ಸಂತೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ
Team Udayavani, Apr 11, 2021, 2:29 PM IST
ನೆಲಮಂಗಲ: ನಗರದ ಸೊಂಡೆಕೊಪ್ಪ ಬೈಪಾಸ್ ಬಳಿಯ ಅಂಬೇಡ್ಕರ್ ನಗರದಸಮೀಪ ಪ್ರತಿ ವಾರ ನಡೆಯುವ ಸಂತೆಯಲ್ಲಿಸಾವಿರಾರು ಮೇಕೆಕುರಿ ಮಾರಾಟಗಾರರುಹಾಗೂ ಖರೀದಿದಾರರು ಯುಗಾದಿ ಹಬ್ಬ ನಾಲ್ಕು ದಿನ ಬಾಕಿ ಇರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಯುಗಾದಿ ಹಬ್ಬದ ಹಿನ್ನೆಲೆ ಕುರಿಮೇಕೆ ಮಾರಾಟ ಹಾಗೂ ಖರೀದಿಗಾಗಿ ಜನರುಸಂತೆಗೆ ಮುಗಿಬಿದ್ದು ಕೋವಿಡ್ ನಿಯಮಕ್ಕೆಎಳ್ಳುನೀರು ಬಿಟ್ಟಿದ್ದರು. ಮಾಹಿತಿ ತಿಳಿದ ತಹಶೀಲ್ದಾರ್ ದಾಳಿ ನಡೆಸಿ, ದಂಡ ಪ್ರಯೋಗ ಮಾಡಿದರು. ನಿಯಂತ್ರಣ ಮಾಡಲು ಬಂದ ಪೊಲೀಸರ ವಿರುದ್ಧವೇ ತಿರುಗಿ ಬಿದ್ದ ಜನರು, ಮೊದಲು ರಾಜಕಾರಣಿಗಳ ಕಾರ್ಯಕ್ರಮಗಳು, ರ್ಯಾಲಿಗಳನ್ನುನಿಲ್ಲಿಸಿ ಆನಂತರ ರೈತರ ಬರುವ ಸಂತೆಗಳನ್ನು ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊಟ್ಟೆ ಮೇಲೆ ಹೊಡೆಯಬೇಡಿ: ನಗರಸಭೆ, ಕಂದಾಯ ಅಧಿಕಾರಿಗಳು ಸಂತೆಯಲ್ಲಿ ಮಾಸ್ಕ್ಹಾಕದವರಿಗೆ ದಂಡ ಹಾಕಲು ಮುಂದಾದಕಾರಣ, ಕೆಲವು ಜನರು ಅಧಿಕಾರಿಗಳ ವಿರುದ್ಧವೇತಿರುಗಿ ಬಿದ್ದು ದಂಡ ಕಟ್ಟುವುದಿಲ್ಲ ಏನಾದರೂಮಾಡಿ, ಮೊದಲು ನೀವು ನಿಯಮ ಪಾಲಿಸಿಜನರ ಹೊಟ್ಟೆಯ ಮೇಲೆ ಹೊಡೆಯಬೇಡಿ ಎಂದು ಅಧಿಕಾರಿಗಳ ವಿರುದ್ಧವೇ ತಿರುಗಿಬಿದ್ದರು.
ಭರ್ಜರಿ ವ್ಯಾಪಾರ: ಕೋವಿಡ್ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆ ಸರಕಾರ ಕಟ್ಟುನಿಟ್ಟಿನಆದೇಶವನ್ನು ಜಾರಿಗೆ ತಂದರೂ ಜನರು ಮಾತ್ರಹಬ್ಬದ ಆಚರಣೆಗೆ ಕುರಿಮೇಕೆಗಳ ಖರೀದಿಗೆಮುಗಿಬಿದ್ದಿದ್ದು, ನಗರದ ಸಂತೆಯಲ್ಲಿ ಕುರಿಮೇಕೆ ವ್ಯಾಪಾರ ಭರ್ಜರಿಯಾಗಿ ನಡೆಯಿತು.
ತಹಶೀಲ್ದಾರ್ ದಾಳಿ : ಕುರಿಮೇಕೆ ಸಂತೆಯಲ್ಲಿ ಜನಜಂಗುಳಿ ಹೆಚ್ಛಾಗಿ ಕೊರೊನಾ ನಿಯಮ ಗಾಳಿಗೆ ತೂರಿದ ಬಗ್ಗೆ ಮಾಹಿತಿ ತಿಳಿದ ತಹಶೀಲ್ದಾರ್ ಮಂಜುನಾಥ್ ದಿಢೀರ್ ದಾಳಿ ನಡೆಸಿ ಮಾಸ್ಕ್ ಹಾಕದವರೆಗೆ ಹಾಗೂ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಿದರು.
ಜನರಿಗೆ ದಂಡ: ನಗರದ ಬಸವಣ್ಣ ದೇವರಮಠದ ರಸ್ತೆ, ಸೊಂಡೆಕೊಪ್ಪ ಬೈಪಾಸ್ ಕುರಿಮೇಕೆ ಸಂತೆಯಲ್ಲಿ ಮಾಸ್ಕ್ ಧರಿಸದ 46 ಜನರಿಗೆ 100 ರೂ., 150 ರೂ., 250 ರೂ.ನಂತೆ ದಂಡವಿಧಿಸಲಾಗಿದ್ದು, ತಹಶೀಲ್ದಾರ್ ಹಾಗೂ ನಗರಸಭೆಯ ಪೌರಾಯುಕ್ತ ನೇತೃತ್ವದಲ್ಲಿ6300 ರೂ. ದಂಡವಸೂಲಿ ಮಾಡಿ ದಂಡ ಕಟ್ಟಿ ದವರಿಗೆ ಮಾಸ್ಕ್ ವಿತರಣೆ ಮಾಡಿದರು.
ಯಥಾಸ್ಥಿತಿ ಸಂತೆ: ಅಧಿಕಾರಿಗಳ ದಂಡವಿಧಿಸಿದರೂ ಸಂತೆ ಯಥಾಸ್ಥಿತಿ ನಡೆಯಿತು, ಸಾವಿರಾರು ಜನರು ಸಾಮಾಜಿಕ ಅಂತರ ಮರೆತು ಖರೀದಿಯಲ್ಲಿ ಭಾಗವಹಿಸಿದ್ದರು. ಕಟ್ಟುನಿಟ್ಟಿನ ಆದೇಶ ಪೇಪರ್‌ಗೆ ಮಾತ್ರ ಸೀಮಿತವಾಗಿದ್ದು, ಜನರು ಪಾಲನೆ ಮಾಡಲು ಸಹ ಮುಂದಾಗುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.