2,237 ಬಿಎಂಟಿಸಿ ನೌಕರರ ಮೇಲೆ ತೂಗುಗತ್ತಿ
Team Udayavani, Apr 15, 2021, 12:39 PM IST
ಬೆಂಗಳೂರು: ಬಿಎಂಟಿಸಿಯಲ್ಲಿ ಅಮಾನತು ಅಸ್ತ್ರಮುಂದುವರಿದಿದ್ದು, ಬುಧವಾರ ಮತ್ತೆ 221 ನೌಕರರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಜತೆಗೆ ಕಾರ್ಯನಿರ್ವಹಿಸುವ 50-55 ವರ್ಷದಒಳಗಿನವರು ಕರ್ತವ್ಯಕ್ಕೆ ಹಾಜರಾಗಲು ವಿಧಿಸಿರುವಗಡುವು ಗುರುವಾರ ಅಂತ್ಯಗೊಳ್ಳಲಿದ್ದು, ನಿಗದಿತಸಮಯದಲ್ಲಿ ಹಾಜರಾಗದಿರುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.996 ಚಾಲಕರು, 420 ಚಾಲಕ ಕಂ ನಿರ್ವಾಹಕರು, 629 ನಿರ್ವಾಹಕರು ಹಾಗೂ 192 ಮೆಕಾನಿಕ್‌ಗಳು ಸೇರಿದಂತೆ 2,237 ನೌಕರರಿಗೆ ಬಿಎಂಟಿಸಿಯು ಏ. 12ರಂದು ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಕಾರಣಕೇಳಿ ನೋಟಿಸ್ ಜಾರಿ ಮಾಡಿತ್ತು.
ಸಂಸ್ಥೆಯ ಹಿರಿಯ ಸಿಬ್ಬಂದಿಯಾಗಿದ್ದು, ತಮ್ಮಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸ ಮತ್ತು ಗೊತ್ತುಪಡಿಸಿರುವ ಜವಾಬ್ದಾರಿಗೆ ತಕ್ಕಂತೆ ಕರ್ತವ್ಯ ನಿರ್ವಹಿಸುವುದು ಆದ್ಯಕರ್ತವ್ಯ. ಆದರೆ ಇದಕ್ಕೆ ವ್ಯತಿರಿಕ್ತವಾಗಿನಡೆದುಕೊಂಡಿದ್ದರಿಂದ ಸಾರಿಗೆ ಸೇವೆಯಲ್ಲಿ ವ್ಯತ್ಯಯಉಂಟಾಗಿದ್ದು, ಸಾರ್ವಜನಿ ಕರಿಗೆ ತೊಂದರೆಯಾಗಿದೆ.ಈ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಸಂಜೆ5ರ ಒಳಗೆ ಖುದ್ದು ಹಾಜರಾಗದಿದ್ದರೆ, ಶಿಸ್ತು ಕ್ರಮದಎಚ್ಚರಿಕೆಯನ್ನೂ ನೀಡಲಾಗಿದೆ.
ಈ ಮಧ್ಯೆ ಮಂಗಳವಾರ ಸಾರಿಗೆ ನೌಕರರು ನಗರ ಸೇರಿದಂತೆ ರಾಜ್ಯದವಿವಿಧೆಡೆ ಕುಟುಂಬದ ಸದಸ್ಯರೊಂದಿಗೆ ಭಿಕ್ಷಾಟನೆಮೂಲಕ ಗಮನಸೆಳೆ ದರು. ಕೆಲವರು ರಸ್ತೆ ಬದಿಟವಲ್ ಹಾಕಿ, ಇನ್ನು ಹಲವರು ತಟ್ಟೆ ಹಿಡಿದುಸಾರ್ವಜನಿಕರಲ್ಲಿ ಭಿಕ್ಷೆ ಕೇಳಿದರು. ಬುಧವಾರವೂಇದು ಮುಂದುವರಿ ಯಿತು. ಏ. 15ರಂದು ಸಂಜೆ6-7ರವರೆಗೆ ನೌಕ ರರು ಮೊಂಬತ್ತಿ ಹಚ್ಚಿ, ವಿನೂತನರೀತಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಹಬ್ಬಕ್ಕೆಊರಿಗೆ ಹೋಗಿ ಬೆಂಗಳೂರಿಗೆ ವಾಪಸಾ ದವರು,ಗೂಡುಗಳಿಗೆ ತೆರಳಲು ಪರದಾಡಿದರು.
“ವಾಗ್ಧಾನ ಮಾಡಿದ್ರೆ ಕೆಲಸಕ್ಕೆ ಹಾಜರು’: ಹಠಕ್ಕೆಬಿದ್ದು ಕೆಲಸ ನಿರ್ವಹಿಸುವ ಬದಲು ಪ್ರೀತಿಯಿಂದಮಾತನಾಡಿ, ಕೊಟ್ಟ ಮಾತಿನಂತೆ ನಡೆದು ಕೊಳ್ಳುವುದಾಗಿ ವಾಗ್ಧಾನ ಮಾಡಿದರೂ ನಾವು ಕೆಲಸಕ್ಕೆ ಹಾಜರುಆಗುತ್ತೇವೆ ಎಂದು ಸಾರಿಗೆ ನೌಕರರ ಕೂಟದಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಸಿಬಿಗೆ ವರ್ಗಾವಣೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್
Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ
Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!
ರಾಹುಲ್ ಬ್ರಿಟನ್ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!
Hard Disk: ಬಿಟ್ಕಾಯಿನ್ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.