ಪರಲೋಕದ ಮುಕ್ತಿದಾತರ ಇಹಲೋಕದ ಬವಣೆ : ರುದ್ರಭೂಮಿ ನೌಕರರಿಗೆ 10 ತಿಂಗಳಿಂದ ವೇತನವಿಲ್ಲ

ನಗರದ ಸ್ಮಶಾನಗಳಲ್ಲೇ 300 ಕುಟುಂಬ ವಾಸ

Team Udayavani, Apr 12, 2021, 11:09 AM IST

Untitled-1

ವೇತನ ನೀಡಲು ಆಗ್ರಹಿಸಿ ರುದ್ರಭೂಮಿ ನೌಕರರು ಗುಂಡಿಯಲ್ಲಿ ಮಲಗಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು.

ಬೆಂಗಳೂರು: ಸತ್ತವರಿಗೆ “ಪರಲೋಕದ ಮುಕ್ತಿಯ ಹಾದಿ’ ತೋರಿಸುವ ರುದ್ರಭೂಮಿ ನೌಕರರ”ಇಹಲೋಕದ ಬವಣೆಗೆ’ ಕೊನೆ ಇಲ್ಲದಂತಾಗಿದೆ.ಮಾಡಿದ ಕೆಲಸಕ್ಕೆ ತಿಂಗಳಿಗೆ ಸರಿಯಾಗಿ ಸಂಬಳಸಿಗಲ್ಲ, ಉದ್ಯೋಗ ಭದ್ರತೆ ಇಲ್ಲ, ಶೋಷಣೆ ತಪ್ಪಿಲ್ಲ,ಇವರ ಸಮಸ್ಯೆ ಹಾಗೂ ಬೇಡಿಕೆಗೆ ಬಿಬಿಎಂಪಿ ಕಿವಿಗೊಡುತ್ತಿಲ್ಲ.

ಬಿಬಿಎಂಪಿ ವ್ಯಾಪ್ತಿಯ ಸ್ಮಶಾನ, ರುದ್ರಭೂಮಿ,ಚಿತಾಗಾರಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆಕಳೆದ 8-10 ತಿಂಗಳಿಂದ ವೇತನ ಸಿಕ್ಕಿಲ್ಲ. ಈ ಬಗ್ಗೆಪ್ರತಿಭಟನೆ ಮಾಡಿ ಅಧಿಕಾರಿಗಳ ಗಮನಕ್ಕೆ ತಂದರೂ ಪರಿಹಾರ ಸಿಕ್ಕಿಲ್ಲ. ಪರಿಸ್ಥಿತಿ ಹೀಗೆ ಇದ್ದರೆ “ಮುಷ್ಕರ’ಅಥವಾ “ಕಾರ್ಯಸ್ಥಗಿತ’ ಅನಿವಾರ್ಯವಾಗಲಿದೆಎಂದು ಹೇಳುತ್ತಿದ್ದಾರೆ ರುದ್ರಭೂಮಿ ನೌಕರರು.

ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ 50 ಸ್ಮಶಾನಗಳು ಮತ್ತು 12 ವಿದ್ಯುತ್‌ ಚಿತಾಗಾರಗಳಿವೆ. ಇದರಲ್ಲಿಸ್ಮಶಾನದ ವಿಸ್ತೀರ್ಣಕ್ಕೆ ತಕ್ಕಂತೆ 4 ರಿಂದ 8ಕುಟುಂಬಗಳಂತೆ ಒಟ್ಟು 300 ಕುಟುಂಬಗಳು ಅಲ್ಲೆ ನೆಲಸಿ ಶವಗಳ ಅಂತ್ಯಕ್ರಿಯೆ ಕಾರ್ಯ ದಲ್ಲಿ ತೊಡಗಿಸಿಕೊಂಡಿದ್ದಾರೆ. “ತಾತ್ಕಾಲಿಕ ನೇಮಕಾತಿ’ ಆಧಾರದಲ್ಲಿ 2018ರಲ್ಲಿ ಒಬ್ಬರುದ್ರಭೂಮಿ ನೌಕರನಿಗೆ ಮಾಸಿಕ 10 ಸಾವಿರ ರೂ.ವೇತನ ನಿಗದಿ ಮಾಡಲಾಯಿತು. ಆದರೆ, ನಿಯಮಿತವಾಗಿ ಅದು ಸಿಗುತ್ತಿಲ್ಲ.

ಕಳೆದ ವರ್ಷ ಮಾರ್ಚ್‌ನಿಂದ ಬಹಳಷ್ಟು ನೌಕರರಿಗೆ ವೇತನ ಸಿಕ್ಕಿಲ್ಲ. ಸಾಕಷ್ಟು ಗಲಾಟೆ ಮಾಡಿದಾಗ ಕೆಲತಿಂಗಳ ವೇತನ ಕೊಟ್ಟಿದ್ದಾರೆ. ಈಗ ಕಳೆದ 8ರಿಂದ 10ತಿಂಗಳಿಂದ ವೇತನ ಸಿಕ್ಕಿಲ್ಲ. ಈ ಬಗ್ಗೆ ಮಾ.23ರಂದುಬಿಬಿಎಂಪಿ ಕೇಂದ್ರ ಕಚೇರಿ ಎದುರು ಪ್ರತಿಭಟನೆನಡೆಸಿದಾಗ ಬಿಬಿಎಂಪಿ ವಿಶೇಷ ಆಯುಕ್ತರು ವೇತನಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು. ಆದರೆ,ನಿಖರ ಭರವಸೆ ಸಿಕ್ಕಿಲ್ಲ. ವೇತನ ಇಲ್ಲದಿದ್ದರೆ ಜೀವನನಿರ್ವಹಣೆ ಕಷ್ಟವಾಗಲಿದೆ ಎನ್ನುತ್ತಾರೆ ರುದ್ರಭೂಮಿ ಕಾರ್ಮಿಕರು.

ಕಾರ್ಯಸ್ಥಗಿತ ಅನಿವಾರ್ಯ: ನರಸಿಂಹಮೂರ್ತಿ :

ರುದ್ರಭೂಮಿ ನೌಕರರ ವೇತನ ಸೇರಿದಂತೆ ಇತರೆ ಬೇಡಿಕೆಗಳಿಗೆ ಆಗ್ರಹಿಸಿ ನಿರಂತರವಾಗಿ ಹೋರಾಟ ನಡೆದಿದೆ. ಈಗ ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾವುಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಹೀಗಾಗಿ, ಹೆಚ್ಚೆಚ್ಚು ಶವಸಂಸ್ಕಾರಗಳನ್ನು ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೋವಿಡ್‌ ಸೋಂಕಿತ ಶವಗಳ ಸಂಸ್ಕಾರ ಮಾಡುವಾಗ ಹೆಚ್ಚು ಅಪಾಯಕ್ಕೂ ತುತ್ತಾಗಬೇಕಾಗುತ್ತದೆ. ಶವಸಂಸ್ಕಾರ ಮಾಡುವವರು ಕೊರೊನಾ ವಾರಿಯರ್ಸ್ ಗಳಾಗಿ ಕೆಲಸ ಮಾಡಿದ್ದಾರೆ. ಆದರೆ, ಅವರಿಗೆ ಲಸಿಕೆ ಸಿಕ್ಕಿಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ಶವಸಂಸ್ಕಾರ ಕಾರ್ಯವನ್ನು ಸ್ಥಗಿತಗೊಳಿಸುವುದು ರುದ್ರಭೂಮಿ ನೌಕರರಿಗೆ ಅನಿವಾರ್ಯವಾಗಬಹುದು ಎಂದು ರುದ್ರಭೂಮಿ ನೌಕರರ ಬೇಡಿಕೆಗಳ ಹೋರಾಟದ ಮುಂದಾಳತ್ವ ವಹಿಸಿರುವ ನರಸಿಂಹಮೂರ್ತಿ ಹೇಳುತ್ತಾರೆ.

ಕಾಯಿಲೆ ಉಚಿತ; ಬಿಡಿಗಾಸೇ ಗತಿ :

ಸ್ಮಶಾನಗಳನ್ನು ಕಾವಲು ಕಾಯುವುದರ ಜೊತೆಗೆ ಗುಂಡಿ ತೋಡುವ ಮತ್ತು ಶವ ಸಂಸ್ಕಾರ ಬೇಕಾದ ಇತರವ್ಯವಸ್ಥೆಗಳನ್ನು ಮಾಡುವ ಕಾರ್ಯದಲ್ಲಿ ರುದ್ರಭೂಮಿನೌಕರರು ತೊಡಗಿಸಿಕೊಳ್ಳುತ್ತಾರೆ. ಒಂದು ಸ್ಮಶಾನದಲ್ಲಿ ದಿನಕ್ಕೆಕನಿಷ್ಠ 5ರಿಂದ 10 ಶವ ಸಂಸ್ಕಾರ ನಡೆಸಬೇಕಾಗುತ್ತದೆ.ಶವಗಳ ಸ್ಥಿತಿ ಹೇಗೇ ಇದ್ದರೂ ಅಂತ್ಯ ಸಂಸ್ಕಾರ ಮಾಡಬೇಕಾಗುತ್ತದೆ. ಕೆಲವೊಮ್ಮೆ ಕೊಳೆತ ಶವಗಳು, ಅನಾಥ ಶವಗಳು, ಅಪಘಾತದಲ್ಲಿ ನಜ್ಜುಗುಜ್ಜಾದ ಶವಗಳಿಗೆ ಅಂತ್ಯ ಸಂಸ್ಕಾರ ಮಾಡಬೇಕಾಗುತ್ತದೆ. ಅನೇಕ ಸಂದರ್ಭದಲ್ಲಿ ಮೃತರ ಕುಟುಂಬಸ್ಥರು ಮುಂದೆ ಬರುವುದಿಲ್ಲ. ನಾವೇ ಎಲ್ಲವನ್ನೂ ಮಾಡಬೇಕಾಗುತ್ತದೆ. ಅವರು ಕುಟುಂಬಸ್ಥರುನೀಡುವ ಧವಸಧಾನ್ಯ, ಬಿಡಿಗಾಸು ಅವಲಂಬಿಸಬೇಕಾಗುತ್ತದೆ. ಯಾವುದೇ ಸುರಕ್ಷತೆ, ರಕ್ಷಣೆ ಇರುವುದಿಲ್ಲ. ಹಲವುಬಗೆಯ ಕಾಯಿಲೆಗೆ ತುತ್ತಾಗಬೇಕಾಗುತ್ತದೆ. ನಮಗೆಹೆಲ್ತ್‌ಕಾರ್ಡ್‌ ಕೊಡಿ, ಮಕ್ಕಳಿಗೆ ಶಿಕ್ಷಣ ಸೌಲಭ್ಯ ಒದಗಿಸಿಎಂದು ನಮ್ಮ ಬೇಡಿಕೆಯಾಗಿದೆ ಎಂದು ಹರಿಶ್ಚಂದ್ರಘಾಟ್‌ ರುದ್ರಭೂಮಿ ನೌಕರರೊಬ್ಬರು ಹೇಳುತ್ತಾರೆ.

ರುದ್ರಭೂಮಿ ನೌಕರರ ವೇತನ, ಉದ್ಯೋಗ ಭದ್ರತೆ, ಕೆಲಸದ ಸ್ಥಳದಲ್ಲಿ ರಕ್ಷಣೆ ಮತ್ತು ಸುರಕ್ಷತೆ, ಮಕ್ಕಳ ಶಿಕ್ಷಣ ಇತ್ಯಾದಿ ಬೇಡಿಕೆ ಕುರಿತು ಬಿಬಿಎಂಪಿ ಆಯುಕ್ತರ ಗಮನಕ್ಕೆತರಲಾಗಿದೆ. ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಯಾವುದೇ ಸ್ಪಷ್ಟ ಭರವಸೆ ಕೊಡದೆ ಕಾಲ ಮುಂದೂಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಲಾಗುವುದು.  – ಸುರೇಶ, ರುದ್ರಭೂಮಿ ನೌಕರರ ಸಂಘದ ಮುಖಂಡ

 

ರಫೀಕ್‌ ಅಹ್ಮದ್‌

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Organ Donation: ಸಾವಿನ ನಂತರವೂ ನೆರವಾದ ಜೀವ

Organ Donation: ಸಾವಿನ ನಂತರವೂ ನೆರವಾದ ಜೀವ

15-bng

Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್‌ ಆಯುಕ್ತರಿಗೆ ದೂರು

14-bng

Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು

9-munirathna

Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್‌ ಕೇಸ್‌: ಪಿಐ ಸೆರೆ

8-bng

Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.