ಪ್ರಾಚೀನ ದೇವಸ್ಥಾನ ಜೀರ್ಣೋದ್ಧಾರ
Team Udayavani, Apr 12, 2021, 1:09 PM IST
ಚಿಕ್ಕಬಳ್ಳಾಪುರ: ನಗರವನ್ನು ಕ್ಲೀನ್ ಅಂಡ್ ಗ್ರೀನ್‌ಗೆ ಸಂಕಲ್ಪ ಮಾಡಿರುವ ಹಸಿರುಸ್ವಯಂ ಸೇವಾ ಸಂಘದ ಯುವಕರ ತಂಡತಮ್ಮ ವಿಭಿನ್ನ ಸೇವಾ ಕಾರ್ಯಗಳು ಸಾಮಾಜಿಕ ಚಟುವಟಿಕೆಗಳ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಜಿಲ್ಲೆಯನ್ನು ಹಸಿರುಮಯ ಮಾಡಲು ಪಣತೊಟ್ಟಿರುವ ಹಸಿರು ಸ್ವಯಂಸೇವಾ ಸಂಘದ ಯುವಕರ ತಂಡ, ತಾಲೂಕಿನಲ್ಲಿಈಗಾಗಲೇ ಸರ್ಕಾರಿ ಜಮೀನು, ಶಾಲಾಕಾಲೇಜುಗಳ ಆವರಣ ಮತ್ತಿತರರಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಪೋಷಣೆಮಾಡಿ, ಜನರಲ್ಲಿ ಪರಿಸರ ಸಂರಕ್ಷಣೆಯಮನೋಭಾವ ಬೆಳೆಸಲು ಶ್ರಮಿಸುತ್ತಿದ್ದಾರೆ.ಅದೇ ರೀತಿ ಜಿಲ್ಲೆಯಲ್ಲಿರುವ ಐತಿಹಾಸಿಕಪ್ರಾಚೀನ ದೇವಾಲಯಗಳನ್ನು ಗುರುತಿಸಿಜೀರ್ಣೋದ್ಧಾರ ಮಾಡುತ್ತಿದ್ದಾರೆ.
ತಾಲೂಕಿನಲ್ಲಿ ಪಾಳುಬಿದ್ದಿರುವ ದೇವಾಲಯಗಳನ್ನು ಗುರುತಿಸಿ, ಅದರಲ್ಲೂವಿಶೇಷವಾಗಿ ಬೆಟ್ಟಗುಡ್ಡ ಪ್ರದೇಶಗಳಲ್ಲಿರುವದೇವಾಲಯಗಳಿಗೆ ಭೇಟಿ ನೀಡಿ, ಶಿಥಿಲ ವ್ಯವಸ್ಥೆಯಲ್ಲಿರುವ ದೇವಾಲಯಗಳನ್ನುಮರು ನಿರ್ಮಾಣ ಮಾಡಿ ಭದ್ರಗೊಳಿಸುವಮೂಲಕ ಪ್ರಾಚೀನ ದೇವಾಲಯಗಳನ್ನುಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ತಮನ್ನು ತಾವೇ ತೊಡಗಿಸಿಕೊಂಡಿದ್ದಾರೆ. ನರಸಿಂಹಸ್ವಾಮಿ ಬೆಟ್ಟದಸಮೀಪವಿರುವ ನಿರ್ಲಕ್ಷ್ಯಕ್ಕೊಳಗಾದಶ್ರೀವಿಷ್ಣು ದೇವಾಲಯವನ್ನು ಸ್ವತ್ಛಗೊಳಿಸಿ ಸುಣ್ಣಬಣ್ಣದಿಂದ ಕಂಗೊಳಿಸಿ ಹೊಸ ರೂಪ ನೀಡಿದ್ದಾರೆ.
ಹಸಿರು ಸ್ವಯಂಸೇವಾ ಸಂಘದ ಅಧ್ಯಕ್ಷ ಮಧು, ಶಿಕ್ಷಕ ಮಹಂತೇಶ್ ನೇತೃತ್ವದಲ್ಲಿಸಂಘದ ಸದಸ್ಯರಾದ ರಾಜೇಶ್, ಮೂರ್ತಿ,ಮಂಜುನಾಥ್, ಹರ್ಷ, ಹೇಮಂತ್,ಪ್ರಣವ್, ಪ್ರವೀಣ್, ಕಿಶೋರ್‌ಕುಮಾರ್, ಶಮಂತ್, ರಂಜಿತ್, ಶ್ರೀನಿವಾಸಮೂರ್ತಿ(ಲಕ್ಕುಮಾಮ), ವೆಂಕಟೇಶ್, ಪ್ರದೀಪ್,ಆನಂದ್, ಪ್ರಮೋದ್, ಶ್ರೀಧರ್ ಅವರನ್ನು ಒಳಗೊಂಡ ತಂಡ ಬೆಳಿಗ್ಗೆಯಿಂದಸುಮಾರು 4-5 ಗಂಟೆಗಳ ಕಾಲ ಶ್ರಮದಾನಮಾಡಿ ದೇವಾಲಯ ಸುತ್ತಮುತ್ತಲುಬೆಳೆದಿದ್ದ ಗಿಡಗಂಟೆಗಳನ್ನು ಸ್ವತ್ಛಗೊಳಿಸಿ,ಸುಣ್ಣಬಣ್ಣ ಹೊಡೆದು ಕಂಗೊಳಿಸಿದ್ದಾರೆ.ಪಾಳುಬಿದ್ದಿದ್ದ ದೇವಸ್ಥಾನ ಇದೀಗ ಹೊಸ ಸ್ವರೂಪ ಪಡೆದುಕೊಂಡಿದೆ.
ಚಿಕ್ಕಬಳ್ಳಾಪುರ ನಗರವನ್ನು ಹಸಿರುಮಯ ಮಾಡಲು ಈಗಾಗಲೇ ಸಸಿ ನೆಡುವ ಅಭಿಯಾನ ಆರಂಭಿಸಿದ್ದೇವೆ. ಪ್ರಾಚೀನ, ಐತಿಹಾಸಿಕದೇಗುಲಗಳನ್ನು ಸ್ವತ್ಛಗೊಳಿಸಿ, ಸುಣ್ಣಬಣ್ಣದಿಂದ ಕಂಗೊಳಿಸಿ ಪೂಜಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲು ಪ್ರಯತ್ನ ಮಾಡುತ್ತಿದ್ದೇವೆ. -ಮಧು, ಅಧ್ಯಕ್ಷ, ಹಸಿರು ಸ್ವಯಂಸೇವಾ ಸಂಘ, ಚಿಕ್ಕಬಳ್ಳಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chintamani: ಭೀಕರ ಅಪಘಾತ; ಬಸ್ ಚಕ್ರದ ಕೆಳಗೆ ಬೈಕ್ ಸಿಲುಕಿ ದಂಪತಿ ಸಾವು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.