ಭಾರತ್ ಕೋ-ಆಪರೇಟಿವ್ ಬ್ಯಾಂಕ್‌ಗೆ ಅತ್ಯುತ್ತಮ “ಐಟಿ ಪ್ರಶಸ್ತಿ’
Team Udayavani, Apr 15, 2021, 12:17 PM IST
ಮುಂಬಯಿ: ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಶನ್ ಕೊಡಮಾಡುವ 2021ನೇ ಸಾಲಿನ ತಾಂತ್ರಿಕ ಪ್ರಶಸ್ತಿಗಳಲ್ಲಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್‌ಗೆ “ಅತ್ಯುತ್ತಮ ಮಾಹಿತಿ ತಂತ್ರಜ್ಞಾನ
ಮತ್ತು ಸೈಬರ್ ಭದ್ರತಾ ಅಭಿಯಾನ ಪ್ರಶಸಿ’¤ ದೊರಕಿದೆ.
ಈ ಪ್ರಶಸ್ತಿಯು ಸಹಕಾರಿ ಬ್ಯಾಂಕ್‌ಗಳಲ್ಲಿ ದ್ವಿತೀಯ ಅತ್ಯುತ್ತಮ ಪ್ರಶಸ್ತಿಯಾಗಿದೆ. ಈ ಮೂಲಕ ಭಾರತ್ ಬ್ಯಾಂಕ್ ಕಳೆದ 42 ವರ್ಷಗಳಲ್ಲಿ 59 ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ ಕೀರ್ತಿಗೆ ಪಾತ್ರವಾಗಿದೆ. ಅತ್ಯುತ್ಕೃಷ್ಠ ಮಾಹಿತಿ ತಂತ್ರಜ್ಞಾನ ಮತ್ತು ಪರಿಣಾಮಕಾರಿ ತಂತ್ರಜ್ಞಾನ ಅಪಾಯ ನಿರ್ವಹಣಾ ವ್ಯವಸ್ಥೆಗಾಗಿ ಭಾರತ್ ಬ್ಯಾಂಕ್ ಈ ಪ್ರಶಸ್ತಿಯನ್ನು ಸ್ವೀಕರಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ದಿಗ್ಗಜರು ಪಾಲ್ಗೊಂಡಿದ್ದರು. ಎಲ್ಲ ರಾಷ್ಟ್ರೀಕೃತ, ಖಾಸಗಿ, ವಿದೇಶಿ ಹಾಗೂ ಸಹಕಾರಿ ಬ್ಯಾಂಕ್‌ಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಗ್ರಾಹಕಸ್ನೇಹಿ ಭಾರತ್ ಬ್ಯಾಂಕ್
ಭಾರತ್ ಬ್ಯಾಂಕ್ ತನ್ನ ಗ್ರಾಹಕರಿಗೆ ತಾಂತ್ರಿಕ ಸುರಕ್ಷತೆ ನೀಡುವುದರ ಜತೆಗೆ ನಿಧಿಯ ರಕ್ಷಣೆಯನ್ನೂ ಒದಗಿಸುತ್ತದೆ. ಭಾರತ್ ಬ್ಯಾಂಕ್ 2020ನೇ ಮಾರ್ಚ್ ಕೊನೆಯವರೆಗೆ ಸುಮಾರು 1,200 ಕೋಟಿ ರೂ. ಸ್ವಂತ ನಿಧಿ ಹಾಗೂ ಶೇ. 13.81ರಷ್ಟು ಆರೋಗ್ಯಪೂರ್ಣ ಸಿಆರ್‌ಎಆರ್ ಅನ್ನು ಹೊಂದಿ ಬ್ಯಾಂಕ್‌ನ ಸದಸ್ಯರು ಹಾಗೂ ಠೇವಣಿದಾರರ ವಿಶ್ವಾಸವನ್ನು ಗಳಿಸಿದೆ. ಸಿಬಂದಿ ಸದಸ್ಯರ ಸಮರ್ಪಣೆ ಮತ್ತು ಕಠಿನ ಪರಿಶ್ರಮದಿಂದಾಗಿ ಭಾರತ್ ಬ್ಯಾಂಕ್ ದೇಶದ ಅತ್ಯಂತ ಗ್ರಾಹಕಸ್ನೇಹಿ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಕೋವಿಡ್ ಸಮಯದಲ್ಲಿ ಬ್ಯಾಂಕ್‌ನ ಸಿಬಂದಿಯ ನಿರಂತರ ಸೇವೆ ಅಪಾರವಾಗಿದೆ. ಎಲ್ಲ ಸಿಬಂದಿಯ ನಿರಂತರ ಬೆಂಬಲ, ಕಠಿನ ಪರಿಶ್ರಮ ಮತ್ತು ಸಮರ್ಪಣೆಯೊಂದಿಗೆ ಬ್ಯಾಂಕ್ ಅಭಿವೃದ್ಧಿಯ ಪಥದಲ್ಲಿದೆ.
ಬಿಲ್ಲವರ ಅಸೋಸಿಯೇಶನ್ ಸ್ಥಾಪಿತ ಬ್ಯಾಂಕ್
ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಮುಂಬಯಿ ಲಿ. ಅನ್ನು 1978ರಲ್ಲಿ ನಗರದ ಪ್ರತಿಷ್ಠಿತ ಸಮುದಾಯದ ಸಂಸ್ಥೆಗಳಲ್ಲಿ ಒಂದಾಗಿರುವ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸ್ಥಾಪಿ ಸಿದ್ದು, ಬ್ಯಾಂಕ್ ಮಹಾ ನಗರದಲ್ಲಿ ಭಾರತ್ ಬ್ಯಾಂಕ್ ಎಂದೇ ಜನಪ್ರಿ ಯವಾಗಿದೆ. ಸುಮಾರು 42 ವರ್ಷಗಳ ಅಲ್ಪಾವಧಿಯೊಂದಿಗೆ ಬ್ಯಾಂಕ್ ದೇಶದಲ್ಲೇ ಪ್ರಸಿದ್ಧ ಸಹಕಾರಿ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಲ್ಲಿ 100ಕ್ಕೂ ಹೆಚ್ಚು ಶಾಖೆಗಳ ಮೂಲಕ ಸೇವೆಯನ್ನು ಒದಗಿಸುತ್ತಿದೆ.
ಆರ್‌ಬಿಐ ಪಟ್ಟಿಯಲ್ಲಿ ಸೇರ್ಪಡೆಗೊಂಡ ಅತೀ ಕಿರಿಯ ಬ್ಯಾಂಕ್
ಗೋರೆಗಾಂವ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಭಾರತ್ ಬ್ಯಾಂಕ್ ಬ್ಯಾಂಕಿಂಗ್ ಮತ್ತು ಇತರ ಕ್ಷೇತ್ರಗಳಲ್ಲಿನ ತಜ್ಞರನ್ನು ಒಳಗೊಂಡ ಸಮರ್ಥ ನಿರ್ದೇಶಕರ ಮಂಡಳಿ
ಯನ್ನು ಹೊಂದಿದೆ. ಬ್ಯಾಂಕ್ ಪ್ರಾರಂಭ ದಿಂದಲೂ ಎ ಆಡಿಟ್ ಪ್ರಮಾಣಪತ್ರವನ್ನು ಸ್ವೀಕರಿಸುತ್ತಿದೆ. ಆರ್‌ಬಿಐನ ಎರಡನೇ ವೇಳಾಪಟ್ಟಿಯಲ್ಲಿ ಸೇರ್ಪಡೆಗೊಂಡ ಅತ್ಯಂತ ಕಿರಿಯ ಬ್ಯಾಂಕ್ ಇದಾಗಿದೆ. ಬ್ಯಾಂಕ್ ಎಲ್ಲ ರೀತಿಯ ವಿದೇಶೀ ವಿನಿಮಯ ಸೌಲಭ್ಯವನ್ನು ಒದಗಿಸುತ್ತಿದ್ದು, ಲೈಫ್ ಇನ್ಶೂರೆನ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಲೈಫ್, ಬಜಾಜ್ ಅಲಿಯಾನ್ಸ್ ಜನರಲ್ ಇನ್ಶೂರೆನ್ಸ್ ಕೋ. ಲಿ. ಮತ್ತು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪೆನಿ ಸಹಿತ ಇನ್ನಿತರ ಪ್ರತಿಷ್ಠಿತ ಬ್ಯಾಂಕ್ ಲೈಫ್ ಮತ್ತು ಜನರಲ್ ಇನ್ಶೂರೆನ್ಸ್ ಕಾರ್ಪೊರೇಟ್ ಲಿ.ನ ಏಜೆಂಟ್ ಆಗಿಯೂ ಕಾರ್ಯನಿರ್ವಹಿಸುತ್ತಿದೆ.
ಭಾರತ್ ಬ್ಯಾಂಕ್ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರûಾ ಬಿಮಾ ಯೋಜನೆಗಾಗಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಲಿ.ನೊಂದಿಗೆ ಹಾಗೂ ಲೈಫ್ ಇನ್ಶೂರೆನ್ಸ್ ಕಾರ್ಪೊರೇಶನ್ ಆಫ್ ಇಂಡಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಪ್ರಶಸ್ತಿಗಳ ಸರದಾರ ಭಾರತ್ ಬ್ಯಾಂಕ್ ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್ ಲಿ.ನಿಂದ 13 ಬಾರಿ ವಿವಿಧ ಪುರಸ್ಕಾರಗಳು, ನ್ಯಾಶನಲ್ ಫೆಡರೇಶನ್ ಆಫ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ಸ್ ಮತ್ತು ಕ್ರೆಡಿಟ್ ಸೊಸೈಟೀಸ್ ಲಿ. ಅತ್ಯುತ್ತಮ ಮಾನವ ಸಂಪನ್ಮೂಲ ಪ್ರಕ್ರಿಯೆ ಮತ್ತು ನಾವೀನ್ಯತೆಗಾಗಿ ಪುರಸ್ಕಾರ, ಮುಂಬಯಿ ಮಹಾರಾಷ್ಟ್ರ ನಗರ ಸಹಕಾರಿ ಬ್ಯಾಂಕ್ಸ್ ಫೆಡರೇಶನ್ ಲಿ. ಒಟ್ಟಾರೆ ಕಾರ್ಯಕ್ಷಮತೆಗಾಗಿ 7 ಬಾರಿ ಪ್ರಶಸ್ತಿಯ ಗರಿ, ಅವೀಸ್ ಪಬ್ಲಿಕೇಶನ್ ಬ್ಯಾಂಕ್ ಅಭಿನಯಕ್ಕಾಗಿ 4 ಬಾರಿ ಬ್ಯಾಂಕೊ ಪ್ರಶಸ್ತಿ, ಮುಂಬಯಿ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ. ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ ಕಾರ್ಯಕ್ಷಮತೆಗಾಗಿ ಸಹಕಾರ ಗೌರವ ಪುರಸ್ಕಾರ, ಮುಂಬಯಿಯ ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್‌ಗಳ ಸಂಘ ಲಿ. ವತಿಯಿಂದ ಪದ್ಮಭೂಷಣ್ ವಸಂತ್ ಪಾಟೀಲ್ ಅತ್ಯುತ್ತಮ ನಗರ ಸಹಕಾರಿ ಬ್ಯಾಂಕ್‌ಗಳ ಪ್ರಶಸ್ತಿ ಲಭಿಸಿದೆ.
ವಿಶೇಷ ಸೌಲಭ್ಯ
ಇಂಟರ್‌ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್-ಭಾರತ್ ಬ್ಯಾಂಕ್ (ಐಎಂಪಿಎಸ್), ಎಸ್‌ಎಂಎಸ್ ಬ್ಯಾಂಕಿಂಗ್, ವೀಸಾ ಮತ್ತು ರುಪೇ ಡೆಬಿಟ್ ಕಾರ್ಡ್, ಕಿಯೋಸ್ಕ್ ಪಾಸ್‌ಬುಕ್ ಮುದ್ರಣ ಯಂತ್ರ, ಮೊಬೈಲ್-ಪಿಒಎಸ್ ಯಂತ್ರವನ್ನು ಗ್ರಾಹಕರಿಗೆ ಒದಗಿಸುತ್ತಿದ್ದು, ಬ್ಯಾಂಕ್‌ನಲ್ಲಿ ಚೆಕ್ ಕ್ಲಿಯರಿಂಗ್ ಪ್ರಕ್ರಿಯೆಯನ್ನು ಸಿಟಿಎಸ್ ಸಕ್ರಿಯಗೊಳಿಸಲಾಗಿದೆ. ಆಧಾರ್ ಮ್ಯಾಪಿಂಗ್ ಸೌಲಭ್ಯ, ನೆಗೋಶಿಯೇಟೆಡ್ ಡೀಲಿಂಗ್ ಸಿಸ್ಟಮ್ (ಎನ್‌ಡಿಎಸ್) ಮೂಲಕ ಲಾಕರ್ ಮತ್ತು ಇತರ ಹೂಡಿಕೆ ಚಟುವಟಿಕೆಗಳನ್ನು ಹೊಂದಿದೆ.
2019-20ರ ಆರ್ಥಿಕ ವರ್ಷದಲ್ಲಿ ಪಡೆದ ಪ್ರಶಸ್ತಿಗಳು
ದಿ ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್ ಲಿ. ನ 2018-19ರ ಆರ್ಥಿಕ ವರ್ಷ ಪ್ರಥಮ ಪುರಸ್ಕಾರ, ಯುಸಿಬಿ ವಿಭಾಗದಲ್ಲಿ ಬ್ಯಾಂಕಿಂಗ್ ಫ್ರಾಂಟಿಯರ್ಸ್‌ನಿಂದ ಅತ್ಯುತ್ತಮ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಪ್ರಶಸ್ತಿ, ಯುಸಿಬಿ ವಿಭಾಗದಲ್ಲಿ ಬ್ಯಾಂಕಿಂಗ್ ಫ್ರಾಂಟಿಯರ್ಸ್‌ನಿಂದ ಅತ್ಯುತ್ತಮ ಡೆಬಿಟ್ ಕಾರ್ಡ್ ಇನೀಶಿಯೇಟಿವ್ ಪ್ರಶಸ್ತಿ, ಮಹಾರಾಷ್ಟ್ರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕರ್ಸ್ ಫೆಡರೇಶನ್ ಲಿ. ನಿಂದ ಸರ್ವೋತ್ಕೃಷ್ಟ ಬ್ಯಾಂಕ್ ಪುರಸ್ಕಾರವನ್ನು ಭಾರತ್ ಬ್ಯಾಂಕ್ ಪಡೆದಿದೆ.
ಸಮರ್ಥ ನಿರ್ದೇಶಕ ಮಂಡಳಿ
ಬ್ಯಾಂಕ್‌ನ ಕಾರ್ಯಾಧ್ಯಕ್ಷರಾಗಿ ಯು. ಶಿವಾಜಿ ಪೂಜಾರಿ, ಉಪ ಕಾರ್ಯಾಧ್ಯಕ್ಷೆಯಾಗಿ ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್, ನಿರ್ದೇಶಕರಾಗಿ ವಾಸುದೇವ ಆರ್. ಕೋಟ್ಯಾನ್, ಜ್ಯೋತಿ ಕೆ. ಸುವರ್ಣ, ಭಾಸ್ಕರ ಎಂ. ಸಾಲ್ಯಾನ್, ಜಯ ಎ. ಕೋಟ್ಯಾನ್, ಕೆ. ಬಿ. ಪೂಜಾರಿ, ಸೋಮನಾಥ್ ಬಿ. ಅಮೀನ್, ಗಂಗಾಧರ ಜೆ. ಪೂಜಾರಿ, ಸೂರ್ಯಕಾಂತ್ ಜೆ. ಸುವರ್ಣ, ನಾರಾಯಣ ಟಿ. ಪೂಜಾರಿ, ಎಲ್. ವಿ. ಅಮೀನ್, ಪುರುಷೋತ್ತಮ ಕೆ. ಕೋಟ್ಯಾನ್, ಮೋಹನ್‌ದಾಸ್ ಎ. ಪೂಜಾರಿ, ಪ್ರೇಮನಾಥ್ ಪಿ. ಕೋಟ್ಯಾನ್, ಶಾರದಾ ಎಸ್. ಕರ್ಕೇರ, ಅನºಲಗನ್ ಸಿ. ಹರಿಜನ್, ರಾಜಾ ವಿ. ಸಾಲ್ಯಾನ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.