ಹೀಗೊಂದು ಕನಸ ಕಂಡೆ!


Team Udayavani, Apr 11, 2021, 9:00 AM IST

ಹೀಗೊಂದು ಕನಸ ಕಂಡೆ!

ಉದಯಿಸುತ್ತಿರುವ ಸೂರ್ಯ. ಅವನ ಕಿರಣಗಳು ತಾಕಿದಂತೆ, ಮೊಗ್ಗುಗಳೆಲ್ಲ ಮುಗುಳ್ನಗುತ್ತಾ ಹೂವಾಗುತ್ತವೆ. ಪ್ರತೀ ದಿನ ನನ್ನ ಪುಟ್ಟ ಕೈದೋಟದಲ್ಲಿ ಅಡ್ಡಾಡುವುದು ನನ್ನ ಇಷ್ಟದ ಹೊತ್ತು. ದಿನವೂ ಇದೇ ಸಮಯಕ್ಕೆ ನನ್ನ ಮೂರು ವರ್ಷದ ಮುದ್ದು ಕಂದ ಎದ್ದು ಬರುತ್ತಾನೆ. ಆಗ ಅವನ ಉಲ್ಲಸಿತ ಮೊಗವನ್ನು ನೋಡೋದು ಇನ್ನೂ ಚಂದ.

ಇವತ್ತು ಪ್ರತೀ ದಿನಕ್ಕಿಂತಲೂ ಏನೋ ಬದಲಾದ ಭಾವ! ನನ್ನ ಕಂದ ಇದುವರೆಗೂ “ಅಮ್ಮ’ ಎಂದಿಲ್ಲ. ಆದರೆ ಇಂದು, ನನ್ನನ್ನು ಹುಡುಕುತ್ತಾ, “ಅಮ್ಮ’ ಎನ್ನುತ್ತಾ ಓಡೋಡಿ ಬರುತ್ತಿದ್ದಾನೆ. ಅದನ್ನು ಕೇಳುತ್ತಿದ್ದರೆ ನನಗೆ ಎಲ್ಲಿಲ್ಲದ ಖುಷಿ. ಇದು ಕನಸೋ ಅಥವಾ ನನಸೋ ತಿಳಿಯಲಿಲ್ಲ. ಇನ್ನೂ ಬೆಳಕು ಹರಿಯಬೇಕಿತ್ತು. ಇದೇ ನಿಜವಾಗಿರಲಿ ಎಂದು ಮನಸ್ಸು ಹಂಬಲಿಸಿತು. ಅಂದು ಬೆಳಗ್ಗೆ ಎಂದಿಗಿಂತ ಬೇಗ ಎಚ್ಚರವಾಯಿತು. ನನ್ನ ಕಂದನ ಬರವನ್ನೇ ಎದುರು ನೋಡುತ್ತಿದ್ದೆ. ಅವನು ಬಂದು, ಎಂದಿನಂತೆ ನಕ್ಕ, ಮಾತಾಡಲಿಲ್ಲ. ಅಮ್ಮ ಎನ್ನಲಿಲ್ಲ. ಒಂದೆಡೆ ಖುಷಿಯಾದರೂ ಮನಸ್ಸಿನಲ್ಲಿ ಕನಸು ನನಸಾಗಲಿಲ್ಲ ಎಂಬ ಭಾವ. ಅರಳಿ ನಿಂತ ಹೂವು ಬಾಡಿದ ಹಾಗೆ!

ಹೀಗೆ ತನ್ನ ಕನಸಿನ ಬಗ್ಗೆ ಹೇಳಿಕೊಂಡು, ವಾಕ್‌ ತಜ್ಞರ ಎದುರು ಕೈಚೆಲ್ಲಿ ಕೂತಿದ್ದಳು ಅವಳು.

“ನನ್ನ ಮಗನಿಗೆ ಹೇಗಾದರೂ ಮಾತು ಕಲಿಸಿ. ಅವನು ಮಾತನಾಡಬೇಕು. ಮೂರು ವರ್ಷಗಳಾದರೂ ಒಂದೂ ಮಾತನಾಡುತ್ತಿಲ್ಲ. ನನ್ನನ್ನು ಒಮ್ಮೆ ಬಾಯ್ತುಂಬಾ ಅಮ್ಮಾ ಎಂದರೆ ಸಾಕು, ಮತ್ತಿನ್ನೇನನ್ನೂ ನಿಮ್ಮಲ್ಲಿ ಕೇಳುವುದಿಲ್ಲ’ ಎಂದು ಕೈ ಮುಗಿದು ಕೋರಿದಾಗ ನನಗೆ ಮನಸ್ಸು ತೀರಾ ಭಾರವೆನ್ನಿಸಿತು.

ಅವನು ಮುಂಚೆ ಮಾತನಾಡುತ್ತಿದ್ದ. ಮಗುವಾಗಿದ್ದಾಗ ಎಲ್ಲರಂತೆ ಕೆಲವು ಶಬ್ದವನ್ನು ಮಾಡಿ, ಸುಲಭವಾದ ಪದಗಳನ್ನು ಹೇಳುತ್ತಿದ್ದನಂತೆ. ಆದರೆ ಕ್ರಮೇಣ ಇವನ ಆಟದ ಕ್ರಮದಲ್ಲಿ ಬದಲಾವಣೆಯಾಗತೊಡಗಿತು. ಮನೆಯಲ್ಲಿ ಜನರಿದ್ದರೆ ಇವನಿಗೆ  ಯಾರೂ ಬೇಡ. ತಾನೊಬ್ಬನೇ ಆಟವಾಡಬೇಕು ಎಂದು ಹಠ ಹಿಡಿಯತೊಡಗಿದ. ಬೇರೆಯವರನ್ನು ದೃಷ್ಟಿಯಿಟ್ಟು ನೋಡುವುದನ್ನೇ ಮರೆತ ಎಂದರೆ ತಪ್ಪಲ್ಲ.  ನಿಧಾನವಾಗಿ ಮಾತಾಡುತ್ತಿದ್ದ ಆ ಕೆಲವೇ ಪದಗಳನ್ನೂ ಮರೆತ. ಇವೆಲ್ಲವನ್ನೂ ಕಂಡ ವೈದ್ಯರು, “ಈ ಹುಡುಗನಿಗೆ ಆಟಿಸಂ ಇರುವ ಎಲ್ಲ ಲಕ್ಷಣಗಳಿವೆ. ಆದರೆ ಖಚಿತ ಪಡಿಸಲು ಕನಿಷ್ಠ ಮೂರು ವರ್ಷಗಳಾದರೂ ಆಗಬೇಕು’ ಎಂದಿದ್ದರಂತೆ. ಹಾಗಾಗಿ ಆತನಿಗೆ ಮೂರು ವರ್ಷವಾಗುವ ಮೊದಲು ಎಷ್ಟು ಸಾಧ್ಯವೋ ಅಷ್ಟು “ವಾಕ್‌ ಚಿಕಿತ್ಸೆ’ಯನ್ನು ಕೊಡಿಸಿ, ತನ್ನ ಕನಸನ್ನು ದಕ್ಕಿಸಿಕೊಳ್ಳಲೆಂದೇ ಅವನ ಅಮ್ಮ ವಾಕ್‌ ಚಿಕಿತ್ಸಕರ ಬಳಿಗೆ ಆಗಾಗ್ಗೆ ಬರುತ್ತಿದ್ದಳು.

ಹೀಗೆ ಆ ಅಮ್ಮ ತನ್ನ ಕೈಲಾದವೆಲ್ಲವನ್ನೂ ಮಾಡುತ್ತಿದ್ದಳು. ಕೆಲವೊಮ್ಮೆ ವಾಕ್‌ ಚಿಕಿತ್ಸೆಯಲ್ಲಿ ಸಾಂಪ್ರದಾಯಿಕ ಮಾತಿನ ವಿಧಾನಗಳಲ್ಲಿ ಮಗು ಮಾತನಾಡಲು ಕಲಿಯುತ್ತಿಲ್ಲ ಅಥವಾ ಕಲಿಯಲು ನಿಧಾನವಾಗುತ್ತಿದೆ ಎನಿಸಿದರೆ “ಎಎಸಿ’ ಎಂಬ ಸಂವಹನ ವ್ಯವಸ್ಥೆಯನ್ನು ಬಳಸುತ್ತೇವೆ. ಇದು ನಾವು ನೀವು ಬಳಸುವ ಮೊಬೈಲು ಅಥವಾ ಐಪಾಡ್‌ ಇದ್ದ ಹಾಗೆ. ಆದರೆ ಇದು ಕೇವಲ ಮಾತನಾಡಲು ಬಳಸುವ ಉಪಕರಣ. ಮೊಬೈಲಿನಲ್ಲಿ ಹೇಗೆ ಬೇರೆ ಬೇರೆ ಆ್ಯಪ್ಲಿಕೇಶನ್‌ಗಳಿವೆಯೋ ಹಾಗೆ ಇದರಲ್ಲೂ ಇದೆ. ಇತ್ತೀಚಿನ ಸಂಶೋಧನೆಯ ಪ್ರಕಾರ, ಇಂಥ ಉಪಕರಣವು ಮಾತನಾಡಲು ಕಲಿಯುತ್ತಿರುವ ಮಕ್ಕಳಿಗೆ ವಿಶೇಷವಾಗಿ ಆಟಿಸಮ್‌ ಮಕ್ಕಳಿಗೆ ತುಂಬಾ ಉಪಯುಕ್ತ. ಈ ಕಾರಣದಿಂದ ಇದರ ಬಳಕೆಯೂ ಹೆಚ್ಚುತ್ತಿದೆ.

ನಾವು ಅಸಹಾಯಕರಾದಾಗ ಒಂದು ಹುಲ್ಲುಕಡ್ಡಿ ಸಿಕ್ಕಿದರೂ ಅದನ್ನು ಏರಿಕೊಂಡು ನಮ್ಮ ಗಮ್ಯವನ್ನು ತಲುಪುವ ಎಂದೆನಿಸುವುದುಂಟು. ಯಾರೇ ಏನೇ ಸಲಹೆ ಹೇಳಿದರೂ ಅದೊಮ್ಮೆ ಮಾಡಿ ನೋಡುವ ಎಂದುಕೊಂಡು ಕ್ರಿಯಾಶೀಲವಾಗುತ್ತೇವೆ. ಈ ಅಮ್ಮಳಿಗೂ ಅದೇ ಆದದ್ದು. ತನ್ನ ಗೆಳೆಯರಲ್ಲಿ ಯಾರೋ ಒಬ್ಬರು, ತಂತ್ರಜ್ಞಾನವನ್ನು ಬಳಸಿ ಮಗುವಿಗೆ ಸಂವಹನ ಹೇಳಿಕೊಡಬಹುದು ಎಂದು ತಿಳಿಸಿದ್ದೇ ತಡ, ನನ್ನ ಬಳಿ ಬಂದು ನಿಂತಳು.

ಅಂದು ಬೆಳಗ್ಗೆ ಅವನಿಗೆ ಹೊಸ ಐಪಾಡ್‌ ಬಳಸಲು ಹೇಳಿಕೊಡುತ್ತಿದ್ದೆ. ಹುಡುಗ ಅದೆಷ್ಟು ಚುರುಕು ಎಂದರೆ, ಹೇಳಿಕೊಟ್ಟ ಹತ್ತೇ ನಿಮಿಷಕ್ಕೆ, ಕೆಲವು ಪದಗಳೆಲ್ಲಿದೆ. ಅದರ ಅರ್ಥವೇನು ಎಂದು ತಿಳಿದು ಬಿಟ್ಟ. ಸಾಮಾನ್ಯವಾಗಿ ಇದನ್ನು ಕಲಿಯಲು ಹಲವು ದಿನಗಳಾದರೂ ಬೇಕು. ನಮಗೆಲ್ಲರಿಗೂ ಹೇಳಿಕೊಡೋ ಹುಮ್ಮಸ್ಸು ದುಪ್ಪಟ್ಟಾಯಿತು. ಆಟಿಸಮ್‌ನ ತೀವ್ರತೆಯ ಮೇಲೆ ಮುಂದೆ ಈ ಮಗು ಇದರಿಂದ ಎಷ್ಟು ಮಾತನ್ನು ಕಲಿಯುತ್ತದೆ ಎನ್ನುವುದು ತಿಳಿಯಬಲ್ಲದು. ಕೆಲವರು ಕೆಲವು ವರ್ಷ ಮಾತ್ರ ಬಳಸಬೇಕು. ಆ ಬಳಿಕ ಎಲ್ಲರಂತೆ ಅವರು ಮಾತನಾಡಬಲ್ಲರು. ಇನ್ನು ಕೆಲವರಿಗೆ ಅದು ಅವರ ಬದುಕಿನ ಭಾಗವಾಗಿಯೇ ಉಳಿದು  ಬಿಡುವುದುಂಟು. ಹಾಗಾಗಿ ಹೇಳಿ ಕೊಡುವುದರಲ್ಲಿ ತಂದೆ-ತಾಯಿಯ ಪಾತ್ರ ಬಹು ದೊಡ್ಡದು. ಯಾಕೆಂದರೆ, ಈ ಸಾಧನವು ನಮ್ಮ ಭಾಷೆಯಲ್ಲಿರುವ ಪದಗಳನ್ನೆಲ್ಲ ಒಟ್ಟಿಗೆ ನಮ್ಮ ಮುಂದಿಡುತ್ತದೆ. ಅದನ್ನು ಹೇಗೆ ಬಳಸಬೇಕು, ಒಂದೊಂದು ಪದದ ಅರ್ಥವೇನು ಎಂಬುದನ್ನು ನಾವೇ ಹೇಳಿಕೊಡಬೇಕು. ಹೀಗೆ ಹೇಳಿಕೊಡುವಾಗ, ಮಗು ಇದ್ದಲ್ಲೆಲ್ಲ, ಹೋದಲ್ಲೆಲ್ಲ ಈ ಸಾಧನವನ್ನು ಕೊಂಡೊಯ್ಯಬೇಕು. ಯಾವಾಗ ಮಗುವಿಗೆ “ಇದು ನನ್ನದು, ನನ್ನ ಧ್ವನಿಯಿದು’ ಎಂದು ಅರ್ಥವಾಗುತ್ತದೋ ಅಂದು ನಾವು ಶೇ. 50 ರಷ್ಟು ಗೆದ್ದ ಹಾಗೆ.ಯಾಕೆಂದರೆ ನನ್ನದು ಅನ್ನೋ ನಂಬಿಕೆಯೇ ಬದಲಾವಣೆಯ ಮೊದಲ ಮೆಟ್ಟಿಲು, ಮಹತ್ವವಾದುದೂ ಸಹ. ಇದಾದ ಅನಂತರ ಮಗು ಪ್ರತಿಯೊಂದು ಪದವನ್ನೂ ಬಳಸಲು ಮುನ್ನುಗ್ಗುತ್ತದೆ. ಇದರೊಟ್ಟಿಗೆ ಪದಗಳ, ಭಾಷೆಯ ಪ್ರಯೋಗ ಮಾಡುತ್ತದೆ. ತನ್ನದೇ ಲೋಕದಲ್ಲಿರಬೇಕು ಎಂದು ಆಶಿಸುವ ಮಗುವಿಗೆ ಇದೊಂದು ಪ್ರಮುಖ ಹಂತ. ಈ ದಿನಕ್ಕೆಂದೇ ಮಗುವಿನ ತಂದೆ -ತಾಯಿ ಕಾಯುತ್ತಿರುತ್ತಾರೆ. ಹಾಗಾಗಿ ಅದೊಂದು ಸುವರ್ಣ ದಿನ.

ಅಬ್ಟಾ! ಮಾತನಾಡಲು ಹೇಳಿಕೊಡಲು ಏನೆಲ್ಲ ಮಾಡುತ್ತಾರೆ ಕೆಲವರು. ನಾವು ಒಮ್ಮೆ ಯೋಚಿಸೋಣ, ನಮ್ಮ ಭಾಷೆಯಲ್ಲಿರುವ ಪ್ರತಿಯೊಂದು ಅಕ್ಷರವನ್ನು, ಪದವನ್ನು ಅರ್ಥವತ್ತಾಗಿ ಬಳಸಲಿಕ್ಕೆ ನಾವು ಚಿಕ್ಕವರಿರುವಾಗಲೇ ಹೇಗೆ ಕಲಿತೆವು? ಅದೊಂದು ಅಚ್ಚರಿಯೇ ತಾನೇ?

 

 

ಸ್ಫೂರ್ತಿ

ತಸ್ಮೇನಿಯಾ

ಟಾಪ್ ನ್ಯೂಸ್

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.