ಸಾಹಿತ್ಯ ಸೇವೆಗೆ ಅವಕಾಶ ಕೊಡಿ: ನಿರಗುಡಿ
ಶಾಲಾ ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯದ ಕುರಿತು ಅರ್ಥಪೂರ್ಣ ವಾತಾವರಣ ಸೃಷ್ಟಿಸಲಾಗುವುದು.
Team Udayavani, Apr 13, 2021, 6:17 PM IST
ವಾಡಿ: ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕಾರ ಎಂಬುದು ಸರಕಾರಿ ನೌಕರಿಯಲ್ಲ. ಅದೊಂದು ಸಾಹಿತ್ಯ ಸೇವಾ ವಲಯ. ಅಧ್ಯಕ್ಷ ಗಾದಿಗಾಗಿ ಪದೇ ಪದೇ ಸ್ಪರ್ಧೆ ಮಾಡುವ ಆಸೆ ನನಗಿಲ್ಲ. ಒಮ್ಮೆ ಅವಕಾಶ ಕೊಟ್ಟರೆ ಮತ್ತೂಮ್ಮೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಅಭ್ಯರ್ಥಿ, ಬರಹಗಾರ ಬಿ.ಎಚ್.ನಿರಗುಡಿ ಸ್ಪಷ್ಟಪಡಿಸಿದರು.
ನಾಲವಾರ ಕೋರಿಸಿದ್ಧೇಶ್ವರ ಸಂಸ್ಥಾನ ಮಠಕ್ಕೆ ಭೇಟಿ ನೀಡಿದ ಅವರು, ಮಠದ ಪೀಠಾಧಿಪತಿ ಡಾ.ಸಿದ್ಧ ತೋಟೇಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆದ ಬಳಿಕ ಕಸಾಪ ಸದಸ್ಯರೊಂದಿಗೆ ಮಾತುಕತೆ ನಡೆಸಿ ಮಾತನಾಡಿದರು. ಕಸಾಪ ಅಧ್ಯಕ್ಷ ಸ್ಥಾನವನ್ನು ಕೆಲವರು ಸರಕಾರಿ ನೌಕರಿ ಎಂದು ತಿಳಿದ್ದಾರೆ. ಮೂರ್‍ನಾಲ್ಕು ಬಾರಿ ಅವಕಾಶ ದೊರೆತರೂ ಸಾಹಿತ್ಯ ಚಟುವಟಿಕೆಗಳಿಗೆ ಆದ್ಯತೆ ನೀಡದೆ ಬರಹ ಲೋಕ ಬಡವಾಗಿಸಿದ್ದಾರೆ. ಮತ್ತೆ ಮತ್ತೆ ಅವಕಾಶಕ್ಕಾಗಿ ಹಪಹಪಿಸುತ್ತಿದ್ದಾರೆ.
ಹೊಸಬರಿಗೆ ಅವಕಾಶ ಒದಗಿಸಬೇಕು ಎನ್ನುವ ಮನೋಭಾವ ಇಲ್ಲದವರು ಕೇವಲ ಕಟ್ಟಡಗಳನ್ನು ಮಾತ್ರ ಕಟ್ಟಬಹುದು. ಆದರೆ ಸಾಹಿತ್ಯ ಮನಸ್ಸುಗಳನ್ನು ಕಟ್ಟಲಾರರು ಎಂದು ಆರೋಪಿಸಿದರು. ಜಿಲ್ಲಾ ಸಾಹಿತ್ಯ ಕ್ಷೇತ್ರದ ಹಿರಿಯ ಕಿರಿಯ ಬರಹಗಾರರನ್ನು ಗುರುತಿಸುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಜತೆಗೆ ಸಾಹಿತ್ಯ ಕಮ್ಮಟಗಳನ್ನು ಹೆಚ್ಚೆಚ್ಚು ಸಂಘಟಿಸುವ ಮನೋಭಾವ ಹೊಂದಿದ್ದೇನೆ.
ಕನ್ನಡಪರ ಸಂಘಟನೆಗಳು ಮತ್ತು ಸಾಹಿತ್ಯ ವೇದಿಕೆಗಳು ಹಮ್ಮಿಕೊಳ್ಳುವ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಕನ್ನಡ ಭವನದ ರಂಗಂದಿರ ಬಳಕೆಗೆ ರಿಯಾಯಿತಿ ನೀಡಲಾಗುವುದು. ಶಾಲಾ ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯದ ಕುರಿತು ಅರ್ಥಪೂರ್ಣ ವಾತಾವರಣ ಸೃಷ್ಟಿಸಲಾಗುವುದು. ಸಾಮೂಹಿಕ ನಾಯಕತ್ವಕ್ಕೆ ಆದ್ಯತೆ ನೀಡಲಾಗುವುದು. ಈಗಾಗಲೇ ಹಲವು ಸಂಘ, ಸಂಸ್ಥೆಗಳು ಮತ್ತು ಹಿರಿಯ, ಕಿರಿಯ ಸಾಹಿತಿಗಳು ಮುಕ್ತವಾಗಿ ನನಗೆ ಬೆಂಬಲ ಸೂಚಿಸಿದ್ದಾರೆ. ಎಲ್ಲಾ ಕಸಾಪ ಸದಸ್ಯರು ಒಮ್ಮೆ ನನಗೆ ಅಧ್ಯಕ್ಷನಾಗಲು ಆಶೀರ್ವಾದ ಮಾಡಿಬೇಕು ಎಂದು ನಿರಗುಡಿ ಮನವಿ ಮಾಡಿದರು.
ಡಾ.ಸಿದ್ಧ ತೋಟೇಂದ್ರ ಶ್ರೀಗಳು ಮಾತನಾಡಿ, ಕನ್ನಡ ಸಾಹಿತ್ಯದ ತೇರು ಎಳೆಯುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ನಿರಗುಡಿಯವರು ಬರಹಗಾರರಾಗಿದ್ದಾರೆ. ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಪತ್ರಕರ್ತರಾಗಿ, ಉಪನ್ಯಾಸಕರಾಗಿ ನಿರಂತರವಾಗಿ ಕನ್ನಡದ ಸೇವೆಯಲ್ಲಿದ್ದಾರೆ. ಅಧಿ ಕಾರಕ್ಕಾಗಿ ಹಂಬಲಿಸುವವರಿಗಿಂತ ಅಧಿಕಾರ ಎಲ್ಲರಿಗೂ ಸಿಗುವಂತಾಗಬೇಕು. ಸಿಕ್ಕ ಅವಕಾಶವನ್ನು ಸಾಹಿತ್ಯ ಕ್ಷೇತ್ರದ ಪ್ರಗತಿಗಾಗಿ ಬಳಕೆಯಾಗಬೇಕು ಎಂಬ ಮನದಾಸೆ ಹೊಂದಿರುವುದು ಅವರ ದೊಡ್ಡ ಗುಣ ಎಂದು ಹರಸಿದರು. ನಾಲವಾರ ಕಸಾಪದ ಮಹಾದೇವ ಗವ್ಹಾರ, ಕಸಾಪ ಕಲಬುರಗಿ ತಾಲೂಕು ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ, ಉಪಾಧ್ಯಕ್ಷ ಭೀಮಾಶಂಕರ ಎನ್.ಯಳಮೇಲಿ, ಶರಣಗೌಡ ಪಾಟೀಲ, ವೇದಕುಮಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.