ಅಧಿಕಾರಿಗಳ ಒತ್ತಡಕ್ಕೆ ಸಿಬ್ಬಂದಿ ಅಸಹಕಾರ!
Team Udayavani, Apr 13, 2021, 3:02 PM IST
ಯಾದಗಿರಿ: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು 6ನೇ ವೇತನ ಜಾರಿ ಸೇರಿದಂತೆ ಹಲವು ಬೇಡಿಕೆಮುಂದಿಟ್ಟು ನಡೆಸುತ್ತಿರುವ ಮುಷ್ಕರ6ನೇ ದಿನ ಪೂರೈಸಿದ್ದು, ಸರ್ಕಾರ ಮತ್ತು ನೌಕರರ ಮಧ್ಯೆ ನೀ ಕೊಡೆ, ನಾ ಬಿಡೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಚಾಲಕ- ನಿರ್ವಾಹಕರು ಬಸ್ ನಿಲ್ದಾಣದಲ್ಲಿ ವಾಹನ ನಿಲ್ಲಿಸಿ ಅಸಹಕಾರ ತೋರುತ್ತಿರುವ ಪ್ರಶ್ನೆ ಉದ್ಭವವಾಗಿದೆ. ಎಲ್ಲೆಡೆ ಸಾರಿಗೆ ಸಿಬ್ಬಂದಿ ಮುಷ್ಕರಹತ್ತಿಕ್ಕಲು ನಿಗಮಗಳು ನೌಕರರ ಮೇಲೆ ವಿವಿಧ ಅಸ್ತ್ರ ಪ್ರಯೋಗಿಸುತ್ತಿವೆ ಎನ್ನುವಮಾತುಗಳು ನೊಂದ ನೌಕರರಿಂದ ಕೇಳಿ ಬರುತ್ತಿದ್ದು, ಸಾರಿಗೆ ಸಿಬ್ಬಂದಿ ಅಧಿಕಾರಿಗಳಒತ್ತಾಯಕ್ಕೆ ಮಣಿದು ಮನಸ್ಸಿಲ್ಲದೇ ವಾಹನ ಚಲಾಯಿಸುತ್ತಿರುವುದುಕಂಡು ಬರುತ್ತಿದೆ. ಯಾದಗಿರಿಯಿಂದ ಗುರುಮಠಕಲ್ ಮಾರ್ಗಕ್ಕೆತೆರಳಬೇಕಿದ್ದ ವಾಹನ ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ನೆರೆಯ ತೆಲಂಗಾಣದಬಸ್‌ಗಳಲ್ಲಿ ಯಾದಗಿರಿ, ಗುರುಮಠಕಲ್‌ಮಾರ್ಗವಾಗಿ ಹೈದ್ರಾಬಾದ್‌ಗೆ ಜನರುಪ್ರಯಾಣಿಸುತ್ತಿದ್ದರು. ಆದರೆ ಈಶಾನ್ಯ ಸಾರಿಗೆ ಚಾಲಕ, ನಿರ್ವಾಹಕರು ನಾಮಕೇವಾಸ್ತೆ ಎನ್ನುವಂತೆ ವಾಹನವನ್ನು ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದರು.
ಯಾದಗಿರಿ ವಿಭಾಗದಲ್ಲೂ ನೌಕರರ ಎತ್ತಂಗಡಿ: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಚಾಲಕ-ನಿರ್ವಾಹಕರು ಸೇರಿ ತಾಂತ್ರಿಕ ಸಿಬ್ಬಂದಿಯನ್ನೂ ಸಾರಿಗೆನಿಗಮಗಳು ಎತ್ತಂಗಡಿ ಮಾಡುತ್ತಿದ್ದು,ಗುರುಮಠಕಲ್ ಘಟಕದಿಂದ ಹಡಗಲಿ,ಸಂಡೂರ, ಯಾದಗಿರಿಯಿಂದಹಗರಿಬೊಮ್ಮನಹಳ್ಳಿ, ಕೊಪ್ಪಳದ ಕುಕನೂರ, ಭಾಲ್ಕಿ, ಶಹಾಪುರದಿಂದ ಹಡಗಲಿ ಘಟಕಗಳಿಗೆ ಚಾಲಕ-ನಿರ್ವಾಹಕರನ್ನು ವರ್ಗಾವಣೆ ಮಾಡಲಾಗಿದೆ.
ತೆಲಂಗಾಣ ಸಾರಿಗೆ ಸಂಖ್ಯೆ ಹೆಚ್ಚಳ?:
ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ನೆರೆಯ ತೆಲಂಗಾಣಸರ್ಕಾರದ ಸಾರಿಗೆ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿವೆ.ಮುಷ್ಕರದಿಂದ ಪ್ರಯಾಣಿಕರ ಸಂಖ್ಯೆ ಕುಂಠಿತವಾಗಿದ್ದು ಮೇಲ್ನೋಟಕ್ಕೆಕಂಡು ಬಂದರೂ ತೆಲಂಗಾಣ ಸರ್ಕಾರಕರ್ನಾಟಕ ಗಡಿಯಲ್ಲಿ ಹೆಚ್ಚಿನ ವಾಹನ ಸಂಚರಿಸುವಂತೆ ನೋಡಿಕೊಳ್ಳುತ್ತಿದೆ. ಈ ಭಾಗದಿಂದ ಕೊಡಂಗಲ್, ಪರಗಿಹಾಗೂ ಹೈದ್ರಾಬಾದ್‌ಗೆ ತೆರಳಲುರಾಜ್ಯದ ಪ್ರಯಾಣಿಕರು ಅನಿವಾರ್ಯವಾಗಿತೆಲಂಗಾಣ ಸಾರಿಗೆಯನ್ನೇ ಅವಲಂಬಿಸಿದ್ದಾರೆ.
ವೇತನ ಹೆಚ್ಚಳಕ್ಕೆ ನಾವೆಲ್ಲ ಹೋರಾಡುತ್ತಿದ್ದೇವೆ. ಅಧಿಕಾರಿಗಳು ಕರೆದಿದ್ದರಿಂದ ವಾಹನಚಲಾಯಿಸಿದೆ. ಭವಿಷ್ಯದಲ್ಲಿಉತ್ತಮ ಸಂಬಳ ಸಿಕ್ಕು ಇತರೆಸರ್ಕಾರಿ ನೌಕರರಂತೆ ನಮಗೂಸೌಲಭ್ಯಗಳು ಸಿಗಬೇಕಿದೆ. ಹಾಗಾಗಿಹೋರಾಟದಿಂದ ಹಿಂದೆ ಸರಿಯುವಮಾತಿಲ್ಲ. ನಮ್ಮ ಬೇಡಿಕೆಗೆ ಸ್ಪಂದಿಸಿಸರ್ಕಾರ ಸೌಲಭ್ಯ ನೀಡಲಿ.-ಹೆಸರು ಹೇಳಲಿಚ್ಛಿಸದ ಚಾಲಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.