ಅಗತ್ಯವುಳ್ಳವರಿಗೆ ಲಸಿಕೆ ಕೊಡಿಸಿ ನಿಜಾರ್ಥದ ಸಮಾಜ ಸೇವಕರಾಗಿ
Team Udayavani, Apr 14, 2021, 10:01 AM IST
ಸಮಾಜ ಸೇವಕರು ಎಂದು ಕರೆಸಿಕೊಳ್ಳಲು ಬಯಸು ವವರ ಸಂಖ್ಯೆ ಸಾಕಷ್ಟು ದೊಡ್ಡದಿದೆ. ಆದರೆ ಅದರಲ್ಲಿ ನಿಜವಾಗಿ ಸಮಾಜ ಸೇವೆ ಮಾಡುವವರು ಎಷ್ಟು ಮಂದಿ ಎಂಬ ಪ್ರಶ್ನೆ ಜೀವಂತವಾಗಿಯೇ ಇದೆ. ಈಗಿನ ಕೋವಿಡ್ ಕಾಲದಲ್ಲಿ ನಿಜವಾದ ಸಮಾಜ ಸೇವೆ ಮಾಡಲು ಎಲ್ಲರಿಗೂ ಉತ್ತಮ ಅವಕಾಶವಿದೆ. ಅರ್ಹರು ಮತ್ತು ಅಗತ್ಯವುಳ್ಳವರಿಗೆ ಲಸಿಕೆ ಕೊಡಿಸುವ ಮೂಲಕ ವೈಯ ಕ್ತಿಕವಾಗಿ ಆ ವ್ಯಕ್ತಿಗೆ, ಬಳಿಕ ಅವರ ಮನೆಯವರಿಗೂ ಅನುಕೂಲ ಮಾಡ ಬಹುದು. ಇದು ಸೋಂಕು ಹರಡುವು ದನ್ನು ತಪ್ಪಿಸಲು ಸಹಾಯಕವಾಗುವ ಮೂಲಕ ಪರೋಕ್ಷವಾಗಿ ಸಮಾಜಕ್ಕೂ ಉತ್ತಮ ಕೊಡುಗೆಯಾಗುತ್ತದೆ. ಇದಕ್ಕೆ ಕಾರಣರಾದವರು ನಿಜಾರ್ಥದ ಸಮಾಜಸೇವಕರಾಗುತ್ತಾರೆ.
ನಾನು ಎರಡು ಡೋಸ್ ಲಸಿಕೆ ತೆಗೆದುಕೊಂಡಿದ್ದೇನೆ. ಯಾವುದೇ ಸಮಸ್ಯೆಯಾಗಿಲ್ಲ. ಕೋವಿಡ್ ಮಹಾಮಾರಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಎಲ್ಲರೂ ಲಸಿಕೆ ತೆಗೆದುಕೊಳ್ಳುವುದು ಅತಿ ಅಗತ್ಯವಾಗಿದೆ. ಜನರು ಈ ಬಗೆಗಿನ ಯಾವುದೇ ವದಂತಿಗಳಿಗೆ ಕಿವಿಗೊಡದೆ ತಮ್ಮ ಸುರಕ್ಷೆಗೆ ಆದ್ಯತೆ ನೀಡಿ ಲಸಿಕೆ ತೆಗೆದುಕೊಳ್ಳಬೇಕು.–ಡಾ| ಎಚ್.ಎಸ್.ಬಲ್ಲಾಳ್, ಸಹಕುಲಾಧಿಪತಿ ಮಾಹೆ
ನಾನು ಎರಡು ತಿಂಗಳ ಹಿಂದೆ ಲಸಿಕೆ ಪಡೆದಿದ್ದು, ಇದುವರೆಗೆ ಯಾವುದೇ ಸಮಸ್ಯೆ ಆಗಿಲ್ಲ. ಲಸಿಕೆ ಪಡೆದ ಬಳಿಕ ಹೊಸ ಧೈರ್ಯವೂ ಬಂದಿದೆ. ಆದ್ದರಿಂದ ಯಾರೂ ಆತಂಕ, ಗೊಂದಲಕ್ಕೆ ಒಳಗಾಗಬಾರದು ಹಾಗೂ ಲಸಿಕೆ ಕುರಿತಾದ ವದಂತಿಗಳಿಗೆ ಕಿವಿಗೊಡಬಾರದು. ಎಲ್ಲರೂ ಲಸಿಕೆ ಪಡೆದುಕೊಂಡು ಕೊರೊನಾದಿಂದ ತಮ್ಮನ್ನು ರಕ್ಷಿಸಿಕೊಳ್ಳುವುದು ಅಗತ್ಯ. – ಟಿ. ಶೇಷಪ್ಪ ಮೂಲ್ಯ, ನಿವೃತ್ತ ಶಿಕ್ಷಕರು ಹಾಗೂ ಸಮಾಜಸೇವಕರು
ಈಗ 45 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಆರಂಭವಾಗಿದ್ದು, ಜನರಲ್ಲಿ ಹೊಸ ಹೊಸ ಪ್ರಶ್ನೆಗಳು ಮೂಡುತ್ತಿವೆ. ಓದುಗರು ಶನಿವಾರ ಕೇಳಿರುವ ಪ್ರಮುಖ ಪ್ರಶ್ನೆಗಳಿಗೆ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಜಿ.ಎಸ್. ಚಂದ್ರಶೇಖರ್ ಅವರು ಉತ್ತರಿಸಿದ್ದಾರೆ.
ನನ್ನ ಮಗನಿಗೆ 31 ವರ್ಷ. ವಿದೇಶದಲ್ಲಿದ್ದ ಆತ ಕೊರೊನಾ ಸೋಂಕಿಗೊಳಗಾಗಿ 4 ತಿಂಗಳ ಹಿಂದೆ ಚೇತರಿಸಿಕೊಂಡಿದ್ದಾನೆ. ಆ ಸಮಯದಲ್ಲಿ ಥೈರಾಯಿಡ್ ಸಮಸ್ಯೆ ಕಾಣಿಸಿದ್ದು, ಅದಕ್ಕೆ ಔಷಧ ಬೇಡ ಎಂದಿದ್ದಾರೆ. ಈಗಲೂ ತುಂಬಾ ಸುಸ್ತು, ಕೆಲಸ ಮಾಡಲು ಆಗುತ್ತಿಲ್ಲ. ಏನು ಮಾಡಬೇಕು? – ಹೆಸರು ತಿಳಿಸಿಲ್ಲ, ಉದ್ಯಾವರ
ಲಸಿಕೆ ತೆಗೆದುಕೊಳ್ಳಬಹುದು. ಇದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗದು. ಇತರ ಸಮಸ್ಯೆಗೆ ವೈದ್ಯರನ್ನು ಮುಖತಾ ಭೇಟಿಯಾಗಿ ಸಲಹೆ ಪಡೆದುಕೊಳ್ಳಬಹುದು.
ಒಂದು ಮನೆಯ ಅರ್ಹರೆಲ್ಲರೂ ಒಟ್ಟಿಗೆ ಲಸಿಕೆ ತೆಗೆದುಕೊಳ್ಳುವುದು ಉತ್ತಮವೇ ಅಥವಾ ಬೇರೆ ಬೇರೆ ದಿನಗಳಲ್ಲಿ ತೆಗೆದುಕೊಳ್ಳುವುದು ಉತ್ತಮವೇ? –ರಮೇಶ್, ಮಂಗಳೂರು
ಬೇರೆ-ಬೇರೆ ದಿನ ತೆಗೆದುಕೊಳ್ಳುವುದಕ್ಕಿಂತ ಒಟ್ಟಿಗೆ ತೆಗೆದುಕೊಳ್ಳುವುದು ಸೂಕ್ತ. ಇದನ್ನು ಆದಷ್ಟು ಬೇಗನೆ ಮಾಡಿದರೆ ಮತ್ತೂ ಒಳ್ಳೆಯದು.
ಅಟೋಇಮ್ಯೂನಿ ಕಾಯಿಲೆ ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದಿದೆ. ನಾನು ಲಸಿಕೆ ತೆಗೆದುಕೊಳ್ಳಬಹುದೇ?-54 ವರ್ಷದ ವ್ಯಕ್ತಿ, ಉಡುಪಿ
ಇವರು ಅತ್ಯಾವಶ್ಯಕವಾಗಿ ಲಸಿಕೆ ತೆಗೆದುಕೊಳ್ಳಬೇಕು. ಸಂಧಿವಾತ ಕಾಯಿಲೆ ಇರುವವರು ಲಸಿಕೆ ತೆಗೆದುಕೊಳ್ಳುವುದರಿಂದ ಯಾವುದೇ ಸಮಸ್ಯೆಯಾಗದು..
ವಿವಿಧ ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಾಗರಿಕರಿಗೆ ಲಸಿಕೆ ಸಂಬಂಧಿಸಿ ಹಲವು ಗೊಂದಲಗಳಿರುತ್ತವೆ. ಅವರು ತಮ್ಮ ವೈದ್ಯರಿಂದ ಸರ್ಟಿಫಿಕೆಟ್ ಪಡೆಯುವ ಬದಲು ಲಸಿಕಾ ಕೇಂದ್ರಗಳಲ್ಲಿಯೇ ಅಗತ್ಯ ಮಾಹಿತಿ ನೀಡಿದರೆ ಉತ್ತಮವಲ್ಲವೇ?– ಥಾಮಸ್, ಊರು ತಿಳಿಸಿಲ್ಲ
ಕೋವಿಡ್-19 ಸೋಂಕಿನಿಂದ ಬಳಲುತ್ತಿರುವವರು ಲಸಿಕೆ ಪಡೆಯಬಾರದು. ಇತರ ಗಂಭೀರ ಕಾಯಿಲೆಗಳಿಂದ ಬಳಲುವವರು ವೈದ್ಯರ ಸಲಹೆ ಪಡೆದುಕೊಳ್ಳಬಹುದು. ಸದ್ಯಕ್ಕೆ ಲಸಿಕಾ ಕೇಂದ್ರಗಳಲ್ಲಿ ಈಗ ಲಸಿಕೆಯನ್ನಷ್ಟೇ ನೀಡಲಾಗುತ್ತಿದೆ. ಇತರ ರೋಗಗಳಿಗೆ ಸಂಬಂಧಿಸಿ ಮಾಹಿತಿ ನೀಡುವ ವ್ಯವಸ್ಥೆಯಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.