![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 13, 2021, 7:41 AM IST
13-04-2021
ಮೇಷ: ಅಷ್ಟಮದ ಶನಿಯ ಸೆಣಸಾಟದಿಂದ ಆಗಾಗ ಮಾನಸಿಕವಾಗಿ ಕ್ಲೇಶವನ್ನು ಅನುಭವಿಸುವಂತಾದೀತು. ತೋರಿಕೆಯ ಆತ್ಮೀಯರ ಪ್ರೀತಿ ಹಾಗೂ ವಿಶ್ವಾಸದ ಘಾತಕತನವಾದೀತು. ಹೆಚ್ಚು ನಂಬಿಕೆ ಬೇಡ.
ವೃಷಭ: ಕಾರ್ಯಕ್ಷೇತ್ರದಲ್ಲಿ ಆಗಾಗ ಅಪಜಯ ಎದುರಾದೀತು. ಆರೋಗ್ಯದ ವಿಷಯದಲ್ಲಿ ನೆಮ್ಮದಿ ಕೆಡುತ್ತಾ ಹೋಗುವುದು. ಆದರೆ ನಿಧಾನವಾಗಿ ಸುಧಾರಣೆಯಾಗಲಿದೆ. ಭೂವ್ಯವಹಾರದಲ್ಲಿ ವಂಚನೆ ಸಾಧ್ಯತೆ ಇದೆ.
ಮಿಥುನ: ಕೃಷಿಯಲ್ಲಿ ಸಾಫಲ್ಯ ನಿರೀಕ್ಷೆ ಸಂತಸ ತರುತ್ತದೆ. ಯಂತ್ರ, ಉಕ್ಕು, ಕಬ್ಬಿಣ ವಸ್ತುಗಳ ವ್ಯಾಪಾರದಲ್ಲಿ ಅಧಿಕ ಲಾಭ ಕಂಡು ಬರುವುದು. ಗೃಹದಲ್ಲಿ ಬಂಧುಗಳ ಆಗಮನದಿಂದ ಸಂತಸ, ಸಮಾಧಾನವಾದೀತು.
ಕರ್ಕ: ಕಾರ್ಯರಂಗದಲ್ಲಿ ಶತ್ರುಪೀಡೆ ಕೊಂಚ ಮರೆಯಾದೀತು. ಅಧಿಕಾರಿ ವರ್ಗದವರಿಗೆ ಮುಂಭಡ್ತಿಯು ದೊರಕಿ ಸಂತಸವಾಗಲಿದೆ. ವಿದ್ಯಾರ್ಥಿಗಳು ವಿದ್ಯೆಯಲ್ಲಿ ಪ್ರಗತಿ ಹೊಂದುವರು. ಉದ್ಯೋಗವೂ ದೊರಕೀತು.
ಸಿಂಹ: ಆಗಾಗ ಚಂಚಲತೆ, ಇಬ್ಬಗೆಯ ಮನದ ಹೊಯ್ದಾಟದಿಂದ, ಕೆಲಸ ಕಾರ್ಯಗಳು ವಿಳಂಬಗತಿಯಿಂದ ಮುಂದು ವರಿಯಲಿವೆ. ಪುರೋಹಿತ ವರ್ಗದವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ.
ಕನ್ಯಾ: ದುರ್ಜನರ ಸಂಗದಿಂದ ಅಪವಾದ ದೋಷಗಳು ಬಂದಾವು. ಆದಾಯವು ಉತ್ತಮವಿದ್ದು ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಬಂಧುಗಳ ಸಮಾಗಮದಿಂದ ಮಾನಸಿಕ ಸಮಾಧಾನ ಸಿಗಲಿದೆ.
ತುಲಾ: ಗೆಳೆಯರೊಂದಿಗೆ ಯಾತ್ರೆ, ಪ್ರವಾಸ ಮಾಡಿ ನಿಮ್ಮ ಸಮಯವನ್ನು ಸಂತೋಷದಿಂದ ಕಳೆಯುವಿರಿ. ವೃತ್ತಿರಂಗದಲ್ಲಿ ಅಭಿವೃದ್ಧಿಯು ಮುನ್ನಡೆಗೆ ಸಾಧಕವಾಗಲಿದೆ. ವಿದ್ಯಾರ್ಥಿಗಳು ಪರಿಶ್ರಮ ಹಾಕಿದರೆ ಯಶಸ್ಸು.
ವೃಶ್ಚಿಕ: ರಾಜಕೀಯ ರಂಗದಲ್ಲಿಯೂ ಆಗಾಗ ಸ್ಪರ್ಧೆಗಿಳಿಯಬೇಕಾದೀತು. ಕೆಟ್ಟ ಜನರ ಸಹವಾಸದಿಂದ ದೂರವಿದ್ದರೆ ಒಳ್ಳೆಯದು. ನಿಮ್ಮ ಚಿಂತೆಯು ಅನಾವಶ್ಯಕವಾಗಲಿದೆ. ಇಬ್ಬಗೆಯ ಮನದ ಹೊಯ್ದಾಟದಿಂದ ಕೆಲಸ ಕೆಡಲಿದೆ.
ಧನು: ಕೆಲಸ ಕಾರ್ಯಗಳು ವಿಳಂಬಗತಿಯಿಂದ ಮುಂದುವರಿಯಲಿವೆ. ನಿರುದ್ಯೋಗಿಗಳ ಪ್ರಯತ್ನಬಲ ಫಲಿಸಲಿದೆ. ಆರ್ಥಿಕ ಬಿಕ್ಕಟ್ಟಿನ ಲಕ್ಷಣವು ಕಾಣಿಸಲಿದೆ. ಜಾಗ್ರತೆ ವಹಿಸಿರಿ. ಧಾರ್ಮಿಕ ಕೆಲಸ ಕಾರ್ಯಗಳು ನಡೆಯಲಿವೆ.
ಮಕರ: ಹಂತಹಂತವಾಗಿ ಗಳಿಕೆಯು ವೃದ್ಧಿಯಾದರೂ ನಿಮಗೆ ಸಮಾಧಾನವಿರದು. ಕೆಲವೊಮ್ಮೆ ದೈಹಿಕವಾಗಿ ಸಮಸ್ಯೆಗಳು ಕಾಡಬಹುದು. ಗಣ್ಯ ಮಹನೀಯರ ಸಹಕಾರ ದೊರೆತು ಮುನ್ನಡೆ ಸಾಧಕವಾಗಲಿದೆ. ಜಾಗ್ರತೆ ಇರಲಿ.
ಕುಂಭ: ಗೃಹದಲ್ಲಿ ಅಲಂಕಾರಿಕ, ಮನೋರಂಜನೆ ಸಾಮಾಗ್ರಿಗಳ ಖರೀದಿಗಾಗಿ ಖರ್ಚು ಬರಲಿದೆ. ಆಕಸ್ಮಿಕ ಧನಾಗಮನದಿಂದ ಇಚ್ಛಿತ ಕಾರ್ಯಗಳ ಸಿದ್ಧಿಯಾಗಲಿದೆ. ಅವಿವಾಹಿತರಿಗೆ ಉತ್ತಮ ಸಂಬಂಧಗಳು ಕೂಡಿ ಬರುವುದು.
ಮೀನ: ಉದ್ಯೋಗ ಅರಸುವವರಿಗೆ ಸಮಾಧಾನದ ಉದ್ಯೋಗ ದೊರಕಲಿದೆ. ಕಾರ್ಯಕ್ಷೇತ್ರದಲ್ಲಿ ಸ್ಥಾನಮಾನ ಗಳು ಲಭಿಸಿದರೂ ಸಮಾಧಾನವಿರದು. ವಿದ್ಯಾರ್ಥಿಗಳ ಜಾಣ್ಮೆಗೆ ಇದು ಪರೀಕ್ಷಾ ಕಾಲ. ಮುನ್ನಡೆಯಿರಿ. ಶುಭವಿದೆ.
ಎನ್.ಎಸ್. ಭಟ್
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.