![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 11, 2021, 11:19 AM IST
ಕಲಬುರಗಿ: ದೇಶದಲ್ಲಿ ಒಂದೂವರೆ ತಿಂಗಳಿಗೆ ಆಗುವಷ್ಟು ಗೊಬ್ಬರ ದಾಸ್ತಾನು ಇದೆ. ಇದಕ್ಕೆ ಹೊಸ ದರ ಅನ್ವಯಿಸದೇ ಹಳೆ ದರದಲ್ಲೇ ರೈತರಿಗೆ ವಿತರಣೆ ಮಾಡಲಾಗುತ್ತದೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದರು.
ನಗರದಲ್ಲಿ ರವಿವಾರ ‘ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ದೇಶದ ಬಂದರು ಮತ್ತು ವಿವಿಧ ಕಂಪನಿಗಳ ಗೋದಾಮಿನಲ್ಲಿ ಗೊಬ್ಬರ ದಾಸ್ತಾನು ಇದೆ. ಬೆಲೆ ಏರಿಕೆ ಸಂಬಂಧ ಈಗಾಗಲೇ ಒಮ್ಮೆ ಸಭೆ ನಡೆಸಲಾಗಿದೆ. ನಾಳೆ (ಸೋಮವಾರ) ಮತ್ತೊಮ್ಮೆ ಸಭೆ ನಡೆಸಲಾಗುತ್ತದೆ. ಸಭೆ ಬಳಿಕ ರೈತರಿಗೆ ನಿರ್ದಿಷ್ಟ ಭರವಸೆ ನೀಡಲಾಗುವುದು ಎಂದು ಹೇಳಿದರು.
ನಾವು ಶೇ.90ರಷ್ಟು ಗೊಬ್ಬರವನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತೇವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಿಎಪಿ ದರದಲ್ಲೇ ಶೇ.200-220ರಷ್ಟು ಹೆಚ್ಚಳವಾಗಿದೆ. ಇದು ನಮ್ಮ ದೇಶದಲ್ಲಿ ಬೆಲೆ ಏರಿಕೆಯೂ ಕಾರಣವಾಗಿದೆ ಎಂದರು.
ರೈತರಿಗೆ ಅನುಕೂಲವಾಗುವಂತೆ ದೇಶದಲ್ಲಿ ದಾಸ್ತಾನು ಇರುವ ಗೊಬ್ಬರವನ್ನು ಹಳೆಯ ದರದಲ್ಲಿ ನೀಡಲಾಗುತ್ತದೆ. ಜತೆಗೆ ಅಮೆರಿಕಾ ಮತ್ತು ಯೂರೋಪ್ ರಾಷ್ಟ್ರಗಳಲ್ಲಿ ಈಗಾಗಲೇ ಕೃಷಿ ಚಟುವಟಿಕೆಗಳು ಮುಗಿದಿವೆ. ಕಡಿಮೆ ದರದಲ್ಲಿ ಸಿಗುವ ಗೊಬ್ಬರ ಆಮದು ಮಾಡಿಕೊಳ್ಳುವ ಬಗ್ಗೆಯೂ ಚರ್ಚಿಸಲಾಗುವುದು ಎಂದು ತಿಳಿಸಿದರು
You seem to have an Ad Blocker on.
To continue reading, please turn it off or whitelist Udayavani.