ಕಾರ್ಕಳ: ಪ್ರತಿ ತಿಂಗಳು ಮಳೆ, ಕೃಷಿ ನಷ್ಟ ಭೀತಿ
ಸರ್ವ ಋತುಗಳಲ್ಲೂ ತಂಪೆರೆದ ಮಳೆ!
Team Udayavani, Apr 12, 2021, 2:00 AM IST
ಕಾರ್ಕಳ: ಆರು ತಿಂಗಳು ಮಳೆ, ಮೂರು ತಿಂಗಳು ಬಿಸಿಲು ಎಂಬುದು ಅನಾದಿ ಕಾಲದ ಲೆಕ್ಕಾಚಾರ. ಈಗ ಎಲ್ಲ ಕಾಲ ಮಳೆಗಾಲ ಎನ್ನುವಂತಾಗಿದೆ. ಕಾರ್ಕಳದ ಮಟ್ಟಿಗಂತೂ ಇದು ಸಾಮಾನ್ಯವಾಗಿದ್ದು ಹವಾಮಾನ ವೈಪರೀತ್ಯ ಪರಿಣಾಮ ಬೀರುತ್ತಿರುವುದು ಕಾಣುತ್ತಿದೆ.
ಪಶ್ಚಿಮ ಘಟ್ಟದಂಚಿನ ಕಾರ್ಕಳ ತಾ| ಹೆಚ್ಚು ಮಳೆಯಾಗುವ ಪ್ರದೇಶ. ಮಳೆಗಾಲದ ಅನಂತರವೂ ಈ ಭಾಗದಲ್ಲಿ ನಿರಂತರ ಅಕಾಲಿಕ ಮಳೆಯಾಗಿದೆ. ಜೂನ್‌ನಿಂದ ಇಲ್ಲಿ ತನಕ ಪ್ರತಿ ತಿಂಗಳು ಮಳೆಯಾಗಿದೆ. ತಾ|ನಲ್ಲಿರುವ ಮಳೆ ಮಾಪನ ಕೇಂದ್ರಗಳ ಅಂಕಿ ಅಂಶಗಳೇ ಈ ಬಗ್ಗೆ ಹೇಳುತ್ತಿವೆ.
ಮಳೆ ವಿವರ
2021ರ ಜನವರಿಯಲ್ಲಿ (ಮಿ.ಮೀ.ಗಳಲ್ಲಿ) ಕಾರ್ಕಳ 88.6, ಇರ್ವತ್ತೂರು 124.8, ಅಜೆಕಾರು 92.8, ಸಾಣೂರು 146.2, ಕೆದಿಂಜೆ 0, ಮುಳಿಕಾರು, 185.8, ಕೆರ್ವಾಶೆ 119.8 ಮಳೆಯಾಗಿದೆ.
2021ರ ಫೆಬ್ರವರಿಯಲ್ಲಿ (ಮಿ.ಮೀ. ಗಳಲ್ಲಿ) ಕಾರ್ಕಳ ಇರ್ವತ್ತೂರು 8.6, ಅಜೆಕಾರು 2.6 ಸಾಣೂರು 7.0 ಕೆದಿಂಜೆ, 2.0,ಮುಳಿಕಾರು,48.0, ಕೆರ್ವಾಶೆ 11.8 ಮಿ.ಮೀ ಮಳೆಯಾಗಿದೆ.
2021ರ ಮಾರ್ಚ್ ತಿಂಗಳಲ್ಲಿ ಕಾರ್ಕಳ 28.6, ಇರ್ವತ್ತೂರು 24.6, ಅಜೆಕಾರು 5.4, ಸಾಣೂರು 6.2, ಕೆದಿಂಜೆ 0, ಮುಳಿಕಾರು 42.4, ಕೆರ್ವಾಶೆ 19.0 ಮಿ.ಮೀ. ಮಳೆಯಾಗಿದೆ.
ಕೃಷಿ ಕ್ಷೇತ್ರದ ಮೇಲೆ ಪರಿಣಾಮ
ಹವಾಮಾನ ವೈಪರೀತ್ಯ, ವಾಯುಭಾರ ಕುಸಿತದ ಕಾರಣ ವಾತಾವರಣದಲ್ಲಿ ಬದಲಾವಣೆ ಆಗಿ ಅಕಾಲಿಕ ಮಳೆಗೆ ಕಾರಣವಾಗಿದೆ.
ಋತು ಬದಲಾವಣೆ ಕೃಷಿಯ ಮೇಲೆ ಒಂದಷ್ಟು ನಷ್ಟವನ್ನು ತಂದೊಡ್ಡಲಿದೆ. ನಾನಾ ಪರಿಣಾಮಗಳು ರೈತರ ಆರ್ಥಿಕ ಸ್ಥಿತಿಯ ಮೇಲೆ ಭಾರೀ ತೊಂದರೆ ಉಂಟು ಮಾಡುವ ಸಾಧ್ಯತೆಗಳೇ ಹೆಚ್ಚು. 2021 ರೈತರಿಗೆ ಫಲಪ್ರದ ವರ್ಷವಾಗುವುದಿಲ್ಲವೋ ಎನ್ನುವ ಆತಂಕ ರೈತರನ್ನು ಕಾಡಲಾರಂಭಿಸಿದೆ.
ಕೆದಿಂಜೆಯಲ್ಲಿ ಕಡಿಮೆ ಮಳೆ
ಯುಗಾದಿ ಅನಂತರದ ಎಪ್ರಿಲ್ ತಿಂಗಳಲ್ಲಿ ಸಾಮಾನ್ಯವಾಗಿ ಮಳೆಯಾಗುವುದು ಇಲ್ಲಿ ವಾಡಿಕೆ. ಆದರೆ ಕಳೆದ ಮೇ, ಜೂನ್ ತಿಂಗಳಿನಿಂದ ಆರಂಭಗೊಂಡ ಮಳೆ ಮುಂಗಾರು ಮುಗಿದ ಬಳಿಕ ಈ ವರೆಗೂ ಈ ಭಾಗದಲ್ಲಿ ಮುಂದುವರಿದಿದೆ.
ಕಾರ್ಕಳ, ಇರ್ವತ್ತೂರು, ಅಜೆಕಾರು, ಸಾಣೂರು, ಕೆದಿಂಜೆ, ಮುಳಿಕಾರು (ಈದು) ಕೆರ್ವಾಶೆ ಮಳೆ ಮಾಪನ ಕೇಂದ್ರಗಳಿವೆ.
ಈ ಮಳೆ ಮಾಪನ ಕೇಂದ್ರಗಳಲ್ಲಿ ಮಳೆ ಪ್ರಮಾಣವನ್ನು ದಾಖಲಿಸಲಾಗುತ್ತದೆ. ಈ ಭಾಗಗಳಲ್ಲಿ ಕೆದಿಂಜೆಯಲ್ಲಿ ಕಡಿಮೆ ಸುರಿದಿದ್ದು, ಉಳಿದ ಮಾಪನ ಕೇಂದ್ರಗಳಲ್ಲಿ ಮಳೆ ಸುರಿದಿರುವುದು ದಾಖಲಾಗಿದೆ.
– ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
MUST WATCH
ಹೊಸ ಸೇರ್ಪಡೆ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.