ಇಂದಿರಾನಗರ ಕಾ ಗೂಂಡಾ…ರಾಹುಲ್ ದ್ರಾವಿಡ್ ಮತ್ತೊಂದು ಮುಖ!
Team Udayavani, Apr 10, 2021, 6:48 PM IST
ಬೆಂಗಳೂರು : ಸದ್ಯ ಸೋಷಿಯಲ್ ಮೀಡಿಯಾದಲ್ಲಿ ‘ಇಂದಿರಾನಗರ ಗೂಂಡಾ’ನ ಹವಾ ಜೋರಾಗಿದೆ. ಎಲ್ಲಿ ನೋಡಿದಲ್ಲಿಯೂ ಈತನದೇ ಹೆಸರು ಕೇಳಿ ಬರುತ್ತಿದೆ. ಇದೀಗ ಇಂದಿರಾನಗರದ ಗೂಂಡಾ ಜತೆ ಗುಂಡಿ ಕೂಡ ಸೇರಿಕೊಂಡಿದ್ದಾಳೆ.
ಇತ್ತೀಚೆಗೆ ನೀವು ರಾಹುಲ್ ದ್ರಾವಿಡ್ ನಟಿಸಿರುವ ಒಂದು ಜಾಹೀರಾತನ್ನು ಗಮನಿಸಿರಬಹುದು. ಕ್ರೆಡ್ ಎಂಬ ಕ್ರೆಡಿಟ್ ಕಾರ್ಡ್ ಬಿಲ್ ನಿರ್ವಹಣೆಯ ಅಪ್ಲಿಕೇಶನ್ನ ಆ್ಯಡ್ ಇದು. ನಿಜ ಜೀವನದಲ್ಲಿ ಸದಾ ಕೂಲ್ ಅಂಡ್ ಕೂಲ್ ಆಗಿರುವ ರಾಹುಲ್ ದ್ರಾವಿಡ್ ಈ ಆ್ಯಡ್ನಲ್ಲಿ ಬೇರೆಯೇ ಮುಖವನ್ನ ಪ್ರದರ್ಶಿಸುತ್ತಾರೆ.
View this post on Instagram
ಬೆಂಗಳೂರಿನ ಅತೀವ ಕಿರಿಕಿರಿಯ ಟ್ರಾಫಿಕ್ನಲ್ಲಿ ತಾಳ್ಮೆಗೆಟ್ಟು ಹುಚ್ಚಾಟಗಳನ್ನ ಆಡುವ ದೃಶ್ಯಗಳಿವೆ. ತನ್ನ ಕಾರಿನ ಬಳಿ ಇದ್ದ ಬೇರೊಂದು ಕಾರಿಗೆ ಪಾನೀಯ ಎರಚಿ ವಾರ್ನಿಂಗ್ ಕೊಡುತ್ತಾರೆ. ಬ್ಯಾಟಿಂದ ಬೇರೆ ಕಾರಿಗೆ ಚಚ್ಚುತ್ತಾರೆ. ಮನಬಂದಂತೆ ಹಾರ್ನ್ ಮಾಡುತ್ತಾರೆ. ಹೊಡೆದಾಕಿ ಬಿಡ್ತೀನಿ ಅಂತ ಬೇರೆಯವರಿಗೆ ಎಚ್ಚರಿಕೆ ಕೊಡುತ್ತಾರೆ. ಕೈಯಲ್ಲಿ ಬ್ಯಾಟ್ ಹಿಡಿದು ಕಾರಿನ ಮೇಲೆ ನಿಂತು ನಾನು ಇಂದಿರಾ ನಗರದ ಗೂಂಡಾ ಎಂದು ಅರಚುತ್ತಾರೆ. ರಾಹುಲ್ ದ್ರಾವಿಡ್ ಅವರ ಈ ಕ್ರೆಡ್ ಜಾಹೀರಾತಿಗೆ ಬೆರಗಾಗದವರೇ ಇಲ್ಲ.
ಕ್ರಿಕೆಟ್ ಗೋಡೆ ಎಂದು ಕರೆಯಿಸಿಕೊಳ್ಳುವ ರಾಹುಲ್ ದ್ರಾವಿಡ್ ಅವರು ‘ಇಂದಿರಾ ನಗರದ ಗೂಂಡಾ’ ಹೆಸರು ಸಖತ್ ಸಂಚಲನ ಮೂಡಿಸುತ್ತಿದೆ. ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಕ್ರೀಡಾ ತಾರೆಯರು ಹಾಗೂ ಚಿತ್ರತಂರದ ಸೆಲೆಬ್ರಿಟಿಗಳು ರಾಹುಲ್ ದ್ರಾವಿಡ್ ಅವರು ಈ ಹೊಸ ಅವತಾರಕ್ಕೆ ರಿಯಾಕ್ಟ್ ಮಾಡಿದ್ದಾರೆ. ಇದೀಗ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಪ್ರತಿಕ್ರಿಯಿಸಿದ್ದಾರೆ.
View this post on Instagram
ಇಂದು ತಮ್ಮ ಬಾಲ್ಯದ ಫೋಟೊವೊಂದನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ದೀಪಿಕಾ, ನಾನು ‘ಇಂದಿರಾ ನಗರದ ಗುಂಡಿ’ ಎಂದು ಕಾಮೆಂಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತನಿಖೆಗೆ ನನ್ನ ಸಹಕಾರವಿದೆ… ಈ ವಿಚಾರದಲ್ಲಿ ಪತ್ನಿ ಹೆಸರು ತರಬೇಡಿ: ರಾಜ್ ಕುಂದ್ರಾ
ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Padyatra in Delhi: ದಿಲ್ಲಿ ಮಾಜಿ ಸಿಎಂ ಕೇಜ್ರಿ ಮೇಲೆ ದ್ರವ ಎರಚಿ ವ್ಯಕ್ತಿಯ ದಾಳಿ, ಸೆರೆ
Provident Fund: ಎಟಿಎಂನಿಂದಲೂ ಭವಿಷ್ಯ ನಿಧಿ ಮೊತ್ತ ವಿಥ್‌ಡ್ರಾ ಮಾಡಲು ಅವಕಾಶ?
Champions Trophy: ಷರತ್ತಿನೊಂದಿಗೆ “ಹೈಬ್ರಿಡ್’ ಮಾದರಿಗೆ ಪಾಕ್ ಒಪ್ಪಿಗೆ
Thirupathi: ದೇಗುಲದಲ್ಲಿ ಇನ್ನು ದ್ವೇಷಪೂರಿತ ಹೇಳಿಕೆ ನೀಡುವಂತಿಲ್ಲ: ಟಿಟಿಡಿ
BYV ಬಣಕ್ಕೆ ಸೆಡ್ಡು: ದಾವಣಗೆರೆಯಲ್ಲಿ ಯತ್ನಾಳ್ ತಂಡದಿಂದಲೂ ಬೃಹತ್ ಸಮಾವೇಶ ಯೋಜನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.