![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 13, 2021, 9:12 PM IST
ವಿಟ್ಲ : ಅಕ್ರಮವಾಗಿ ಗೋವು ಸಾಗಿಸುತ್ತಿದ್ದವನನ್ನು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ವಶಕ್ಕೆ ಪಡೆದಿರುವ ಘಟನೆ ಇಂದು (ಏಪ್ರಿಲ್ 13) ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.
ವಿಟ್ಲ ಸಮೀಪದ ಕಾಶಿಮಠದಲ್ಲಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ, ಅಕ್ರಮ ಗೋವು ಸಾಗಾಟವನ್ನು ತಡೆದಿದ್ದಾರೆ.
ಕೇರಳ ಪರವಾನಿಗೆ ಹೊಂದಿದ್ದ ಮಾಣಿ ಮುಳಿಬೈಲು ನಿವಾಸಿಯೋರ್ವ ಅಕ್ರಮವಾಗಿ ಗೋವನ್ನು ಸಾಗಿಸುತ್ತಿದ್ದ. ಇದರ ಖಚಿತ ಮಾಹಿತಿಯನ್ನು ಪಡೆದ ಕಾರ್ಯಕರ್ತರು, ವಾಹನವನ್ನು ಅಡ್ಡಗಟ್ಟಿ ಗೋವುಗಳನ್ನು ರಕ್ಷಿಸಿದ್ದಾರೆ.
ಆರೋಪಿಯು ಸಂಶಯ ಬರದಂತೆ ಗೋವಿನ ಜೊತೆಗೆ ಕರುವನ್ನು ಸಾಗಿಸುತ್ತಿದ್ದ ಎನ್ನಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.