ಅಂಬೇಡ್ಕರ್‌ರ ಚಿಂತನೆ, ತತ್ವ ಸಿದ್ಧಾಂತ ಪಾಲಿಸಿ
Team Udayavani, Apr 15, 2021, 1:09 PM IST
ದೇವನಹಳ್ಳಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರು ಸಂವಿಧಾನದ ಮೂಲಕಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲುಅಡಿಯಲ್ಲಿಯೇ ಸಂವಿಧಾನವನ್ನು ರಚಿಸಿಕೊಟ್ಟಿರುವಕೀರ್ತಿ ಬಾಬಾ ಸಾಹೇಬರಿಗೆ ಸಲ್ಲುತ್ತದೆ ಎಂದುಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಜಿಲ್ಲಾಡಳಿತ ಭವನದಜಿಲ್ಲಾಧಿಕಾರಿ ಆಡಿಟೋರಿಯಂ ಸಭಾಂಗಣದಲ್ಲಿಜಿಲ್ಲಾಡಳಿತ, ಜಿಪಂ, ಸಮಾಜಕಲ್ಯಾಣ ಇಲಾಖೆಸಹಯೋಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ರ130ನೇ ಜಯಂತಿ ಹಾಗೂ ಡಾ.ಬಾಬುಜಗಜೀವನ್‌ರಾಮ್‌ರ 114ನೇ ಜಯಂತಿ ವೇದಿಕೆ ಹಾಗೂಜಿಲ್ಲಾಡಳಿತ ಭವನದ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಪುತ್ಥಳಿ ನಿರ್ಮಾಣದ ಶಂಕುಸ್ಥಾಪನೆನೆರವೇರಿಸಿ ಅವರು ಮಾತನಾಡಿದರು.ಬಾಬಾ ಸಾಹೇಬ್ ಅಂಬೇಡ್ಕರ್‌ರ ರಥವನ್ನುಎಳೆದುಕೊಂಡು ಮುಂದೆ ಸಾಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಒಂದು ಬಾರಿ ರಥವನ್ನು ಮುಂದೆಎಳೆದುಕೊಂಡು ಹೋದ ಮೇಲೆ ಅರ್ಧಕ್ಕೆ ನಿಲ್ಲಿಸಿಹಿಂದಕ್ಕೆ ಹೋಗಬಾರದು ಎಂಬ ಅಂಶವನ್ನುತಿಳಿಸಿಕೊಟ್ಟಿದ್ದಾರೆ. ಯಾವುದೇ ಸಮುದಾಯ ಉನ್ನತಸ್ಥಾನಕ್ಕೆ ಹೋಗಬೇಕಾದರೆ ಜ್ಞಾನ, ಅಕ್ಷರ,ಶೋಷಣೆಯಿಂದ ಒಳಗಾಗಿರುವ ಸಮುದಾಯಗಳಿಗೆಅಕ್ಷರ ಜ್ಞಾನ ಮುಖ್ಯವಾಗಲಿದೆ ಎಂದರು.ಶಾಸಕ ಎಲ್.ಎನ್.ನಾರಾಯಣಸ್ವಾಮಿ ಅಧ್ಯಕ್ಷತೆವಹಿಸಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್‌ರಮಾತುಗಳನ್ನು ಪಾಲಿಸುವುದರ ಮೂಲಕ ಪ್ರಜ್ಞಾವಂತಸಮಾಜ ನಿರ್ಮಾಣ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಹಿರಿಯ ಕವಿಡಾ.ಮೂಡ್ನಾಕೂಡು ಚಿನ್ನಸ್ವಾಮಿ ಹಾಗೂ ಚಿಂತಾಮಣಿಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮುಖ್ಯಸ್ಥಡಾ.ಎಂ.ಎನ್.ರಘು ಉಪನ್ಯಾಸ ನೀಡಿದರು.ಇದೇ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ಮತ್ತು ಜಗಜೀವನ್ ರಾಮ್ ಪ್ರಶಸ್ತಿ, ವಿವಿಧ ರಂಗಗಳಲ್ಲಿಸಾಧನೆ ಮಾಡಿದ ಸಮುದಾಯದ ಮುಖಂಡರಿಗೆಹಾಗೂ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.
ಈ ವೇಳೆಯಲ್ಲಿ ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಅಪರ ಜಿಲ್ಲಾಧಿಕಾರಿ ಜಗದೀಶ್ ಕೆ.ನಾಯಕ್, ಜಿಪಂ ಅಧ್ಯಕ್ಷ ವಿ.ಪ್ರಸಾದ್,ಉಪಾಧ್ಯಕ್ಷೆ ರೂಪಾ ಮರಿಯಪ್ಪ, ಸಿಇಒ ಎಂ.ಆರ್.ರವಿಕುಮಾರ್, ಜಿಪಂ ಸದಸ್ಯರಾದ ಕೆ.ಸಿ.ಮಂಜುನಾಥ್,ಅನಂತಕುಮಾರಿ, ತಾಪಂ ಸದಸ್ಯ ಕಾರಹಳ್ಳಿ ಶ್ರೀನಿವಾಸ್,ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್.ಕೃಷ್ಣಪ್ಪ, ತಹಶೀಲ್ದಾರ್ ಅನಿಲ್‌ಕುಮಾರ್ ಅರೋಲಿಕರ್,ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಚನ್ನಬಸಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಪುಷ್ಪರಾಯ್ಕರ್, ಸಮುದಾಯದ ಮುಖಂಡರಾದಚೌಡಪ್ಪನಹಳ್ಳಿ ಲೋಕೇಶ್, ಕೆ.ವಿ.ಸ್ವಾಮಿ, ಬುಳ್ಳಹಳ್ಳಿರಾಜಪ್ಪ, ಮಾರಪ್ಪ, ಕಾರಹಳ್ಳಿ ಕೆಂಪಣ್ಣ, ಸಮುದಾಯದಮುಖಂಡರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.