ಶೀಲ ಪರೀಕ್ಷೆ: ಪತ್ನಿಯರಿಗೆ ಬಹಿಷ್ಕಾರ! ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಅನಾಗರಿಕ ಘಟನೆ
Team Udayavani, Apr 11, 2021, 7:10 AM IST
ಕೊಲ್ಹಾಪುರ: ಶೀಲ ಪರೀಕ್ಷೆಯಲ್ಲಿ ಅನು ತ್ತೀರ್ಣಳೆಂಬ ಕಾರಣಕ್ಕೆ ಮಹಿಳೆ ಹಾಗೂ ಆಕೆಯ ತಂಗಿಯನ್ನು ಅವರ ಗಂಡಂದಿರು ಮನೆಗಳಿಂದ ಆಚೆ ಹಾಕಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ. ಅಷ್ಟೇ ಅಲ್ಲದೆ, ಪತಿಯ ಮನೆಯವರ ನಿರ್ಧಾರಗಳನ್ನು ಸ್ಥಳೀಯ ಜಾತಿಯ ಮುಖಂಡರೂ ಪಂಚಾಯತ್ ಸೇರಿ ಬೆಂಬಲಿಸಿದ್ದಾರೆ. ಅಲ್ಲದೆ ಗಂಡಂದಿರು ಮೌಖೀಕವಾಗಿ ನೀಡಿರುವ ವಿಚ್ಛೇಧನಕ್ಕೆ ಪಂಚಾಯತ್ ಒಪ್ಪಿಗೆಯನ್ನೂ ಸೂಚಿಸಿದೆ!
ಏನಿದು ಪ್ರಕರಣ?: 2020ರ ನವೆಂ ಬರ್‌ನಲ್ಲಿ ಕಂಬರ್ಜಾಟ್ ಸಮುದಾ ಯಕ್ಕೆ ಸೇರಿದ ಇಬ್ಬರು ಅಕ್ಕತಂಗಿಯರು, ಅದೇ ಸಮುದಾಯದ ಅಣ್ಣತಮ್ಮಂದಿ ರನ್ನು ವಿವಾಹವಾಗಿದ್ದರು. ಮೊದಲ ರಾತ್ರಿ ಯಂದು ಆ ಸಮುದಾಯದ ಸಂಪ್ರ ದಾಯದಂತೆ ಅಕ್ಕತಂಗಿಯರ ಶೀಲ ಪರೀಕ್ಷಿಸಲಾಗಿದೆ. ಈ ಪರೀಕ್ಷೆ ಯಲ್ಲಿ ಅಕ್ಕ ವಿಫಲಳಾಗಿದ್ದಾಳೆ. ಆದರೆ ತಂಗಿ ಉತ್ತೀರ್ಣಳಾಗಿದ್ದಾಳೆ ಎಂಬುದು ಪತಿಯ ಮನೆಯವರ ತಕರಾರು. ಹಾಗಾಗಿ ಅಕ್ಕನ ಮೇಲೆ ಶೀಲ ಕಳೆದು ಕೊಂಡ ಆರೋಪ ಹೊರಿಸಲಾಗಿದ್ದು, ಅದರ ಪರಿಣಾಮವಾಗಿ, “ಶೀಲಗೆಟ್ಟವಳ ತಂಗಿ’ ಎಂಬ ಹಣೆಪಟ್ಟಿ ಕಟ್ಟಿ ತಂಗಿ ಯನ್ನೂ ಮನೆಯಿಂದ ಆಚೆ ಕಳುಹಿಸಲಾಗಿದೆ.
ಪ್ರಕರಣ ದಾಖಲು: ಘಟನೆ ತಿಳಿದ ಕೂಡಲೇ ಪೊಲೀಸರು ಹಳ್ಳಿಗೆ ಆಗಮಿಸಿ ಪ್ರಕರಣವನ್ನು ಅವಲೋಕಿಸಿದ್ದಾರೆ. ಇಂತಹ ಕುಕೃತ್ಯವೆಸಗಿದ ಸಹೋದರರು ಮತ್ತು ಅವರ ತಾಯಿಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿ ದ್ದಾರೆ. ಜಾತ್ ಪಂಚಾಯತ್ ಮುಖಂ ಡರ ವಿರುದ್ಧವೂ ದೂರು ದಾಖಲಿಸಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ
Assembly Election: ಮಹಾರಾಷ್ಟ್ರಕ್ಕೆ ಫಡ್ನವೀಸ್ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ
Maha Election: ಡಿಕೆಶಿ ಸೇರಿ ಕಾಂಗ್ರೆಸ್ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ
Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.