ದಾನಿಗಳ ಆಸ್ತಿ ಶಾಲೆಗೆ ನೋಂದಣಿ
Team Udayavani, Apr 13, 2021, 1:46 PM IST
ದೇವದುರ್ಗ: ಸ್ವಾತಂತ್ರ್ಯ ನಂತರ ಸರಕಾರಿ ಶಾಲೆಗಳಕಟ್ಟಡ ನಿರ್ಮಿಸಲು ದಾನಿಗಳು ಜಾಗ ನೀಡಿದ್ದು,ಶಾಲೆಯ ಹೆಸರಿಗೆ ನೋಂದಣಿ ಆಗದೇ ಇರುವಶಾಲೆಗಳನ್ನು ಕಲಂ 11ರಲ್ಲಿ ನೋಂದಣಿ ಮಾಡಿಸುವ ಪ್ರಕ್ರಿಯೆ ಚುರುಕಾಗಿ ನಡೆದಿದೆ.
ತಾಲೂಕಿನಲ್ಲಿ 348 ಶಾಲೆಗಳಿದ್ದು, ಅದರಲ್ಲಿ 241 ಶಾಲೆ ಹೆಸರಲ್ಲಿ ನೋಂದಣಿ ಆಗಿವೆ. ನೂರಕ್ಕೂ ಅಧಿಕ ಶಾಲೆಗಳು ಕಲಂ 9ರ ದಾನಿಗಳ ಹೆಸರಿನಲ್ಲಿದ್ದು, ಶಾಲೆಗಳ ಹೆಸರಿಗೆ ಸರ್ವೇ ನೋಂದಣಿ ಪ್ರಕ್ರಿಯೆನಡೆದಿದೆ. 1956ರಿಂದ ಇಲ್ಲಿಯವರೆಗೆ ಬಹುತೇಕಶಾಲೆಗಳು ದಾನಿಗಳ ಹೆಸರಿನಲ್ಲಿವೆ. ಶಾಲಾ ಮುಖ್ಯಶಿಕ್ಷಕರು ಆಸ್ತಿ ವರ್ಗಾಯಿಸಲು ವಿಫಲವಾದ ಕಾರಣಕ್ಷೇತ್ರ ಶಿಕ್ಷಣಾಧಿಕಾರಿಗಳು ಬೆನ್ನತ್ತಿದ್ದಾರೆ. ಶಾಲೆಗೆ ನಿವೇಶನ ನೀಡಿರುವ ದಾನಿಗಳ ಹೆಸರಿನಲ್ಲಿರುವಆಸ್ತಿಯನ್ನು ಕಂದಾಯ ಭೂ ದಾಖಲೆಯಲ್ಲಿ ನೋಂದಣಿ ಮಾಡುವ ಕಾರ್ಯ ನಡೆದಿದೆ.
ಪಟ್ಟಣ ಸೇರಿ ತಾಲೂಕಿನಾದ್ಯಂತ ಕಂದಾಯ ಇಲಾಖೆ ಅಧಿಕಾರಿಗಳು ಸರ್ವೇ ನಡೆಸಿ ದಾಖಲಾತಿಗಳ ವರದಿಯನ್ನು ಸಹಾಯಕ ಆಯುಕ್ತರಿಗೆ ರವಾನಿಸಲಾಗುತ್ತಿದೆ. ಆಯುಕ್ತರು ಅನುಮೋದನೆನಂತರ ಕಲಂ 11ರಲ್ಲಿ ಸರಕಾರಿ ಶಾಲೆಯ ಹೆಸರಿನಲ್ಲಿ ನೋಂದಣಿ ಆಗುತ್ತದೆ. ನೂರಕ್ಕೂ ಅಧಿಕ ಶಾಲೆಗಳಸಮಸ್ಯೆ ಈಗಾಗಲೇ 44 ಶಾಲೆಗಳು ಆಯುಕ್ತರಅನುಮೋದನೆ ಪಡೆದು ಶಾಲೆ ಹೆಸರಿನಲ್ಲಿ ಪಹಣಿ ಆಗಿವೆ. ಪಟ್ಟಣದಲ್ಲಿ 11, ಜಾಲಹಳ್ಳಿ 8, ಗಬ್ಬೂರು 8,ಅರಕೇರಾ 17 ನೋಂದಣಿ ಪ್ರಕ್ರಿಯೆ ಮುಗಿದಿವೆ.ಪಟ್ಟಣದ ಕೆಇಬಿ ಶಾಲೆ, ಜನತಾ ಕಾಲೋನಿ,ನಗರಗುಂಡ, ಮರಿಗೆಮ್ಮದಿಬ್ಬಿ ತಾಂಡಾ, ಖಾನಪುರು, ಮಸೀದಪುರು, ಗಲಗ, ಲಿಂಗದಹಳ್ಳಿ, ಬಸ್ಸಾಪುರು, ಬೋಗಿರಾಮನಗುಂಡ, ಕ್ಯಾದಿಗೇರಾ, ಶಿವಂಗಿ,ಅಮರಾಪುರು ಸೇರಿ ಇತರೆ ಸರಕಾರಿ ಶಾಲೆಗಳು ಜಾಗ ನೀಡಿದ ದಾನಿಗಳ ಹೆಸರಿನಲ್ಲಿವೆ. ಚುರುಕಾಗಿಸರ್ವೇ ಮಾಡಲು ತಹಶೀಲ್ದಾರ್ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶಾಲಾ ಮುಖ್ಯಶಿಕ್ಷಕರೊಂದಿಗೆ ಸರ್ವೇ ಕಾರ್ಯ ನಡೆಯುತ್ತಿದೆ.
ಸರಕಾರಿ ಶಾಲೆಗಳಿಗೆ ಉಚಿತ ಜಾಗ ನೀಡಿರುವ ಬಹುತೇಕ ದಾನಿಗಳು ಮೃತಪಟ್ಟಿದ್ದಾರೆ. ಸರ್ವೇನೋಂದಣಿ ಪ್ರಕ್ರಿಯೆಗೆ ದಾನಿಗಳ ಸಂಬಂಧಿಕರು ಯಾವುದೇ ತಕರಾರು ಮಾಡುತ್ತಿಲ್ಲ ಎನ್ನಲಾಗುತ್ತಿದೆ. ಹಳೆ ಜೀವಕ್ಕೆ ಹೊಸ ಕಳೆ ಬಂದಂತಾಗಿದೆ. ಸರ್ಕಾರಿ ಆಸ್ತಿ ಯಾವುದೇ ಕಾರಣಕ್ಕೆ ಒತ್ತುವರಿ ಆಗದಂತೆ ದಾನಿಗಳ ಹೆಸರಿನಲ್ಲಿರುವ ಜಾಗ ಶಾಲೆಗಳ ಹೆಸರಿಗೆ ನೋಂದಣಿ ಮಾಡಲಾಗುತ್ತಿದೆ. ಕಳೆದ ಎರಡ್ಮೂರು ತಿಂಗಳಿಂದ ಇಂತಹ ಪ್ರಕರಣಗಳ ಪತ್ತೆಗಾಗಿ ಅಧಿಕಾರಿಗಳು ಸಿಆರ್‌ಪಿಗಳಿಂದ ಮಾಹಿತಿ ಕಲೆ ಹಾಕಿದ್ದಾರೆ. ಹಲವು ಬಾರಿ ಮೀಟಿಂಗ್‌ನಲ್ಲಿ ಶಾಲಾಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿತ್ತು. ತಡವಾಗಿಎಚ್ಚೆತ್ತಗೊಂಡ ಶಿಕ್ಷಕರು ಜಾಗ ಸರ್ವೇ ಮಾಡಲು ಕಂದಾಯ ಅಧಿಕಾರಿಗಳ ಜತೆ ಕೈಜೋಡಿಸಿದ್ದಾರೆ. ಸ್ವಾತಂತ್ರ್ಯ ನಂತರ ದಾನಿಗಳು ನೀಡಿದ ಜಾಗ ಸುಮಾರು ವರ್ಷಗಳ ಬಳಿಕ ಶಾಲೆ ಹೆಸರಿಗೆ ನೋಂದಣಿ ಪ್ರಕ್ರಿಯೆ ನಡೆದಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.
ದಾನಿಗಳ ಹೆಸರಿನಲ್ಲಿರುವ ಆಸ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪಟ್ಟಿ ನೀಡಿದ್ದು, ಕಲಂ 11ರಲ್ಲಿ ಶಾಲೆ ಹೆಸರಿಗೆ ನೋಂದಣಿ ಪ್ರಕ್ರಿಯೆ ನಡೆದಿದೆ. 44 ಶಾಲೆಗಳ ಪಹಣಿ ಮಾಡಲಾಗಿದೆ. –ಮಧುರಾಜ ಯಾಳಗಿ, ತಹಶೀಲ್ದಾರ್
147 ಸರಕಾರಿ ಶಾಲೆಗಳು ಆಸ್ತಿ ದಾನಿಗಳ ಹೆಸರಿನಲ್ಲಿದ್ದು, ಕಂದಾಯ ಇಲಾಖೆಯಿಂದ ಸರ್ವೇ ನಡೆಸಿ ಶಾಲೆಗಳ ಹೆಸರಿಗೆ ನೋಂದಣಿ ಮಾಡಲಾಗುತ್ತಿದೆ. ಶೇ.80 ಕೆಲಸ ಆಗಿದ್ದು, ಅಧಿಕಾರಿಗಳು ಹೆಚ್ಚು ಆಸಕ್ತಿ ವಹಿಸಿದ್ದಾರೆ. –ಆರ್.ಇಂದಿರಾ, ಕ್ಷೇತ್ರ ಶಿಕ್ಷಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.