ಹಿಂದೂ ಸಂಪ್ರದಾಯದ ಮೊದಲ ಹಬ್ಬ ಯುಗಾದಿ
Team Udayavani, Apr 14, 2021, 2:00 AM IST
ಸಂತಸ, ನೆಮ್ಮದಿಯನ್ನು ತರುವ ಹಬ್ಬಗಳ ಆಚರಣೆಯುಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಇಂತಹ ಹಬ್ಬಗಳಲ್ಲಿ ಯುಗಾದಿ ಹಿಂದೂಸಂಪ್ರದಾಯದ ಮೊದಲ ಹಬ್ಬವಾಗಿದ್ದು,ಈ ಹಬ್ಬ ಭಾರತೀಯರ ಪಾಲಿಗೆ ಹೊಸ ಸಂವತ್ಸರದ ಮೊದಲ ದಿನವಾಗಿದೆ.
ಬದುಕಿನ ಹಳೆಯ ನೋವುಗಳನ್ನುಮನಸ್ಸಿನಿಂದ ತೊಡೆದು ಹಾಕಿನವೋಲ್ಲಾಸದಿಂದ ಹೊಸ ವರ್ಷವನ್ನುಹೊಸ ಉತ್ಸಾಹದಿಂದ ಸ್ವಾಗತಿಸುವಸುದಿನ ಇದಾಗಿದೆ. ಎಲೆಗಳನ್ನುಕಳಚಿಕೊಂಡು ಮತ್ತೆ ಚಿಗೊರೆಡೆದುಮರುಜೀವ ಪಡೆಯುವ ಮರಗಳುಪ್ರಕೃತಿಗೆ ಮತ್ತೆ ಹೊಸ ರೂಪ, ನವೋತ್ಸಾಹತರುವ ಕಾಲವಾದರೆ, ಚೈತ್ರ-ವಸಂತರಆಗಮನದಿಂದ ಪ್ರಕೃತಿ ಹೊಸ ರೂಪವನ್ನುತಂದು ಎಲ್ಲೆಡೆ ಸಂಭ್ರಮ ಉಲ್ಲಾಸವನ್ನು ತರುವ ಹಬ್ಬವೂ ಹೌದು.
ಯುಗಾದಿ ಹೆಸರೇ ಹೇಳುವಂತೆಯುಗದ ಆದಿ ಅಂದರೆ ಸೃಷ್ಟಿಯಆರಂಭ .ಭಾರತದಲ್ಲಿ ಈ ದಿನವನ್ನುಹಲವು ವಿಧದಲ್ಲಿ ನಿರ್ಧರಿಸಲಾಗುತ್ತದೆ.ಮುಖ್ಯವಾಗಿ ಚಾಂದ್ರಮಾನ ಹಾಗೂಸೌರಮಾನ ಎಂದು ಎರಡು ವಿಧಗಳಿದ್ದು, ಹಿಂದೂ ಧರ್ಮದ ವೇದಾಂಗ ಜ್ಯೋತಿಷ್ಯ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತದೆ. ಚಂದ್ರನ ಚಲನೆಯನ್ನಾಧರಿಸಿ ದಿನಗಣನೆ ಮಾಡುವುದನ್ನು ಚಾಂದ್ರಮಾನ ಹಾಗೂಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ.
ಶುಕ್ಲಪಕ್ಷದ ದಿನ ಚಾಂದ್ರಮಾನಯುಗಾದಿ ಹಾಗೇಯೇ ಸೂರ್ಯಮೇಷ ರಾಶಿ ಪ್ರವೇಶಿಸುವ ಪುಣ್ಯ ಕಾಲವೇಸೌರಮಾನ ಯುಗಾದಿ. ಪುರಾಣಗಳುಹೇಳುವಂತೆ ಮಹಾ ಜಳಪ್ರಳಯದನಂತರ ಬ್ರಹ್ಮದೇವ ಯುಗಾದಿಯಂದೇಲೋಕದ ಸೃಷ್ಟಿಕಾರ್ಯ ಆರಂಭಿಸಿದನುಎಂದಿದೆ. ಹಿಂದೆ ತ್ರೇತ್ರಾಯುಗದಲ್ಲಿಶ್ರೀರಾಮಚಂದ್ರ ರಾವಣನನ್ನುಯುದ್ಧದಲ್ಲಿ ಸೋಲಿಸಿ , ಅಯೋಧ್ಯೆಗೆತೆರಳಿ ಯುಗಾದಿಯ ದಿನದಂದೇರಾಜ್ಯಭಾರ ನಡೆಸಿದ್ದಾನೆ ಎಂದುಹೇಳಲಾಗಿದೆ. ಹೀಗೆ ಪುರಾಣಗಳಲ್ಲೂಯುಗಾದಿಯ ಪ್ರಾಮುಖ್ಯತೆಯನ್ನು ಹೇಳುತ್ತದೆ.
ಯುಗಾದಿ ಎಲ್ಲೆಡೆ ಸಂಭ್ರಮಸಡಗರವನ್ನು ತರುತ್ತದೆ. ಹಬ್ಬದದಿನ ಮನೆಯನ್ನು ಸ್ವಚ್ಛಗೊಳಿಸಿ ,ತಳಿರು ತೋರಣಕಟ್ಟಿ , ಮನೆಯ ಮುಂದಿನ ಅಂಗಳದಲ್ಲಿ ರಂಗೋಲಿಹಾಕಲಾಗುತ್ತದೆ. ಮುಂಜಾನೆಯೇ ದೇವರ ಸ್ಮರಣೆ ಮಾಡುತ್ತಾ, ನಿತ್ಯಕರ್ಮಮುಗಿಸಿ, ಮನೆಯ ಆವರಣಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ, ಮನೆಯ ಮುಂದೆ ರಂಗೋಲಿ ಹಾಕಿ ದೇವತಾರಾಧನೆಯ ಮೂಲಕಬೇವು-ಬೆಲ್ಲ ತಿಂದು ಪರಸ್ಪರ ಶು» ಕೋರಿ ದೇವಾಲಯಗಳಿಗೆ ಹೋಗಿ ಸಿಹಿ ಊಟ ಮಾಡುವಲ್ಲಿಗೆ ಯುಗಾದಿ ಹಬ್ಬ ಆಚರಣೆಯನ್ನು ವಿಶಿಷ್ಟವಾಗಿ ಮಾಡಲಾಗುತ್ತದೆ. ಸೂರ್ಯ ನಮಸ್ಕಾರ, ನೂತನ ಪಂಚಾಂಗ ಶ್ರವಣ, ಬೇವು ಬೆಲ್ಲ ಹಂಚುವುದು ಹಬ್ಬದ ಸಂಪ್ರದಾಯಗಳಲ್ಲಿ ಒಂದಾಗಿದೆ.
ದೇವಸ್ಥಾನಗಳಲ್ಲಿ ನೂತನ ಪಂಚಾಂಗ ಶ್ರವಣ ಹಬ್ಬದ ಆಚರಣೆಯ ಒಂದು ಆಕರ್ಷಣೆ. ಯುಗಾದಿಯ ನೈಜತೆ ಇಂದು ಉಳಿದಿರುವುದು ಹಳ್ಳಿಗಳಲ್ಲಿ ಮಾತ್ರ. ನಗರವಾಸಿಗಳಿಗೆ ಯುಗಾದಿಕೇವಲ ಒಂದು ದಿನದ ಹಬ್ಬ ವಾದರೆಹಳ್ಳಿಗಳಲ್ಲಿ ಈ ಹಬ್ಬದ ಒಂದು ತಿಂಗಳತನಕ ಇರುವ ಹಬ್ಬ . ಹಳ್ಳಿಗಳಲ್ಲಿ ಈಹಬ್ಬವನ್ನು ತುಂಬಾ ವಿಶೇಷವಾಗಿ ಆಚರಿಸುತ್ತಾರೆ. ಯುಗಾದಿ ದೊಡ್ಡ ಹಬ್ಬ. ಗುಜರಾತ್ -ರಾಜಸ್ಥಾನದ ಕೆಲವು ಭಾಗಗಳನ್ನು ಹೊರತುಪಡಿಸಿ ಇತರೆಕಡೆಗಳಲ್ಲಿ ಚೈತ್ರಮಾಸದಿಂದ ಹಿಂದೂ ಸಂವತ್ಸರದ ಹೊಸವರ್ಷಾಚರಣೆ ನಡೆದು ಬಂದಿದೆ.
ಆಂಧ್ರ ಹಾಗೂ ಕರ್ನಾಟಕದಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಗುಡಿಪಡ್ಕ ಎಂದು ಆಚರಿಸಲಾಗುವುದು.ಜೀವನ ಎಂಬುದು ಕೇವಲ ಸುಖದಕಲ್ಪನೆಯಲ್ಲ. ಹಾಗಂತ ಕಷ್ಟದಕೋಟಲೆಯಲ್ಲ. ಹಗಲು-ರಾತ್ರಿಗಳಂತೆ,ಗಿಡದಲ್ಲಿರುವ ಹೂವು ಮುಳ್ಳುಗಳಂತೆ ಮನುಷ್ಯನ ಬದುಕು ನೋವು ನಲಿವುಗಳ ಸಂಗಮ ಎನ್ನುವುದನ್ನು ಎಷ್ಟೋ ವರ್ಷಗಳ ಹಿಂದೆ ಜನರು ಅರಿತಿದ್ದರು. ಜೀವನದಲ್ಲಿ ಸುಖ ಬಂದಾಗ ಹಿಗ್ಗದೇ, ಕಷ್ಟ ಬಂದಾಗ
ಕುಗ್ಗದೇ ಎರಡನ್ನೂ ಸಮಾನವಾಗಿ ಸ್ವೀಕರಿಸಿಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿದಾಗಮಾತ್ರ ಬದುಕು ಸುಂದರವಾಗಲು ಸಾಧ್ಯ.ಈ ಅಂಶವನ್ನು ಜನರಿಗೆ ಸಾರಲೆಂದೇಯುಗಾದಿಯಂದು ಬೇವು-ಬೆಲ್ಲವನ್ನುಹಂಚಲಾಗುತ್ತದೆ ಎನ್ನುವುದು ಬಲ್ಲವರಅನಿಸಿಕೆ. ಇದರ ಹಿಂದೆ ವೈಜ್ಞಾನಿಕ ಹಿನ್ನೆಲೆಯೂ ಇದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.
ಯುಗಾದಿ ಮತ್ತೆ ಬಂದಿದೆ. ಈ ಹಬ್ಬದಬೇವು-ಬೆಲ್ಲ ಸಮರಸದ ಬದುಕಿಗೆಬುನಾದಿಯಾಗಲಿ… ಈ ದಿನದಲ್ಲಿ ಹೊಸಭರವಸೆಯ ಕನಸುಗಳು ನನಸಾಗಲಿ ಎನ್ನುವುದು ನಮ್ಮ ಹಾರೈಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ
Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ
ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ
Deepavali Festival: ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.