ಬೇವು-ಬೆಲ್ಲದ ಬದುಕಿನಲ್ಲಿ ಸಿಹಿ-ಕಹಿ ನೆನಪು
ಹೊಸ ಹರುಷಕ್ಕೆ ಹೊಸತು ಹೊಸತು ತರುತಿದೆ
Team Udayavani, Apr 13, 2021, 9:04 AM IST
ಚೈತ್ರ ಚಿಗುರಿದೆ. ಹಳೆಯ ಬೇರಿನ ಆಶ್ರಯದಿ ಹೊಸ ಕನಸು ಚಿಗುರಿದೆ. ಹೌದು ನಮ್ಮ ನೆಲದ ಹೊಸವರ್ಷ ಅಥವಾ ವರ್ಷದ ಮೊದಲ ಹಬ್ಬ ಯುಗಾದಿ. ಬದುಕಿನಂಗಳದಲ್ಲಿ ನಿತ್ಯವು ಯುಗಾದಿಯೇ ನಮಗೆಲ್ಲ. ಜೀವನದ ಹಾದಿಯಲ್ಲಿ ನಮ್ಮ ಪ್ರಯತ್ನಗಳು ಸೋತಾಗ ಅವುಗಳನ್ನು ಕಹಿ ಎಂದು ಭಾವಿಸುತ್ತೇವೆ ಹಾಗೆಯೇ ಗೆಲುವನ್ನು ಸಿಹಿ ಎಂದು ಸಂಭ್ರಮಿಸುತ್ತೇವೆ. ಸ್ವಲ್ಪ ತಿಳಿದು ನೋಡುವುದಾದರೆ ಸೋಲಿಲ್ಲದೆ ಗೆಲುವಿಗೆ ಸಂಭ್ರಮದ ಮಾತೆಲ್ಲಿ ಹೇಳಿ? ಅದೇನೆ ಇರಲಿ ಹಿಂದೂ ಸಂಪ್ರದಾಯದ ಹೊಸ ವರ್ಷ ಯುಗಾದಿಯ ಸುತ್ತ ಒಂದು ನೋಟ ಹಾಯಿಸಿದಾಗ ಮನ ಮನೆಗಳಲ್ಲಿ ಆಚರಿಸುವ ಈ ಹಬ್ಬದ ಸಂಭ್ರಮ ಹೆಚ್ಚಾಗದೆ ಇರದು.
ಯುಗಾದಿ ಅತ್ಯಂತ ಸಂಭ್ರಮದ ಹಬ್ಬ. ಯುಗದ ಆದಿಯಲ್ಲಿ ಬರುವ ಈ ಹಬ್ಬವನ್ನು ಚಾಂದ್ರಮಾನ ದಿನ ಗಣನೆಯ ಪ್ರಕಾರ ನಾಡಿನಾದ್ಯಂತ ಆಚರಿಸುತ್ತಾರೆ. ಹಾಗೆಯೆ ನಮ್ಮ ಉತ್ತರ ಕರ್ನಾಟಕದಲ್ಲಿ ಅತ್ಯಂತ ವಿಶೇಷ. ಅಂದು ಅಭ್ಯಂಜನ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಪಂಚಾಂಗ ಪೂಜೆ ಮಾಡಿ ಬೇವು-ಬೆಲ್ಲ ಸವಿಯುತ್ತಾರೆ. ಈ ಹಬ್ಬ ನಮ್ಮ ಬದುಕಿನ ಸಾರವನ್ನೇ ಹೇಳುತ್ತದೆ. ಬೇವು ಬೆಲ್ಲ ಸವಿಯುವಾಗ ನಾವು ಹೇಳುವ ಶ್ಲೋಕ ಹೀಗಿದೆ….
ಶತಾಯುಃ ವಜ್ರದೇಹಾಯ
ಸರ್ವ ಸಂಪತ್ಕರಾಯಚ್ l
ಸರ್ವ ಅರಿಷ್ಠ ವಿನಾಶಾಯ
ನಿಂಭಕಂದಳ ಭಕ್ಷಣಮ್ll
ಹೀಗೆಂದರೆ ನೂರು ವರ್ಷ ಆಯುಷ್ಯವನ್ನು ಕೊಟ್ಟು ,ಸದೃಢ ಆರೋಗ್ಯ ನೀಡಿ,ಸಕಲ ಸಂಪತ್ತು ಹಾಗೂ ಬರುವ ಎಲ್ಲ ಅರಿಷ್ಠಗಳನ್ನು ಶಮನ ಮಾಡು ಎಂದು ಬೇವು ಬೆಲ್ಲ ಮೆಲ್ಲುವೆ ಎನ್ನುತ್ತಾರೆ.
‘ ಎಲ್ಲೆಲ್ಲೂ ಹಬ್ಬ ಹಬ್ಬ ಬಂತೂ ಯುಗಾದಿ ಹಬ್ಬ’ ಈ ಹಾಡನ್ನು ಕೇಳಿದಾಗ ಯುಗಾದಿ ಸಂಭ್ರಮಕ್ಕೆ ಮತ್ತಷ್ಟು ಮೆರಗು ಬಾರದಿರದು. ಬದುಕಿನಲ್ಲಾದ ಎಲ್ಲ ಕಹಿ ಅನುಭವವನ್ನು ಮರೆತು ಮುಂಬರುವ ದಿನಗಳಲ್ಲಿ ಅನುಭಾವ ಹೆಚ್ಚಿಸಿಕೊಳ್ಳುತ್ತ ಏಳಿಗೆಯತ್ತ ಸಾಗೋಣ..’ ನೋವಿನ ನೆಪ ಹೇಳಿ ದೂರವಾದ ಎಷ್ಟೋ ಸಂಬಂಧಗಳು ಮತ್ತೆ ಬೇವು ಬೆಲ್ಲದಂತೆ ಒಂದಾಗಲಿ ಎಂದು ಹಾರೈಸೋಣ. ಬದುಕು ಮುಗಿಯುವ ಮುನ್ನ ಕ್ಷಮಿಸಿ ಬಿಡೋಣ. ಅಳಿಸಲಾಗದಂತೆ ಅಚ್ಚೊತ್ತಿದ ಕಹಿ ನೆನಪುಗಳೆ ನಮ್ಮನ್ನು ನಮ್ಮ ಗುರಿಯನ್ನು ಸದೃಢ ಗೊಳಿಸುತ್ತವೆ ಅಲ್ವೇ ? ಹಾಗಂದ ಮೇಲೆ ಕಹಿಯ ಮಾತೆಲ್ಲಿ ? ಸ್ವಲ್ಪ ಅಳು ಸ್ವಲ್ಪ ನಗು ಬೆರೆತಾಗಲೆ ಸಮರಸದ ಜೀವನ.
ಬುದ್ದ ಬಸವಾದಿ ಮಹಣಿಯರನ್ನೆ ಬಿಡದ ಕಷ್ಟಗಳು ಅವರನ್ನ ಅಸಾಮಾನ್ಯತೆ ಎಡೆಗೆ ಕರೆದೊಯ್ದದ್ದು. ಏರಿಳಿತದ ಬದುಕಿನ ದಾರಿಯಲ್ಲಿ ಸಹನೆ, ಕ್ಷಮೆ, ಪ್ರೀತಿ, ನಂಬಿಕೆ, ನೋವು ಎಲ್ಲವನ್ನು ಸಮವಾಗಿ ತೂಗಿ ಜೀವನದ ತಕ್ಕಡಿ ತೂಗಬೇಕು.
ಗುಡಿಸಲೇ ಇರಲಿ ಅರಮನೆ ಇರಲಿ ಸಿಹಿ ಕಹಿಯ ಲೆಕ್ಕ ಎಲ್ಲರಿಗೂ ಒಂದೇನೇ.ಇದನ್ನರಿತು ಬಾಳೋಣ. ‘’ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ. ಹೊಸ ವರುಷಕ್ಕೆ ಹೊಸ ಹರುಷಕ್ಕೆ ಹೊಸತು ಹೊಸತು ತರುತಿದೆ” ಈ ಹಳೆಯ ಹಾಡನ್ನು ಎರಡು ಸಾಲು ಗುನುಗುತ್ತ ಭರವಸೆಯ ಬದುಕು ನಮ್ಮದಾಗಿಸಿ ಕೊಳ್ಳೊಣ. ಎಲ್ಲರ ಬದುಕಲ್ಲಿ ಭಗವಂತ ಬೆಳಕು ಚೆಲ್ಲಲಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
ಜಯಶ್ರೀ ವಾಲಿಶಟ್ಟರ್…
ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರೇಸಿಂದೋಗಿ
ಕೊಪ್ಪಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.