ಕಣಗಾಲ್-ಹೊನ್ನೆಕೊಪ್ಪಲು ರಸ್ತೆಯಲ್ಲಿ ಸಂಚರಿಸಲಾಗದ ದುಸ್ಥಿತಿ
Team Udayavani, Apr 12, 2021, 12:31 PM IST
ಹುಣಸೂರು: ತಾಲೂಕಿನ ಗಡಿಯಂಚಿನ ಕರ್ಣಕುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಣಗಾಲ್-ಹೊನ್ನೆಕೊಪ್ಪಲಿನ ಪ್ರಮುಖ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು, ವಾಹನಸವಾರರು ಸಂಚರಿಸಲು ನಿತ್ಯ ಹಿಂಸೆ ಅನುಭವಿಸುತ್ತಿದ್ದಾರೆ.
ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಡುವ ಈ ರಸ್ತೆಯಲ್ಲಿ ವಾಹನಗಳಿರಲಿ,ಸೈಕಲ್ ಸವಾರರು ಓಡಾಡಲಾಗದ ಸ್ಥಿತಿ ಇದೆ. ಮಳೆಗಾಲದಲ್ಲಿ ರೈತರು ತಮ್ಮ ಜಮೀನಿಗೆ ತೆರಳಲುಗುಂಡಿಗಳ ಮೂಲಕವೇ ಹರ ಸಾಹಸಪಡಬೇಕಿದೆ.ಕಣಗಾಲಿನಿಂದ ಬೋರೆ ಹೊಸಹಳ್ಳಿವರೆಗೆ 3ಕಿ.ಮೀ.ಇದ್ದು. 2 ಕಿ.ಮೀ. ರಸ್ತೆ ಡಾಂಬರೀಕರಣ ವಾಗಿದ್ದು, ಉಳಿದ ಒಂದು ಕಿ.ಮೀ.ರಸ್ತೆ ಮಾತ್ರಮಣ್ಣಿನಿಂದ ಕೂಡಿದೆ.
ಪ್ರಮುಖ ಸಂಪರ್ಕ ರಸ್ತೆ: ತಾಲೂಕಿನ ಚಿಲ್ಕುಂದಹಾಗೂ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ತಂಬಾಕು ಹರಾಜು ಮಾರುಕಟ್ಟೆಗೆ ಹನಗೋಡುಹೋಬಳಿಯ ನೇರಳಕುಪ್ಪೆ, ಹನಗೋಡು, ಕಡೇಮನುಗನಹಳ್ಳಿ, ಕರ್ಣಕುಪ್ಪೆ ಗ್ರಾಪಂ ವ್ಯಾಪ್ತಿಯ 50ಕ್ಕೂ ಹೆಚ್ಚು ಗ್ರಾಮಗಳ ಹೊಗೆಸೊಪ್ಪು ಬೆಳೆಗಾರರು ಈ ರಸ್ತೆ ಮೂಲಕವೇ ತೆರಳಬೇಕು.ಅಲ್ಲದೇ ಕಣಗಾಲಿನಿಂದ ಪಿರಿಯಾಪಟ್ಟಣ ತಾಲೂಕಿನ ಬೋರೆಹೊಸಳ್ಳಿ ಮೂಲಕ ಹುಣಸೂರು- ಮಡಿಕೇರಿ ರಾಷ್ಟ್ರೀಯ ಹೆದ್ದಾರಿಗೆ ಚಿಲ್ಕುಂದ ಬಳಿ ಸೇರುವ ಎಲ್ಲರಿಗೂ ಸಂಪರ್ಕದ ಕೊಂಡಿಯಾಗಿರುವ ಈ ರಸ್ತೆ ಸಂಪೂರ್ಣ ಹದಗಟ್ಟಿದೆ.
ಸೇತುವೆಗೆ ತಡೆಗೋಡೆ ನಿರ್ಮಿಸಿ, ಅಪಾಯ ತಪ್ಪಿಸಿ :
ಕಣಗಾಲಿನ ರಸ್ತೆಯ ಎಸ್‌ಎನ್‌ಜಿ ವಿದ್ಯಾಸಂಸ್ಥೆ ಸಮೀಪದ ವದ್ಲಿಗೆ 40 ವರ್ಷಗಳ ಹಿಂದೆ ದೇವರಾಜ ಅರಸು ಕಾಲದಲ್ಲಿ ಕಂಪ್ಲಾಪುರದಿಂದ ಹರಿದುಬರುವ ವದ್ಲಿಗೆ ಸೇತುವೆ ನಿರ್ಮಿಸಲಾಗಿದೆ. ಆದರೆ,ಇದುವರೆಗೂ ತಡೆಗೋಡೆ ನಿರ್ಮಿಸಿಲ್ಲ. ಈಸೇತುವೆ ಮೇಲೆ ಬಸ್‌ಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮುಖ್ಯವಾಗಿ ತಂಬಾಕು ಬೇಲ್ ಸಾಗಿಸುವ ಟ್ರ್ಯಾಕ್ಟರ್, ಗೂಡ್ಸ್ ವಾಹನಗಳು ಓಡಾಡಬೇಕಿದೆ. ಈಗಾಗಲೇ ಎತ್ತಿನಗಾಡಿನಿಯಂತ್ರಣ ಕಳೆದುಕೊಂಡು ಸೇತುವೆಯಿಂದ ಬಿದ್ದಿರುವ ನಿದರ್ಶನಗಳಿವೆ. ಆಗಾಗ್ಗೆಜಾನುವಾರುಗಳು ಬಿದ್ದು ಸಾವನ್ನಪ್ಪಿವೆ. ಸೇತುವೆಗೆತಡೆಗೋಡೆ ನಿರ್ಮಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಗ್ರಾಮಸ್ಥರ ಆಗ್ರಹಿಸಿದ್ದಾರೆ.
ಶಾಲಾ ಕೊಠಡಿ ಕೊರತೆ :
ತಾಲೂಕಿನ ಗಡಿಯಂಚಿನ ಕಣಗಾಲಿನಲ್ಲಿ 1-8 ವರೆಗಿನ ಸರ್ಕಾರಿ ಹಿರಿಯ ಪ್ರಾಥಮಿಕಶಾಲೆಯಲ್ಲಿ 178 ಮಕ್ಕಳು ಶಿಕ್ಷಣಪಡೆಯುತ್ತಿದ್ದಾರೆ. ಇಲ್ಲಿ ಕೇವಲ ಆರುಕೊಠಡಿಗಳಿದ್ದು. ಒಂದು ಮುಖ್ಯಶಿಕ್ಷಕರ ಕೊಠಡಿ, ಉಳಿದ 5 ಕೊಠಡಿಗಳಲ್ಲಿ ಮಾತ್ರತರಗತಿ ನಡೆಯುತ್ತಿದೆ. ಏಳು ಶಿಕ್ಷಕರಿದ್ದು,ಪಾಳಿ ಮೇಲೆ ಪಾಠ ಮಾಡ ಬೇಕಾದ ಪರಿಸ್ಥಿತಿ ಇದೆ. ಕೊಠಡಿಗಳ ನಿರ್ಮಾಣ ಅಗತ್ಯವಾಗಿದೆ.
ಕಣಗಾಲು- ಹೊನ್ನೇಕೊಪ್ಪಲುವರೆಗಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನಗಳು ಓಡಾಡಲಾಗದ ಪರಿಸ್ಥಿತಿನಿರ್ಮಾಣವಾಗಿದೆ. ಈ ಬಗ್ಗೆ ಶಾಸಕರಾದ ಎಚ್.ಪಿ. ಮಂಜುನಾಥ್ ಹಾಗೂ ಎಚ್.ವಿಶ್ವನಾಥ್ ಅವರಿಗೆ ಮನವಿ ಸಲ್ಲಿಸಿದ್ದರು ಪ್ರಯೋಜನವಾಗಿಲ್ಲ. ಈಗಲಾದರೂ ದೊಡ್ಡ ಮನಸ್ಸು ಮಾಡಿ ರಸ್ತೆ ಡಾಂಬರೀಕರಣಗೊಳಿಸಬೇಕಿದೆ.– ರಘು, ಕಣಗಾಲು ನಿವಾಸಿ
ಕಣಗಾಲು-ಹೊನ್ನೇ ಕೊಪ್ಪಲು ವರೆಗಿನ ರಸ್ತೆ ಅವ್ಯವಸ್ಥೆ ಬಗ್ಗೆ ಮಾಹಿತಿ ಇದೆ. ಆದ್ಯತೆ ಮೇರೆಗೆ ಈ ಪ್ರಮುಖ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಹಾಗೂಸೇತುವೆಗೆ ತಡೆಗೋಡಿ ನಿಮಿಸಲು ಕ್ರಮವಹಿಸಲಾಗುವುದು. – ಎಚ್.ಪಿ.ಮಂಜುನಾಥ್, ಶಾಸಕ
ಕಣಗಾಲು ಶಾಲೆಯ ಕೊಠಡಿಕೊರತೆ ಬಗ್ಗೆ ಮಾಹಿತಿ ಇದೆ.ಈಗಾಗಲೇ ತಾಲೂಕಿನ ವಿವಿಧಶಾಲೆಗಳ 104 ಕೊಠಡಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇಲ್ಲಿಗೆ 2 ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರ ಮಂಜೂರಾತಿ ದೊರೆಯಲಿದೆ. -ಕೆ.ಸಂತೋಷ್‌ಕುಮಾರ್, ಬಿಆರ್‌ಸಿ ಹುಣಸೂರು
-ಸಂಪತ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.