ಮತ್ತೆ ಕೋವಿಡ್ ಅಟ್ಟಹಾಸ
Team Udayavani, Apr 12, 2021, 4:50 PM IST
ದಾವಣಗೆರೆ: ಕಳೆದ ವರ್ಷ ಕೋವಿಡ್ಹೆಮ್ಮಾರಿಯ ದಾಳಿಯಿಂದತತ್ತರಿಸಿ ಹೋಗಿದ್ದ ಜಿಲ್ಲೆಯಲ್ಲಿ ಈ ಬಾರಿಯೂ ಕೋವಿಡ್ ಅಟ್ಟಹಾಸಮೆರೆಯಲಾರಂಭಿಸಿದೆ.
ಕಳೆದ ವರ್ಷ ಇದೇ ವೇಳೆ ಜಿಲ್ಲೆಯಲ್ಲಿ ಕೇವಲ ಮೂರು ಸಕ್ರಿಯಪ್ರಕರಣಗಳು ವರದಿಯಾಗಿದ್ದವು.ನೆರೆಯ ಚಿತ್ರದುರ್ಗ ಜಿಲ್ಲೆಯ ಎರಡು ಪ್ರಕರಣ, ದಾವಣಗೆರೆಯ ನಿಜಲಿಂಗಪ್ಪ ಬಡಾವಣೆಯಲ್ಲಿ ಒಂದು ಪ್ರಕರಣವರದಿಯಾಗಿತ್ತು. ಜಿಲ್ಲೆ ಹಸಿರು ವಲಯದತ್ತ ದಾಪುಗಾಲು ಹಾಕಿತ್ತು.ಈ ವರ್ಷ ಏ. 11ರ ಅಂತ್ಯಕ್ಕೆ 254ಸಕ್ರಿಯ ಪ್ರಕರಣಗಳು ವರದಿಯಾಗಿವೆ.ಭಾನುವಾರ (ಏ. 11) ಒಂದೇ ದಿನ50 ಪ್ರಕರಣ ಪತ್ತೆಯಾಗಿವೆ. ಅದರಲ್ಲೂ ದಾವಣಗೆರೆ ನಗರ ಮತ್ತಿತರ ಕಡೆ ಅತಿ ಹೆಚ್ಚು 27 ಪ್ರಕರಣ ವರದಿಯಾಗಿವೆ.
ಎರಡನೇ ಅಲೆ ಅಪ್ಪಳಿಸುವ ಎಲ್ಲಾ ಸಾಧ್ಯತೆಗಳ ಹಿನ್ನೆಲೆಯಲ್ಲಿ ಕೋವಿಡ್ ಪೀಡಿತರ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿಗ3,200 ಪ್ರಕರಣಗಳಿಗೆ ಚಿಕಿತ್ಸೆ ನೀಡುವಷ್ಟುಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.ಚಿಗಟೇರಿ ಜಿಲ್ಲಾಸ್ಪತ್ರೆಯನ್ನು ಜಿಲ್ಲಾಮಟ್ಟದ 400 ಬೆಡ್‌ಗಳ ಕೋವಿಡ್ ಆಸ್ಪತ್ರೆ ಎಂದು ಗುರುತಿಸಲಾಗಿದೆ.
ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಈಗ ಕೋವಿಡೇತರರಿಗೆ ಚಿಕಿತ್ಸೆನೀಡಲಾಗುತ್ತಿದೆ. ಸದ್ಯಕ್ಕಂತೂ ಚಿಕಿತ್ಸೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಕೋವಿಡ್ ಪ್ರಕರಣಗಳು ಹೆಚ್ಚಾದಲ್ಲಿ ಜಿಲ್ಲಾ ಚಿಗಟೇರಿ ಆಸ್ಪತ್ರೆಯನ್ನು ಕೋವಿಡ್ ಚಿಕಿತ್ಸೆಗಾಗಿ ಮಾತ್ರವೇಮೀಸಲಿಟ್ಟಲ್ಲಿ ಕೊರೊನೇತರರು ಚಿಕಿತ್ಸೆಪಡೆಯಲಿಕ್ಕೆ ಸಮಸ್ಯೆ ಆಗಬಹುದು.3,200 ಪ್ರಕರಣಗಳಿಗೆ ಚಿಕಿತ್ಸೆನೀಡುವಷ್ಟು ಸಿದ್ಧತೆ ಮಾಡಿಕೊಂಡಿರುವಜೊತೆಯಲ್ಲಿ ಆಸ್ಪತ್ರೆಯಲ್ಲಿ 10 ಜನರುಮಾತ್ರ ಚಿಕಿತ್ಸೆ ಪಡೆಯುತ್ತಿರುವ ಕಾರಣಕ್ಕೆ ಹಾಸಿಗೆ ಕೊರತೆ ಇಲ್ಲ.
ಜಿಲ್ಲೆಯಲ್ಲಿ 2 ಖಾಸಗಿ ಮತ್ತು 100 ಸರ್ಕಾರಿ ಆಸ್ಪತ್ರೆಗಳಲ್ಲಿ ಫೀವರ್ ಕ್ಲಿನಿಕ್‌ಗಳಿವೆ. ಒಟ್ಟು 21 ಸ್ವಾಬ್ ಸಂಗ್ರಹಣಾಮೊಬೈಲ್ ಟೀಂಗಳಿವೆ. 13 ಹಾಸ್ಟೆಲ್‌ಗಳಲ್ಲಿನ ಕೋವಿಡ್ ಕೇರ್ ಸೆಂಟರ್ ಗಳಲ್ಲಿ 1,030 ಬೆಡ್ ಸಿದ್ಧವಾಗಿವೆ. ಖಾಸಗಿ ಮತ್ತು ಸರ್ಕಾರಿ ಸೇರಿದಂತೆಒಟ್ಟು 113 ವೆಂಟಿಲೇಟರ್‌ಗಳಿವೆ.
ಸಿಸಿಸಿ, ಡಿಸಿಎಚ್‌ಸಿ ಮತ್ತು ಡಿಸಿಎಚ್‌ಸೇರಿದಂತೆ ಒಟ್ಟು 1,890 ಬೆಡ್‌ಗಳಿವೆ.ಸಮಿತಿಗಳ ಮೂಲಕ ಪ್ರತಿಯೊಂದನ್ನು ನಿರ್ವಹಣೆ ಮಾಡಲಾಗುತ್ತಿದೆ.ಜಿಲ್ಲಾಸ್ಪತ್ರೆ ಜೊತೆಗೆ ಕೆಲವಾರು ಖಾಸಗಿಆಸ್ಪತ್ರೆಯಲ್ಲೂ ಕೋವಿಡ್ ಪೀಡಿತರಿಗೆಚಿಕಿತ್ಸೆ ನೀಡಲಾಗುತ್ತಿದೆ.
ಪ್ರಕರಣಗಳ ಸಂಖ್ಯೆ ಹೆಚ್ಚಾಗಿ, ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿನ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಪ್ರಕರಣವರದಿಯಾದಲ್ಲಿ ಕಳೆದ ಬಾರಿಯಂತೆಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಮೀಸಲಿರಿಸುವ ಚಿಂತನೆ ಇದೆ. ಕಳೆದ ಬಾರಿ 19 ಆಸ್ಪತ್ರೆಗಳನ್ನು ಕೋವಿಡ್ ಚಿಕಿತ್ಸೆಗೆ ಆಯ್ಕೆ ಮಾಡಲಾಗಿತ್ತು. ಕಳೆದ ವರ್ಷ ಕೊರೊನಾ ಚಿಕಿತ್ಸೆಗಾಗಿ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿವೆಂಟಿಲೇಟರ್, ಆ್ಯಕ್ಸಿಜನ್ ಬೆಡ್,ಲಿಕ್ವಿಡ್ ಆ್ಯ ಕ್ಸಿಜನ್ ಪ್ಲಾಂಟ್ ನಿರ್ಮಾಣಮಾಡಲಾಗಿತ್ತು. ಮಾತ್ರವಲ್ಲ,ವೈದ್ಯಕೀಯ, ವೈದ್ಯಕೀಯೇತರ ಸಿಬ್ಬಂದಿ ಹೆಚ್ಚಳ ಮಾಡಲಾಗಿತ್ತು. ಈಗ ಮತ್ತೆವೈದ್ಯಕೀಯ, ವೈದ್ಯಕೀಯೇತರ ಸಿಬ್ಬಂದಿಮುಂದುವರೆಸಲಾಗಿದೆ. ಹಾಗಾಗಿಚಿಕಿತ್ಸೆಗೆ ಹೆಚ್ಚಿನ ಸಮಸ್ಯೆ ಇಲ್ಲ ಎಂದುಆರೋಗ್ಯ ಇಲಾಖಾ ಮೂಲಗಳು ತಿಳಿಸಿವೆ.
ಡಿ.10ರ ನಂತರ ಸಾವಿನ ಪ್ರಕರಣ ಇಲ್ಲ :
ಜಿಲ್ಲೆಯಲ್ಲಿ ಈಗ 147 ಸಕ್ರಿಯ ಪ್ರಕರಣಗಳಿವೆ. 10ಜನರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರಿಗೆತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡ ಲಾಗುತ್ತಿದೆ. ಜಿಲ್ಲೆಯಲ್ಲಿಪ್ರತಿ ದಿನ 2200 ರಿಂದ 2500 ರವರೆಗೆ ಸ್ವಾಬ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಕೋವಿಡ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಡುವೆ ಸಮಾಧಾನದ ವಿಷಯ ಎಂದರೆ ಕಳೆದ ಡಿ. 10ರ ನಂತರ ಜಿಲ್ಲೆಯಲ್ಲಿ ಕೋವಿಡ್ ಸಂಬಂಧಿತ ಯಾವುದೇ ಸಾವಿನ ಪ್ರಕರಣ ವರದಿ ಆಗಿಲ್ಲ.
–ರಾ. ರವಿಬಾಬು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ
Davanagere: ಅಸೆಂಬ್ಲಿ ಅಧಿವೇಶನಕ್ಕೆ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್
MUST WATCH
ಹೊಸ ಸೇರ್ಪಡೆ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.