859 ಜನವಸತಿಗೆ ಕುಡಿವ ನೀರಿನ ಕೊರತೆ
ಜಿಲ್ಲೆಯಲ್ಲಿವೆ 1068 ಜನ ವಸತಿ¬ಅಂತರ್‌ಜಲ ಹೆಚ್ಚಿಸಿದ ಪ್ರವಾಹ
Team Udayavani, Apr 12, 2021, 2:38 PM IST
ಬಾಗಲಕೋಟೆ: ಆಲಮಟ್ಟಿ ಜಲಾಶಯನಿರ್ಮಾಣದಿಂದ ಮುಳುಗಡೆ ಜಿಲ್ಲೆ ಎಂದೇ ಖ್ಯಾತಿಪಡೆದ ಬಾಗಲಕೋಟೆ ಜಿಲ್ಲೆಯ ಅಷ್ಟೂ ಜನವಸತಿಪ್ರದೇಶಗಳ ಪೈಕಿ 859 ಜನ ವಸತಿಗಳಿಗೆ ಕುಡಿಯುವನೀರಿನ ಸ್ವಯಂ ಸ್ವಾವಲಂಬನೆ ಇಲ್ಲ. ಈ ಜನವಸತಿಪ್ರದೇಶಗಳಿಗೆ ಬೇರೆ ಕಡೆಯಿಂದಲೇ ಕುಡಿಯುವನೀರು ಪೂರೈಸುವ ಅನಿವಾರ್ಯತೆ ಜಿಲ್ಲೆಯಲ್ಲಿದೆ.
ಹೌದು, ಜಿಲ್ಲೆಯ 15 ನಗರಸ್ಥಳೀಯ ಸಂಸ್ಥೆಗಳು, 9 ತಾಲೂಕುಕೇಂದ್ರಗಳು, 195 ಗ್ರಾ.ಪಂ.ಗಳುಸೇರಿದಂತೆ ಒಟ್ಟು 1068 ಜನ ವಸತಿ(ಜನರು ವಾಸಿಸುವ ಗ್ರಾಮ, ಹಳ್ಳಿ,ತೋಟದ ವಸ್ತಿಗಳು, ದೊಡ್ಡಿ, ತಾಂಡಾ ಸೇರಿ)ಗಳಿವೆ.ಅದರಲ್ಲಿ ಶೇ.100ರಷ್ಟು ಕುಡಿಯುವ ನೀರಿನ ಸ್ವಯಂಸ್ವಾವಲಂಬನೆ ಇರುವುದು ಕೇವಲ 209 ಜನವಸತಿಗಳಿಗೆ ಮಾತ್ರ.
ಜಮಖಂಡಿಯಲ್ಲಿ ಹೆಚ್ಚು ಜನ ವಸತಿ: ಜಿಲ್ಲೆಯ 1068ಜನ ವಸತಿ ಪ್ರದೇಶಗಳಲ್ಲಿ ಅತಿಹೆಚ್ಚು ಇರುವುದುಜಮಖಂಡಿ ತಾಲೂಕಿನಲ್ಲ. ಬಾದಾಮಿ (ಗುಳೇದಗುಡ್ಡಸೇರಿ)-165, ಬಾಗಲಕೋಟೆ-115, ಬೀಳಗಿ-107,ಹುನಗುಂದ (ಇಳಕಲ್ಲ ಸೇರಿ)-174, ಜಮಖಂಡಿ(ರಬಕವಿ-ಬನಹಟ್ಟಿ ಸೇರಿ)-382, ಮುಧೋಳ-125ಸೇರಿದಂತೆ ಒಟ್ಟು 1058 ಜನ ವಸತಿಗಳಿವೆ.ಅದರಲ್ಲಿ ಕೇವಲ ಶೇ.25ರಷ್ಟು ಕುಡಿಯುವ ನೀರಿನಸೌಲಭ್ಯ ಇರುವುದು ಜಮಖಂಡಿ ತಾಲೂಕಿನ 30,ಮುಧೋಳ ತಾಲೂಕಿನ 26 ಸೇರಿ ಒಟ್ಟು 56 ಜನವಸತಿಗಳಲ್ಲಿ ಶೇ.25ರಷ್ಟು ಕುಡಿಯುವ ನೀರಿನ ವ್ಯವಸ್ಥೆಇದೆ. ಇನ್ನು ಬಾದಾಮಿ ತಾಲೂಕಿನ 4, ಬಾಗಲಕೋಟೆ,ಬೀಳಗಿ ತಲಾ 10, ಹುನಗುಂದ-13, ಜಮಖಂಡಿ-75,ಮುಧೋಳ ತಾಲೂಕಿನ 20 ಜನ ವಸತಿ ಸೇರಿ ಒಟ್ಟು132 ಜನ ವಸತಿಗಳಲ್ಲಿ ಶೇ.50ರಷ್ಟು ಕುಡಿಯುವನೀರಿನ ವ್ಯವಸ್ಥೆ ಇದೆ.
444 ಪ್ರದೇಶಕ್ಕೆ ಶೇ.50 ನೀರು: ಜಿಲ್ಲೆಯ ಬಾದಾಮಿ -36, ಬಾಗಲಕೋಟೆ-22, ಬೀಳಗಿ-72,ಹುನಗುಂದ-68, ಜಮಖಂಡಿ-215,ಮುಧೋಳ-31 ಸೇರಿ ಒಟ್ಟು 444 ಜನ ವಸತಿಗಳಿಗೆಶೇ.50ರಷ್ಟು ಕುಡಿಯುವ ನೀರಿನ ಸೌಲಭ್ಯವಿದೆ.ಇನ್ನುಳಿದ ಶೇ.50ರಷ್ಟು ಜನವಸತಿಗೆ ಬೇರೆ ಬೇರೆ ಗ್ರಾಮ, ನದಿ, ಕೆರೆಗಳಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ.
ಇನ್ನು ಬಾದಾಮಿ-47, ಬಾಗಲಕೋಟೆ-50, ಬೀಳಗಿ-22, ಹುನಗುಂದ-47, ಜಮಖಂಡಿ-48ಹಾಗೂ ಮುಧೋಳದ 13 ಜನ ವಸತಿ ಸೇರಿ ಒಟ್ಟು227 ಪ್ರದೇಶಗಳಲ್ಲಿ ಶೇ.75ರಷ್ಟು ಕುಡಿಯುವ ನೀರಿನವ್ಯವಸ್ಥೆಯಿದ್ದು, ಇನ್ನುಳಿದ ಶೇ.25ರಷ್ಟು ಜನರಿಗೆ ಬೇರೆಜಲ ಮೂಲಗಳೇ ಆಸರೆಯಾಗಿವೆ.
209 ಜನವಸತಿಗೆ ಪೂರ್ಣ ನೀರು: ಬಾದಾಮಿ-78,ಬಾಗಲಕೋಟೆ-33, ಬೀಳಗಿ-3, ಹುನಗುಂದ-46,ಜಮಖಂಡಿ-14 ಹಾಗೂ ಮುಧೋಳ ತಾಲೂಕಿನ 35ಜನ ವಸತಿ ಸೇರಿ ಒಟ್ಟು 209 ಪ್ರದೇಶಗಳ ಜನರಿಗೆ ನಿತ್ಯವೂಶೇ.100ರಷ್ಟು ಕುಡಿಯುವ ನೀರಿನ ಸೌಲಭ್ಯವಿದೆ.ಈ 209 ಜನ ವಸತಿ ಪ್ರದೇಶಗಳು ಹಿನ್ನೀರ ಪ್ರದೇಶಕ್ಕೆಹೊಂದಿಕೊಂಡು, ನದಿ-ಕೆರೆಯ ಪಕ್ಕದಲ್ಲಿರುವ ಜತೆಗೆಇಲ್ಲಿ ಎಷ್ಟೇ ಕೊಳವೆ ಬಾವಿ ಕೊರೆಸಿದರೂ ಹೇರಳವಾಗಿಕುಡಿಯುವ ನೀರು ದೊರೆಯುತ್ತಿದೆ. ಹೀಗಾಗಿ 209ಜನ ವಸತಿ ಪ್ರದೇಶಗಳಿಗೆ ಶೇ. 100ರಷ್ಟು ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುತ್ತಿದೆ.
ಜಿಲ್ಲೆಯಲ್ಲಿವೆ 4147 ಕೊಳವೆ ಬಾವಿಗಳು:
ಜಿಲ್ಲೆಯಲ್ಲಿ 39 ಬಹುಹಳ್ಳಿ ಕುಡಿಯುವ ನೀರುಪೂರೈಕೆ ಯೋಜನೆಗಳಿದ್ದು, ಈ ಯೋಜನೆಗಳಡಿ293 ಹಳ್ಳಿಗಳಿಗೆ ನೀರು ಪೂರೈಸಲಾಗುತ್ತಿದೆ. ಜಿಲ್ಲಾಕೇಂದ್ರವಾದ ಬಾಗಲಕೋಟೆ ನಗರಕ್ಕೆ ಹೆರಕಲ್ ಬಳಿಯಘಟಪ್ರಭಾ ನದಿ ಹಾಗೂ ಬಾಗಲಕೋಟೆ ತಾಲೂಕಿನಬನ್ನಿದಿನ್ನಿ ಬಳಿಯಿಂದ ಹಿನ್ನೀರು ಎತ್ತಿ, ನದಿ ನೀರು ಪೂರೈಸಲಾಗುತ್ತಿದೆ.
ನದಿ, ಕೆರೆ, ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆ ಸೇರಿ ಜಿಲ್ಲೆಯಲ್ಲಿ 4147 ಕೊಳವೆ ಬಾವಿಗಳಿದ್ದು, 1097 ಕಿರು ನೀರು ಸರಬರಾದು ಯೋಜನೆಗಳು ಚಾಲ್ತಿಯಲ್ಲಿವೆ. ಬಾದಾಮಿ-309, ಬಾಗಲಕೋಟೆ-826, ಬೀಳಗಿ-289, ಹುನಗುಂದ-950, ಜಮಖಂಡಿ-1070ಹಾಗೂ ಮುಧೋಳ ತಾಲೂಕಿನಲ್ಲಿ 703 ಸೇರಿ ಒಟ್ಟು4147 ಕೊಳವೆ ಬಾವಿಗಳು ಜನರಿಗೆ ನೀರು ಪೂರೈಕೆ ಮಾಡುತ್ತಿದೆ.
ಅಂತರ್‌ಜಲ ಹೆಚ್ಚಿಸಿದ ಪ್ರವಾಹ: ಕಳೆದ ಎರಡು ವರ್ಷಜಿಲ್ಲೆಯಲ್ಲಿ ಉಂಟಾದ ಪ್ರವಾಹ, ಭೂಮಿಯಲ್ಲಿ ನೀರಿನ ಮಟ್ಟ ಹೆಚ್ಚಿಸಿದೆ. ಹೀಗಾಗಿ ಸ್ಥಗಿತಗೊಂಡಿದ್ದಎಷ್ಟೋ ಕೊಳವೆ ಬಾವಿಗಳಲ್ಲಿ ಮತ್ತೆ ನೀರಿನ ಸಿಂಚನಬರಲಾರಂಭಿಸಿದ್ದು, ಕುಡಿಯುವ ನೀರಿನ ಸಮಸ್ಯೆ ನೀಗಲು ಇದೂ ಒಂದು ಕಾರಣ ಎನ್ನಲಾಗಿದೆ. ಪ್ರವಾಹ ಬಂದಿದ್ದರಿಂದ ಎಲ್ಲ ಬ್ಯಾರೇಜ್, ನದಿಗಳು ತುಂಬಿ ಹರಿದಿದ್ದು, ಸುತ್ತಲಿನ ಕೊಳವೆ ಬಾವಿಗಳ ಅಂತರ್‌ಜಲ ಹೆಚ್ಚಳವಾಗಿದೆ. ಜತೆಗೆ ಡ್ಯಾಂಗಳೂ ತುಂಬಿದ್ದರಿಂದ ಈ ಬಾರಿ ನೀರಿನ ಕೊರತೆ ಅಷ್ಟೊಂದು ಆಗಿಲ್ಲ.
ಎರಡು ನದಿಗೆ 2 ಟಿಎಂಸಿ ನೀರು: ಪ್ರತಿವರ್ಷ ಮಾರ್ಚ್ ಅಂತ್ಯಕ್ಕೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿತ್ತು. ಹೀಗಾಗಿ ಕೃಷ್ಣಾ ನದಿಗೆ ಮಹಾರಾಷ್ಟ್ರದಕೊಯ್ನಾದಿಂದ, ಘಟಪ್ರಭಾ ನದಿಗೆ ಹಿಡಕಲ್‌ನಿಂದ,ಮಲಪ್ರಭಾ ನದಿಗೆ ನವಿಲುತೀರ್ಥ ಡ್ಯಾಂನಿಂದನೀರು ಬಿಡುವಂತೆ ಒತ್ತಾಯ ಕೇಳಿ ಬರುತ್ತಿತ್ತು. ಆಗಡ್ಯಾಂಗಳಲ್ಲೂ ಅಷ್ಟೊಂದು ನೀರಿನ ಸಂಗ್ರಹ ಇರುತ್ತಿಲ್ಲ.ಹೀಗಾಗಿ ಕಾಡಿಬೇಡಿದಾಗ ಅರ್ಧ ಟಿಎಂಸಿ ಅಡಿ ನೀರು ಬಿಡುವ ಪ್ರಸಂಗ ನಡೆಯುತ್ತಿತ್ತು.
ಈ ಬಾರಿ ಘಟಪ್ರಭಾ ಮತ್ತು ಮಲಪ್ರಭಾ ನದಿ ತಲಾ1 ಟಿಎಂಸಿ ಅಡಿ ಸೇರಿ ಒಟ್ಟು 2 ಟಿಎಂಸಿ ಅಡಿ ನೀರು ಬಿಡಲಾಗಿದೆ. ಹೀಗಾಗಿ ಘಟಪ್ರಭಾ ನದಿ ಪಾತ್ರದ 23ಹಾಗೂ ಮಲಪ್ರಭಾ ನದಿ ಪಾತ್ರದ 18 ಬ್ಯಾರೇಜ್‌ಗಳೂನೀರಿನಿಂದ ತುಂಬಿವೆ. ಹೀಗಾಗಿ ಬಹುತೇಕ ಬ್ಯಾರೇಜ್‌ನಂಬಿಕೊಂಡೇ ಇರುವ ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಗಳಿಗೂ ನೀರಿನ ಕೊರತೆ ಸಧ್ಯಕ್ಕೆ ಉಂಟಾಗಿಲ್ಲ
ಮಾಧವ ಕೇಂದ್ರದ ನೀರಿನ ಸೇವೆ :
ಬೇಸಿಗೆ ಸಂದರ್ಭದಲ್ಲಿ ರಸ್ತೆ ಬದಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು ಹಲವು ವರ್ಷಗಳಿಂದ ನಡೆದ ಪರಂಪರೆ. ಬಾಗಲಕೋಟೆ ನಗರ, ನವನಗರ ಹಾಗೂವಿದ್ಯಾಗಿರಿ ಸೇರಿ ಒಟ್ಟು 8 ಪ್ರಮುಖ ಜನನಿಬಿಡ ಪ್ರದೇಶಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರಿನವ್ಯವಸ್ಥೆಯನ್ನು ನಗರದ ಮಾಧವ ಸೇವಾ ಕೇಂದ್ರ ಹಲವು ವರ್ಷಗಳಿಂದ ಮಾಡುತ್ತಿದೆ. ಇದು ಬಾಯಾರಿಕೆಯಿಂದ ಬಂದ ನಗರ, ಗ್ರಾಮೀಣಪ್ರದೇಶದ ಜನರಿಗೆ ಅತ್ಯಂತ ಅನುಕೂಲವಾಗಿದೆ.ಮಾಧವ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷನಾಗರಾಜ ಹದ್ಲಿ ಅವರ ಈ ಸೇವೆಯನ್ನು ನಗರದ ಜನರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಜಿಲ್ಲೆಯಲ್ಲಿ 39 ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಗಳು ಯಶಸ್ವಿಯಾಗಿನಡೆಯುತ್ತಿದೆ. ಅಲ್ಲದೇ ಘಟಪ್ರಭಾ, ಮಲಪ್ರಭಾ ನದಿಗೆತಲಾ 1 ಟಿಎಂಸಿ ನೀರು ಬಿಟ್ಟಿದ್ದು, ನೀರಿನ ಸಮಸ್ಯೆ ಇಲ್ಲ.ಏಪ್ರಿಲ್ ಕೊನೆ ವಾರದಲ್ಲಿ 42 ಹಳ್ಳಿಗೆ ಸಮಸ್ಯೆ ಆಗಬಹುದು ಎಂದು ಅಂದಾಜಿಸಲಾಗಿದೆ. ಮೇ-ಜೂನ್ ತಿಂಗಳಲ್ಲಿಸಮಸ್ಯಾತ್ಮಕ ಹಳ್ಳಿಗಳ ಪಟ್ಟಿ ಸಿದ್ಧಪಡಿಸಲಾಗುವುದು.ಅಲ್ಲದೇ ಸರ್ಕಾರ ಪ್ರತಿ ತಾಲೂಕಿಗೆ ಬೇಸಿಗೆಯ ಕುಡಿಯುವನೀರಿಗಾಗಿ ತಲಾ 35 ಲಕ್ಷ ಅನುದಾನ ನೀಡಿದೆ. –ವಿಲಾಸ ರಾಠೊಡ, ಕಾರ್ಯ ನಿರ್ವಾಹಕ ಅಭಿಯಂತರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ಬಾಗಲಕೋಟೆ ಮತಕ್ಷೇತ್ರ ವ್ಯಾಪ್ತಿಯಲ್ಲಿ ನೀರಿನಸಮಸ್ಯೆ ಇಲ್ಲ. ಕಳೆದ ವರ್ಷ ಮಳೆ ಹೆಚ್ಚಾಗಿದ್ದು, ಡ್ಯಾಂ, ಬ್ಯಾರೇಜ್‌ಗಳಲ್ಲಿನೀರಿನ ಕೊರತೆ ಉಂಟಾಗಿಲ್ಲ. ನಗರಕ್ಕೆ ನೀರು ಪೂರೈಸುವ ಮಹತ್ವದಹೆರಕಲ್ ಯೋಜನೆ ಕೂಡಆರಂಭಿಸಲಾಗಿದೆ. ಹೀಗಾಗಿ ಕ್ಷೇತ್ರದಯಾವುದೇ ಭಾಗದಲ್ಲಿ ನೀರಿನ ಸಮಸ್ಯೆ ಉಂಟಾಗಿಲ್ಲ. – ಡಾ| ವೀರಣ್ಣ ಚರಂತಿಮಠ, ಬಾಗಲಕೋಟೆ ಶಾಸಕ
-ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.