ಶೌರ್ಯಕ್ಕೆ ಹೆಸರೇ ಸಂಜಯ ಕುಮಾರ್‌


Team Udayavani, Apr 11, 2021, 8:12 PM IST

Indian-Army-4-696×392

ದೇಶಕ್ಕೆ ಉತ್ತಮ ಸೇಬು ಹಣ್ಣುಗಳನ್ನು ನೀಡುವುದು ಮಾತ್ರವಲ್ಲದೆ ವೀರ ಯೋಧರನ್ನು ದೇಶಕ್ಕೆ ಕೊಡುಗೆಯಾಗಿ ನೀಡುವ ಒಂದು ರಾಜ್ಯ ಹಿಮಾಚಲ ಪ್ರದೇಶ.  4 ಪರಮ ವೀರ ಚಕ್ರ ಪುರಸ್ಕೃತರು ಇಲ್ಲಿದ್ದಾರೆ. ಅವರಲ್ಲಿ ಸಂಜಯ್‌ ಕುಮಾರ್‌ ಕೂಡ ಒಬ್ಬರು.

ಆಪರೇಷನ್‌ ವಿಜಯ್‌ ಎಂಬ ಹೆಸರು ಕೇಳಿದರೆ ಭಾರತೀಯರ ಮೈ ರೋಮಾಂಚನಗೊಳ್ಳುತ್ತದೆ. 1999 ಮೇ ತಿಂಗಳಲ್ಲಿ ಕಾರ್ಗಿಲ್‌ ಯುದ್ಧ ಆರಂಭವಾಯಿತು. ಪಾಕಿಸ್ತಾನದ ಸೈನಿಕರು ಮತ್ತು ಉಗ್ರರು ಕಾರ್ಗಿಲ್‌ ಜಿಲ್ಲೆಯಲ್ಲಿ ಲೈನ್‌ ಆಫ್ ಕಂಟ್ರೋಲ್‌ (LOC) ಮೂಲಕ ನುಸುಳಿದ್ದು ಗೊತ್ತಾದ ತತ್‌ಕ್ಷಣ ಭಾರತೀಯ ಸೇನೆ ತನ್ನ ದಾಳಿಯನ್ನು ತೀವ್ರಗೊಳಿಸಿತು. ಪಾಕಿಸ್ಥಾನದ ಈ ನಡೆ ಭಾರತಕ್ಕೆ ಸಂಪೂರ್ಣವಾಗಿ ಆಶ್ಚರ್ಯವನ್ನುಂಟು ಮಾಡಿತು. ಯುದ್ಧದಲ್ಲಿ ಭಾರತ ವಿಜಯ ಸಾಧಿಸಲು ಕಾರಣ ಸಂಜಯ್‌ ಕುಮಾರ್‌ ಕೂಡ ಒಬ್ಬರು.  ಕಾರ್ಗಿಲ್‌ ಯುದ್ಧದಲ್ಲಿ ಅವರು ತೋರಿಸಿದ ಸಾಧನೆಗೆ   ಪರಮವೀರಚಕ್ರ ಪುರಸ್ಕಾರವನ್ನು ಮುಡಿಗೇರಿಸಿಕೊಂಡಿದ್ದಾರೆ.

1999 ಜುಲೈ 4 ಭಾರತೀಯ ಇತಿಹಾಸದಲ್ಲೇ ಮಹತ್ವದ ದಿನ. ಏಕೆಂದರೆ ಭಾರತೀಯ ಪಡೆಗಳು ಅಂದು ಪಾಯಿಂಟ್‌ 4,875 ಅನ್ನು ವಶಪಡಿಸಿಕೊಳ್ಳಲು ಹೊರಟಿದ್ದವು. ಕಾರ್ಗಿಲ್‌ ಯುದ್ಧ ಪ್ರಾರಂಭವಾದಾಗ ಅಂದರೆ 1999ರಲ್ಲಿ 13 ಜೆಕ್‌ ರೈಫ‌ಲ್ಸ್‌ ಬೆಟಾಲಿಯನ್‌ಗೆ ದರಾಜ್‌ ಬಳಿಯ ಗುಮರಿ ಬೇಸ್‌ ಕ್ಯಾಂಪ್‌ ರಕ್ಷಿಸುವ ಹೊಣೆ ಸಂಜಯ್‌ ಕುಮಾರ್‌ ಅವರಿಗೆ ನೀಡಲಾಗಿತ್ತು. 70 ಡಿಗ್ರಿಯನ್ನು ಹೋಲುವ ಬೆಟ್ಟವನ್ನು ಭಾರತೀಯ ಪಡೆಗಳು ಏರಬೇಕಿತ್ತು. ಕೊರೆಯುವ ಚಳಿ ಮತ್ತು ಇತರ ಹಲವು ಅಡೆತಡೆಗಳೊಂದಿಗೆ ಅದನ್ನು ಏರಬೇಕಿತ್ತು.  ಶತ್ರುಗಳೊಡನೆ ಮುಖಾಮುಖೀಯಾಗುವ ಅರಿವಿದ್ದರೂ ಸೇನಾಪಡೆಗಳು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದವು. ಶತ್ರು ಸಂಖ್ಯೆಯ ಬಲದ ಅರಿವಿಲ್ಲದೇನೆ ಯುದ್ಧಕ್ಕೆ ನಮ್ಮ ಯೋಧರು ತಯಾರಾಗಿದ್ದರು.

ಆ ತಂಡದಲ್ಲಿದ್ದ ಸಂಜಯ್‌ ಕುಮಾರ್‌ ನಿದ್ರೆ ಮಾಡದೆ ಬರೋಬ್ಬರಿ 30 ಗಂಟೆಗಳಾಗಿತ್ತು. ಯುದ್ಧದಲ್ಲಿ ಎಡೆಬಿಡದೆ ಗುಂಡು ಹಾರಿಸುತ್ತಿದ್ದ ಸಂಜಯ್‌ ಕುಮಾರ್‌ ಎದೆಗೆ ಅದಾಗಲೇ ಐದು ಗುಂಡುಗಳು ಹೊಕ್ಕಿದ್ದವು. ಆದರೂ ಸಂಜಯ್‌ ಕುಮಾರ್‌ ಗುಂಡಿನ ದಾಳಿಯನ್ನು ನಿಲ್ಲಿಸಲಿಲ್ಲ. ನೋಡು ನೋಡುತ್ತಿದ್ದಂತೆ ಶತ್ರುಗಳ ಬಂಕರ್‌ ಸ್ಫೋಟಗೊಂಡು  ಅದರಲ್ಲಿದ್ದ ಪಾಕ್‌ ಸೈನಿಕರು ಹತರಾಗಿದ್ದರು. ಕೊನೆಗೆ ಅಧಿಕಾರಿಗಳಿಂದ ಶತ್ರು ಸೈನಿಕರು ಉಳಿದಿಲ್ಲ ಎಂದು ಮನವರಿಕೆ ಆಗುವವರೆಗೆ ಗುಂಡು ಹಾರಿಸುತ್ತಲೇ ಇದ್ದರು.

ಸಂಜಯ್‌ ಕುಮಾರ್‌ ಅವರು ಮುಷ್ಕಿ ಕಣಿವೆಯ 4,875 ಮೀಟರ್‌ ಎತ್ತರದ ಬೆಟ್ಟವನ್ನು ವಶಕ್ಕೆ ತೆಗೆದುಕೊಳ್ಳುವ, ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಸ್ವಯಂ ಪ್ರೇರಿತರಾಗಿ ತೆಗೆದುಕೊಂಡಿದ್ದರು. ದಿಢೀರನೆ ಎದುರಾದ ದಾಳಿಯನ್ನು ಎದುರಿಸಿದ ಸಂಜಯ್, ತಮ್ಮ ರಕ್ಷಣೆಯನ್ನು ಲೆಕ್ಕಿಸದೆ ವೈರಿಗಳ ಮೇಲೆ ನೇರಾನೇರ ಯುದ್ಧಕ್ಕಿಳಿದರು. ಮೂವರು ಸೈನಿಕರನ್ನು ಹತ್ಯೆ ಮಾಡುವ ವೇಳೆ ತಾವು ಗಾಯಗೊಂಡರು. ಗಾಯ ಲೆಕ್ಕಿಸದೆ ಮುಂದುವರಿದು ಮತ್ತೂಂದು ಸುತ್ತು ದಾಳಿ ನಡೆಸಿದಾಗ ವೈರಿಪಡೆಯ ಸೈನಿಕನ ಮೆಷಿನ್‌ ಗನ್‌ ಕೈ ಜಾರಿ ಬಿದ್ದು,ಆತ ಓಡತೊಡಗಿದ. ಗನ್‌ ಕೈಗೆ  ತೆಗೆದುಕೊಂಡ ಸಂಜಯ್‌ ಕುಮಾರ್‌  ಸೈನಿಕನಿಗೆ ಗುಂಡುಹಾರಿಸಿದರು.

ಗಾಯಗೊಂಡಿದ್ದರೂ  ಕಣದಿಂದ ಹಿಂದೆ ಸರಿಯಲು ನಿರಾಕರಿಸಿದ ಅವರ ಶೌರ್ಯ ಇತರರನ್ನು ಹುರಿದುಂಬಿಸಿತು. ಅದಕ್ಕಾಗಿ ಭಾರತ ಸರಕಾರ ಅವರಿಗೆ ಭಾರತದ ಅತ್ಯುನ್ನತ ಪರಮವೀರಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ರೈಫ‌ಲ್ಸ್‌  ಮ್ಯಾನ್‌ ಸಂಜಯ್‌ ಕುಮಾರ್‌ ಹಿಮಾಚಲ ಪ್ರದೇಶದ ಬಿಲಾಸ್ಪುರ್‌ ಜಿಲ್ಲೆಯ ಬೈಕಣ ಗ್ರಾಮದಲ್ಲಿ ಜನಿಸಿದರು. ಸಂಜಯ್‌ ಅವರ ಚಿಕ್ಕಪ್ಪ ಕೂಡ ಭಾರತೀಯ ಸೇನೆಯಲ್ಲಿದ್ದು, 1965 ಇಂಡೋ- ಚೀನಾ ಯುದ್ಧದಲ್ಲಿ ಭಾಗವಹಿಸಿದ್ದರು. 1996 ರಲ್ಲಿ ಎಸೆಸೆಲ್ಸಿ ಪರೀಕ್ಷೆ ಪಾಸಾದ ಸಂಜಯ್‌ ಕುಮಾರ್‌ ಮುಂದೆ ಸೈನ್ಯ ಸೇರಿದರು. ಸೈನ್ಯಕ್ಕೆ ಸೇರುವ ಮೊದಲು ಅವರು ನವದೆಹಲಿಯಲ್ಲಿ ಟ್ಯಾಕ್ಸಿ ಡ್ರೈವರ್‌  ಆಗಿ ಕೆಲಸ ಮಾಡುತ್ತಿದ್ದರು. ಆಗ ಅವರಿಗೆ ಕೇವಲ 23 ವರ್ಷ. ಸೈನ್ಯ   ಸೇರಿದ 13 ಜೆಕ್‌ ರೆಪೈಲ್ಸ…ನಲ್ಲಿ ಸಿಪಾಯಿಯಾಗಿ ನಿಯುಕ್ತಿಗೊಂಡರು.

ಪ್ರಸ್ತುತ ಅವರು ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ  ಶಸ್ತ್ರಾಸ್ತ್ರ ತರಬೇತಿ ಭೋದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ವಿದ್ಯಾಧರ ಶಾನು ಮಧುಕರ, ಶ್ರೀ ಮಾರಿಕಾಂಬಾ ಪ.ಪೂ. ಕಾಲೇಜು, ಶಿರಸಿ

ಟಾಪ್ ನ್ಯೂಸ್

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

UV Fusion: ಜೀವಂತಿಕೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

18-uv-fusion

UV Fusion: ನಿಸ್ವಾರ್ಥ ಜೀವ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.