ಹಾಡುವುದು, ಬರೆಯುವುದೆಂದರೆ ಅತೀ ಪ್ರಿಯವಾದದ್ದು.

ಪದವಿ ಶಿಕ್ಷಣ ಅಂತಿಮ ವರ್ಷದಲ್ಲಿ  ಕ್ಯಾಂಪಸ್‌ ಸೆಲೆಕ್ಷನ್‌ನಲ್ಲಿ ಇನ್ಫೋಸಿಸ್‌,  ಎಚ್‌ಜಿಎಸ್‌ ಸೇರಿದಂತೆ ಹಲವು ಕಂಪೆನಿಗಳಿಗೆ ಆಯ್ಕೆಯಾಗಿದ್ದರೂ ಅವೆಲ್ಲವನ್ನೂ ತಿರಸ್ಕರಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮಲೇಷ್ಯಾಕೆೆR ಬಂದಿರುವ ಕಿರಣ್‌ ಇಲ್ಲಿನ ಹೆಲ್ಪ್  ವಿಶ್ವವಿದ್ಯಾನಿಲಯದಲ್ಲಿ ಎಂ.ಬಿ.ಎ. ಪದವಿ ಮಾಡುತ್ತಿದ್ದು, ಇಲ್ಲಿಯೂ ಇವನ ಸಾಧನೆಯ ಹಾದಿ ಬೆಳೆಯುತ್ತಿದೆ.

ಮಲೇಷ್ಯಾದಲ್ಲಿ ನಡೆದ ಅಲಿಬಾಬಾ ಗ್ಲೋಬಲ್‌ ಇ- ಕಾಮರ್ಸ್‌ ಟಾಲೆಂಟ್‌ (ಜಿಇಟಿ) ಚಾಲೆಂಜ್‌ 2020 ಸ್ಟಾರ್ಟ್‌ ಅಪ್‌ ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರಮಟ್ಟದ ಚಿನ್ನದ ಪದಕ ಪಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ 11ನೇ ಸ್ಥಾನ ಗಳಿಸಿದ್ದಾನೆ. ಅಲ್ಲದೇ ಇವನ ತಂಡ ಹಲವಾರು ಬಹುಮಾನಗಳನ್ನು ಗಳಿಸಿದೆ.

ಕಿರಣ್‌ ನೇತೃತ್ವದ ತಂಡ ರಚಿಸಿದ  foodxless ಎಂಬ ಐಡಿಯಾದ ಉದ್ದೇಶ ಕಡಿಮೆ ಬಳಕೆಯ ಮೂಲಕ ಆಹಾರ ಪೋಲಾಗುವುದನ್ನು ಕಡಿಮೆ ಮಾಡುವುದು. ಅವಧಿ ಮುಗಿಯುವ ದಿನಾಂಕಕ್ಕೆ ಹತ್ತಿರದಲ್ಲಿ ಇರುವ ಆಹಾರವನ್ನು  ಕಡಿಮೆ ಬೆಲೆಗೆ ವಿತರಿಸುವುದು ಮತ್ತು ಆಹಾರದ ಅಗತ್ಯವಿರುವವರಿಗೆ ಉಚಿತವಾಗಿ ನೀಡುವ ಕಾರ್ಯವನ್ನು  ಈ ಮೂಲಕ ಮಾಡಲಾಗುತ್ತಿದೆ. ಮಲೇಷ್ಯಾದಲ್ಲಿ ಅಲಿಬಾಬಾ ಗೆಟ್‌ ಚಾಲೆಂಜ್‌ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂದೆನಿಸಿಕೊಂಡಿರುವ ಕಿರಣ್‌, 2020ರಲ್ಲಿ ಮಲೇಷ್ಯನ್‌ ನ್ಯಾಶನಲ್‌ ಯಂಗ್‌ ಟ್ಯಾಲೆಂಟ್‌ನಲ್ಲಿ ಮೊದಲ 100 ಯಂಗ್‌ ಟ್ಯಾಲೆಂಟ್‌ಗಳಲ್ಲಿ ಪ್ರಶಸ್ತಿ ಗಳಿಸಿದ್ದಾನೆ.

ತನ್ನ ವಿದ್ಯಾಭ್ಯಾಸದೊಂದಿಗೆ  ಮಲೇಷ್ಯಾದಲ್ಲಿ ನೆಲೆಸಿರುವ ಕರ್ನಾಟಕ ಮಕ್ಕಳಿಗೆ ಕನ್ನಡ ಕಲಿ ಯೋಜನೆ ಮೂಲಕ ಶಿಕ್ಷಕನಾಗಿ ಕನ್ನಡ ಶಿಕ್ಷಣವನ್ನೂ ನೀಡುತ್ತಿರುವ ಕಿರಣ, KSR NEST ಎಂಬ ಯೂಟ್ಯೂಬ್‌ ಚಾನೆಲ್‌ ಮೂಲಕ ವಿದೇಶಗಳಲ್ಲಿ ಶಿಕ್ಷಣ ಪಡೆಯುವುದು, ಖರ್ಚುವೆಚ್ಚಗಳ ಕುರಿತು ಮಾಹಿತಿ ನೀಡುತ್ತಿದ್ದಾನೆ.

 

ರಘು ದೇಸಾಯಿ,  ಮಲೇಷ್ಯಾ

ಟಾಪ್ ನ್ಯೂಸ್

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್‌ ಫಿಕ್ಸ್

Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್‌ ಫಿಕ್ಸ್

BGT 2024: team India won the test in Perth

BGT 2024: ಪರ್ತ್‌ ನಲ್ಲಿ ಪಲ್ಟಿ ಹೊಡೆದ ಆಸೀಸ್:‌ ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.